#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Hanumantha BBK 11: ಧನರಾಜ್ ಆಚಾರ್ ಕೈ ಸೇರಿದ ಹನುಮಂತನಿಗೆ ಸಿಕ್ಕ ಬಿಗ್ ಬಾಸ್ ಟ್ರೋಫಿ

ಹನುಮಂತ ಹಾಗೂ ಧನರಾಜ್ ದೊಡ್ಮನೆಯಿಂದ ಹೊರಬಂದು ಭೇಟಿ ಆಗಿದ್ದಾರೆ. ಧನು ಹನುಮಂತಾಗಿ ಸಿಕ್ಕಿದ ಟ್ರೋಫಿ ಹಿಡಿದುಕೊಂಡು ಫೋಟೋ ತೆಗೆಸಿಕೊಂಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ಶೇರ್‌ ಮಾಡಿ, ದೋಸ್ತಾ ನೀ ಮಸ್ತಾ ಗೆಲುವು ನಿನ್ನದು.. ಖುಷಿ ನನ್ನದು.. ಇದು ದೋಸ್ತಿ ಗೆಲುವು ದೋಸ್ತಾ.. ಇರು ನೀ ಜೊತೆಗಿರು ಎಂದೆಂದಿಗೂ ಎಂದಿದ್ದಾರೆ.

ಧನರಾಜ್ ಆಚಾರ್ ಕೈ ಸೇರಿದ ಹನುಮಂತನಿಗೆ ಸಿಕ್ಕ ಬಿಗ್ ಬಾಸ್ ಟ್ರೋಫಿ

Dhanraj Achar and Hanumantha

Profile Vinay Bhat Jan 29, 2025 4:28 PM

ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ (Bigg Boss Kannada 11) ತೆರೆಬಿದ್ದಾಗಿದೆ. ಹಳ್ಳಿ ಹೈದ ಹನುಮಂತ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ತ್ರಿವಿಕ್ರಮ್ ರನ್ನರ್ ಅಪ್ ಆಗಿದ್ದಾರೆ. ಈ ಬಾರಿಯ ಬಿಗ್ ಬಾಸ್ ಸೀಸನ್ ಸಾಕಷ್ಟು ವಿಶೇಷವಾಗಿತ್ತು. ಸ್ವರ್ಗ-ನರಕದೊಂದಿಗೆ ಶುರುವಾದ ಸೀಸನ್​ನಲ್ಲಿ ಜಗಳಗಳೇ ಹೆಚ್ಚಾಗಿತ್ತು. ಆದರೆ, ಈ ಜಗಳದ ಬಿಸಿಯನ್ನು ತಣ್ಣಗಾಗಿಸಿದ್ದು, ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಕೊಟ್ಟ ಹನುಮಂತ ಲಮಾಣಿ. ಧನರಾಜ್ ಆಚಾರ್ ಜೊತೆ ಸೇರಿ ಇವರಿಬ್ಬರು ಸೀಸನ್ ಅನ್ನು ನಗುವಿನ ಅಲೆಯಲ್ಲಿ ತೇಲಿಸಿದರು.

ಹನುಮಂತನ ಗ್ರಾಮೀಣ ಸೊಗಡಿನ ಭಾಷೆ, ಹಾಡುಗಳಿಗೆ ಎಲ್ಲರೂ ಫಿದಾ ಆದರು. ಉತ್ತರ ಕರ್ನಾಟಕದವರಾದ ಇವರು ಫಿಕ್ಟರ್ ಇಲ್ಲದೇ ಆಡುವ ಕೆಲವು ಮಾತುಗಳು ಕೂಡ ನಗು ಉಕ್ಕಿಸಿವೆ. ಇದಕ್ಕೆ ತಕ್ಕಂತೆ ಧನರಾಜ್ ಆಚಾರ್ ಕಾಮಿಡಿ ಕೂಡ ಸಖತ್ ಇಷ್ಟವಾಗುತ್ತಿತ್ತು. ದೋಸ್ತಾ.. ದೋಸ್ತಾ.. ಎಂಬ ಡೈಲಾಗ್ ಇಂದು ಇಡೀ ಕರ್ನಾಟಕದ ಮನೆಮಾತಾಗಿದೆ. ಇದ್ದರೆ ಈ ರೀತಿಯ ದೋಸ್ತ್‌ಗಳು ಇರ್ಬೇಕು ಅನ್ನೋಮಟಕ್ಕೆ ಇವರ ಗೆಳೆತನ ಫೇಮಸ್ ಆಗಿದೆ.

ಗ್ರ್ಯಾಂಡ್ ಫಿನಾಲೆಗೆ ದೋಸ್ತಾ ಧನರಾಜ್ ಆಚಾರ್ ಅವರನ್ನ ಬಿಟ್ಟು, ಮೋಕ್ಷಿತಾ ಅವರನ್ನೆ ಹನುಮಂತು ಆಯ್ಕೆ ಮಾಡಿದ್ದರು. ಅದಕ್ಕೆ ಧನು ಬೇಸರ ಕೂಡ ಮಾಡಿಕೊಳ್ಳಲಿಲ್ಲ. ಅವರ ಅನಿಸಿಕೆ ಅವರು ಹೇಳಿದ್ದಾರೆ ಎಂದು ಹನುಮಂತನ ನಿರ್ಧಾರವನ್ನು ಗೌರವಿಸಿದ್ದರು. ಮನೆಯಲ್ಲಿದ್ದಷ್ಟು ದಿನ ಒಟ್ಟಿಗೆ ಹೆಚ್ಚು ಸಮಯ ಕಳೆದ ಈ ಜೋಡಿ, ಸ್ನೇಹಕ್ಕೆ ಹೊಸ ವ್ಯಾಖ್ಯಾನ ಬರೆದಿತ್ತು. ಕುಚಿಕು ಗೆಳೆಯರಾಗಿಯೇ ಹೆಚ್ಚು ಆಪ್ತರಾಗಿ, ಕಷ್ಟ ಸುಖ ಹಂಚಿಕೊಂಡಿದ್ದರು.

ಇದೀಗ ಹನುಮಂತ ಹಾಗೂ ಧನರಾಜ್ ದೊಡ್ಮನೆಯಿಂದ ಹೊರಬಂದು ಭೇಟಿ ಆಗಿದ್ದಾರೆ. ಧನು ಹನುಮಂತಾಗಿ ಸಿಕ್ಕಿದ ಟ್ರೋಫಿ ಹಿಡಿದುಕೊಂಡು ಫೋಟೋ ತೆಗೆಸಿಕೊಂಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ಶೇರ್‌ ಮಾಡಿ, ದೋಸ್ತಾ ನೀ ಮಸ್ತಾ ಗೆಲುವು ನಿನ್ನದು.. ಖುಷಿ ನನ್ನದು.. ಇದು ದೋಸ್ತಿ ಗೆಲುವು ದೋಸ್ತಾ.. ಇರು ನೀ ಜೊತೆಗಿರು ಎಂದೆಂದಿಗೂ ಎಂದಿದ್ದಾರೆ. ಹನುಮಂತು ಗೆದ್ದ ಟ್ರೋಫಿಯನ್ನು ಎತ್ತಿ ಹಿಡಿದು, ದೋಸ್ತನ ಗೆಲುವನ್ನು ನನ್ನದೇ ಗೆಲುವು ಎಂಬಷ್ಟರ ಮಟ್ಟಿಗೆ ಸಂಭ್ರಮಿಸಿದ್ದಾರೆ ಧನರಾಜ್.‌ ಸೋಷಿಯಲ್‌ ಮೀಡಿಯಾದಲ್ಲಿ ಹೀಗೆ ಫೋಟೋ ಶೇರ್‌ ಮಾಡಿದ್ದೇ ತಡ, ನೆಟ್ಟಿಗರ ವಲಯದಿಂದ ಅಪಾರ ಮೆಚ್ಚುಗೆ ಪಡೆದಿದೆ.

ಇವರಿಬ್ಬರ ದೋಸ್ತಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಇತ್ತೀಚೆಗಷ್ಟೆ ಕಾರಿನಲ್ಲಿ ಅಭಿಮಾನಿಯೊಬ್ಬರು ಹನುಮಂತ, ಧನರಾಜ್ ಫೋಟೋ ಜೊತೆಗೆ ಈ ಸಲ ಕಪ್ ನಮ್ದೇ ದೋಸ್ತಾ ಅಂತ ಬರೆಸಿಕೊಂಡಿಡ ವಿಡಿಯೋ ಫುಲ್ ವೈರಲ್ ಆಗಿತ್ತು.

BBK 11, Hanumantha: ಟ್ರೋಫಿ ಗೆದ್ದ ಬಳಿಕ ಮೊದಲ ಬಾರಿ ಇನ್​ಸ್ಟಾದಲ್ಲಿ ವಿಡಿಯೋ ಹಂಚಿಕೊಂಡ ಹನುಮಂತ: ಏನಂದ್ರು ನೋಡಿ