ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Farah Khan: ಹೋಳಿ ಛಪ್ರಿಗಳ ಹಬ್ಬ ಎಂದು ವಿವಾದ ಸೃಷ್ಟಿಸಿದ ಫರಾ ಖಾನ್ ವಿರುದ್ಧ ಪ್ರಕರಣ ದಾಖಲು

ಟೆಲಿವಿಷನ್ ಅಡುಗೆ ರಿಯಾಲಿಟಿ ಶೋ ಸೆಲೆಬ್ರಿಟಿ ಮಾಸ್ಟರ್‌ಶೆಫ್‌ನ ಸಂಚಿಕೆಯಲ್ಲಿ ಹೋಳಿ ಹಬ್ಬವನ್ನು ಛಪ್ರಿಗಳ ಹಬ್ಬ ಎಂದು ಕರೆದಿದ್ದ ಫರಾ ಖಾನ್ ವಿರುದ್ಧ ಕ್ರಿಮಿನಲ್ ದೂರು ದಾಖಲಾಗಿದೆ. ಮಾಜಿ ಬಿಗ್ ಬಾಸ್ ಸ್ಪರ್ಧಿ, ಹಿಂದೂಸ್ತಾನಿ ಭಾವೂ ಎಂದೇ ಜನಪ್ರಿಯರಾಗಿದ್ದ ವಿಕಾಶ್ ಪಾಠಕ್ ಅವರು ತಮ್ಮ ವಕೀಲ ಅಲಿ ಕಾಶಿಫ್ ಖಾನ್ ದೇಶಮುಖ್ ಮೂಲಕ ಫರಾ ಖಾನ್ ವಿರುದ್ಧ ದೂರು ದಾಖಲಿಸಿದ್ದಾರೆ.

ಬಾಲಿವುಡ್‌ ನಿರ್ಮಾಪಕಿ ಫರಾ ಖಾನ್ ವಿರುದ್ಧ ದೂರು ದಾಖಲು

ಫರಾ ಖಾನ್‌

Profile Vishakha Bhat Feb 22, 2025 10:34 AM

ಮುಂಬೈ: ಹಿಂದೂಗಳ ಹಬ್ಬದ ಹೋಳಿ ಹಬ್ಬದ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಬಾಲಿವುಡ್ ಚಲನಚಿತ್ರ ನಿರ್ಮಾಪಕಿ ಮತ್ತು ನೃತ್ಯ ಸಂಯೋಜಕಿ ಫರಾ ಖಾನ್ (Farah Khan) ವಿರುದ್ಧ ಕ್ರಿಮಿನಲ್ ದೂರು ದಾಖಲಾಗಿದೆ. ಮಾಜಿ ಬಿಗ್ ಬಾಸ್ ಸ್ಪರ್ಧಿ, ಹಿಂದೂಸ್ತಾನಿ ಭಾವೂ ಎಂದೇ ಜನಪ್ರಿಯರಾಗಿದ್ದ ವಿಕಾಶ್ ಪಾಠಕ್ ಅವರು ತಮ್ಮ ವಕೀಲ ಅಲಿ ಕಾಶಿಫ್ ಖಾನ್ ದೇಶಮುಖ್ ಮೂಲಕ ಫರಾ ಖಾನ್ ವಿರುದ್ಧ ದೂರು ದಾಖಲಿಸಿದ್ದಾರೆ. ಖಾರ್ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಶುಕ್ರವಾರ ಪ್ರಕರಣ ದಾಖಲಿಸಲಾಗಿದೆ.

ಟೆಲಿವಿಷನ್ ಅಡುಗೆ ರಿಯಾಲಿಟಿ ಶೋ ಸೆಲೆಬ್ರಿಟಿ ಮಾಸ್ಟರ್‌ಶೆಫ್‌ನ ಸಂಚಿಕೆಯಲ್ಲಿ ಫರಾ ನೀಡಿದ ವಿವಾದಾತ್ಮಕ ಹೇಳಿಕೆಗಾಗಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ. ದೂರಿನಲ್ಲಿ, ಹೋಳಿ ಹಬ್ಬವನ್ನು ಫರಾ, ಛಪ್ರಿಗಳ ಹಬ್ಬ ಎಂದು ಕರೆದಿದ್ದಾರೆ.



ಇದು ಆಕ್ಷೇಪಾರ್ಹ ಪದವಾಗಿದೆ. ಈ ಹೇಳಿಕೆ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ. ಈ ರೀತಿ ಉಲ್ಲೇಖಿಸುವುದು ಅನುಚಿತ ಮತ್ತು ಕೋಮು ಸೌಹಾರ್ದತೆಗೆ ಕಾರಣವಾಗಬಹುದು ಎಂದು ಭಾವ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 196, 299, 302 ಮತ್ತು 353 ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಫರಾ ಖಾನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Ranveer Allahbadia: ವಿಚಾರಣೆಗೆ ಹಾಜರಾಗದ ಯೂಟ್ಯೂಬರ್‌ ರಣವೀರ್‌ ತಂಡ: ಮತ್ತೆ ಸಮನ್ಸ್‌ ಜಾರಿ!

ಸೆಲೆಬ್ರಿಟಿ ಮಾಸ್ಟರ್‌ಶೆಫ್‌ನಲ್ಲಿ ಜಡ್ಜ್‌ ಆಗಿ ಕಾಣಿಸಿಕೊಳ್ಳುತ್ತಿರುವ ಫರಾ ಖಾನ್ ಅವರ ಹೇಳಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ. ನೆಟ್ಟಿಗರು ಈ ಹೇಳಿಕೆಯನ್ನು ಖಂಡಿಸಿದ್ದು, ಬಹಿರಂಗವಾಗಿ ಕ್ಷಮೆ ಯಾಚಿಸಿಬೇಕು ಎಂದು ಹೇಳಿದ್ದಾರೆ. ಈ ವರೆಗೆ ಫರಾ ಖಾನ್, ಆರೋಪಗಳಿಗೆ ಯಾವುದೇ ಅಧಿಕೃತ ಪ್ರತಿಕ್ರಿಯೆಯನ್ನು ನೀಡಿಲ್ಲ.

ಇತ್ತೀಚೆಗೆ ಕಾಮಿಡಿಯನ್‌ ಸಮಯ್ ರೈನಾ ಅವರ ಯೂಟ್ಯೂಬ್ ಕಾರ್ಯಕ್ರಮ 'ಇಂಡಿಯಾಸ್ ಗಾಟ್ ಲ್ಯಾಟೆಂಟ್' ನಲ್ಲಿ( India's Got Latent Show) ಅಶ್ಲೀಲ ಹೇಳಿಕೆಗಳನ್ನು ಹೇಳಿಕೆ ನೀಡಿದ ಆರೋಪ ಮೇಲೆ ಯೂಟ್ಯೂಬರ್ ರಣವೀರ್‌ ಅಲ್ಲಾಬಾಡಿಯಾ ಸೇರಿದಂತೆ ಹಲವರ ಮೇಲೆ ದೂರು ದಾಖಲಾಗಿತ್ತು. ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ತಮಾಷೆಯಾಗಿ ಮಾತನಾಡುವ ಭರದಲ್ಲಿ ಅವರು ಪೋಷಕರ ಲೈಂಗಿಕ ಕ್ರಿಯೆ ಬಗ್ಗೆ ಮಾತಾಡಿದ್ದರು. ನಿಮ್ಮ ಪೋಷಕರು ಲೈಂಗಿಕ ಕ್ರಿಯೆ ನಡೆಸುವುದನ್ನು ನೋಡ್ತೀರಾ? ? ಅಥವಾ ಒಮ್ಮೆ ಈ ಸೆಕ್ಸ್‌ನಲ್ಲಿ ಭಾಗಿಯಾಗುವ ಮೂಲಕ ಅವರ ನಡುವಿನ ಸೆಕ್ಸ್‌ಅನ್ನು ಶಾಶ್ವತವಾಗಿ ಬಂದ್‌ ಮಾಡಲು ಇಷ್ಟಪಡುತ್ತೀರಾ? ಎಂದು ಕೇಳಿದ್ದರು. ಅದು ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ರಣವೀರ್ ಅಲ್ಲಾಬಾಡಿಯಾ, ಸಮಯ್‌ ರೈನಾ, ಆಶಿಶ್ ಚಂಚಲಾನಿ, ಜಸ್ಪ್ರೀತ್ ಸಿಂಗ್ ಮತ್ತು ಅಪೂರ್ವ ಮಖಿಜಾ ಮೇಲೆ ದೂರು ದಾಖಲಾಗಿತ್ತು.