ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Duleep Trophy: ಪೂರ್ವ ವಲಯದ ವಿರುದ್ಧ ಭರ್ಜರಿ ಶತಕ ಬಾರಿಸಿದ ಆಯುಷ್‌ ಬದೋನಿ!

ಬೆಂಗಳೂರಿನಲ್ಲಿ ನಡಯುತ್ತಿರುವ ದುಲೀಪ್ ಟ್ರೋಫಿ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಉತ್ತರ ವಲಯದ ಆಯುಷ್ ಬದೋನಿ ಅದ್ಭುತ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದಾರೆ. ಅವರು ಪೂರ್ವ ವಲಯದ ವಿರುದ್ಧ ಪ್ರಥಮ ಇನಿಂಗ್ಸ್‌ನಲ್ಲಿ ಅರ್ಧಶತಕ ಮತ್ತು ಇದೀಗ ದ್ವಿತೀಯ ಇನಿಂಗ್ಸ್‌ನಲ್ಲಿ ಶತಕವನ್ನು ಬಾರಿಸಿದ್ದಾರೆ.

ದುಲೀಪ್‌ ಟ್ರೋಫಿ ಪಂದ್ಯದಲ್ಲಿ ಶತಕ ಬಾರಿಸಿದ ಆಯುಷ್‌ ಬದೋನಿ!

ದುಲೀಪ್‌ ಟ್ರೋಫಿ ಟೂರ್ನಿಯಲ್ಲಿ ಶತಕ ಬಾರಿಸಿದ ಆಯುಷ್‌ ಬದೋನಿ. -

Profile Ramesh Kote Aug 31, 2025 1:52 PM

ಬೆಂಗಳೂರು: ಪ್ರಸ್ತುತ ನಡೆಯುತ್ತಿರುವ 2025ರ ದುಲೀಪ್ ಟ್ರೋಫಿ (Duleep Trophy 2025) ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಪೂರ್ವ ವಲಯ (East Zone) ಮತ್ತು ಉತ್ತರ ವಲಯ (North Zone) ಕಾದಾಟ ನಡೆಸುತ್ತಿವೆ. ಆಗಸ್ಟ್‌ 28 ರಂದೇ ಬಿಸಿಸಿಐ ಎಕ್ಸ್‌ಲೆನ್ಸ್‌ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ. ಯುವ ಬ್ಯಾಟ್ಸ್‌ಮನ್ ಆಯುಷ್ ಬದೋನಿ (Ayush Badoni) ಉತ್ತರ ವಲಯದ ಪರವಾಗಿ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದಾರೆ. ಪ್ರಥಮ ಇನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದ ನಂತರ, ಆಯುಷ್ ದ್ವಿತೀಯ ಇನಿಂಗ್ಸ್‌ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿ ಶತಕವನ್ನು ಗಳಿಸಿದ್ದಾರೆ.

25ನೇ ವಯಸ್ಸಿನ ಆಯುಷ್ ಬದೋನಿ ದುಲೀಪ್ ಟ್ರೋಫಿಯಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿ ಶತಕ ಸಿಡಿಸಿದ್ದಾರೆ. ಅವರು ಪೂರ್ವ ವಲಯದ ಬೌಲರ್‌ಗಳ ವಿರುದ್ದ ಪ್ರಾಬಲ್ಯ ಸಾಧಿಸಿದರು. ಪಂದ್ಯದ ನಾಲ್ಕನೇ ದಿನದಂದು ಅವರು ತಮ್ಮ ಶತಕವನ್ನು ಪೂರ್ಣಗೊಳಿಸಿದರು. ಇದು ಮಾತ್ರವಲ್ಲದೆ, ಆಯುಷ್ ಇನ್ನೂ ಅಜೇಯರಾಗಿ ಬ್ಯಾಟಿಂಗ್‌ ಮುಂದುವರಿಸಿದ್ದಾರೆ. ಅವರು 169 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ 151 ರನ್‌ಗಳೊಂದಿಗೆ ಆಡುತ್ತಿದ್ದಾರೆ. ಪ್ರಥಮ ಇನಿಂಗ್ಸ್‌ನಲ್ಲಿ ಆಯುಷ್ ಬದೋನಿ 60 ಎಸೆತಗಳಲ್ಲಿ 7 ಬೌಂಡರಿಗಳ ಸಹಾಯದಿಂದ 63 ರನ್ ಗಳಿಸಿದರು. ಬದೋನಿ ಈ ಪಂದ್ಯದಲ್ಲಿ ಉತ್ತಮ ಲಯದಲ್ಲಿ ಕಾಣಿಸಿಕೊಂಡಿದ್ದಾರೆ.

ಏಷ್ಯಾ ಕಪ್‌ ಭಾರತ ತಂಡದಲ್ಲಿ ಶ್ರೇಯಸ್‌ ಅಯ್ಯರ್‌ಗೆ ಸ್ಥಾನ ನೀಡದೆ ಇರಲು ಕಾರಣ ತಿಳಿಸಿದ ಮಾಂಟಿ ಪನೇಸರ್‌!

ಪೂರ್ವ ವಲಯದ ನಾಯಕ ರಿಯಾನ್ ಪರಾಗ್ ಟಾಸ್ ಗೆದ್ದು ಮೊದಲು ಬೌಲ್‌ ಮಾಡಲು ನಿರ್ಧರಿಸಿದರು. ಆ ಮೂಲಕ ಮೊದಲು ಬ್ಯಾಟ್‌ ಮಾಡಲು ಮುದಾದ ಉತ್ತರ ವಲಯ, ಪ್ರಥಮ ಇನಿಂಗ್ಸ್‌ನಲ್ಲಿ 405 ರನ್ ಗಳಿಸಿತು. ಆಯುಷ್ ಬದೋನಿ ಹೊರತುಪಡಿಸಿ, ಕನ್ಹಯ್ಯಾ ವಾಧವನ್ 76 ರನ್‌ಗಳ ಇನಿಂಗ್ಸ್‌ ಆಡಿದರು. ಇದರ ಜೊತೆಗೆ, ಪ್ರತಿಯೊಬ್ಬ ಬ್ಯಾಟ್ಸ್‌ಮನ್ ಕೊಡುಗೆ ನೀಡಿದರು. ಆದಾಗ್ಯೂ, ಪೂರ್ವ ವಲಯದ ಬ್ಯಾಟಿಂಗ್ ಸಾಕಷ್ಟು ನಿರಾಶಾದಾಯಕವಾಗಿತ್ತು. ಕೇವಲ 230 ರನ್‌ಗಳಿಗೆ ಆಲ್‌ಔಟ್‌ ಆಯಿತು. ವಿರಾಟ್ ಸಿಂಗ್ ತಂಡದ 69 ರನ್ ಗಳಿಸಿ ವೈಯಕ್ತಿಕ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು.

BWF World Championships: ಸೆಮಿಫೈನಲ್‌ನಲ್ಲಿ ಸಾತ್ವಿಕ್‌-ಚಿರಾಗ್‌ ಜೋಡಿಗೆ ನಿರಾಶೆ!

ಈ ಸುದ್ದಿ ಬರೆಯುವ ಹೊತ್ತಿಗೆ ಉತ್ತರ ವಲಯ 723 ರನ್‌ಗಳ ಮುನ್ನಡೆಯಲ್ಲಿದೆ. ದ್ವಿತೀಯ ಇನಿಂಗ್ಸ್‌ನಲ್ಲಿ ಉತ್ತರ ವಲಯ 3 ವಿಕೆಟ್‌ಗಳ ನಷ್ಟಕ್ಕೆ 548 ರನ್‌ಗಳೊಂದಿಗೆ ಆಟವಾಡುತ್ತಿದೆ. ಆಯುಷ್ ಬದೋನಿ ಹೊರತುಪಡಿಸಿ, ನಾಯಕ ಅಂಕಿತ್ ಕುಮಾರ್ (198 ರನ್) ಮತ್ತು ಯಶ್ ಧುಲ್ (133 ರನ್) ಕೂಡ ಉತ್ತರ ವಲಯ ಪರ ಎರಡನೇ ಇನಿಂಗ್ಸ್‌ನಲ್ಲಿ ಶತಕವನ್ನು ಬಾರಿಸಿದ್ದಾರೆ.