ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Trisha Krishnan: ಉದಯನಿಧಿ ವಿವಾದಾತ್ಮಕ ಹೇಳಿಕೆ; ತ್ರಿಷಾಗೆ ಹರಿದುಬಂದ ಬೆಂಬಲ

Trisha Krishnan: ಉದಯನಿಧಿ ಸ್ಟಾಲಿನ್ ಸಾರ್ವಜನಿಕ ರ್ಯಾಲಿಯಲ್ಲಿ ಅವರ ಬಗ್ಗೆ "ಡಬಲ್ ಮೀನಿಂಗ್" ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ನಂತರ, ತ್ರಿಷಾ ಕೃಷ್ಣನ್ ಅವರ ಹಳೆಯ ಸೋಶಿಯಲ್ ಮೀಡಿಯಾ ಪೋಸ್ಟ್ ವೈರಲ್ ಆಗಿದೆ. ವಿವಾದಕ್ಕೂ ಮುನ್ನ ತ್ರಿಶಾ ಫೋಟೋ ಪೋಸ್ಟ್ ಮಾಡಿದ್ದರೂ, ಆ ಬಳಿಕ ಚರ್ಚೆ ಆಗಿದೆ. ನಟಿಯ ಶಾಂತ ಹಾಗೂ ಧೈರ್ಯದ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಉದಯನಿಧಿ ವಿವಾದಾತ್ಮಕ ಹೇಳಿಕೆ; ತ್ರಿಷಾಗೆ ಹರಿದುಬಂದ ಬೆಂಬಲ

ತ್ರಿಷಾ -

Yashaswi Devadiga
Yashaswi Devadiga Aug 6, 2026 8:26 AM

ಡಿಎಂಕೆ ನಾಯಕ ಮತ್ತು ತಮಿಳುನಾಡು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಸಾರ್ವಜನಿಕ (Udhayanidhi Stalin) ರ್ಯಾಲಿಯಲ್ಲಿ ಅವರ ಬಗ್ಗೆ "ಡಬಲ್ ಮೀನಿಂಗ್" ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ನಂತರ, ತ್ರಿಷಾ ಕೃಷ್ಣನ್ (Trisha Krishnan) ಅವರ ಹಳೆಯ ಸೋಶಿಯಲ್ ಮೀಡಿಯಾ ಪೋಸ್ಟ್ ವೈರಲ್ ಆಗಿದೆ. ವಿವಾದಕ್ಕೂ ಮುನ್ನ ತ್ರಿಶಾ ಫೋಟೋ ಪೋಸ್ಟ್ ಮಾಡಿದ್ದರೂ, ಆ ಬಳಿಕ ಚರ್ಚೆ ಆಗಿದೆ. ನಟಿಯ ಶಾಂತ ಹಾಗೂ ಧೈರ್ಯದ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಮಹಿಳೆಯರಿಗೆ ಗೌರವ ಸಿಗಬೇಕು

ತ್ರಿಷಾ ಒಂದು ವಾರದ ಹಿಂದೆ ಫೋಟೋ ಹಂಚಿಕೊಂಡಿದ್ದರು. ‘ಯಾವುದಕ್ಕೂ ತಲೆಕೆಡಿಸಿಕೊಳ್ಳದಿರುವುದು ನಮ್ಮ ಕೈಯಲ್ಲೇ ಇದೆ. ಅದನ್ನೇ ಆಯ್ಕೆ ಮಾಡಿಕೊಳ್ಳಿ’ ಎಂದು ಬರೆದುಕೊಂಡಿದ್ದರು. ಈಗ ಈ ಪೋಸ್ಟ್ ವೈರಲ್ ಆಗುತ್ತಿದೆ. ಸಾವಿರಾರು ಜನರು ನಟಿಯ ಬೆಂಬಲಕ್ಕೆ ನಿಂತಿದ್ದಾರೆ. ‘ಮಹಿಳೆಯರಿಗೆ ಗೌರವ ಸಿಗಬೇಕು’ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Dorothy: ಕಾರ್ತಿಕ್ ಸುಬ್ಬರಾಜ್ 10 ನೇ ಸಿನಿಮಾ ಘೋಷಣೆ! ಕೀರ್ತಿ ಸುರೇಶ್ ನಾಯಕಿ

ತಲಪತಿಯ ಬಗ್ಗೆ ತುಂಬಾ ಗೌರವವಿದೆ! ಯಾವಾಗಲೂ ಸತ್ಯ ಮತ್ತು ಘನತೆಗಾಗಿ ನಿಲ್ಲುವ ಧೈರ್ಯಶಾಲಿ ನಾಯಕಿ. ತ್ರಿಶಾ, ದೃಢವಾಗಿರಿ!" ಎಂದು ಒಬ್ಬ ವ್ಯಕ್ತಿ ಕಾಮೆಂಟ್‌ಗಳಲ್ಲಿ ಬರೆದಿದ್ದಾರೆ, "ಮಹಿಳೆಯರು ಘನತೆ ಮತ್ತು ಗೌರವಕ್ಕೆ ಅರ್ಹರು. ಎಂದು ಮತ್ತೊಬ್ಬರು ಬರೆದಿದ್ದಾರೆ. ಇನ್ನೊಂದು ಕಾಮೆಂಟ್, "ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕಾಗಿ ಉದಯ್ ವಿರುದ್ಧ ಪ್ರಕರಣ ದಾಖಲಿಸಿ" ಎಂದು ಬರೆದಿದ್ದಾರೆ.

ತ್ರಿಶಾ ಕೃಷ್ಣನ್ ಬಗ್ಗೆ ಉದಯನಿಧಿ ಸ್ಟಾಲಿನ್ ಹೇಳಿದ್ದೇನು?

ಉದಯನಿಧಿ ಸ್ಟಾಲಿನ್ ಸಭೆಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರನ್ನು ಟೀಕಿಸಿದರು ವಿಜಯ್ ಅವರ ಟಿವಿಕೆ ಪಕ್ಷ ಈ ಹೇಳಿಕೆಯನ್ನು ಖಂಡಿಸಿದೆ. ಅವರ ಪಕ್ಷವು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಿದೆ. ಪೊಲೀಸರಿಗೂ ದೂರು ಸಲ್ಲಿಕೆಯಾಗಿದೆ.

ಇದನ್ನೂ ಓದಿ: Lock Upp Season 2 : ನೆಟ್‌ಫ್ಲಿಕ್ಸ್‌ನ ಫೇಮಸ್‌ ಶೋ ʻಲಾಕ್ ಅಪ್ʼ! ವಿನ್ನರ್‌ ಆದ ಶ್ರೇಯಾ ಕಲ್ರಾ

ಮಹಿಳೆಯರ ಗೌರವಕ್ಕೆ ಧಕ್ಕೆ ತರಲಾಗಿದೆ ಎಂದು ಆರೋಪಿಸಲಾಗಿದೆ. ಉದಯನಿಧಿ ಅವರು ಈ ಹೇಳಿಕೆಗೆ ಸಂಬಂಧಿಸಿ ಅರೆಸ್ಟ್ ಕೂಡ ಆದರು. ಅದೇ ದಿನ ಅವರು ಬಿಡುಗಡೆ ಆದರು. ಈ ಘಟನೆ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.