ಶುಭಸ್ಯ ಶೀಘ್ರಂ ಸೀರಿಯಲ್‌ನ ಪ್ರಮುಖ ಪಾತ್ರ ಶ್ರುತಿ. ಆ ಪಾತ್ರವನ್ನು ದಿವ್ಯಶ್ರೀ ಸುಳ್ಯ (Divyashree Sullia ) ನಿಭಾಯಿಸಿದ್ದರು. ಈಗ ಕೃಷ್ಣ ರುಕ್ಕು ಧಾರಾವಾಹಿಯಲ್ಲಿ ಕಲ್ಯಾಣಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿಂಗಲ್ ಪೇರೆಂಟ್ ಆಗಿರುವ ಇವರಿಗೆ ಮುದ್ದಾದ ಮಗಳಿದ್ದಾಳೆ. ತಂದೆಯಿಂದಲೇ ಚೆಂಡೆ ಮತ್ತು ಮದ್ದಳೆ ವಾದನವನ್ನು ಕಲಿತು ಯಕ್ಷಗಾನ ಕ್ಷೇತ್ರದಲ್ಲಿ ಪುರುಷರ ಪ್ರಾಬಲ್ಯವಿದ್ದ ಚೆಂಡೆ ವಾದನದಲ್ಲಿ ತಮ್ಮದೇ ಛಾಪು ಮೂಡಿಸಿರುವುದು ದಿವ್ಯಾ ಹೆಗ್ಗಳಿಕೆ. ಗಂಡನ ಅಕ್ರಮ ಸಂಬಂಧಕ್ಕೆ ಬೇಸರಗೊಂಡು ಡಿವೋರ್ಸ್ (Divorce) ತಗೊಂಡೆ ಎಂದು ಅವರು ನ್ಯೂಸೋ ನ್ಯೂಸು ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಕಲೆ ಅಂತೂ ಇತ್ತು
ಸಂದರ್ಶನದಲ್ಲಿ ನಟಿ ಮಾತನಾಡಿ, ನನ್ನ ಮದುವೆ ಬೇಗ ಆಯ್ತು. ಆದರೆ ಅದು ಕೆಟ್ಟದ್ದಾಯ್ತು. ಅದರ ಬಗ್ಗೆ ತುಂಬಾ ಮಾತನಾಡಲು ನಾನು ಇಷ್ಟ ಪಡುವುದಿಲ್ಲ. ಮದುವೆ ನಂತರ ಸಪೋರ್ಟ್ ಕೊಡ್ತೀನಿ ಎಂದು ಮಾತನಾಡಿರುವ ವ್ಯಕ್ತಿ ಕೊನೆಗೆ ಸಪೋರ್ಟ್ ಮಾಡಿಲ್ಲ. ನಾವು ಇಷ್ಟ ಪಟ್ಟೇ ಮದುವೆ ಆಗಿದ್ದು. ಅವರು ಆರ್ಟ್ ಫೀಲ್ಡ್ ಅಲ್ಲೇ ಇದ್ದರು. ಆಮೇಲೆ ಮದುವೆನೂ ಆಯ್ತು. ಒಂದು ವಾರದ ನಂತರ ಗೊತ್ತಾಯ್ತು. ಅವರ ಬಳಿ ಏನೂ ಇರಲಿಲ್ಲ ಅಂತ. ಆದರೆ ಕಲೆ ಅಂತೂ ಇತ್ತು ಎಂದಿದ್ದಾರೆ.
ಇದನ್ನೂ ಓದಿ: Amruthadhaare Serial: ಪ್ರೀತಿಯಿಂದ ಸಾಕಿದ ಮಗಳು ಮಿಂಚು ಕೈ ತಪ್ಪಿ ಹೋಗೋ ಆತಂಕದಲ್ಲಿ ಗೌತಮ್ - ಭೂಮಿ!
“ನಾನು ಬೇರೆ ದೇಶಕ್ಕೆ ಹೋಗ್ತೀನಿ, ಬೇರೆ ದೇಶದಲ್ಲಿ ಚಂಡೆ ಕಲಿಸಬಹುದು ಎಂದು ಆ ವ್ಯಕ್ತಿ ಹೇಳಿದ್ದರು. ಮದುವೆ ಆದ್ಮೇಲೆ ಅವನಿಗೆ ಪಾಸ್‌ಪೋರ್ಟ್ ಕೂಡ ಇಲ್ಲ ಎನ್ನೋದು ಆಮೇಲೆ ಗೊತ್ತಾಯ್ತು. ಆಸ್ತಿ ಬೇಕಾಗಿಲ್ಲ, ಆ ವ್ಯಕ್ತಿ ನನಗೆ ಬೆಂಬಲ ಕೊಡ್ತಾರೆ ಎನ್ನುವ ಕಾರಣಕ್ಕೆ ನಾನು ಮದುವೆ ಆದೆ. ಮದುವೆಯಾದ ಒಂದೇ ತಿಂಗಳಿಗೆ ಕೆಲಸಕ್ಕೆ ಹೋಗಲು ರೆಡಿಯಾದೆ. ಮದುವೆಯಾಗಿ ಒಂದು ವರ್ಷಕ್ಕೆ ಮಗಳು ಹುಟ್ಟಿದಳು, ನಾನು ಕೆಲಸ ಮಾಡಿಕೊಂಡು ನಾನು ಇಡೀ ಮನೆಯನ್ನು ಸಾಕುತ್ತಿದ್ದೆ” ಎಂದು ನಟಿ ದಿವ್ಯಶ್ರೀ ಸುಳ್ಯ ಹೇಳಿದ್ದಾರೆ.
ಹೆಣ್ಣು ಎಲ್ಲವನ್ನು ಸಹಿಸಿಕೊಳ್ತಾಳೆ, ಆದರೆ ಗಂಡ ಇನ್ನೊಂದು ಸಂಬಂಧ ಇಟ್ಟುಕೊಂಡರೆ ಸಹಿಸಿಕೊಳ್ಳೋಕೆ ಆಗೋದಿಲ್ಲ. ಇನ್ನೊಂದು ಹೆಣ್ಣು ನಮ್ಮ ಮನೆಗೆ ಬಂದು ಜಗಳ ಮಾಡಿದಾಗ, ಅವಳ ಮನೆಯವರನ್ನು ಕರೆಸಿ ಮಾತನಾಡಿದ್ದೇನೆ. ಎಷ್ಟೇ ಬಾರಿ ನಾನು ಈ ಬಗ್ಗೆ ಗಂಡನನ್ನು ಪ್ರಶ್ನೆ ಮಾಡಿದಾಗ, ಆಗ ಆ ವ್ಯಕ್ತಿ ಬೇರೆಯವರ ಮಾತು ಕೇಳಿಕೊಂಡು ನನ್ನ ಮೇಲೆ ಆರೋಪ ಮಾಡ್ತೀಯಾ ಎಂದು ಉತ್ತರ ಕೊಟ್ಟು ಸಮಜಾಯಿಷಿ ಕೊಡುತ್ತಿದ್ದರು” ಎಂದು ದಿವ್ಯಶ್ರೀ ಹೇಳಿದ್ದಾರೆ.
ಸದ್ಯ ನಟಿ ಕೃಷ್ಣ ರುಕ್ಕು ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ಮೌನ ಗುಡ್ಡೇಮನೆ ರುಕ್ಕು ಆಗಿ ನಟಿಸಿದರೆ, ಅಕ್ಷಯ್ ನಾಯಕ್ ಕೃಷ್ಣನ ಪಾತ್ರ ನಿರ್ವಹಿಸಲಿದ್ದಾರೆ. ಅಷ್ಟೇ ಅಲ್ಲದೇ ಹಿರಿತೆರೆ ಕಿರುತೆರೆಯ ನಿರ್ದೇಶಕ, ನಿರ್ಮಾಪಕ , ಬರಹಗಾರ , ನಟ, ಕಲಾ ಸಾಮ್ರಾಟ್ ಎಸ್.ನಾರಾಯಣ್ ಸೂರ್ಯ ಪ್ರಕಾಶ್ ಎಂಬ ಮಹತ್ವದ ಪಾತ್ರ ನಿರ್ವಹಿಸುವ ಮೂಲಕ ತಂಡಕ್ಕೆ ಬಲ ನೀಡಿದ್ದಾರೆ.