ಟಿವಿ ಪ್ರೇಕ್ಷಕರ ಮನಗೆದ್ದ ಜನಪ್ರಿಯ ಧಾರಾವಾಹಿ ‘ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ 2’ (Kyunki Saas Bhi Kabhi Bahu Thi 2) ಇದೀಗ ತನ್ನ ಪ್ರಸಾರವನ್ನು ಮುಕ್ತಾಯಗೊಳಿಸಿದೆ. ಹೊಸ ಆವೃತ್ತಿ ಅಕ್ಟೋಬರ್ 20ರಂದು 450 ಸಂಚಿಕೆಗಳ ನಂತರ ಮುಗಿಯಿತು. ಈಗ ಏಕ್ತಾ ಮತ್ತು ಸ್ಮೃತಿ ಇರಾನಿ (smrithi irani) ಧಾರಾವಾಹಿಗೆ ಭಾವನಾತ್ಮಕ ವಿದಾಯ ಸಂದೇಶಗಳನ್ನು ಬರೆದಿದ್ದಾರೆ.
ಮಂಗಳವಾರ ಏಕ್ತಾ ಇನ್ಸ್ಟಾಗ್ರಾಮ್ನಲ್ಲಿ ಮೊದಲ ಮತ್ತು ಎರಡನೇ ಸೀಸನ್ನ ಕ್ಷಣಗಳನ್ನು ತೋರಿಸುವ ವೀಡಿಯೊ ಹಂಚಿಕೊಂಡರು.
ಕೆಲವು ವಿದಾಯಗಳು ಕಷ್ಟ
“ಇಂದು ಕ್ಯುಂಕಿ ಕೊನೆಯ ಸಂಚಿಕೆ! ಕೆಲವು ವಿದಾಯಗಳು ಕಷ್ಟ, ಆದರೆ ನನ್ನ ಹೃದಯದಲ್ಲಿ ಕ್ಯುಂಕಿಗೆ ಯಾವಾಗಲೂ ಪ್ರೀತಿ ಇದೆ. ಇದು ನನ್ನನ್ನು ನಾನಾಗಿ ಮಾಡಿದೆ. ನಾವು 167 ಸಂಚಿಕೆಗಳಿಗಾಗಿ ಮಾಡಬೇಕಿತ್ತು, ಆದರೆ 450 ಸಂಚಿಕೆಗಳು ಮಾಡಿದ್ದೇವೆ. ನನ್ನ ಕ್ಯುಂಕಿಗೆ ಯಾವಾಗಲೂ ಪ್ರೀತಿ. ಮತ್ತೆ ಭೇಟಿಯಾಗುವವರೆಗೆ.”ಎಂದು ಏಕ್ತಾ ಕಪೂರ್ ಬರೆದುಕೊಂಡಿದ್ದಾರೆ.
ಪರದೆ ಇಳಿದ ಬಳಿಕವೂ ಈ ಧಾರಾವಾಹಿಯಲ್ಲಿ ಸೃಷ್ಟಿಯಾದ ನೆನಪುಗಳು ಮತ್ತು ಅನುಭವಗಳು ತಮ್ಮೊಂದಿಗೆ ಸದಾ ಉಳಿಯಲಿವೆ ಎಂದು ಸ್ಮೃತಿ ಇರಾನಿ ಭಾವುಕವಾಗಿ ತಿಳಿಸಿದ್ದಾರೆ. “Until our stories find each other again…” ಎಂಬ ಅವರ ಮಾತು ಅಭಿಮಾನಿಗಳ ಗಮನ ಸೆಳೆದಿದೆ. ಅಂದರೆ, ನಮ್ಮ ಕಥೆಗಳು ಮತ್ತೆ ಒಂದಾಗುವವರೆಗೆ ಎಂಬ ಭಾವನಾತ್ಮಕ ಸಂದೇಶದೊಂದಿಗೆ ಅವರು ವಿದಾಯ ಹೇಳಿದ್ದಾರೆ.
ಇದನ್ನೂ ಓದಿ: Tiger Shroff: ಟೈಗರ್ ಶ್ರಾಫ್ ಪ್ರಕರಣ: ಇಬ್ಬರು ಮಹಿಳೆಯರು ಸೇರಿದಂತೆ ಇನ್ನೂ ನಾಲ್ವರು ಬಂಧನ
ಇದು ಏಕ್ತಾ ಕಪೂರ್ ಪ್ರಸಿದ್ಧ ಧಾರಾವಾಹಿ ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ (2000–2008)ಯ ಸೀಕ್ವೆಲ್. ಬಾಲಾಜಿ ಟೆಲಿಫಿಲ್ಮ್ಸ್ ನಿರ್ಮಾಣ. ಇದು ಜುಲೈ 29, 2025ರಂದು ಸ್ಟಾರ್ ಪ್ಲಸ್ ಮತ್ತು ಜಿಯೋಹಾಟ್ಸ್ಟಾರ್ನಲ್ಲಿ ಪ್ರಾರಂಭವಾಯಿತು.
ಇದನ್ನೂ ಓದಿ: Nandagokula Serial: ನಂದಗೋಕುಲಕ್ಕೆ ಬರ್ತಿದ್ದಂತೆ ನಟಿ ಶಿಲ್ಪಾ ಅಯ್ಯರ್ ಕನಸು ಈಡೇರಿದ್ದೇಗೆ?
ಸ್ಮೃತಿ ಇರಾನಿ ಸುಮಾರು 17 ವರ್ಷಗಳ ನಂತರ ತುಲಸಿ ವಿರಾನಿ ಪಾತ್ರಕ್ಕೆ ಮರಳಿದ್ದರು. ಅಮರ್ ಉಪಾಧ್ಯಾಯ ಕೂಡ ಮಿಹಿರ್ ವಿರಾನಿ ಪಾತ್ರವನ್ನು ಮತ್ತೆ ಮಾಡಿದ್ದರು.
ಮಿಹಿರ್ ವಿರಾನಿ ಪಾತ್ರದಲ್ಲಿ ಅಮರ್ ಉಪಾಧ್ಯಾಯ್ ಕೂಡ ಪ್ರೇಕ್ಷಕರ ಮನಗೆದ್ದಿದ್ದರು.