ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rishab Shetty: ʻಕಾಂತಾರ: ಚಾಪ್ಟರ್‌ 1ʼ ಗಳಿಕೆಯನ್ನು ಬ್ರೇಕ್‌ ಮಾಡುತ್ತಾ ʻಧುರಂಧರ್‌ʼ? ನಂ.1 ಪಟ್ಟಕ್ಕೇರಲು ರಣವೀರ್‌ ಸಿಂಗ್‌ ಸಿನಿಮಾಕ್ಕೆ ಇನ್ನೆಷ್ಟು ಕೋಟಿ ಬೇಕು?

Kantara Chapter 1: ಬಾಕ್ಸ್ ಆಫೀಸ್‌ನಲ್ಲಿ ರಣವೀರ್ ಸಿಂಗ್ ನಟನೆಯ 'ಧುರಂಧರ್‌' ಸಿನಿಮಾವು ರಿಷಬ್‌ ಶೆಟ್ಟಿ ಅವರ ಕಾಂತಾರ ಚಾಪ್ಟರ್‌ 1 ದಾಖಲೆಯನ್ನು ಮುರಿಯಲಿದೆಯೇ ಎಂಬ ಚರ್ಚೆ ಜೋರಾಗಿದೆ. 10 ದಿನಗಳಲ್ಲಿ 554 ಕೋಟಿ ಗಳಿಸಿ 4ನೇ ಸ್ಥಾನದಲ್ಲಿರುವ 'ಧುರಂಧರ್‌'ಗೆ ನಂ.1 ಪಟ್ಟಕ್ಕೇರಲು ಇನ್ನೂ ಎಷ್ಟು ಕೋಟಿ ಗಳಿಕೆಯ ಅಗತ್ಯವಿದೆ? ಇಲ್ಲಿದೆ ಮಾಹಿತಿ.

ರಿಷಬ್‌ ಶೆಟ್ಟಿಯ Kantara Chapter 1 ದಾಖಲೆ ಬ್ರೇಕ್ ಮಾಡುತ್ತಾ ಧುರಂಧರ್‌?

-

Avinash GR
Avinash GR Dec 15, 2025 3:23 PM

ರಣವೀರ್‌ ಸಿಂಗ್‌ ನಟನೆಯ ʻಧುರಂಧರ್‌ʼ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರದ ಗಳಿಕೆ ಮಾಡುತ್ತಿದೆ. ತೆರೆಕಂಡ 10 ದಿನಗಳಿಗೆ 550+ ಕೋಟಿ ರೂ. ಗಳಿಕೆ ಆಗಿದ್ದು, ಸದ್ಯಕ್ಕಂತೂ ಈ ಚಿತ್ರದ ಗಳಿಕೆಯಲ್ಲಿ ಯಾವುದೇ ಇಳಿಕೆ ಆಗುವಂತೆ ಕಾಣುತ್ತಿಲ್ಲ. ಇದೀಗ ಎಲ್ಲರ ಪ್ರಶ್ನೆ ಈ ಚಿತ್ರವು ಗಳಿಕೆಯಲ್ಲಿ ಕಾಂತಾರ ಚಾಪ್ಟರ್‌ 1 ಸಿನಿಮಾವನ್ನು ಬೀಟ್‌ ಮಾಡಲಿದೆಯೇ ಎಂಬುದು.

ಹೌದು, ಈ ವರ್ಷ ಅತ್ಯಧಿಕ ಗಳಿಕೆ ಮಾಡಿದ ಭಾರತೀಯ ಸಿನಿಮಾ ಎಂಬ ಖ್ಯಾತಿಯು ʻಕಾಂತಾರ ಚಾಪ್ಟರ್‌ 1ʼ ಸಿನಿಮಾಕ್ಕಿದೆ. ಇದೀಗ ಆ ದಾಖಲೆಯನ್ನು ರಣವೀರ್‌ ಸಿಂಗ್‌ ಅವರ ಧುರಂಧರ್‌ ಬ್ರೇಕ್‌ ಮಾಡಿ, ಹೊಸ ದಾಖಲೆಯನ್ನು ಬರೆಯಲಿದೆಯಾ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.

Akhanda 2 Box Office Collection: ಡೆವಿಲ್‌, ಧುರಂಧರ್‌ ನಡುವೆಯೂ ಅಬ್ಬರಿಸಿದ 'ಅಖಂಡ 2' ! ಬಾಲಯ್ಯ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು?

ಯಾಕೆಂದರೆ, ಭಾರತದಲ್ಲಿ ಧುರಂಧರ್‌ ಸಿನಿಮಾವು ಮೊದಲ ದಿನ 28 ಕೋಟಿ ರೂ. ಗಳಿಸಿದರೆ, 10ನೇ ದಿನ 58 ಕೋಟಿ ರೂ. ಗಳಿಸಿದೆ. ಅರ್ಥಾತ್‌, ಮೊದಲ ದಿನದ ಗಳಿಕೆಯ ಎರಡು ಪಟ್ಟು ಅಧಿಕ ಗಳಿಕೆ 10ನೇ ದಿನ ಸಿಕ್ಕಿದೆ. ಹಾಗಾಗಿ, ಗಳಿಕೆಯು ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವುದರಿಂದ ಕಾಂತಾರ ಚಾಪ್ಟರ್‌ 1 ಹೆಸರಿನಲ್ಲಿರುವ ದಾಖಲೆ ಧುರಂಧರ್‌ ಪಾಲಾಗಲಿದೆಯಾ ಎಂಬ ಪ್ರಶ್ನೆ ಮೂಡಿದೆ.

ಇನ್ನೆಷ್ಟು ಕೋಟಿ ಬೇಕು?

ಕಾಂತಾರ ಚಾಪ್ಟರ್‌ 1 ಚಿತ್ರದ ಒಟ್ಟಾರೆ ಗಳಿಕೆಯು 900 ಕೋಟಿ ರೂ. ದಾಟಿದೆ. ನಂತರದ ಸ್ಥಾನದಲ್ಲಿ ಛಾವಾ (810 ಕೋಟಿ ರೂ.) ಮತ್ತು ಸೈಯಾರ (580 ಕೋಟಿ ರೂ.) ಸಿನಿಮಾಗಳಿವೆ. ಸದ್ಯ ಧುರಂಧರ್‌ ಸಿನಿಮಾವು 554 ಕೋಟಿ ರೂ.ಗಳಿಸಿ, 4ನೇ ಸ್ಥಾನದಲ್ಲಿದೆ. ಕಾಂತಾರ ಚಾಪ್ಟರ್‌ 1 ಚಿತ್ರದ ದಾಖಲೆಯನ್ನು ಮುರಿದು, ಅತ್ಯಧಿಕ ಗಳಿಕೆ ಮಾಡಿದ ಭಾರತೀಯ ಸಿನಿಮಾ ಎಂಬ ಖ್ಯಾತಿಗೇರಲು ಧುರಂಧರ್‌ ಚಿತ್ರಕ್ಕೆ ಇನ್ನೂ 350 ಕೋಟಿ ರೂ. ಬೇಕಿದೆ.

Dhurandhar: ಧುರಂಧರ್‌ ಚಿತ್ರದ ಫಸ್ಟ್‌‌ ಲುಕ್‌‌‌‌‌ ಔಟ್- ರಣವೀರ್‌ ಸಿಂಗ್‌ ಉಗ್ರಾವತಾರಕ್ಕೆ ಫ್ಯಾನ್ಸ್‌ ಫುಲ್‌ ಫಿದಾ!

ಸದ್ಯದ ಟ್ರೆಂಡ್‌ ಗಮನಿಸಿದರೆ, ಈ ಧುರಂಧರ್‌ ಸಿನಿಮಾವು 450 ಕೋಟಿ ರೂ. ಗಳಿಸಿ, 1000 ಕೋಟಿ ರೂ. ಕ್ಲಬ್‌ ಸೇರಿದರೆ ಅಚ್ಚರಿ ಇಲ್ಲ. ಮೂರನೇ ವಾರದ ಮುಕ್ತಾಯದೊತ್ತಿಗೆ ಈ ಎಲ್ಲದರ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಆದಿತ್ಯ ಧರ್‌ ನಿರ್ದೇಶಿಸಿ, ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ಅಕ್ಷಯ್‌ ಖನ್ನಾ, ಸಂಜಯ್‌ ದತ್‌, ಅರ್ಜುನ್‌ ರಾಮ್‌ ಪಾಲ್‌, ಸಾರಾ ಅರ್ಜುನ್‌ ಮುಂತಾದವರು ನಟಿಸಿದ್ದಾರೆ.

ಭಾರತದಲ್ಲಿ ʻಧುರಂಧರ್‌ʼ ಚಿತ್ರದ ಗಳಿಕೆಯ ವಿವರ

ದಿನ 1- ₹28.60 ಕೋಟಿ

ದಿನ 2- ₹33.10 ಕೋಟಿ

ದಿನ 3- ₹44.80 ಕೋಟಿ

ದಿನ 4- ₹24.30 ಕೋಟಿ

ದಿನ 5- ₹28.60 ಕೋಟಿ

ದಿನ 6- ₹29.20 ಕೋಟಿ

ದಿನ 7- ₹29.40 ಕೋಟಿ

ದಿನ 8- ₹34.70 ಕೋಟಿ

ದಿನ 9- ₹53.70 ಕೋಟಿ

ದಿನ 10- ₹58.20 ಕೋಟಿ