ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Director Prem : ಕನಕಪುರ ಶ್ರೀನಿವಾಸ್ ವಿರುದ್ಧ ಪ್ರೇಮ್‌ ದೂರು; ಕೆರಳಿ ಕೆಂಡವಾಗಿ ಖಡಕ್ ರಿಪ್ಲೈ !

Kanakapura Srinivas: ಹಿರಿಯ ನಿರ್ಮಾಪಕ ಕನಕಪುರ ಶ್ರೀನಿವಾಸ್ಕೆ ಲ ದಿನಗಳ ಹಿಂದಷ್ಟೆ ಸಿನಿಮಾ ಸಂಬಂಧಿ ಕಾರ್ಯಕ್ರಮದಲ್ಲಿ ತುಚ್ಚವಾಗಿ ಮಾತನಾಡಿದ್ದರು. ಪ್ರೇಮ್ , ಅರ್ಜುನ್ ಜನ್ಯಾ ಇನ್ನೂ ಕೆಲವರ ಹೆಸರು ಹೇಳಿ ಕೆಲವು ಆರೋಪಗಳನ್ನು ನಿರ್ಮಾಪಕ ಕನಕಪುರ ಶ್ರೀನಿವಾಸ್ ಮಾಡಿದ್ದರು. ಪುನೀತ್ ರಾಜ್ ಕುಮಾರ್ ಅವರನ್ನು ಬಿಡದೇ ಥರ್ಡ್ ಗ್ರೇಡ್ ಭಾಷೆಯನ್ನು ಉಪಯೋಗಿಸಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕುರಿತು ಕೂಡ ನಾಲಿಗೆ ಹರಿಬಿಟ್ಟಿದ್ದರು. ಇದೀಗ ನಿರ್ದೇಶಕ ಪ್ರೇಮ್ ಅವರು ತಮ್ಮ ವಿರುದ್ಧ ಆರೋಪ ಮಾಡಿರುವ ಕನಕಪುರ ಶ್ರೀನಿವಾಸ್ ವಿರುದ್ಧ ದೂರು ನೀಡಿದ್ದಾರೆ.

ಕನಕಪುರ ಶ್ರೀನಿವಾಸ್ ವಿರುದ್ಧ ಪ್ರೇಮ್‌ ದೂರು

ನಿರ್ದೇಶಕ ಪ್ರೇಮ್‌ -

Yashaswi Devadiga
Yashaswi Devadiga Feb 7, 2026 7:05 PM

ಹಿರಿಯ ನಿರ್ಮಾಪಕ ಕನಕಪುರ ಶ್ರೀನಿವಾಸ್ (Kanakpura Srinivas) ಕೆಲ ದಿನಗಳ ಹಿಂದಷ್ಟೆ ಸಿನಿಮಾ ಸಂಬಂಧಿ ಕಾರ್ಯಕ್ರಮದಲ್ಲಿ ತುಚ್ಚವಾಗಿ ಮಾತನಾಡಿದ್ದರು. ಪ್ರೇಮ್ (Director Prem), ಅರ್ಜುನ್ ಜನ್ಯಾ ಇನ್ನೂ ಕೆಲವರ ಹೆಸರು ಹೇಳಿ ಕೆಲವು ಆರೋಪಗಳನ್ನು ನಿರ್ಮಾಪಕ ಕನಕಪುರ ಶ್ರೀನಿವಾಸ್ ಮಾಡಿದ್ದರು. ಪುನೀತ್ ರಾಜ್ ಕುಮಾರ್ ಅವರನ್ನು ಬಿಡದೇ ಥರ್ಡ್ ಗ್ರೇಡ್ ಭಾಷೆಯನ್ನು ಉಪಯೋಗಿಸಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರ ಕುರಿತು ಕೂಡ ನಾಲಿಗೆ ಹರಿಬಿಟ್ಟಿದ್ದರು. ಇದೀಗ ನಿರ್ದೇಶಕ ಪ್ರೇಮ್ (Director Prem) ಅವರು ತಮ್ಮ ವಿರುದ್ಧ ಆರೋಪ ಮಾಡಿರುವ ಕನಕಪುರ ಶ್ರೀನಿವಾಸ್ ವಿರುದ್ಧ ದೂರು ನೀಡಿದ್ದಾರೆ.

ನಾನು ಕೀಳು ಮಟ್ಟಕ್ಕೆ ಇಳಿಯಲ್ಲ

ಮಾಧ್ಯಮದ ಮುಂದೆ ಪ್ರೇಮ್‌ ಮಾತನಾಡಿ , ನಾನು ಏಕೆ ಬಂದೆ ಅಂದರೆ ತೀರಾ ತಾಯಂದಿರ ಬಗ್ಗೆ ಮಾತಾಡಿದ್ದರು. ತುಂಬಾ ವರ್ಸ್ಟ್‌ ಆಗಿ ಮಾತಾಡಿದ್ದರು. ಚೇಂಬರ್‌ ಇದೆ. ಅಲ್ಲಿ ಮಾತಾಡಿ, ಅವರಕ್ಕಿಂತ ನೂರರಷ್ಟು ಮಾತಾಡ್ತೀವಿ. ಆದರೆ ನಾನು ಕೀಳು ಮಟ್ಟಕ್ಕೆ ಇಳಿಯಲ್ಲ. ಪ್ರತಿ ಒಬ್ಬರ ಬಗ್ಗೆ ಕೀಳಾಗಿ ಮಾತಾಡಿದ್ದಾರೆ.

ಅರ್ಜುನ್‌, ಅಪ್ಪು, ದರ್ಶನ್‌, ಪ್ರೇಮ್‌ ಹೀಗೆ ಎಲ್ಲರ ಬಗ್ಗೆ ಮಾತನಾಡಿದ್ದಾರೆ. ನನ್ನ ಬಗ್ಗೆ ಯೋಗ್ಯತೆ ಮಾತನಾಡಲು ಅವರಿಗೆ ಯೋಗ್ಯತೆ ಇರಬೇಕು. ನನಗೆ ಅನ್ನ ಹಾಕೋ ಯೋಗ್ಯತೆ ದೇವರು ಕೊಟ್ಟಿದ್ದಾನೆ. ಮಾತಾಡುವಾಗ ನಿಗಾ ಇಟ್ಟುಕೊಂಡು ಮಾತಾಡಬೇಕು. ಎದುರಗಡೆ ಮಾತನಾಡಬೇಕು ಎಂದು ಗರಂ ಆಗಿಯೇ ಮಾತನಾಡಿದರು.

ಇದನ್ನೂ ಓದಿ: Kannada Movie: ಸ್ಯಾಂಡಲ್‌ವುಡ್‌ಗೆ ರೀ ಎಂಟ್ರಿ ಕೊಟ್ಟ 'ಯಾರೇ ನೀನು ಚೆಲುವೆ' ನಟಿ; ಮೂವಿ ಯಾವುದು?

ಕನಕಪುರ ಶ್ರೀನಿವಾಸ್, ಪ್ರೇಮ್‌ ಗಂಡಸಾದ್ರೆ, ಡೈರೆಕ್ಟರ್‌ ಆದ್ರೆ ನನ್ನ ಮುಂದೆ ನಿಂತುಕೊಳ್ಳೋಕೆ ಹೇಳಿ. ಅವನಪ್ಪನಿಗೇ ಹುಟ್ಟಿದ್ರೆ ಬರೋಕೆ ಹೇಳಿ. ಇಲ್ಲ ಧಮ್‌ ಇದ್ರೆ ಅವನೇ ಎಲ್ಲಿದ್ದಾನೋ ನಾನೇ ಅಲ್ಲಿಗೆ ಹೋಗ್ತೀನಿ" ಎಂದು ಆಕ್ರೋಶ ಹೊರಹಾಕಿದರು.

ವಾಣಿಜ್ಯ ಮಂಡಳಿಯಲ್ಲಿ ಇದೀಗ ಪ್ರೇಮ್‌ ದೂರು

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಇದೀಗ ಪ್ರೇಮ್‌ ದೂರು ದಾಖಲಿಸಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷೆ ಜಯಮಾಲಾ ಅವರನ್ನು ಇಂದು ಫಿಲ್ಮ್ ಚೇಂಬರ್ ನಲ್ಲಿ ಭೇಟಿಯಾದ ಪ್ರೇಮ್, ಕನಕಪುರ ಶ್ರೀನಿವಾಸ್ ತುಂಬಾನೇ ಕೀಳಾಗಿ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ. ಪೊಲೀಸ್ ಠಾಣೆಯಲ್ಲಿ ಈಗಾಗಲೇ ದೂರು ಸಲ್ಲಿಸಿದ್ದೇನೆ, ಎನ್ ಸಿ ಆರ್ ಕೂಡ ದಾಖಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

ದೂರಿನಲ್ಲಿ ಏನಿದೆ?

25 ವರ್ಷಗಳಿಂದ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸುತ್ತಿದ್ದು ಇಲ್ಲಿಯವರೆಗೂ ಹಲವಾರು ನಿರ್ಮಾಪಕರ ಜೊತೆ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಹಲವಾರು ಸದಾಭಿರುಚಿಯ ಚಿತ್ರಗಳನ್ನು ನೀಡುತ್ತಾ ಬಂದಿದ್ದೇನೆ, ಇಲ್ಲಿಯವರೆಗೂ ನನ್ನ ವೃತ್ತಿ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಕಾರ್ಯನಿರ್ವಹಿಸುತ್ತ ಬಂದಿರುತ್ತೇನೆ.. ನಿರ್ಮಾಪಕ ಆರ್. ಎಸ್ ಶ್ರೀನಿವಾಸ್ ರವರು ನನ್ನ ಬಳಿ ಬಂದು ನಿರ್ದೇಶನ ಮಾಡಿ ಕೊಡಲು ಕೇಳಿಕೊಂಡು ನನ್ನ ಬಳಿ ಬಂದು 2004 ರಲ್ಲಿ ಕೆ. ಪಿ. ಶ್ರೀಕಾಂತ್ ಎನ್ನುವವರ ಮೂಲಕ ಆರ್. ಎಸ್ ಶ್ರೀನಿವಾಸ್ ರವರು ಬಂದು ಮುಂಗಡವಾಗಿ 9 ಲಕ್ಷಗಳನ್ನು ನೀಡಿದ್ದರು ಅದರಲ್ಲಿ ಚೆಕ್ ಮೂಲಕ 5 ಲಕ್ಷ ಹಾಗೂ ನಗದು ರೂಪದಲ್ಲಿ 4 ಲಕ್ಷಗಳನ್ನು ನೀಡಿದ್ದರು.



ಇದಾದನಂತರ ಅವರಿಗಾಗಿ ಸಿನಿಮಾ ಮಾಡಲು ಒಂದು ಆಫೀಸ್ ಮಾಡಿ ಒಂದು ತಂಡವನ್ನು ಕಟ್ಟಿಕೊಂಡು ಚಿತ್ರಕಥೆ ಬರೆಯಲು ಪ್ರಾರಂಭಿಸಿದೆ, ಕಥೆ ಹಾಗೂ ಚಿತ್ರ ಕಥೆ ತಯಾರಾದ ನಂತರ ಹಲವು ಬಾರಿ ಸಂಪರ್ಕಿಸಿದಾಗ ಅವರಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಸಿಗದೇ ಇದ್ದಾಗ ಒಂದು ವರ್ಷಗಳ ಕಾಲ ನನ್ನ ಹಾಗೂ ನನ್ನ ತಂಡದ ಸಮಯವನ್ನು ವ್ಯರ್ಥ ಮಾಡಿದ್ದಲ್ಲದೆ ಯಾವುದೇ ರೀತಿಯ ಹಣ ಕಾಸನ್ನು ನನ್ನ ಆಫೀಸ್ ನ ವೆಚ್ಚಕ್ಕಾಗಲಿ, ನನ್ನ ಸಹ ನಿರ್ದೇಶಕರಿಗೆ ಹಾಗೂ ತಂಡಕ್ಕಾಗಲಿ ನೀಡಲಿಲ್ಲ.

ಇದನ್ನೂ ಓದಿ: D55: ಶ್ರೀಲೀಲಾ, ಸಾಯಿ ಪಲ್ಲವಿ ಮತ್ತು ಧನುಷ್ ಚಿತ್ರಕ್ಕೆ ಮುಹೂರ್ತ

ಒಂದು ವರ್ಷಗಳ ಕಾಲ ಆಫೀಸ್ ನ ಹಾಗೂ ತಂಡದ ಖರ್ಚು-ವೆಚ್ಚಗಳನ್ನು ನಾನೇ ಬರಿಸಿರುತ್ತೇನೆ, ಇದರಿಂದ ನನಗೆ ವೈಯಕ್ತಿಕವಾಗಿ 15 ರಿಂದ 20 ಲಕ್ಷ ಖರ್ಚು ಮಾಡಿದ್ದೇನೆ ಹಾಗೂ ನನಗೆ ಈ ಸಮಯದಲ್ಲಿ ಹಲವಾರು ನಿರ್ಮಾಪಕರು ನನಗೆ ನಿರ್ದೇಶಿಸಲು ಹಾಗೂ ನನಗೆ ಅವಕಾಶಗಳು ಬಂದಿದ್ದವು ನಾನು ಇವರ ಚಿತ್ರ ನಿರ್ದೇಶನ ಮಾಡಲು ಬಂದಂತಹ ಈ ಎಲ್ಲಾ ಅವಕಾಶಗಳನ್ನು ಕಳೆದುಕೊಂಡಿದ್ದಲ್ಲದೆ ಕೋಟಿಗಟ್ಟಲೆ ನಷ್ಟವನ್ನು ಅನುಭವಿಸಿದ್ದೇನೆ’ಎಂದು ದೂರು ನೀಡಿದ್ದಾರೆ.