ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Nandagokula Serial: ನಂದಗೋಕುಲಕ್ಕೆ ಬರ್ತಿದ್ದಂತೆ ನಟಿ ಶಿಲ್ಪಾ ಅಯ್ಯರ್ ಕನಸು ಈಡೇರಿದ್ದೇಗೆ?

Nandagokula Serial: ನಟಿ ಶಿಲ್ಪಾ ಅಯ್ಯರ್ (Shilpa Iyer) ಅವರು 'ನಂದಗೋಕುಲ' ಧಾರಾವಾಹಿ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ಈ ನವರಾತ್ರಿಯಲ್ಲಿ ನನ್ನ ರಾಯರು ಇಂಥದ್ದೊಂದು ಉಡುಗೊರೆ ಕೊಡುತ್ತಾರೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ ಎಂದು ಸಂತೋಷದ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.

ನಂದಗೋಕುಲಕ್ಕೆ ಬರ್ತಿದ್ದಂತೆ  ನಟಿ ಶಿಲ್ಪಾ ಅಯ್ಯರ್ ಕನಸು ಈಡೇರಿದ್ದೇಗೆ?

ನಂದಗೋಕುಲ ಧಾರಾವಾಹಿ -

Yashaswi Devadiga
Yashaswi Devadiga Oct 21, 2026 10:34 AM

ನಟಿ ಶಿಲ್ಪಾ ಅಯ್ಯರ್ (Shilpa Iyer) ಅವರು 'ನಂದಗೋಕುಲ' ಧಾರಾವಾಹಿ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ಈ ನವರಾತ್ರಿಯಲ್ಲಿ ನನ್ನ ರಾಯರು ಇಂಥದ್ದೊಂದು ಉಡುಗೊರೆ ಕೊಡುತ್ತಾರೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ ಎಂದು ಸಂತೋಷದ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.

ನಟಿ ಶಿಲ್ಪಾ ಅಯ್ಯರ್ ಅವರು 'ನಂದಗೋಕುಲ' ಧಾರಾವಾಹಿ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ಒಂಬತ್ತು ವರ್ಷಗಳ ನನ್ನ ಪಯಣದಲ್ಲಿ, ಎಷ್ಟೋ ಪಾತ್ರಗಳನ್ನು ಮಾಡಿದ್ದರೂ ನನ್ನ ಹೆಸರು ಟೈಟಲ್ ಕಾರ್ಡ್‌ನಲ್ಲಿ ನೋಡುವ ಕನಸು ಮಾತ್ರ ನನಸಾಗಿರಲಿಲ್ಲ.
ಎಲ್ಲವೂ ಮುಗಿಯಿತು ಅಂದುಕೊಂಡ ಕ್ಷಣದಲ್ಲಿ, ಮತ್ತೆ ಒಂದು ಪುಟ್ಟ ಭರವಸೆ ಮೂಡಿತು… ಅದರ ಜೊತೆಗೆ ನಾನು ಕನಸು ಕಂಡಿದ್ದ ಟೈಟಲ್ ಕಾರ್ಡ್ ಕೂಡ ಸಿಕ್ಕಿತು!

ಇದನ್ನೂ ಓದಿ: Tiger Shroff: ಟೈಗರ್ ಶ್ರಾಫ್ ಪ್ರಕರಣ: ಇಬ್ಬರು ಮಹಿಳೆಯರು ಸೇರಿದಂತೆ ಇನ್ನೂ ನಾಲ್ವರು ಬಂಧನ

ಈ ನವರಾತ್ರಿಯಲ್ಲಿ ನನ್ನ ರಾಯರು ಇಂಥದ್ದೊಂದು ಉಡುಗೊರೆ ಕೊಡುತ್ತಾರೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ. ಇದು ಹಲವರಿಗೆ ಸಣ್ಣ ಗೆಲುವಾಗಿರಬಹುದು. ಆದರೆ ನನಗೆ ಇದು ವರ್ಷಗಳ ಕಾಯುವಿಕೆಗೆ ಸಿಕ್ಕ ಪ್ರತಿಫಲ, ನನ್ನ ನಂಬಿಕೆಗೆ ಸಿಕ್ಕ ಆಶೀರ್ವಾದ. ಈ ಕ್ಷಣವನ್ನು ನನ್ನ ರಾಯರ ಪಾದಗಳಿಗೆ ಅರ್ಪಿಸುತ್ತೇನೆ.


ಎಲ್ಲ ಮುಗಿಯಿತು ಅಂದುಕೊಂಡಾಗಲೂ, ನನ್ನ ಕೈ ಹಿಡಿದು ಹೊಸ ಭರವಸೆ ನೀಡಿದ ನನ್ನ ರಾಯರಿಗೆ ಕೋಟಿ ನಮನಗಳು .ಕೆಲವು ಸಣ್ಣ ಗೆಲುವುಗಳು… ಮನಸ್ಸಿಗೆ ಮತ್ತೆ ನಂಬಿಕೆ ತರುತ್ತವೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Dhoomakethu on OTT: ಒಟಿಟಿ ಅಂಗಳಕ್ಕೆ ಕಾಲಿರಿಸಿದ ಒಂದೊಳ್ಳೆ ಹಾಸ್ಯ ಸಿನಿಮಾ!

ಈ ಹಿಂದೆ ಸೀರಿಯಲ್‌ನಲ್ಲಿ ಅಮೂಲ್ಯಾ ಮತ್ತು ಪ್ರಿಯಾ ನಂದಗೋಕುಲಕ್ಕೆ ಸೊಸೆಯಾಗಿ ಬಂದ ಸಂದರ್ಭದಲ್ಲಿ ಟೈಟಲ್ ಕಾರ್ಡ್‌ನಲ್ಲಿ ಇಬ್ಬರು ಕಲಾವಿದರನ್ನು ಸೇರಿಸಿಕೊಳ್ಳಲಾಗಿತ್ತು. ಇದೀಗ ಸುಂದರನ ಮಡದಿಯಾಗಿ ರಜನಿ ಆಗಮಿಸಿದ್ದು, ಟೈಟಲ್ ಕಾರ್ಡ್ ಬದಲಾಗಿದೆ.