ಬೆಂಗಳೂರು: ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಅವರು ನಟಿಸಿ ನಿರ್ದೇಶಿಸಿದ್ದ ಕಾಂತಾರ (Kantara) ಸಿನಿಮಾ ರಿಲೀಸ್ ಆಗಿ ಬಿಗ್ ಸಕ್ಸಸ್ ಪಡೆದಿದೆ. ಬಳಿಕ ಪ್ಯಾನ್ ಇಂಡಿಯಾ ಮಟ್ಟಕ್ಕೆ ಕನ್ನಡ ಸಿನಿಮಾಕ್ಕೆ ಬಹುದೊಡ್ಡ ಪ್ರೇಕ್ಷಕರ ಬಳಗವು ಕೂಡ ಸೃಷ್ಟಿಯಾಗಿದೆ. ಅಂತೆಯೇ ನಟ ರಿಷಬ್ ಶೆಟ್ಟಿ ಅವರು ಇದೇ ಸಿನಿಮಾದಲ್ಲಿ ದ್ವಿಪಾತ್ರ ಮಾಡಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ಅಂತೆಯೆ ರಿಷಬ್ ಶೆಟ್ಟಿ ಅವರಿಗೆ ಈಗ ಬಹುಭಾಷೆಯಲ್ಲಿ ಬೇಡಿಕೆ ಕೂಡ ಬರುತ್ತಿದ್ದು ಕಾಂತಾರಾ ಸಿನಿಮಾ ಬಳಿಕ ಅವರು ಯಾವ ತರಹದ ಕಥೆಯಾಧಾರಿತ ಸಿನಿಮಾ ಮಾಡಬಹುದು ಎಂದು ಅಭಿಮಾನಿಗಳು ಕೂಡ ಕಾತುರರಾಗಿದ್ದಾರೆ. ಅವರು ಕಾಂತಾರ ಮುಂದಿನ ಭಾಗ ನಟಿಸುತ್ತಾರೆ ಎಂದು ಸಹ ಹೇಳಲಾಗುತ್ತಿದೆ. ಕಾಂತಾರಾ ರಿಲೀಸ್ ಟೈಂ ನಲ್ಲೇ ಅಭಿಮಾನಿಗಳು ಮಾಧ್ಯಮದವರು ಈ ಪ್ರಶ್ನೆ ಕೇಳಲಾಗಿದ್ದು ಅದಕ್ಕೆ ನಟ ರಿಷಬ್ ಕೂಡ ಪ್ರತಿಕ್ರಿಯೆ ನೀಡಿದ್ದರು.
ಕಾಂತಾರ ಸಿನಿಮಾ ಬಳಿಕ ಸ್ವಲ್ಪ ಕಾಲ ಕುಟುಂಬಕ್ಕೆ ಮತ್ತು ಸ್ನೇಹಿತರ ಬಳಗಕ್ಕೆ ಸಮಯ ನೀಡುವೆ ಎಂದು ಅವರು ಹೇಳಿದ್ದಾರೆ. ಕಾಂತಾರ ಮುಂದಿನ ಭಾಗಕ್ಕೆ ಸದ್ಯ ಚಿಂತನೆ ಮಾಡಲಿಲ್ಲ ಇದಾದ ಬಳಿಕ ಅನೇಕ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದೇನೆ. ಆ ಮೇಲೆ ಒಂದೆರೆಡು ಸಿನಿಮಾ ಆಫರ್ ಬಂದಿದ್ದು ಅದನ್ನು ನಟಿಸುವುದಾಗಿ ಅವರು ಹೇಳಿಕೊಂಡಿದ್ದರು. ಆ ಪ್ರಕಾರ ರಿಷಭ್ ಶೆಟ್ಟಿ ಅವರ ಮುಂದಿನ ಪ್ರಾಜೆಕ್ಟ್ ಜೈ ಹನುಮಾನ್ (Jai Hanuman) ಎಂದು ತಿಳಿದುಬಂದಿದೆ. ಆದರೆ ಈ ನಡುವೆ ಅವರು ಸಿನಿಮಾ ಒಂದಕ್ಕೆ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಮಾಹಿತಿ ಇದೀಗ ಹೊರ ಬಿದ್ದಿದೆ.
ನಟ ರಿಷಬ್ ಅವರು ಕಾಂತಾರ ಹಾಗೂ ಕಾಂತಾರಾ ಚಾಪ್ಟರ್ 1 ಸಿನಿಮಾ ಮಾಡಲು ಬರೋಬ್ಬರಿ 5 ವರ್ಷಕ್ಕೂ ಅಧಿಕ ಕಾಲ ಶ್ರಮಿಸಿದ್ದಾರೆ. ಹೀಗಾಗಿ ಇವರು ಉಳಿದ ಸಿನಿಮಾ ಮಾಡುವುದು ಸಾಧ್ಯ ವಿರಲಿಲ್ಲ. ಈಗ ಕಾಂತಾರ ಕಂಪ್ಲೀಟ್ ಆದ ಕಾರಣ ಜೈ ಹನುಮಾನ್ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಲು ಒಪ್ಪಿದ್ದಾರೆ. ಆದರೆ ಅದಕ್ಕೂ ಮೊದಲೇ ತೆಲುಗಿನ ಕಿಂಗ್ ಡಮ್ ಸಿನಿಮಾದಲ್ಲಿ ಇವರು ನಟಿಸುತ್ತಿದ್ದಾರೆ ಎಂಬ ಮಾಹಿತಿ ಸದ್ಯ ವೈರಲ್ ಆಗುತ್ತಿದೆ.
ನಟ ವಿಜಯ್ ದೇವರಕೊಂಡ ಅಭಿನಯದ ಕಿಂಗ್ ಡಮ್ ಸಿನಿಮಾ ರಿಲೀಸ್ಗೂ ಮೊದಲೇ ಕುತೂಹಲ ಉಂಟು ಮಾಡುತ್ತಿದೆ. ಅದರಲ್ಲಿ ದೊಡ್ಡ ತಾರಾಗಣ ಸಂಗಮವಾಗಲಿದ್ದು ನಟ ರಿಷಭ್ ಅವರಿಗೂ ಆ್ಯಕ್ಟಿಂಗ್ ಆಫರ್ ನೀಡಲಾಗಿದೆ ಎನ್ನಲಾಗುತ್ತಿದೆ. ಆದರೆ ಇನ್ನು ಕೆಲವು ವರದಿ ಪ್ರಕಾರ ಕಿಂಗ್ ಡಮ್ ಸಿನಿಮಾ ನಿರ್ಮಾಪಕರು ರಿಷಬ್ ಜೊತೆ ಹೊಸದಾಗಿ ಒಂದು ಕನ್ನಡ ಸಿನಿಮಾ ಮಾಡಲು ಆಫರ್ ನೀಡಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.
ಅದು ನಿಜವೇ ಆದರೆ ಜೈ ಹನುಮಾನ್ ಸಿನಿಮಾಕ್ಕೂ ಮೊದಲೇ ತೆಲುಗು ನಿರ್ಮಾಪಕರ ಕನ್ನಡ ಸಿನಿಮಾದಲ್ಲಿ ನಟ ರಿಷಭ್ ಅವರು ಅಭಿನಯಿಸುವ ಸಾಧ್ಯತೆ ಇದೆ. ಈಗಾಗಲೇ ಕಿಂಗ್ ಡಮ್ ಸಿನಿಮಾದ ನಿರ್ಮಾಪಕ ನಾಗ ವಂಶಿ ಜೊತೆ ನಟ ರಿಷಬ್ ಮಾತುಕತೆ ನಡೆಸಿದ್ದು 2026ರಂದು ಶೂಟಿಂಗ್ ಆರಂಭ ಆಗುವ ನಿರೀಕ್ಷೆ ಇದೆ. ಹೀಗಾಗಿ ಮುಂದಿನ ವರ್ಷದಲ್ಲಿ ರಿಷಭ್ ಅವರು ಸಾಲು ಸಾಲು ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಲಿದ್ದಾರೆ.