ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Saregamapa Show: Zee5ನಲ್ಲಿ ಸರಿಗಮಪ ಫಿನಾಲೆ; ಟಿವಿಗಿಂತ ಮೊದಲೇ ನೋಡಿ

ಝೀ ಕನ್ನಡ ಚಾನಲ್‌ನಲ್ಲಿ ಪ್ರಸಾರವಾಗುತ್ತಿರುವ ಕರ್ನಾಟಕದ ಅತಿದೊಡ್ಡ ಸಿಂಗಿಂಗ್ ರಿಯಾಲಿಟಿ ಶೋ ಸರಿಗಮಪ ಫಿನಾಲೆಯನ್ನು ಭಾರತದ್ದೇ ಆದ ಅತಿದೊಡ್ಡ ಬಹುಭಾಷಾ ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಜೀ5ನಲ್ಲಿ ನೇರಪ್ರಸಾರ ಮಾಡಲಾಗುತ್ತಿದೆ. ಇದು ಇಂಡಿಯನ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಇತಿಹಾಸ ಸೃಷ್ಟಿಸಲಿದೆ.

Zee5ನಲ್ಲಿ ಒಂದು ದಿನ ಮೊದಲೇ ಲೈವ್ ಆಗಲಿದೆ ಸರಿಗಮಪ ಫಿನಾಲೆ

Profile Sushmitha Jain May 17, 2025 7:03 PM

ಬೆಂಗಳೂರು: ಝೀ ಕನ್ನಡ (Zee Kannada) ಚಾನಲ್‌ನಲ್ಲಿ ಪ್ರಸಾರವಾಗುತ್ತಿರುವ ಕರ್ನಾಟಕದ ಅತಿದೊಡ್ಡ ಸಿಂಗಿಂಗ್ ರಿಯಾಲಿಟಿ ಶೋ (Reality Show) ಸರಿಗಮಪ ಫಿನಾಲೆಯನ್ನು (Saregamapa Finale) ಭಾರತದ್ದೇ ಆದ ಅತಿದೊಡ್ಡ ಬಹುಭಾಷಾ ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಜೀ5(Zee5)ನಲ್ಲಿ ನೇರಪ್ರಸಾರ ಮಾಡಲಾಗುತ್ತಿದೆ. ಇದು ವೀಕ್ಷಕರ ಕೂತುಹಲಕ್ಕೆ ಟಿವಿ ಪ್ರಸಾರಕ್ಕಿಂತ ಮೊದಲೇ ಉತ್ತರವನ್ನು ನೀಡಲಿದ್ದು, ಭಾರತೀಯ ಒಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ ಇತಿಹಾಸ ಸೃಷ್ಟಿಸುವ ಸಾಧ್ಯತೆ ಇದೆ.

ಕನ್ನಡ ಕಿರುತೆರೆಯಲ್ಲಿ ತನ್ನದೇ ಆದ ಛಾಪನ್ನು ಸೃಷ್ಟಿಸಿರುವ ರಿಯಾಲಿಟಿ ಶೋ 'ಸರಿಗಮಪ'. ಟಿವಿಗಿಂತ ಮೊದಲು Zee5ನಲ್ಲಿ 'ಸರಿಗಮಪ ಫಿನಾಲೆ' ನೇರಪ್ರಸಾರವಾಗುವುದರ ಮೂಲಕ ಕನ್ನಡಿಗರ ಅಚ್ಚುಮೆಚ್ಚಿನ ರಿಯಾಲಿಟಿ ಶೋ ವಿಭಿನ್ನವಾಗಿ ಒಟಿಟಿ ಫ್ಲಾಟ್‌ಫಾರ್ಮ್‌ಗೆ ಪದಾರ್ಪಣೆ ಮಾಡುತ್ತಿದೆ. ಅಷ್ಟೇ ಅಲ್ಲದೇ Zee5 Subscribersಗೆ 'ಸರಿಗಮಪ ಫಿನಾಲೆ'ಯ ಎಲ್ಲ ಮಾಹಿತಿಯು ತಕ್ಷಣವೇ ಸಿಗುವ ಮತ್ತು ಫಿನಾಲೆ ನಡೆಯುವಾಗಲೇ ಕುಳಿತಲ್ಲಿಂದಲೇ ನೆಚ್ಚಿನ ರಿಯಾಲಿಟಿ ಶೋ ವನ್ನು ವೀಕ್ಷಣೆ ಮಾಡುವ ಭಾಗ್ಯ ದೊರೆಯಲಿದೆ.

Zee5 ಈ ಆವೃತ್ತಿಯ 'ಮೋಸ್ಟ್ ಪಾಪ್ಯುಲರ್ ಸಿಂಗರ್' ನ ಹುಡುಕಾಟದಲ್ಲಿದ್ದು ಇದರ ಆಯ್ಕೆಯಲ್ಲಿ ಚಂದಾದಾರರು ಪಾಲ್ಗೊಳ್ಳಬಹುದಾಗಿದೆ. ಆಯ್ಕೆ ಪ್ರಕ್ರಿಯೆಯು ಮೇ 16ರಿಂದ ಮೇ 22ರವರೆಗೆ ನಡೆಯಲಿದ್ದು, ಚಂದಾದಾರರು ತಮ್ಮ ನೆಚ್ಚಿನ ಗಾಯಕನಿಗೆ Zee5 App ಮೂಲಕ ವೋಟ್ ಮಾಡಬಹುದಾಗಿದೆ ಮತ್ತು ಎಗ್ಸೈಟಿಂಗ್ ಬಹುಮಾನಗಳ ವಿಜೇತರಾಗುವ ಎಲ್ಲ ಚಾನ್ಸ್ ಇದೆ. ಅಷ್ಟೇ ಅಲ್ಲದೇ 'ಮೋಸ್ಟ್ ಫೆವರೇಟ್‌ ವೋಟರ್' ಅನ್ನೋ ಪಟ್ಟ ಒಬ್ಬ ಲಕ್ಕಿ ವಿನ್ನರ್‌ಗೆ ದೊರೆಯಲಿದೆ.

'ಸರಿಗಮಪ ಫಿನಾಲೆ'ಯ ನಿರೂಪಣಾ ಜವಾಬ್ದಾರಿಯನ್ನು ಎಲ್ಲರ ಅಚ್ಚುಮೆಚ್ಚಿನ ನಿರೂಪಕಿ ಅನುಶ್ರೀ ಹೊತ್ತಿದ್ದಾರೆ. ತೀರ್ಪುಗಾರರಾದ ವಿಜಯ ಪ್ರಕಾಶ್, ರಾಜೇಶ್ ಕೃಷ್ಣನ್ ಮತ್ತು ಅರ್ಜುನ್ ಜನ್ಯ ಫಿನಾಲೆಯಲ್ಲಿಯೂ ತಮ್ಮ ಸಲಹೆಗಳನ್ನು ಸ್ಪರ್ಧಿಗಳಿಗೆ ಕೊಡಲಿದ್ದಾರೆ.

ಈ ಸುದ್ದಿಯನ್ನು ಓದಿ: Naayi Ide Yechcharike Movie: ʼನಾಯಿ ಇದೆ ಎಚ್ಚರಿಕೆʼ ಚಿತ್ರದ ಟ್ರೈಲರ್‌, ಹಾಡು ರಿಲೀಸ್‌ ಮಾಡಿದ ಇಂದ್ರಜಿತ್ ಲಂಕೇಶ್

Zee5 ಮತ್ತು Zee Kannada ಬಿಸಿನೆಸ್ ಹೆಡ್ ಆಗಿರುವ ದೀಪಕ್ ಶ್ರೀರಾಮುಲು ಮಾಹಿತಿ ನೀಡಿ, "ಪ್ರಾದೇಶಿಕ ಕಂಟೆಂಟ್, ಮ್ಯೂಸಿಕ್ ಇವೆಲ್ಲ Zee5ನ ಬೆಳವಣಿಗೆಯ ಆಧಾರ ಸ್ತಂಭ ಎನಿಸಿಕೊಂಡಿದೆ. ಕರ್ನಾಟಕದ ಸಂಗೀತ ಪರಂಪರೆಯನ್ನು ಎತ್ತಿಹಿಡಿಯುವ ಸರಿಗಮಪ ರಿಯಾಲಿಟಿ ಶೋ Zee5ನಲ್ಲಿ ನೇರಪ್ರಸಾರ ಆಗುತ್ತಿದ್ದು ಪ್ರಪಂಚದ ಎಲ್ಲ ಮೂಲೆಯ ಜನರು ಈ ಕಾರ್ಯಕ್ರಮವನ್ನು ವೀಕ್ಷಿಸಬಹುದು. ಇದು ನಮಗೆ ಹೆಮ್ಮೆಯ ವಿಷಯ. ಡಿಜಿಟಲ್‌ನಲ್ಲಿ ಮೊದಲು ಎಂಬ ಕಾನ್ಸೆಪ್ಟ್‌ನೊಂದಿಗೆ Zee5ನಲ್ಲಿ ರೀಜನಲ್ ಎಂಟರ್‌ಟೈನ್‌ಮೆಂಟ್‌ನ ಪ್ರಸಾರ ಮಾಡುವ ಮೂಲಕ ಎಲ್ಲ ವರ್ಗದ ಜನರಿಗೆ ಈಗ ನಾವು ಮತ್ತಷ್ಟು ಹತ್ತಿರವಾಗಲಿದ್ದೇವೆ. ಡಿಜಿಟಲ್ ಫ್ಲಾಟ್‌ಫಾರ್ಮ್‌ನಲ್ಲಿ ಇದೇ ಮೊದಲು ಈ ರೀತಿಯ ಹೆಜ್ಜೆಯನ್ನು ತೆಗೆದುಕೊಂಡಿರುವುದು ಮತ್ತು ಮುಂದಿನ ದಿನಗಳಲ್ಲಿ ನಮ್ಮಿಂದ ವೀಕ್ಷಕರು ಇನ್ನಷ್ಟು ರೋಮಾಂಚನಕಾರಿ ಪ್ರಯೋಗಗಳನ್ನು ನಿರೀಕ್ಷಿಸಬಹುದು" ಎಂದಿದ್ದಾರೆ.

ಸೆಲೆಬ್ರೇಶನ್‌ನ ಮತ್ತಷ್ಟು ಉತ್ಸಾಹದಾಯಕವಾಗಿ ಮಾಡಲು ಕೇವಲ 99 ರೂ.ಯ ಸ್ಪೆಷಲ್ Subscription ಪಡೆದು ಬಳಕೆದಾರರು ಲೈವ್ ಕಂಟೆಸ್ಟ್‌ನಲ್ಲಿ ಭಾಗವಹಿಸಿ ಉತ್ತಮ ಬಹುಮಾನಗಳನ್ನು ಪಡೆಯುವ ಚಾನ್ಸ್ ಇರುತ್ತದೆ. 'ಸರಿಗಮಪʼ ಫಿನಾಲೆಯ ನೇರಪ್ರಸಾರ Zee5 Appನಲ್ಲಿ ಮೇ 23ರಂದು ನಡೆಯಲಿದೆ.