ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ekka Movie: ಯುವ 'ಎಕ್ಕ' ಪ್ರಚಾರಕ್ಕೆ ಕಿಕ್ ಸ್ಟಾರ್ಟ್; ಜುಲೈ18ಕ್ಕೆ ಸಿನಿಮಾ ರಿಲೀಸ್!

ಯುವ ನಟನೆಯ ‘ಎಕ್ಕ’ ಸಿನಿಮಾ ಚಿತ್ರೀಕರಣ ಮುಗಿಸಿದ್ದು ಬಿಡುಗಡೆಗೆ ರೆಡಿಯಾಗಿದೆ. ಸಿನಿಮಾದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ.ಈಗಾಗಲೇ ಚಿತ್ರದ ಟೀಸರ್ ,ಹಾಡುಗಳು ಬಿಡುಗಡೆಯಾಗಿದ್ದು ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇದೀಗ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ‘ಎಕ್ಕ’ ಸಿನಿಮಾದ ಸುದ್ದಿಗೋಷ್ಠಿ  ಆಯೋಜಿಸಲಾಗಿದ್ದು ಕಾರ್ಯಕ್ರಮದಲ್ಲಿ ಯುವರಾಜ್ ಕುಮಾರ್ ಹಾಗೂ ಇಡೀ ಸಿನಿ ತಂಡ ಹಾಜರಿದ್ದರು.

ಭರ್ಜರಿ ಪ್ರಚಾರದಲ್ಲಿ ಎಕ್ಕ ಸಿನಿ ತಂಡ; ಜುಲೈ 18ಕ್ಕೆ ಯುವ ಸಿನಿಮಾ ರಿಲೀಸ್!

Ekka

Profile Pushpa Kumari Jun 20, 2025 3:59 PM

ಬೆಂಗಳೂರು: ಯುವ ರಾಜ್ ಕುಮಾರ್‌ (Yuva Rajkumar) ಕನ್ನಡ ಚಿತ್ರರಂಗದ ಭರವಸೆಯ ನಟನಾಗಿ ಗುರುತಿಸಿ ಕೊಂಡಿದ್ದು, ಸದ್ಯ ತಮ್ಮ ಎರಡನೇ ಸಿನಿಮಾ ಬಿಡುಗಡೆಯಲ್ಲಿ ಬ್ಯುಸಿಯಾಗಿದ್ದಾರೆ. ಯುವ ನಟನೆಯ ‘ಎಕ್ಕ’ ಸಿನಿಮಾ ಚಿತ್ರೀಕರಣ ಮುಗಿಸಿದ್ದು ಬಿಡುಗಡೆಗೆ ರೆಡಿಯಾಗಿದೆ. ಸಿನಿಮಾದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಈಗಾಗಲೇ ಚಿತ್ರದ ಟೀಸರ್ ,ಹಾಡುಗಳು ಬಿಡುಗಡೆಯಾಗಿದ್ದು ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇದೀಗ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ‘ಎಕ್ಕ’ ಸಿನಿಮಾದ ಸುದ್ದಿಗೋಷ್ಠಿ  ಆಯೋಜಿಸಲಾಗಿದ್ದು ಕಾರ್ಯಕ್ರಮದಲ್ಲಿ ಯುವರಾಜ್ ಕುಮಾರ್ ಹಾಗೂ ಇಡೀ ಸಿನಿ ತಂಡ ಹಾಜರಿದ್ದರು.

ಈ ವೇಳೆ ನಿರ್ದೇಶಕ ರೋಹಿತ್ ಪದಕಿ ಮಾತನಾಡಿ, ಒಂದು ಸಿನಿಮಾ ಮಾಡಬೇಕಿದ್ದರೆ ಒಂದೊಳ್ಳೆ ವೈಬ್ ಇದ್ದರೆ ಸಿನಿಮಾ ಚೆನ್ನಾಗಿ ಹೋಗುತ್ತದೆ ಎನ್ನುವ ನಂಬಿಕೆ ನನಗಿದೆ. ನಾವು ಬಿಟ್ಟಿರುವ ಪ್ರತಿ ಕಂಟೆಂಟ್ ಹೇಗಿದೆ ಎಂಬುದನ್ನು ನೀವು ನೋಡಿ ದ್ದೀರಿ ಎಂದರು. ನಾಯಕ ಯುವ ಮಾತನಾಡಿ, ಎಕ್ಕ ಸಿನಿಮಾದಿಂದ ನಾವು ಬಿಟ್ಟಿರುವ ಎಲ್ಲಾ ಕಂಟೆಂಟ್ ಎಲ್ಲರಿಗೂ ತಲು ಪುತ್ತಿದೆ..ಬ್ಯಾಂಗಲ್ ಬಂಗಾರಿ ಹಾಡಿಗೆ ಎಲ್ಲಾ ವರ್ಗದ ಜನ ಇಷ್ಟಪಟ್ಟು ಡ್ಯಾನ್ಸ್ ಮಾಡಿರುವುದನ್ನು ನೋಡಲು ಖುಷಿ ಯಾಗು ತ್ತದೆ. ಥಿಯೇಟರ್ ನಲ್ಲಿ ಈ ಸಿನಿಮಾವನ್ನು ಎಲ್ಲರೂ ಎಂಜಾಯ್ ಮಾಡುತ್ತೀರ.. ಖುಷಿಯಿಂದ ಸಿನಿಮಾವನ್ನು ಮಾಡಿದ್ದೇವೆ. ನನ್ನನ್ನು ನೀವು ಹೊಸ ರೀತಿಯಲ್ಲಿ ನೋಡಬಹುದು. ಜುಲೈ 18ಕ್ಕೆ ಸಿನಿಮಾ ರಿಲೀಸ್ ಆಗಲಿದೆ..ನಿಮ್ಮ ಬೆಂಬಲ ಇರಲಿ ಎಂದು ಹೇಳಿದರು.

ನಿರ್ಮಾಪಕ ಕಾರ್ತಿಕ್ ಗೌಡ ಮಾತನಾಡಿ, ಜೂನ್ 6ಕ್ಕೆ ಸಿನಿಮಾ ರಿಲೀಸ್ ಪ್ಲ್ಯಾನ್ ಮಾಡಿದ್ದೇವು. ಆದರೆ ಸಿನಿಮಾ ಕೆಲಸ ಬಾಕಿ ಇರುವುದರಿಂದ ಒಂದು ತಿಂಗಳು ಅಂದರೆ ಜುಲೈ 18ಕ್ಕೆ ರಿಲೀಸ್ ಮಾಡುತ್ತಿದ್ದೇವೆ. ಸಿನಿಮಾ ಚೆನ್ನಾಗಿದ್ದರೆ ಜನ ಖಂಡಿತವಾಗಿ ಥಿಯೇಟರ್ ಗೆ ಬರುತ್ತಾರೆ ಎಂದರು. ಸಂಗೀತ ನಿರ್ದೇಶಕ ಚರಣ್ ರಾಜ್ ಮಾತನಾಡಿ ಸಿನಿಮಾದಲ್ಲಿ ಉತ್ತಮ ಹಾಡುಗಳಿವೆ, ಚಿತ್ರ ಕೂಡ ಚೆನ್ನಾಗಿ ಬಂದಿದೆ‌. ಸದ್ಯ ಹಿನ್ನೆಲೆ‌ ಸಂಗೀತ ಕೆಲಸ ನಡೆಯುತ್ತಿದೆ..ಎಲ್ಲಾ ಕಂಟೆಂಟ್ ಗೆ ಮೆಚ್ಚುಗೆ ಸಿಗುತ್ತಿರುವುದು ಖುಷಿ ಎಂದು ಹೇಳಿದರು.

ಇದನ್ನು ಓದಿ:Pendrive Movie: ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ, ಸೆಬಾಸ್ಟಿನ್ ಡೇವಿಡ್ ನಿರ್ದೇಶನದ ʼಪೆನ್‌ಡ್ರೈವ್ʼ ಚಿತ್ರ ಜು.4ಕ್ಕೆ ರಿಲೀಸ್‌

ಎಕ್ಕ ಚಿತ್ರದಲ್ಲಿ ನಾಯಕ ಯುವ ರಾಜ್ ಕುಮಾರ್‌ಗೆ ಸಂಜನಾ ಆನಂದ್ ಹಾಗೂ ಸಂಪದಾ ನಾಯಕಿಯರಾಗಿ ಸಾಥ್‌ ಕೊಟ್ಟಿದ್ದಾರೆ. ಉಳಿದಂತೆ ಅತುಲ್ ಕುಲಕರ್ಣಿ, ಡೆಡ್ಲಿ ಆದಿತ್ಯಾ ಸೇರಿದಂತೆ ದೊಡ್ಡ ತಾರಗಣವಿದೆ. ರೋಹಿತ್ ಪದಕಿ ನಿರ್ದೇಶನದ ಪಕ್ಕಾ ಕಮರ್ಷಿಯಲ್ ಎಂಟರ್‌ಟೈನರ್ ಸಿನಿಮಾ 'ಎಕ್ಕ ಆಗಿದೆ.

ಪಿಆರ್‌ಕೆ ಪ್ರೊಡಕ್ಷನ್ಸ್, ಜಯಣ್ಣ ಫಿಲ್ಮ್ಸ್ ಹಾಗೂ ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆಗಳು ಒಟ್ಟಾಗಿ ಚಿತ್ರ ನಿರ್ಮಾಣ ಮಾಡ ಲಾಗಿದೆ. ಎಕ್ಕ' ಚಿತ್ರದ ವಿಚಾರಕ್ಕೆ ಬಂದರೆ ಇದು ಪಕ್ಕಾ ಕಮರ್ಷಿಯಲ್ ಸಿನಿಮಾ. ಮಾಸ್ ಪ್ರೇಕ್ಷರಕನ್ನು ಗಮನ ದಲ್ಲಿ ಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ.‌ಚರಣ್ ರಾಜ್ ಸಂಗೀತ, ಸತ್ಯಾ ಹೆಗಡೆ ಛಾಯಾಗ್ರಹಣ ಚಿತ್ರಕ್ಕಿದೆ. ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿರುವ ಎಕ್ಕ ಸಿನಿಮಾ ಜುಲೈ 18ಕ್ಕೆ ಗ್ರ್ಯಾಂಡ್ ರಿಲೀಸ್‌ ಆಗಲಿದೆ.