ಚಾಲೆಂಜಿಂಗ್ ಸ್ಟಾರ್ ದರ್ಶನ್ (Actor Darshan) ಅಭಿನಯದ ದಿ ಡೆವಿಲ್ ಸಿನಿಮಾ ಡಿ.11ರಂದು ಅದ್ಧೂರಿಯಾಗಿ ರಿಲೀಸ್ ಆಗಿದೆ. ವರದಿಯ ಪ್ರಕಾರ 10 ಕೋಟಿ ರೂ. ಮೊದಲ ದಿನ ಕಲೆಕ್ಷನ್ ಆಗಿದೆ. ಫ್ಯಾನ್ಸ್ ಕೂಡ ಸಂಭ್ರಮಿಸಿದ್ದಾರೆ. ಆದರೆ ಕೆಲವು ಅಭಿಮಾನಿಗಳ ಅತಿರೇಕದ ವರ್ತನೆ ಬಗ್ಗೆ ಛೀಮಾರಿ ಹಾಕುತ್ತಿದ್ದಾರೆ ನೆಟ್ಟಿಗರು. ತಂದೆ ತಾಯಿ ಸತ್ತಿದ್ದರೂ ಇಷ್ಟು ಬೇಸರ ಆಗುತ್ತಿರಲಿಲ್ಲ. ದರ್ಶನ್ ಜೈಲಿನಲ್ಲಿರೋದು ಬೇಸರ ಮೂಡಿಸದೆ ಅಂತ ಕೆಲವು ಫ್ಯಾನ್ಸ್ ಹೇಳಿಕೊಂಡಿದ್ದಾರೆ. ಈ ವಿಡಿಯೋಗಳು ವೈರಲ್ ಆಗ್ತಿದೆ.
ಅಂಧಾಭಿಮಾನ!
ದರ್ಶನ್ ಅನುಪಸ್ಥಿಯಲ್ಲಿ ದಿ ಡೆವಿಲ್ ಸಿನಿಮಾ ರಿಲೀಸ್ ಆಗಿದೆ. ಫ್ಯಾನ್ಸ್ ಸಾಥ್ ಕೂಡ ಕೊಟ್ಟಿದ್ದಾರೆ. ಮೆಚ್ಚಿನ ನಟ ಜೈಲಿನಲ್ಲಿ ಇದ್ದಾಗ ಫ್ಯಾನ್ಸ್ ಆದವರಿಗೆ ಬೇಸರ ಆಗೋದು ಸಹಜ. ಆದರೆ ಅಂಧಾಭಿಮಾನ ತೋರಿದರೆ, ಅತಿಯಾದ ಪ್ರೀತಿಯೂ ವಿಷ ಆಗೇ ಕಾಣುತ್ತದೆ ಅದಕ್ಕೆ ಉದಾಹರಣೆ, ಕೆಲವು ಅಭಿಮಾನಿಗಳ ಹೇಳಿಕೆ.
ಇದನ್ನೂ ಓದಿ: 12A Railway Colony OTT : ಒಟಿಟಿಗೆ ಬಂದಿದೆ ಅಲ್ಲರಿ ನರೇಶ್ ನಟನೆಯ ಹಾರರ್ ಮೂವಿ, ಸ್ಟ್ರೀಮಿಂಗ್ ಎಲ್ಲಿ?
ಹೌದು ಕೆಲವು ಫ್ಯಾನ್ಸ್, ಬೇಕಾಬಿಟ್ಟಿ ಮಾತನಾಡಿದ್ದಾರೆ. ನನ್ನ ಜನ್ಮಕೊಟ್ಟ ತಂದೆ-ತಾಯಿಯನ್ನು ಕಳೆದುಕೊಂಡರೂ ಅಷ್ಟು ಬೇಸರ ಆಗುತ್ತಿರಲಿಲ್ಲ. ದರ್ಶನ್ ಇಲ್ಲದೆ ಸಿನಿಮಾ ನೋಡುತ್ತಿರುವುದು ಬೇಸರ ಆಗಿದೆ. ಅಭಿಮಾನ ಎಂದರೆ ಇದೇ. ತಾಯಿ ಋಣ ಆದರೂ ತಿರಿಸಬಹುದು. ಇವರ ಅಭಿಮಾನ ತೀರಿಸೋಕೆ ಆಗಲ್ಲ ಎಂದ ಒಬ್ಬ ಅಭಿಮಾನಿ ಹೇಳಿದ್ದಾರೆ.
ವಿಜಯಲಕ್ಷ್ಮೀ ಅತ್ತಿಗೆ ನಮಗೆ ಚಾಮುಂಡೇಶ್ವರಿ!
ಮತ್ತೊರ್ವ ಅಭಿಮಾನಿ, ನಾವು ನಾರ್ಮಲ್ ಆಗಿ ಚಾಮುಂಡೇಶ್ವರಿ ದರ್ಶನ ಪಡೆಯಲು ಮೈಸೂರು ಬೆಟ್ಟಕ್ಕೆ ಹೋಗ್ತಾ ಇದ್ವಿ. ಆದರೆ ಇವತ್ತು, ಎಲ್ಲ ಅಭಿಮಾನಿಗಳ ಕಡೆಯಿಂದ ಹೇಳ್ತಾ ಇದ್ದೀನಿ. ಬೆಂಗಳೂರಿನಲ್ಲಿ ಒಬ್ಬರು ಚಾಮುಂಡೇಶ್ವರಿ ಇದ್ದಾರೆ. ಆರ್‌ಆರ್ ನಗರದ ದರ್ಶನ್ ಮನೆಯಲ್ಲಿ ಇದ್ದಾರೆ. ಅದುವೆ ವಿಜಯಲಕ್ಷ್ಮೀ ಅತ್ತಿಗೆ ಅವರು. ಅವರನ್ನ ನಾವು ಯಾವಾಗಲೂ ಪೂಜೆ ಮಾಡ್ತೀವಿ ಅಂತ ಹೇಳಿಕೆ ನೀಡಿದ್ದಾರೆ.
ಈ ವಿಡಿಯೋಗಳು ವೈರಲ್ ಆಗ್ತಿದ್ದಂತೆ ನೆಟ್ಟಿಗರು ಶಿಕ್ಷಣ ಕೂಡ ತುಂಬಾ ಮುಖ್ಯ ಅಂತ ಕಮೆಂಟ್ ಮಾಡಿದ್ದಾರೆ. ಅಂದಾಭಿಮಾನ ಇರೋದು ಸರಿ ಅಲ್ಲ ಅಂತ ಕಮೆಂಟ್ ಮಾಡ್ತಿದ್ದಾರೆ.
ವೈರಲ್ ವಿಡಿಯೋ
ಫಸ್ಟ್ ಡೇ ಕಲೆಕ್ಷನ್ ಏನು?
‘ಡೆವಿಲ್ ಸಿನಿಮಾ ರಿಲೀಸ್ ಆಗುವ ಸಂದರ್ಭದಲ್ಲಿ ದರ್ಶನ್ ಜೈಲಿನಲ್ಲಿದ್ದಾರೆ. ಸಿನಿಮಾ ಪ್ರಚಾರವನ್ನ ಸ್ವತಃ ವಿಜಯಲಕ್ಷ್ಮಿ ವಹಿಸಿಕೊಂಡಿದ್ದರು. ಫ್ಯಾನ್ಸ್ ಕೂಡ ಪ್ರಚಾರಕ್ಕೆ ಸಪೋರ್ಟ್ ಮಾಡಿದ್ದರು. ‘ಡೆವಿಲ್’ ಸಿನಿಮಾ ಮೊದಲ ದಿನ 10 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು sacnilk ವರದಿ ಮಾಡಿದೆ. ಇದು ಕರ್ನಾಟಕದ ಕಲೆಕ್ಷನ್ ಮಾತ್ರ.
ಇದನ್ನೂ ಓದಿ: The Devil First Day Collection: ‘ಡೆವಿಲ್’ಅಬ್ಬರ! ಮೊದಲ ದಿನ ಸಿನಿಮಾ ಕಲೆಕ್ಷನ್ ಮಾಡಿದ್ದೆಷ್ಟು ಗೊತ್ತಾ?
ಪಿವಿಆರ್, ಐನಾಕ್ಸ್ ಸೇರಿದಂತೆ ಬಹುತೇಕ ಮಲ್ಟಿಪ್ಲೆಕ್ಸ್ಗಳಲ್ಲಿ ಟಿಕೆಟ್ ದರ ಕನಿಷ್ಠ 500 ರೂಪಾಯಿ ಇಂದ ಆರಂಭ ಆಗಿತ್ತು. ಏಕಪರದೆಯಲ್ಲಿ 400 ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿತ್ತು. ದಿ ಡೆವಿಲ್ ಡೇ 1 ಕನ್ನಡ (2D) ಚಿತ್ರಮಂದಿರಗಳಲ್ಲಿ , ಬೆಳಗ್ಗೆ ಪ್ರದರ್ಶನಗಳು: 60.44%, ಮಧ್ಯಾಹ್ನ ಪ್ರದರ್ಶನಗಳು: 51.74%, ಸಂಜೆ ಪ್ರದರ್ಶನಗಳು: 63.47% ರಾತ್ರಿ ಪ್ರದರ್ಶನಗಳು: 79.34% ಆಗಿವೆ.