Dog Satish : 80 ಜನರ ಮೇಲೆ ಕೇಸ್, 8 ಜನರು ಅರೆಸ್ಟ್ ; ಬೆದರಿಕೆ ಹಾಕಿದವರ ವಿರುದ್ಧ ಸತೀಶ್ ದೂರು
Bigg Boss Satish: ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಡಾಗ್ ಸತೀಶ್ ಬಿಗ್ ಬಾಸ್ ಮನೆಗಿಂತ ಹೊರಗಡೆ ಟ್ರೋಲ್ ಆಗಿದ್ದೇ ಹೆಚ್ಚು. ಕೆಲವರು ಸತೀಶ್ ಅವರಿಗೆ ಕೊಲೆ ಬೆದರಿಕೆ ಹಾಕುವ ಮಟ್ಟಕ್ಕೆ ಹೋಗಿದ್ದರು ಅಂತ ಸ್ವತಂ ಸತೀಶ್ ಅವರೇ ಮಾಧ್ಯಮವೊಂದಕ್ಕೆ ನೇರ ಹೇಳಿಕೆ ನೀಡಿದ್ದಾರೆ. 80 ಜನರ ಮೇಲೆ ಕೇಸ್ಹಾ ಕಿದ್ದೇನೆ. ಅದರಲ್ಲಿ 8 ಜನರು ಅರೆಸ್ಟ್ ಆಗಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.
ಡಾಗ್ ಸತೀಶ್ -
ಬಿಗ್ ಬಾಸ್ ಕನ್ನಡ ಸೀಸನ್ 12ರ (Bigg Boss Kannada 12) ಸ್ಪರ್ಧಿ ಡಾಗ್ ಸತೀಶ್ (Dog Satish) ಬಿಗ್ ಬಾಸ್ ಮನೆಗಿಂತ ಹೊರಗಡೆ ಟ್ರೋಲ್ ಆಗಿದ್ದೇ ಹೆಚ್ಚು. ಕೆಲವರು ಸತೀಶ್ ಅವರಿಗೆ ಕೊಲೆ ಬೆದರಿಕೆ ಹಾಕುವ ಮಟ್ಟಕ್ಕೆ ಹೋಗಿದ್ದರು ಅಂತ ಸ್ವತಂ ಸತೀಶ್ ಅವರೇ ಮಾಧ್ಯಮವೊಂದಕ್ಕೆ ನೇರ ಹೇಳಿಕೆ ನೀಡಿದ್ದಾರೆ. 80 ಜನರ ಮೇಲೆ ಕೇಸ್ (Case) ಹಾಕಿದ್ದೇನೆ. ಅದರಲ್ಲಿ 8 ಜನರು ಅರೆಸ್ಟ್ (Arrrest) ಆಗಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.
80 ಜನರ ಮೇಲೆ ಕೇಸ್ ಹಾಕಿದ್ದೇನೆ
ಡಾಗ್ ಸತೀಶ್ ಮಾತನಾಡಿ, ಎಷ್ಟೇ ಟ್ರೋಲ್ ಮಾಡಿದ್ರೂ ನನಗೇನು ಅನ್ನಿಸಲ್ಲ. ತೀರಾ ಪರ್ಸನಲ್ ಆಗಿ ಕೊಲೆ ಬೆದರಿಕೆ ಹಾಕಿದವರ ಮೇಲೆ ಕೇಸ್ ಹಾಕಿದ್ದೇನೆ. 80 ಜನರ ಮೇಲೆ ಕೇಸ್ ಹಾಕಿದ್ದೇನೆ. ಅದರಲ್ಲಿ 8 ಜನರು ಅರೆಸ್ಟ್ ಆಗಿದ್ದಾರೆ.
ಯಲಹಂಕ ಗುರು ಎಂಬುವವರು ಎ1. ಅವರ ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಅವರು ಸ್ಟೇಷನ್ ಬೇಲ್ ಪಡೆದುಕೊಂಡಿದ್ದಾರೆ’ ಎಂದಿದ್ದಾರೆ ಸತೀಶ್.
ಇದನ್ನೂ ಓದಿ: Raghu Bigg Boss Kannada: ಗಿಲ್ಲಿ ಬಗ್ಗೆ ಅಶ್ವಿನಿ ಹೇಳಿಕೆಗೆ ಬಿಗ್ ಬಾಸ್ ರಘು ಗರಂ
ಗಿಲ್ಲಿ ಫ್ಯಾನ್ಸ್ ಅದು!
1 ಕೋಟಿ ರೂಪಾಯಿಗೆ ಮಾನನಷ್ಟ ಮೊಕದ್ದಮೆ ಕೂಡ ಹಾಕಿದ್ದೀನಿ. ಅದರಲ್ಲಿ 8 ಜನ ಅರೆಸ್ಟ್ ಆಗಿದ್ದಾರೆ. ವೈಟ್ಫೀಲ್ಡ್ ಕಡೆಯ ಯುವಸಾಮ್ರಾಟ್ ಎಂಬುವವರ ಕೂಡ ಅರೆಸ್ಟ್ ಆಗಿದ್ದಾರೆ. ಮಂಡ್ಯದಲ್ಲಿ ಇರುವ ಇನ್ನೊಬ್ಬರು ಕೊಲೆ ಬೆದರಿಕೆ ಹಾಕಿದ್ದಾರೆ. ಅವರ ಮೇಲೆ ಪ್ರತ್ಯೇಕ ಕೇಸ್ ಹಾಕುತ್ತೇನೆ’ ಎಂದು ಸತೀಶ್ ಹೇಳಿದ್ದಾರೆ.
ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿಗೆ ವೋಟ್ ಹಾಕಿ, ಸರಿಯಾಗಿ ಆಡುವವರನ್ನು ವಿನ್ ಮಾಡಿ ಅಂತ ನಾನು ಹೇಳಿದ್ದೆ. ಚಾಮರಾಜಪೇಟೆ ಠಾಣೆಯಲ್ಲಿ ದೂರು ಕೊಟ್ಟಿದ್ದೆ. ಅದಕ್ಕಾಗಿ 8 ಜನರನ್ನು ಅರೆಸ್ಟ್ ಮಾಡಲಾಗಿದೆ. ಇನ್ನೂ ಯಾರಾದರೂ ಮಾತನಾಡಿದರೆ ಅವರ ಮೇಲೂ ಕೇಸ್ ಹಾಕುತ್ತೇನೆ ಎಂದು ಕ್ಯಾಡಬಾಮ್ಸ್ ಸತೀಶ್ ಹೇಳಿದ್ದಾರೆ.
ಇದನ್ನೂ ಓದಿ: Amruthanjan Movie: ʻಅಮೃತ ಅಂಜನ್ʼ ಚಿತ್ರದ ಟ್ರೈಲರ್ ಬಿಡುಗಡೆ ; ಸಿನಿಮಾ ರಿಲೀಸ್ ಯಾವಾಗ?
ಇಷ್ಟೇ ಅಲ್ಲ ಮತ್ತೊಂದು ಮಾಧ್ಯಮದಲ್ಲಿ ನಟ ಡಾಲಿ ಧನಂಜಯ್ ಮಾಂಸಾಹಾರ ಸೇವನೆ ಕುರಿತು ಸಮರ್ಥನೆ ಮಾಡುವ ಭರದಲ್ಲಿ ಧರ್ಮಸ್ಥಳ ಭಕ್ತರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ದೇವ್ರು ದಿಂಡ್ರೂ ನಾನು ನಂಬೋದಿಲ್ಲ. ಯಾರು ಬೇಕಾದರೂ ಮಾಂಸಾಹಾರ ತಿನ್ನ ಬಹುದು ಎಂದಿರುವ ಡಾಗ್ ಸತೀಶ್, ತಾನು ಧರ್ಮಸ್ಥಳ ದೇವಸ್ಥಾನ ಬಳಿ ಇರುವ ಪಾರ್ಕ್‌ನಲ್ಲಿ ಚಿಕನ್ ಬಿರಿಯಾನಿ ಹಾಗೂ ಕಬಾಬ್ ತಿಂದಿದ್ದೇನೆ ಎಂದಿದ್ದಾರೆ. ಈ ಹೇಳಿಕೆಯಿಂದ ಆಕ್ರೋಶಗಳು ಭುಗಿಲೆದ್ದಿದೆ.