ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ʻಬಿಗ್‌ಬಾಸ್ ಕನ್ನಡ ಸೀಸನ್ 13ರʼ (Bigg Boss Kannada 13) ಆರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಈ ಬಾರಿಯ ಮತ್ತೊಂದು ವಿಶೇಷ ಅಂದ್ರೆ ಕಾಮನ್ ಮ್ಯಾನ್ ಎಂಟ್ರಿ. ಈಗಾಗಲೇ ಆಡಿಷನ್ ಪ್ರಕ್ರಿಯೆ ಮುಗಿದಿದ್ದು, ಸಾವಿರಾರು ಮಂದಿ ತಮ್ಮ ವಿಡಿಯೋಗಳನ್ನು ಕಳುಹಿಸಿದ್ದಾರೆ. ಅವರಲ್ಲಿ ಯಾರಿಗೆ ಬಿಗ್‌ಬಾಸ್ ಮನೆಯೊಳಗೆ ಹೋಗುವ ಅವಕಾಶ ಸಿಗಲಿದೆ ಅನ್ನೋದು ಗ್ರ್ಯಾಂಡ್ ಪ್ರೀಮಿಯರ್ (Grand Premere) ದಿನವೇ ಗೊತ್ತಾಗಲಿದೆ.
ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡೋಕೆ ಅಗ್ನಿಪರೀಕ್ಷೆಯ ವೇದಿಕೆ ಸಜ್ಜಾಗಿದೆ.ಇದೇ ಆಗಸ್ಟ್ 16ರ ರಾತ್ರಿ 9ಕ್ಕೆ ಬಿಗ್ ಮನೆಗೆ ಎಂಟ್ರಿ ಕೊಡೋಕೆ ಅಗ್ನಿಪರೀಕ್ಷೆಯ ವೇದಿಕೆ ಸಜ್ಜಾಗಿದೆ.ಇನ್ನೂ ಆ.17ರಿಂದ ಪ್ರತೀ ಸೋಮವಾರದಿಂದ ಭಾನುವಾರದವರೆಗೆ ರಾತ್ರಿ 9:30ಕ್ಕೆ ಪ್ರಸಾರವಾಗಲಿದೆ.
ಇದನ್ನೂ ಓದಿ: Bigg Boss Telugu 9: ತೆಲುಗು ಬಿಗ್‌ಬಾಸ್ 9 ಟ್ರೋಫಿ ಗೆದ್ದ ಸೈನಿಕ ಕಲ್ಯಾಣ್ ಪಡಾಲ; ರನ್ನರ್ ಅಪ್ ಆದ ಕನ್ನಡತಿ ತನುಜಾ
ರಿಲೀಸ್ ಆದ ಪ್ರೋಮೋದಲ್ಲಿ `Thank You Karnataka’ ಎಂದು ಶುರುವಾಗಿ.. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡೋ ನಿಮ್ಮ ಕನಸುಗಳು ವಿಡಿಯೋ ಮೂಲಕ ನಮ್ಮನ್ನ ತಲುಪಿವೆ. ಈಗ ಆ ಕನಸುಗಳಿಗೆ ವೇದಿಕೆ ಸಜ್ಜಾಗ್ತಿದೆ. ಈ ಅಂತಿಮ ಪರೀಕ್ಷೆಯನ್ನು ಎದುರಿಸಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡೋರು ಯಾರು?.. ಇದೆಲ್ಲದಕ್ಕೆ ಉತ್ತರ ಆಗಸ್ಟ್ 16ರ ರಾತ್ರಿ 9ಕ್ಕೆ ಸಿಗಲಿದೆ ಎಂದು ತಿಳಿಸಿದೆ.
ಅಸಂಖ್ಯ ಜನರು ತಮ್ಮ ವಿಡಿಯೋ ಕಳುಹಿಸಿದ್ದಾರೆ. ಇವರಲ್ಲಿ ಆಯ್ಕೆಯಾದವರು ಒಂದಿಷ್ಟು ಮಂದಿ. ಅವರು ಯಾರು, ಅಗ್ನಿ ಪರೀಕ್ಷೆಯಲ್ಲಿ ಗೆದ್ದವರು ಯಾರು ಎನ್ನೋದನ್ನು ಆಗಸ್ಟ್ 16ರ ರಾತ್ರಿ 9 ಗಂಟೆಗೆ ಹೇಳುವುದಾಗಿ ಈ ಪ್ರೊಮೋದಲ್ಲಿ ತಿಳಿಸಲಾಗಿದೆ. ಪ್ರತಿ ಸಲದಂತೆ ಈ ಬಾರಿಯೂ ಬಿಗ್ಬಾಸ್ಗೆ ಹೋಗುವ ಸ್ಪರ್ಧಿಗಳ ಬಗ್ಗೆ ಗೋಪ್ಯತೆ ಕಾಪಾಡಲಾಗಿದೆ. ಇದಾಗಲೇ ಬಹುತೇಕ ಸ್ಪರ್ಧಿಗಳಿಗೆ ಆಹ್ವಾನ ಹೋಗಿದ್ದು, ತಯಾರಿ ಕೂಡ ನಡೆಸುತ್ತಿದ್ದಾರೆ. ಆದರೆ ಅವರಿಗೆ ಈ ಬಗ್ಗೆ ಎಲ್ಲಿಯೂ ಹೇಳದಂತೆ ಷರತ್ತು ವಿಧಿಸಿರಲಾಗುತ್ತದೆ.
ಇದನ್ನೂ ಓದಿ: Trisha Krishnan: ಉದಯನಿಧಿ ವಿವಾದಾತ್ಮಕ ಹೇಳಿಕೆ; ತ್ರಿಷಾಗೆ ಹರಿದುಬಂದ ಬೆಂಬಲ
ಮೂಲಗಳ ಪ್ರಕಾರ, ಸೆಲೆಬ್ರಿಟಿಗಳ ಜೊತೆಗೆ 60 ಮಂದಿ ಸಂಭಾವ್ಯ ಸ್ಪರ್ಧಿಗಳು ಈ ಆಂಗಲ್‌ನಲ್ಲಿ ʻಬಿಗ್ ಬಾಸ್ʼ ಅಖಾಡಕ್ಕೆ ಇಳಿಯಲು ಸಂಪೂರ್ಣವಾಗಿ ಸಜ್ಜಾಗಿದ್ದಾರೆ. ಈ 60 ಜನರಲ್ಲಿ ಯಾರು ಅಂತಿಮವಾಗಿ ʻಬಿಗ್ ಬಾಸ್ʼ ಮುಖ್ಯ ಮನೆಗೆ ಪ್ರವೇಶ ಪಡೆಯಲಿದ್ದಾರೆ ಅನ್ನೋದು ಈ ʻಅಗ್ನಿಪರೀಕ್ಷೆʼಯ ರಿಸಲ್ಟ್ ಮೇಲೆ ನಿರ್ಧಾರವಾಗಲಿದೆ.