ಹೊಸ ಪ್ರತಿಭೆ ದುಷ್ಯಂತ್ ಅವರನ್ನು ನಿರ್ದೇಶಕ ಸಿಂಪಲ್ ಸುನಿ ಅವರು ಗತವೈಭವ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಯಿಸಿದ್ದರು. ನವೆಂಬರ್ 14ರಂದು ತೆರೆಕಂಡಿರುವ ಈ ಸಿನಿಮಾವು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಮೊದಲ ಪ್ರಯತ್ನವಾದರೂ, ದುಷ್ಯಂತ್ ಪಳಗಿದ ನಟರಂತೆ ಅಭಿನಯಿಸಿದ್ದಾರೆ ಎಂದು ಮೆಚ್ಚುಗೆ ಸಿಕ್ಕಿತ್ತು. ಇದೀಗ ಈ ಚಿತ್ರದಿಂದ ಹೊಸ ಅಪ್ಡೇಟ್ ಸಿಕ್ಕಿದೆ.
ಗತವೈಭವ ಈಗ ಇನ್ನಷ್ಟು ಟ್ರಿಮ್!
ಹೌದು, ʻಗತವೈಭವʼ ಸಿನಿಮಾದ ಬಗ್ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರೂ ಕೂಡ ಅವಧಿ ಹೆಚ್ಚಾಯಿತೇನೋ ಎಂಬ ಮಾತುಗಳು ಕೇಳಿಬಂದಿದ್ದವು. ಆ ಬಗ್ಗೆ ಗಮನ ನೀಡಿರುವ ಸಿಂಪಲ್ ಸುನಿ ಅವರು ಅವಧಿಯನ್ನು ತಗ್ಗಿಸಿದ್ದಾರೆ. ಸಿನಿಮಾ ಅವಧಿಯನ್ನು ಹೆಚ್ಚಿಸುವಂತಹ ಕೆಲವೊಂದು ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಿರುವ ಸುನಿ, ಸಿನಿಮಾವನ್ನು ಇನ್ನಷ್ಟು ಚೆಂದಗಾಣಿಸಿದ್ದಾರೆ. ಈ ಮೊದಲು ಸಿನಿಮಾದ ಅವಧಿ 142 ನಿಮಿಗಳು ಇತ್ತು. ಇದೀಗ 125 ನಿಮಿಷಕ್ಕಿಂತ ಕಡಿಮೆ ಇದೆ.
Gatha Vaibhava Review: ʻಸಿಂಪಲ್ʼ ಸುನಿ ಹೇಳಿದ ಜನ್ಮ ಜನ್ಮಾಂತರದ ಗತವೈಭವದ ಕಥೆ!
ಸ್ಪೀಡ್ ಆದ ಸಿನಿಮಾದ ನಿರೂಪಣೆ
ಆರಂಭದಲ್ಲಿ ಬರುವ ದೇವಲೋಕದ ಎಪಿಸೋಡ್‌ನ ಅವಧಿ ಜಾಸ್ತಿ ಆಯಿತು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಇದೀಗ ಅದಕ್ಕೆ ಕತ್ತರಿ ಬಿದ್ದಿದೆ. ಅಲ್ಲಲ್ಲಿ, ಕೆಲವೊಂದಿಷ್ಟು ಸೀನ್‌ಗಳನ್ನು ಕೂಡ ಕತ್ತರಿಸಿ, ಇಡೀ ಸಿನಿಮಾವದ ನಿರೂಣೆಯನ್ನು ಈಗ ಮತ್ತಷ್ಟು ವೇಗಗೊಳಿಸಿದ್ದಾರೆ. ದ್ವಿತಿಯಾರ್ಧದಲ್ಲಿ ಬರುವ ಕಥೆಯು ಇನ್ನಷ್ಟು ತೂಕ ಎನಿಸುವಂತಾಗಿದೆ. ಒಟ್ಟಾರೆ, ಈಗಾಗಲೇ ವೀಕ್ಷಣೆ ಮಾಡಿದವರಿಗೂ ಕೂಡ ಈ ಎಡಿಟೆಡ್ ವರ್ಷನ್ ಹೊಸ ಅನುಭವ ನೀಡುವುದಂತೂ ಸುಳ್ಳಲ್ಲ.
Gatha Vaibhava Movie: ದುಶ್ಯಂತ್-ಆಶಿಕಾ ರಂಗನಾಥ್ ನಟನೆಯ 'ಗತವೈಭವ' ನವೆಂಬರ್ 14ಕ್ಕೆ ರಿಲೀಸ್
ಎಲ್ಲರ ಮೆಚ್ಚುಗೆ ಪಡೆದ ದುಷ್ಯಂತ್
ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದಿರುವ ದುಷ್ಯಂತ್‌ಗೆ ಇದು ಮೊದಲ ಸಿನಿಮಾ. ಆದರೂ ಇದು ಅವರ ಮೊದಲ ಸಿನಿಮಾ ಎಂದು ಎಲ್ಲಿಯೂ ಅನ್ನಿಸುವುದೇ ಇಲ್ಲ. ಅಷ್ಟೊಂದು ಅಚ್ಚುಕಟ್ಟಾಗಿದೆ ಅವರ ಅಭಿನಯ. ದುಷ್ಯಂತ್ ಅವರ ಧ್ವನಿ, ಡೈಲಾಗ್ ಒಪ್ಪಿಸುವ ರೀತಿ ಹೆಚ್ಚು ಪ್ಲಸ್ ಪಾಯಿಂಟ್ ಎನಿಸುತ್ತದೆ, ಅವರ ಸ್ವಷ್ಟವಾದ ಭಾಷಾ ಉಚ್ಚಾರಣೆ ಗಮನಸೆಳೆಯುತ್ತದೆ. ಮೊದಲ ಪ್ರಯತ್ನದಲ್ಲೇ ವಿವಿಧ ಶೇಡ್‌ನ ಪಾತ್ರ ಅವರಿಗೆ ಸಿಕ್ಕಿದ್ದು, ತುಂಬಾ ಉತ್ತಮವಾಗಿ ಅದನ್ನು ನಿಭಾಯಿಸುವಲ್ಲಿ ದುಷ್ಯಂತ್ ಸಫಲವಾಗಿದ್ದಾರೆ. ಇನ್ನು, ಆಧುನಿಕ, ಮಂಗಳಾ ಹೀಗೆ ಚಾಲೆಂಜಿಂಗ್ ಎನಿಸುವಂತಹ ವಿವಿಧ ಶೇಡ್‌ನ ಪಾತ್ರವನ್ನು ನಟಿ ಅಶಿಕಾ ರಂಗನಾಥ್ ಅವರು ಉತ್ತಮವಾಗಿ ನಿಭಾಯಿಸಿದ್ದಾರೆ.
ಈ ಚಿತ್ರಕ್ಕೆ ಜೂಡಾ ಸ್ಯಾಂಡಿ ಅವರು ಸಂಗೀತ ನೀಡಿದ್ದು, ವಿಲೀಯಂ ಡೇವಿಡ್ ಛಾಯಾಗ್ರಹಣ ಮಾಡಿದ್ದಾರೆ. ಸುಧಾ ಬೆಳವಾಡಿ, ಕೃಷ್ಣ ಹೆಬ್ಬಾಳೆ, ಕಿಶನ್ ಬಿಳಗಲಿ, ಕಾರ್ತಿಕ್ ರಾವ್, ಕೃಷ್ಣ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.