ಮೂರನೇ ದಿನ ಕಲೆಕ್ಷನ್‌ನಲ್ಲಿ ದಾಖಲೆ ಬರೆದ ʻಲವ್ ಮಾಕ್ಟೇಲ್ 3ʼ; ʻಡಾರ್ಲಿಂಗ್ʼ ಕೃಷ್ಣ ಸಿನಿಮಾಕ್ಕೆ ಸಿಕ್ತು ಪ್ರೇಕ್ಷಕರ ಪ್ರೀತಿ, ಎಷ್ಟಾಯ್ತು ಗಳಿಕೆ?
ಪರಭಾಷೆಯ ದೊಡ್ಡ ಸಿನಿಮಾಗಳಾದ 'ಧುರಂಧರ್ 2' ಮತ್ತು 'ಉಸ್ತಾದ್ ಭಗತ್ ಸಿಂಗ್' ನಡುವೆಯೂ ಕನ್ನಡದ ಲವ್ ಮಾಕ್ಟೇಲ್ 3 ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸದ್ಯ ಮೂರು ದಿನಗಳ ಅಂತ್ಯಕ್ಕೆ ಚಿತ್ರದ ಒಟ್ಟು ಗಳಿಕೆ 4.50 ಕೋಟಿ ರೂ. ದಾಟಿದೆ ಎಂಬ ಮಾಹಿತಿ ಇದೆ.
-
ʻಡಾರ್ಲಿಂಗ್ʼ ಕೃಷ್ಣ ನಟಿಸಿ, ನಿರ್ದೇಶಿಸಿರುವ ʻಲವ್ ಮಾಕ್ಟೇಲ್ 3ʼ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಲು ಆರಂಭಿಸಿದೆ. ಬೆಂಗಳೂರಿನಲ್ಲಿ ಬೇಡಿಕೆ ಹೆಚ್ಚಿದಂತೆಲ್ಲಾ ಶೋಗಳ ಸಂಖ್ಯೆಯನ್ನು ಕೂಡ ಜಾಸ್ತಿ ಮಾಡಲಾಗಿದೆ. ಕಲೆಕ್ಷನ್ ಕೂಡ ಜಾಸ್ತಿ ಆಗುತ್ತಿದ್ದು, ದಿನದಿಂದ ದಿನಕ್ಕೆ ಚೇತರಿಕೆ ಕಾಣುತ್ತದೆ.
ಮೂರನೇ ದಿನ ನಡೆಯಿತು ಮ್ಯಾಜಿಕ್
ʻಲವ್ ಮಾಕ್ಟೇಲ್ 3ʼ ಸಿನಿಮಾದ ಮೊದಲೆರಡು ದಿನಗಳ ಗಳಿಕೆಯು 1.50 ಕೋಟಿ ರೂ. ದಾಟಿರಲಿಲ್ಲ. ಆದರೆ ಮೂರನೇ ದಿನ ಅಂದರೆ, ಶನಿವಾರ (ಮಾ.21) 2 ಕೋಟಿ ರೂ. ಮೇಲೆ ದಾಖಲೆಯ ಗಳಿಕೆ ಮಾಡಿದೆ. ಸದ್ಯ ಈ ಚಿತ್ರದ ಒಟ್ಟಾರೆ ಕಲೆಕ್ಷನ್ ಮೂರು ದಿನಗಳಿಗೆ 4.50 ಕೋಟಿ ರೂ. ಕ್ರಾಸ್ ಮಾಡಿದೆ ಎಂದು ಬಾಕ್ಸ್ ಆಫೀಸ್ ಮೂಲಗಳು ಹೇಳಿವೆ. ಹೀಗೆ ಕನ್ನಡ ಸಿನಿಮಾವೊಂದು ದಿನದಿಂದ ದಿನಕ್ಕೆ ಹೆಚ್ಚೆಚ್ಚು ಕಲೆಕ್ಷನ್ ಮಾಡುತ್ತಿರುವುದು ಸ್ಯಾಂಡಲ್‌ವುಡ್‌ಗೆ ತುಸು ನೆಮ್ಮದಿ ತಂದಿದೆ ಅಂತಲೇ ಹೇಳಬಹುದು.
Darling Krishna-Milana Nagaraj: ಫ್ಯಾಮಿಲಿ ಕೋರ್ಟ್‌ನಲ್ಲಿ ನಟ ಡಾರ್ಲಿಂಗ್ ಕೃಷ್ಣ- ಮಿಲನಾ ನಾಗರಾಜ್; ಕಾರಣವೇನು?
ದೊಡ್ಡ ಸಿನಿಮಾಗಳ ಎದುರು ಸೆಡ್ಡು
ಮಾರ್ಚ್ 19ರಂದು ಹಿಂದಿಯ ʻಧುರಂಧರ್ 2ʼ ಮತ್ತು ತೆಲುಗಿನ ʻಉಸ್ತಾದ್ ಭಗತ್ ಸಿಂಗ್ʼ ಸಿನಿಮಾಗಳು ತೆರೆಗೆ ಬಂದಿವೆ. ಈ ಸಿನಿಮಾಗಳು ಭಾರಿ ನಿರೀಕ್ಷೆಯನ್ನು ಹುಟ್ಟಿಸಿದ್ದವು ಮತ್ತು ದೊಡ್ಡಮಟ್ಟದಲ್ಲಿ ಶೋಗಳನ್ನು ಬಾಚಿಕೊಂಡಿದ್ದವು. ಅದರ ಎದುರು ಬರುವ ಧೈರ್ಯ ಮಾಡಿದ್ದ ಲವ್ ಮಾಕ್ಟೇಲ್ 3 ಸಿನಿಮಾಗೆ ಈಗ ನಿರೀಕ್ಷಿತ ಗೆಲುವು ಸಿಗುತ್ತಿದೆ.
BRAT OTT: ಸದ್ದಿಲ್ಲದೇ ಒಟಿಟಿಗೆ ಬಂದೇ ಬಿಡ್ತು ಡಾರ್ಲಿಂಗ್ ಕೃಷ್ಣ ನಟನೆಯ 'ಬ್ರ್ಯಾಟ್ ʼ! ಸ್ಟ್ರೀಮಿಂಗ್ ಎಲ್ಲಿ?
ಯಾರೆಲ್ಲಾ ಇದ್ದಾರೆ ಈ ಸಿನಿಮಾದಲ್ಲಿ?
ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಜಂಟಿಯಾಗಿ ನಿರ್ಮಾಣ ಮಾಡಿರುವ ಲವ್ ಮಾಕ್ಟೇಲ್ 3 ಸಿನಿಮಾದಲ್ಲಿ ಸಂವೃತಾ, ಜಗದೀಶ್, ಅಭಿಲಾಷ್ ದಳಪತಿ, ಶ್ವೇತಾ ಪ್ರಸಾದ್, ದಿಲೀಪ್ ರಾಜ್, ಅಮೃತಾ ಅಯ್ಯಂಗಾರ್, ರೇಚೆಲ್ ಡೇವಿಡ್, ರೇಖಾ ಕೂಡ್ಲಿಗಿ, ವೈಶಾಲಿ ದೀಪಕ್ ಮುಂತಾದವರು ನಟಿಸಿದ್ದಾರೆ. ಹಾಡುಗಳಿಗೆ ನಕುಲ್ ಅಭ್ಯಂಕರ್ ಸಂಗೀತ ನೀಡಿದ್ದು, ಶ್ರೀ ಕ್ರೇಜಿ ಮೈಂಡ್ಸ್ ಅವರು ಸಂಕಲನ ಮತ್ತು ಛಾಯಾಗ್ರಹಣ ಮಾಡಿದ್ದಾರೆ.