Zakir Hussain: ಗ್ರ್ಯಾಮಿ ಪ್ರಶಸ್ತಿ ಕಾರ್ಯಕ್ರಮದಲ್ಲಿ ತಬಲಾ ಮಾಂತ್ರಿಕ ಜಾಕಿರ್ ಹುಸೇನ್‌ಗಿಲ್ಲ ಗೌರವಾರ್ಪಣೆ; ಫ್ಯಾನ್ಸ್ ಕಿಡಿ
67ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿ ಪ್ರಕಟವಾಗಿದೆ. ಲಾಸ್ ಏಂಜಲೀಸ್‌ನಲ್ಲಿ ಭಾನುವಾರ(ಫೆಬ್ರವರಿ 2) ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆದಿದೆ. ಭಾರತೀಯ ಮೂಲದ ಸಂಗೀತಗಾರ್ತಿ ಚಂದ್ರಿಕಾ ಟಂಡನ್ ಅವರಿಗೆ ಗ್ರ್ಯಾಮಿ ಪ್ರಶಸ್ತಿ ಒಲಿದು ಬಂದಿದೆ. ತ್ರಿವೇಣಿ ಹೆಸರಿನ ಇವರ ವಿಶೇಷ ಆಲ್ಬಂಗೆ ಗ್ರ್ಯಾಮಿ ಪ್ರಶಸ್ತಿ ಒಲಿದು ಬಂದಿದೆ. ಆದರೆ ಸಂಗೀತ ಕ್ಷೇತ್ರದಲ್ಲಿ ಅಪಾರವಾಗಿ ಸಾಧನೆಗೈದ ತಬಲಾ ಮಾಂತ್ರಿಕ ಉಸ್ತಾದ್ ಜಾಕಿರ್ ಹುಸೇನ್ ಅವರನ್ನು ವೇದಿಕೆಯಲ್ಲಿ ಸಂಘಟಕರು ಸ್ಮರಿಸದ ಕಾರಣ ಸಂಗೀತಾಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾಷಿಂಗ್ಟನ್: 67ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿ(Grammy awards 2025) ಪ್ರಕಟವಾಗಿದೆ. ಲಾಸ್ ಏಂಜಲೀಸ್‌ನಲ್ಲಿ(Loss Angeles) ಭಾನುವಾರ(ಫೆ.2) ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆದಿದೆ. ಭಾರತೀಯ ಮೂಲದ ಸಂಗೀತಗಾರ್ತಿ ಚಂದ್ರಿಕಾ ಟಂಡನ್( Chandrika Tandon) ಅವರಿಗೆ ಗ್ರ್ಯಾಮಿ ಪ್ರಶಸ್ತಿ ಬಂದಿದೆ. ತ್ರಿವೇಣಿ ಹೆಸರಿನ ಇವರ ವಿಶೇಷ ಆಲ್ಬಂಗೆ ಗ್ರ್ಯಾಮಿ ಪ್ರಶಸ್ತಿ ಒಲಿದು ಬಂದಿದೆ. ಆದರೆ ಸಂಗೀತ ಕ್ಷೇತ್ರದಲ್ಲಿ ಅಪಾರವಾಗಿ ಸಾಧನೆಗೈದ ತಬಲಾ ಮಾಂತ್ರಿಕ ಜಾಕಿರ್ ಹುಸೇನ್(Zakir Hussain) ಅವರನ್ನು ವೇದಿಕೆಯಲ್ಲಿ ಸ್ಮರಿಸದೆ ಅಗೌರವ ತೋರಿದ್ದಾರೆ ಎಂದು ಸಂಗೀತಾಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
67ನೇ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಉಸ್ತಾದ್ ಜಾಕಿರ್ ಹುಸೇನ್ ಅವರನ್ನು ಸ್ಮರಿಸದ ಕಾರಣ ಅಭಿಮಾನಿಗಳು ಗ್ರ್ಯಾಮಿ ಸಂಘಟಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರತಿ ವರ್ಷವೂ ಗ್ರ್ಯಾಮಿ ಇನ್ ಮೆಮೋರಿಯಮ್ ಮಾಂಟೇಜ್ ಮೂಲಕ ಹಿಂದಿನ ವರ್ಷದಲ್ಲಿ ನಿಧನರಾದ ಸಾಧಕರಿಗೆ ಗೌರವ ನಮನ ಸಲ್ಲಿಸುತ್ತಾರೆ. ಆದರೆ ಈ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಬಲಾ ಮಾಂತ್ರಿಕ,ಅಸಾಮಾನ್ಯ ಸಂಗೀತ ಸಾಧಕ ಜಾಕಿರ್ ಹುಸೇನ್ ಅವರಿಗೆ ಯಾವುದೇ ಗೌರವ ಸಲ್ಲಿಸಿಲ್ಲ. ಇದರಿಂದ ಜಾಕಿರ್ ಅಭಿಮಾನಿಗಳು ನಿರಾಶರಾಗಿದ್ದಾರೆ.
dude where the hell is ustaad zakir hussain??? https://t.co/K7AhFIkYLX
— ✵ (@ffssanie) February 3, 2025
ಜಾಕಿರ್ ಹುಸೇನ್ ಅವರಿಗೆ ಅಗೌರವ ತೋರಲಾಗಿದೆ ಎಂದು ಅಭಿಮಾನಿಗಳು ಸಾಮಾಜಿಕ ಜಾಕತಾಣಗಳಲ್ಲಿ ಕಿಡಿಕಾರಿದ್ದಾರೆ. ಹುಸೇನ್ ಅಭಿಮಾನಿಯೊಬ್ಬರು "ಗ್ರ್ಯಾಮಿ ವೇದಿಕೆಯಲ್ಲಿ ಜಾಕಿರ್ ಹುಸೇನ್ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಅವರನ್ನು ಸ್ಮರಿಸುವ ಸೌಜನ್ಯವೂ ತೋರಿಸಿಲ್ಲ. ಅವರು ಕಳೆದ ವರ್ಷವಷ್ಟೇ ವಿಜೇತರಾಗಿದ್ದರು." ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೋರ್ವ ಅಭಿಮಾನಿ "ಕಳೆದ ವರ್ಷವಷ್ಟೇ ಜಾಕಿರ್ ಹುಸೇನ್ ಮೂರು ಗ್ರ್ಯಾಮಿ ಪ್ರಶಸ್ತಿಗಳನ್ನು ಗೆದ್ದಿದ್ದರು. ಅವರ ಮರಣದ ನಂತರ ಅವರಿಗೆ ಗೌರವ ನೀಡುವುದನ್ನು ಮರೆತಿದ್ದಾರೆ ಈಡಿಯಟ್ಸ್!" ಎಂದು ಕೋಪದಿಂದ ಪೋಸ್ಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:Zakir Hussain: ತಬಲಾ ಮಾಂತ್ರಿಕ ಜಾಕಿರ್ ಹುಸೇನ್‌ಗೆ ಸ್ವರ ನಮನ- ಸಂಗೀತ ದಿಗ್ಗಜರಿಂದ ಹಾಡಿನ ವಿದಾಯ!
ಲಾಸ್ ಏಂಜಲೀಸ್‌ನಲ್ಲಿ ನಡೆದ 67ನೇ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಿಕ್ಕಿ ಕೇಜ್ ಮತ್ತು ಅನೌಷ್ಕಾ ಶಂಕರ್ ಅವರನ್ನು ಹಿಂದಿಕ್ಕಿ ಚಂದ್ರಿಕಾ ಟಂಡನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಗ್ರ್ಯಾಮಿ ಪ್ರಶಸ್ತಿ ಎಂದಾಗ ರಿಕ್ಕಿ ಕೇಜ್ ಹೆಸರು ನೆನಪಿಗೆ ಬರುತ್ತಿತ್ತು. ಈ ಬಾರಿ ಚಂದ್ರಿಕಾ ಗಮನ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ತಮ್ಮ ಅಸಾಮಾನ್ಯ ಪ್ರತಿಭೆಯಿಂದ ವಿದೇಶದಲ್ಲೂ ತಬಲಾ ವಾದನಕ್ಕೆ ಗೌರವ ತಂದುಕೊಟ್ಟಿದ್ದ ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ನಾಲ್ಕಾರು ಬಾರಿ ಗ್ರ್ಯಾಮಿ ಪ್ರಶಸ್ತಿಯನ್ನು ಪಡೆದಿದ್ದರು. ಅವರು ಕಳೆದ ವರ್ಷ ಡಿಸೆಂಬರ್ 15 ರಂದು ಇಹಲೋಕ ತ್ಯಜಿಸಿದರು.