ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ekta Kapoor: ಭಾರತೀಯ ಸೇನೆಗೆ ಅವಮಾನ- ಏಕ್ತಾ ಕಪೂರ್ ವಿವಾದ: ನ್ಯಾಯಾಲಯದಿಂದ ತನಿಖೆಗೆ ಆದೇಶ!

ನಿರ್ಮಾಪಕಿ ಏಕ್ತಾ ಕಪೂರ್ ನಿರ್ಮಾಣದ ವೆಬ್ ಸಿರೀಸ್ 'ಟ್ರಪಲ್‌ ಎಕ್ಸ್-2' ಕೆಲವು ವರ್ಷಗಳ ಹಿಂದೆ ತೀವ್ರ ವಿವಾದ ಸೃಷ್ಟಿಸಿತ್ತು. ಭಾರತೀಯ ಸೇನೆಯನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ಸೇನೆಯ ಕೆಲವು ಮಾಜಿ ಸೈನಿಕರು ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಸರಿ ಸುಮಶರು ನಾಲ್ಕು ವರ್ಷಗಳ ನಂತರ ಏಕ್ತಾ ಕಪೂರ್‌ ಅವರನ್ನು ತನಿಖೆ ನಡೆಸಲು ನ್ಯಾಯಾಲಯವು ಆದೇಶಿಸಿದೆ.

ಕಾರ್ಯಕ್ರಮವೊಂದರಲ್ಲಿ ಏಕ್ತಾ ಕಪೂರ್

ಮುಂಬೈ: ನಿರ್ಮಾಪಕಿ(Producer) ಏಕ್ತಾ ಕಪೂರ್(Ekta Kapoor) ನಿರ್ಮಾಣದ ವೆಬ್ ಸಿರೀಸ್ 'ಟ್ರಪಲ್‌ ಎಕ್ಸ್-2'(Triple X-2) ಕೆಲವು ವರ್ಷಗಳ ಹಿಂದೆ ತೀವ್ರ ವಿವಾದ ಸೃಷ್ಟಿಸಿತ್ತು. ಭಾರತೀಯ ಸೇನೆಯನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ಸೇನೆಯ ಕೆಲವು ಮಾಜಿ ಸೈನಿಕರು ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಸರಿ ಸುಮಾರು ನಾಲ್ಕೈದು ವರ್ಷಗಳ ನಂತರ ಏಕ್ತಾ ಕಪೂರ್‌ ಅವರನ್ನು ತನಿಖೆ ನಡೆಸಲು ನ್ಯಾಯಾಲಯವು ಆದೇಶಿಸಿದೆ. ಇದೇ ವೆಬ್ ಸೀರೀಸ್ ವಿರುದ್ಧ ಈ ಹಿಂದೆ ಹಿಂದಿ ಬಿಗ್ ಬಾಸ್ 13ನೇ ಸೀಸನ್‌ನ ಸ್ಪರ್ಧಿಯಾಗಿದ್ದ ಹಿಂದೂಸ್ಥಾನಿ ಭಾವು ಕೂಡ ದೂರು ನೀಡಿದ್ದರು.

ತ್ರಿಪಲ್ ಎಕ್ಸ್-2 ವೆಬ್ ಸೀರೀಸ್ ಸೇನಾ ಸಿಬ್ಬಂದಿಯ ಜೀವನವನ್ನು ಕುರಿತಾದ ಸೀರೀಸ್ ಆಗಿದೆ. ಈ ವೆಬ್ ಸೀರೀಸ್ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಹುತಾತ್ಮರ ಕಲ್ಯಾಣ ಪ್ರತಿಷ್ಠಾನದ (ಎಂಡಬ್ಲ್ಯೂಎಫ್) ಅಧ್ಯಕ್ಷ ಮೇಜ‌ರ್ ಟಿಸಿ ರಾವ್, 'ಈ ಸೀರೀಸ್ ನಮ್ಮ ಸಶಸ್ತ್ರ ಸೇನಾ ಪಡೆಯನ್ನು ಕೀಳಾಗಿ ತೋರಿಸುವ ಮೂಲಕ ಅವರ ನೈತಿಕ ಶಕ್ತಿಯನ್ನು ಕುಸಿಯುವಂತೆ ಮಾಡುತ್ತಿದೆ' ಎಂದು ಗಂಭೀರವಾಗಿ ಆರೋಪಿಸಿದ್ದರು. ದೇಶಕ್ಕಾಗಿ ಸೈನಿಕರು ಪ್ರಾಣತ್ಯಾಗ ಮಾಡುತ್ತಾರೆ. ಆದರೆ ಈ ಸೀರೀಸ್‌ನ ನಿರ್ಮಾಪಕರು ಮತ್ತು ನಿರ್ದೇಶಕರು ಸೈನಿಕರು ದೂರದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಅವರ ಹೆಂಡತಿಯರು ಮನೆಯಲ್ಲಿ ಪರ ಪುರುಷರೊಂದಿಗೆ ಸಂಬಂಧ ಇರಿಸಿಕೊಳ್ಳುತ್ತಾರೆ ಎಂದು ಕೆಟ್ಟದಾಗಿ ಚಿತ್ರಿಸಿದ್ದಾರೆ' ಎಂಬುದಾಗಿ ಸಾಕಷ್ಟು ಜನ ಆಕ್ರೋಶ ವ್ಯಕ್ತಪಡಿಸಿದ್ದರು.



ಕೋರ್ಟ್ ತನಿಖೆಗೆ ಆದೇಶ

ಮುಂಬೈ ಕೋರ್ಟ್ ಫೆಬ್ರವರಿ 15 ರಂದು ಚಲನಚಿತ್ರ ಮತ್ತು ಟಿವಿ ಸೀರಿಯಲ್ ನಿರ್ಮಾಪಕಿ ವಿರುದ್ಧ ತನಿಖೆ ನಡೆಸಲು ನಗರ ಪೊಲೀಸರಿಗೆ ಆದೇಶಿಸಿದೆ. ದೂರುದಾರರು ಏಕ್ತಾ ಕಪೂರ್ ವಿರುದ್ಧ ತಮ್ಮ ವೆಬ್ ಸೀರಿಸ್‌ನಲ್ಲಿ ಭಾರತೀಯ ಸೈನಿಕರನ್ನ ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ದೂರಿನ ವಿರುದ್ಧ ಕೋರ್ಟ್ ಕ್ರಿಮಿನಲ್ ತನಿಖೆಗೆ ಆದೇಶಿಸಿದೆ. ದೂರು ಸರಿಯಾಗಿದ್ದರೆ, ನಿರ್ಮಾಪಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

ಈ ಸುದ್ದಿಯನ್ನೂ ಓದಿ:New Delhi Stampede: ದೆಹಲಿ ಭೀಕರ ಕಾಲ್ತುಳಿತ ದುರಂತ: ಹರಿದಾಡಿದ ವಿಡಿಯೊ-ಮೋದಿ ಸೇರಿ ಹಲವು ನಾಯಕರ ಸಂತಾಪ!

ಅಶ್ಲೀಲ ದೃಶ್ಯ ಪ್ರಸಾರ ಏಕ್ತಾ ಕಪೂರ್‌ ವಿರುದ್ಧ ಫೋಕ್ಸೊ ಕೇಸ್

ತಮ್ಮ ಸಂಸ್ಥೆಯ ನಿರ್ಮಾಣದ ವೆಬ್ ಸಿರೀಸ್ ಒಂದರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು ಒಳಗೊಂಡಂತಹ ಅಶ್ಲೀಲ ದೃಶ್ಯಗಳನ್ನು ಪ್ರದರ್ಶಿಸಿದ್ದಾರೆಂಬ ಆರೋಪದಲ್ಲಿ ಟಿವಿ ಕಾರ್ಯಕ್ರಮ ಹಾಗೂ ಚಲನಚಿತ್ರ ನಿರ್ಮಾಪಕಿ ಏಕತಾ ಕಪೂರ್ ಹಾಗೂ ಆಕೆಯ ತಾಯಿ ಶೋಭಾ ಕಪೂರ್ ವಿರುದ್ಧ ಇತ್ತೀಚೆಗಷ್ಟೇ ಫೋಕ್ಸೊ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು.

ಎಎಲ್‌ಟಿ ಬಾಲಾಜಿ ಸಂಸ್ಥೆಯ ನಿರ್ಮಾಣದ ಗಂಧಿ ಬಾತ್ ವೆಬ್ ಸರಣಿಯ ಒಂದು ಎಪಿಸೋಡ್‌ನಲ್ಲಿ ಈ ದೃಶ್ಯಗಳನ್ನು ಪ್ರಸಾರ ಮಾಡಲಾಗಿತ್ತು.