ಬಿರಿಯಾನಿ ಹೋಟೆಲ್‌ವೊಂದರ ಉದ್ಘಾಟನೆಗೆ ಹೋಗಿದ್ದ ನಟ ಡಾಲಿ ಧನಂಜಯ (dally dhananjay) ಕಾರ್ಯಕ್ರಮ ಮುಗಿದ ಬಳಿಕ ಹೋಟೆಲ್‌ನಲ್ಲಿಯೇ ಬಾಳೆಎಲೆಯಲ್ಲಿ ಭರ್ಜರಿ ಬಿರಿಯಾನಿ ಊಟ ಮಾಡಿದ್ದರು. ಲಿಂಗಾಯತರಾಗಿರುವ ಡಾಲಿ ಧನಂಜಯ ಮಾಂಸಾಹಾರ (Non Veg) ಸೇವನೆ ಮಾಡಬಹುದಾ..? ಎಂಬ ಚರ್ಚೆಗಳು ಹುಟ್ಟಿಕೊಂಡವು. ಈ ಬಗ್ಗೆ ಪರ ವಿರೋಧ ಚರ್ಚೆಗಳೂ ಆಗುತ್ತಿವೆ. ನಟ ಡಾಲಿ ಧನಂಜಯ್ ಮಾಂಸಾಹಾರ ಸೇವನೆ ಕುರಿತು ಸಮರ್ಥನೆ ಮಾಡುವ ಭರದಲ್ಲಿ ಧರ್ಮಸ್ಥಳ (Dharmasthala) ಭಕ್ತರ ಆಕ್ರೋಶಕ್ಕೆ ತುತ್ತಾಗಿದ್ದಾರೆ ಡಾಗ್ ಸತೀಶ್ (Dog satish).
ಧರ್ಮಸ್ಥಳ ದೇವಸ್ಥಾನ ಬಳಿ ಇರುವ ಪಾರ್ಕ್‌ನಲ್ಲಿ ಚಿಕನ್ ತಿಂದಿದ್ದೇ
ಡಾಗ್ ಸತೀಶ್ ಅವರು ತಮ್ಮ ಹೇಳಿಕೆ ಮೂಲಕವೇ ಸಾಕಷ್ಟು ಸುದ್ದಿಯಾಗುತ್ತಲೇ ಇದ್ದಾರೆ. ಖಾಸಗಿ ವಾಹಿನಿಯಲ್ಲಿ ಸಂದರ್ಶನ ನೀಡಿದ್ದಾರೆ. ಯಾರು ಬೇಕಾದರೂ ಮಾಂಸಾಹಾರ ತಿನ್ನ ಬಹುದು ಎಂದಿರುವ ಡಾಗ್ ಸತೀಶ್, ತಾನು ಧರ್ಮಸ್ಥಳ ದೇವಸ್ಥಾನ ಬಳಿ ಇರುವ ಪಾರ್ಕ್‌ನಲ್ಲಿ ಚಿಕನ್ ಬಿರಿಯಾನಿ ಹಾಗೂ ಕಬಾಬ್ ತಿಂದಿದ್ದೇನೆ ಕಾಲೇಜು ಲೈಫ್‌ನಲ್ಲಿ ಎಂದಿದ್ದಾರೆ. ಈ ಹೇಳಿಕೆಯಿಂದ ಆಕ್ರೋಶಗಳು ವ್ಯಕ್ತವಾಗಿದೆ.
ಇದನ್ನೂ ಓದಿ: Dog Satish : 80 ಜನರ ಮೇಲೆ ಕೇಸ್, 8 ಜನರು ಅರೆಸ್ಟ್ ; ಬೆದರಿಕೆ ಹಾಕಿದವರ ವಿರುದ್ಧ ಸತೀಶ್ ದೂರು
ನಾನ್ ವೆಜ್ ತಿನ್ನೋದು ಅವರ ಅವರ ಇಷ್ಟ. ಮಾಡರ್ನ್ ಕಾಲ ಇದು. ಯಾವ ದಿನ ಬೇಕಾದರು ಮಾಂಸಾಹಾರ ತಿನ್ನಬಹುದು. ನಾನು ವರ್ಷದ 365 ದಿನ ನಾನ್ ವೆಜ್ ತಿನ್ನುತ್ತೇನೆ. ಗಣೇಶ ಹಬ್ಬ, ಗೌರಿ ಹಬ್ಬ ಸೇರಿದಂತೆ ಎಲ್ಲ ಹಬ್ಬಗಳೂ ತಿಂದಿದ್ದೇನೆ. ನಾನು ಕಾಲೇಜು ದಿನಗಳಲ್ಲಿರುವಾಗ ಗೆಳೆಯರ ಒತ್ತಾಯಕ್ಕೆ ಧರ್ಮಸ್ಥಳಕ್ಕೆ ತೆರಳಿದ್ದೆ. ನಾನು ದೇವರು ದಿಂಡ್ರೂ ನಂಬೋದಿಲ್ಲ. ಆದರೆ ಗೆಳೆಯರ ಜೊತೆಗೆ ಧರ್ಮಸ್ಥಳಕ್ಕೆ ಹೋದಾಗ, ಧರ್ಮಸ್ಥಳದ ಪಾರ್ಕ್‌ನಲ್ಲಿ ಬಿರಿಯಾನಿ ಕಬಾಬ್ ತಿಂದಿದ್ದೇನೆ ಎಂದಿದ್ದಾರೆ.
ಇನ್ನು ತಮ್ಮ ಊಟದ ಕುರಿತು ನಟ ಡಾಲಿ ಧನಂಜಯ್ ಮೊದಲೇ ಸ್ಪಷ್ಟನೆ ನೀಡಿದ್ದರು. ಈ ಹಿಂದೆ ಹೊಯ್ಲಳ ಚಿತ್ರದ ಸಂದರ್ಭದಲ್ಲಿ ಯೂಟ್ಯೂಬ್ ಚಾನೆಲ್ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಡಾಲಿ 'ತಾವು ನಾನ್ ವೆಜ್ ಪ್ರಿಯರಾಗಿದ್ದು, ಹೊಯ್ಸಳ ಚಿತ್ರಕ್ಕೆ ಸಿದ್ಧತೆ ನಡೆಸುತ್ತಿರುವುದರಿಂದ ಡಯಟ್ ನಲ್ಲಿದ್ದೇನೆ' ಎಂದು ಹೇಳಿದ್ದರು.