ಹೊಂಬಾಳೆ ಫಿಲ್ಮ್ಸ್ ಜೊತೆ ಕೈಜೋಡಿಸುತ್ತಾರಾ ಜೂ. ಎನ್‌ಟಿಆರ್? ತಾರಕ್ ಜನ್ಮದಿನದಂದೇ ಸಿಕ್ತಾ ದೊಡ್ಡ ಸುಳಿವು?
‘ಮ್ಯಾನ್ ಆಫ್ ಮಾಸಸ್’ ಜೂನಿಯರ್ ಎನ್‌ಟಿಆರ್ ಹುಟ್ಟುಹಬ್ಬಕ್ಕೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯು ವಿಶ್ ಮಾಡಿ ‘ಡ್ರಾಗನ್’ ಚಿತ್ರದ ಗ್ಲಿಂಪ್ಸ್ ಹಂಚಿಕೊಂಡಿರುವುದು ಚಿತ್ರರಂಗದಲ್ಲಿ ಭಾರಿ ಸಂಚಲನ ಮೂಡಿಸಿದೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸುತ್ತಿರುವ ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದ ಕರ್ನಾಟಕ ಹಾಗೂ ಓವರ್‌ಸೀಸ್ ವಿತರಣಾ ಹಕ್ಕುಗಳನ್ನು ಹೊಂಬಾಳೆ ಪಡೆಯುವ ಸಾಧ್ಯತೆಯಿದೆ.
-
ʻಮ್ಯಾನ್ ಆಫ್ ಮಾಸಸ್ʼ ಜೂನಿಯರ್ ಎನ್‌ಟಿಆರ್ ಅವರ ಹುಟ್ಟುಹಬ್ಬಕ್ಕೆ ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ 'ಹೊಂಬಾಳೆ ಫಿಲ್ಮ್ಸ್' ಶುಭ ಹಾರೈಸಿದೆ. ಆ ಹಿನ್ನೆಲೆಯಲ್ಲಿ ಹೊಂಬಾಳೆ ಫಿಲ್ಮ್ಸ್ ಒಂದು ಸ್ಪೆಷಲ್ ಟ್ವೀಟ್ ಮತ್ತು 'ಡ್ರಾಗನ್' ಚಿತ್ರದ ಪವರ್-ಪ್ಯಾಕ್ಡ್ ಗ್ಲಿಂಪ್ಸ್ ಹಂಚಿಕೊಂಡಿದೆ.
ಇದು ಸದ್ಯ ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಒಂದು ಜನ್ಮದಿನದ ಪೋಸ್ಟ್ ಚಿತ್ರರಂಗದಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಚರ್ಚೆ, ಕುತೂಹಲಕ್ಕೆ ಕಾರಣವಾಗಬಹುದು ಎಂದು ಯಾರೂ ಊಹಿಸಿರಲಿಲ್ಲ! ಆದರೆ ಆ ಪೋಸ್ಟ್ ಮೇಲೆಯೇ ಲೆಕ್ಕಾಚಾರದ ಮಾತುಗಳು ಶುರುವಾಗಿವೆ.
ಎನ್‌ಟಿಆರ್‌ಗೆ ವಿಶ್ ಮಾಡಿದ ಹೊಂಬಾಳೆ ಫಿಲ್ಮ್ಸ್
ಹೊಂಬಾಳೆ ಫಿಲ್ಮ್ಸ್ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ, "ಒಂದು ಡ್ರ್ಯಾಗನ್ ಮೇಲೇರುತ್ತದೆ. ಒಂದು ಸಾಮೂಹಿಕ ಘರ್ಜನೆ. ಎಂತಹ ಸ್ಫೋಟಕ ನೋಟ, ಪ್ರತಿ ಫ್ರೇಮ್ ಮಾಸ್ ಮತ್ತು ಮ್ಯಾಜಿಕ್ ಅನ್ನು ತೋರಿಸುತ್ತಿದೆ. ಡೆವಿಲ್ ಎನ್‌ಟಿಆರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.." ಎಂದು ಬರೆದುಕೊಂಡಿದೆ. ಮೇಲ್ನೋಟಕ್ಕೆ ಇದು ಕೇವಲ ಜನ್ಮದಿನದ ಶುಭಾಶಯದ ಪೋಸ್ಟ್‌ನಂತೆ ಕಂಡರೂ, ಇದರ ಹಿಂದೆ ತೆರೆಮರೆಯಲ್ಲಿ ದೊಡ್ಡದೊಂದು ಸಿನಿಮೀಯ ಲೆಕ್ಕಾಚಾರ ಅಡಗಿದೆ ಎಂಬ ಮಾತುಗಳು ಕೇಳಿಬಂದಿವೆ.
NTRNeel: ಜೂ.ಎನ್‌ಟಿಆರ್-ಪ್ರಶಾಂತ್ ನೀಲ್ ಚಿತ್ರಕ್ಕಾಗಿ ಸಿದ್ಧವಾಗುತ್ತಿದೆ ಕಾರ್ಖಾನೆಯ ಬೃಹತ್ ಸೆಟ್
ಪ್ರಶಾಂತ್ ನೀಲ್‌ಗೆ ಮೆಚ್ಚುಗೆ
ಜೂ. ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‌ನ ಬಹುನಿರೀಕ್ಷಿತ 'ಡ್ರಾಗನ್' ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಮತ್ತು ಎನ್‌ಟಿಆರ್ ಆರ್ಟ್ಸ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸುತ್ತಿವೆ. ಹೀಗಿದ್ದರೂ, ಹೊಂಬಾಳೆ ಫಿಲ್ಮ್ಸ್ ಈ ಚಿತ್ರದ ಗ್ಲಿಂಪ್ಸ್ ಅನ್ನು ತನ್ನದೇ ಸ್ವಂತ ಚಿತ್ರದಂತೆ ಅತ್ಯಂತ ಸಂಭ್ರಮದಿಂದ ಹಂಚಿಕೊಂಡಿರುವುದರ ಹಿಂದೆ ಬಿಗ್ ಸೀಕ್ರೆಟ್ ಇದೆ ಎನ್ನಲಾಗುತ್ತಿದೆ. ಇದು ನಿರ್ದೇಶಕ ಪ್ರಶಾಂತ್ ನೀಲ್ ಅವರ ಮೇಲಿರುವ ಅಪಾರ ಗೌರವವನ್ನು ತೋರಿಸುತ್ತದೆ. ಏಕೆಂದರೆ, ಹೊಂಬಾಳೆ ಸಂಸ್ಥೆಗೆ 'ಕೆಜಿಎಫ್' ಮತ್ತು 'ಸಲಾರ್' ನಂತಹ ಐತಿಹಾಸಿಕ ಬ್ಲಾಕ್‌ಬಸ್ಟರ್‌ಗಳನ್ನು ನೀಡಿದ ಪ್ರಶಾಂತ್ ನೀಲ್ ಅವರ ಈ ಹೊಸ ಸಿನಿಮಾದ ಗ್ಲಿಂಪ್ಸ್ ಅನ್ನು ಹೊಂಬಾಳೆ ಫಿಲ್ಮ್ಸ್ ಶ್ಲಾಘಿಸಿದೆ.
ಹೊಂಬಾಳೆ ಫಿಲ್ಮ್ಸ್ ಜೊತೆ ಎನ್‌ಟಿಆರ್ ಸಿನಿಮಾ
ಸದ್ಯ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಿರುವ ಹೊಂಬಾಳೆ ಫಿಲ್ಮ್ಸ್ ಭವಿಷ್ಯದಲ್ಲಿ ಜೂನಿಯರ್ ಎನ್‌ಟಿಆರ್ ಅವರ ಜೊತೆ ಒಂದು ಬೃಹತ್ ಆಕ್ಷನ್ ಪ್ರಾಜೆಕ್ಟ್ ಮಾಡಲು ಈಗಾಗಲೇ ತೆರೆಮರೆಯಲ್ಲಿ ಮಾತುಕತೆ ನಡೆಸುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ. ಈ ಜನ್ಮದಿನದ ಪೋಸ್ಟ್ ಆ ಮುಂಬರುವ ಬಿಗ್ ಕೊಲಾಬರೇಷನ್‌ನ ಮುನ್ನುಡಿಯೇ ಇರಬಹುದು ಎಂಬುದು ಅಭಿಮಾನಿಗಳ ಲೆಕ್ಕಾಚಾರ.
ಹೊಂಬಾಳೆ ಫಿಲ್ಮ್ಸ್ ಹಂಚಿಕೊಂಡ ಪೋಸ್ಟ್
A Dragon Rises. A Mass Roars.
— Hombale Films (@hombalefilms) May 20, 2026
What an explosive glimpse, Every frame screams MASS and MAGIC.
𝐖𝐢𝐬𝐡𝐢𝐧𝐠 𝐓𝐡𝐞 𝐃𝐞𝐯𝐢𝐥, @tarak9999 𝐚 𝐌𝐚𝐬𝐬𝐢𝐯𝐞 𝐇𝐚𝐩𝐩𝐲 𝐛𝐢𝐫𝐭𝐡𝐝𝐚𝐲.https://t.co/nQJiUQ4PBA pic.twitter.com/uhcO21tn18
ಡ್ರಾಗನ್ ಹಕ್ಕುಗಳು ಹೊಂಬಾಳೆ ಪಾಲಿಗೆ?
ಮತ್ತೊಂದೆಡೆ, ಹೊಂಬಾಳೆ ಫಿಲ್ಮ್ಸ್ ಇತ್ತೀಚೆಗೆ ಕೇವಲ ಸಿನಿಮಾ ನಿರ್ಮಾಣ ಅಷ್ಟೇ ಅಲ್ಲದೆ, ತಮಿಳು ಮತ್ತು ತೆಲುಗಿನ ದೊಡ್ಡ ದೊಡ್ಡ ಚಿತ್ರಗಳ ಓವರ್‌ಸೀಸ್ ಹಾಗೂ ಕರ್ನಾಟಕದ ವಿತರಣಾ ಹಕ್ಕುಗಳನ್ನು ತನ್ನದಾಗಿಸಿಕೊಳ್ಳುತ್ತಿದೆ. ಹಾಗಾಗಿ, ಬಿಗ್ ಬಜೆಟ್‌ನ 'ಡ್ರಾಗನ್' ಚಿತ್ರದ ಕರ್ನಾಟಕದ ವಿತರಣಾ ಹಕ್ಕುಗಳು ಮತ್ತು ಓವರ್‌ಸೀಸ್ ವಿತರಣೆಯ ಜವಾಬ್ದಾರಿಯನ್ನು ಹೊಂಬಾಳೆ ಸಂಸ್ಥೆಯೇ ವಹಿಸಿಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ. ಇದರಲ್ಲಿ ಯಾವ ಮಾಹಿತಿ ನಿಜವಾಗಲಿದೆ ಎಂಬುದನ್ನು ಕಾದುನೋಡಬೇಕು.