ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Friday OTT releases: ಈ ವಾರಾಂತ್ಯದಲ್ಲಿ ಒಟಿಟಿಯಲ್ಲಿ ನೋಡಬಹುದಾದ ಸಿನಿಮಾಗಳ ಲಿಸ್ಟ್‌ ಇಲ್ಲಿದೆ

OTT Movies: ವೀಕೆಂಡ್‌ ಚೆಂದವಾಗಿಸಲು OTT ಪ್ಲಾಟ್‌ಫಾರ್ಮ್‌ಗಳಲ್ಲಿ ಹಲವಾರು ಹೊಚ್ಚ ಹೊಸ ಸಿನಿಮಾಗಳು ಬಂದಿವೆ. ತಮಿಳು ಸಿನಿಮಾದಿಂದ ಬೇರೆ ಬೇರೆ ಭಾಷೆಗಳಲ್ಲಿ. ತರಹೇವಾರಿ ಸಿನಿಮಾಗಳು ಒಟಿಟಿಗೆ ಎಂಟ್ರಿ ಕೊಟ್ಟಿವೆ. 98ನೇ ಅಕಾಡೆಮಿ ಪ್ರಶಸ್ತಿಗಳಿಗೆ ತೈವಾನ್‌ನ ಅಧಿಕೃತ ಪ್ರವೇಶವಾದ 'ಲೆಫ್ಟ್-ಹ್ಯಾಂಡೆಡ್ ಗರ್ಲ್' ಕೂಡ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಇಲ್ಲಿದೆ ಸಿನಿಮಾಗಳ ಲಿಸ್ಟ್‌.

ಒಟಿಟಿ ಸಿನಿಮಾಗಳು

ವೀಕೆಂಡ್‌ ಬಂದಿದೆ. ವೀಕೆಂಡ್‌ (Weekend) ಚೆಂದವಾಗಿಸಲು OTT ಪ್ಲಾಟ್‌ಫಾರ್ಮ್‌ಗಳಲ್ಲಿ ಹಲವಾರು ಹೊಚ್ಚ ಹೊಸ ಸಿನಿಮಾಗಳು (Cinema) ಬಂದಿವೆ. ತಮಿಳು (Tamil Movie) ಸಿನಿಮಾದಿಂದ ಬೇರೆ ಬೇರೆ ಭಾಷೆಗಳಲ್ಲಿ (Other Languages) ತರಹೇವಾರಿ ಸಿನಿಮಾಗಳು ಒಟಿಟಿಗೆ ಎಂಟ್ರಿ ಕೊಟ್ಟಿವೆ.

ಆರ್ಯನ್

ಈ ಒಂದು ಚಿತ್ರ ಕ್ರೈಮ್ ಕಂಟೆಂಟ್ ಹೊಂದಿದೆ. ಇದರಲ್ಲಿ ವಿಶಾಲ್ ವಿಷ್ಣು ಪ್ರಮುಖ ರೋಲ್ ಮಾಡಿದ್ದಾರೆ. ಶ್ರದ್ಧಾ ಶ್ರೀನಾಥ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ನಟ ವಿಷ್ಣು ವಿಶಾಲ್ ಇಲ್ಲಿ ಪೊಲೀಸ್ ಆಫೀಸರ್ ಪಾತ್ರವನ್ನೆ ಮಾಡಿದ್ದಾರೆ.

ಇದನ್ನೂ ಓದಿ: Bigg Boss Kannada 12: ನನ್ನಲ್ಲಿ ಬುದ್ಧಿವಂತಿಕೆ ಇಲ್ಲ! ಚೈತ್ರಾ ಎದುರು ಕ್ಷಮೆ ಕೇಳಿದ ಅಶ್ವಿನಿ ಗೌಡ

ಈ ಸಿನಿಮಾವನ್ನ ಇದೇ ವಿಷ್ಣು ವಿಶಾಲ್ ನಿರ್ಮಿಸಿದ್ದಾರೆ. ಘಿಬ್ರಾನ್ ವೈಬೋಧ್ ಸಂಗೀತ ಕೊಟ್ಟಿದ್ದಾರೆ. ಹರೀಶ್ ಕಣ್ಣನ್ ಕ್ಯಾಮರಾ ವರ್ಕ್ ಮಾಡಿದ್ದಾರೆ. ವಿಷ್ಣು ವಿಶಾಲ್, ಶ್ರದ್ಧಾ ಶ್ರೀನಾಥ್, ಮಾನಸ ಚೌಧರಿ, ಸೆಲ್ವ ರಾಘವನ್ ಈ ಸಿನಿಮಾದಲ್ಲಿ ಅಭಿನಿಸಿದ್ದಾರೆ.ಇದರಲ್ಲಿ ಸೀರಿಯಲ್ ಕಿಲ್ಲರ್ ಕಥೆಯ ಚಿತ್ರಣ ಇದೆ. ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ.

ಲೆಫ್ಟ್‌ ಹ್ಯಾಂಡೆಡ್‌ ಗರ್ಲ್‌ (Left-Handed Girl)

98ನೇ ಅಕಾಡೆಮಿ ಪ್ರಶಸ್ತಿಗಳಿಗೆ ತೈವಾನ್‌ನ ಅಧಿಕೃತ ಪ್ರವೇಶವಾದ 'ಲೆಫ್ಟ್-ಹ್ಯಾಂಡೆಡ್ ಗರ್ಲ್' ಒಂದು ಭಾವನಾತ್ಮಕ ಕೌಟುಂಬಿಕ ನಾಟಕವಾಗಿದ್ದು, ಇದು ಈಗಾಗಲೇ ಅಂತರರಾಷ್ಟ್ರೀಯ ಮೆಚ್ಚುಗೆಯನ್ನು ಗಳಿಸಿದೆ.

ಇದು ಇಬ್ಬರು ಹೆಣ್ಣುಮಕ್ಕಳೊಂದಿಗೆ ಒಂಟಿ ತಾಯಿಯೊಬ್ಬಳು ತೆರಳಿ ಗ್ರಾಮಾಂತರದಲ್ಲಿ ವರ್ಷಗಳ ಕಾಲ ಕಳೆದ ನಂತರ ನೂಡಲ್ಸ್ ಅಂಗಡಿಯನ್ನು ತೆರೆಯುವ ಕಥೆ. ನಗರ ಜೀವನಕ್ಕೆ ಹೊಂದಿಕೊಳ್ಳುವಾಗ ಅವರು ಎದುರಿಸುವ ಹೋರಾಟ ಕುರಿತು ಇದೆ. ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ.

ರಕ್ತಬೀಜ 2 (Raktabeej 2)

ಬಂಗಾಳಿ ರಾಜಕೀಯ ಥ್ರಿಲ್ಲರ್ ರಕ್ತಬೀಜ್ ಮುಂದುವರಿದ ಭಾಗವು ಭ್ರಷ್ಟಾಚಾರ ಮತ್ತು ಅಧಿಕಾರ ಹೋರಾಟಗಳ ಕುರಿತು ಇದೆ. ಹಿರಿಯ ಗುಪ್ತಚರ ಅಧಿಕಾರಿಯೊಬ್ಬರು ಭಯೋತ್ಪಾದಕನ ಗಡಿಯಾಚೆಗಿನ ಪಿತೂರಿಯನ್ನು ಬಯಲು ಮಾಡುವ ಕಥೆ. ZEE5ನಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ.

ದಿ ಪೆಟ್ ಡಿಟೆಕ್ಟಿವ್

ಶರಾಫುದ್ದೀನ್ ಮತ್ತು ಅನುಪಮಾ ಪರಮೇಶ್ವರನ್ (Anupama Parameshwaran) ಅವರ ಇತ್ತೀಚಿನ ಮಲಯಾಳಂ ಚಿತ್ರ 'ದಿ ಪೆಟ್ ಡಿಟೆಕ್ಟಿವ್' Zee5 ನವೆಂಬರ್ 28 ರಿಂದ ಚಿತ್ರವನ್ನು ಪ್ರಸಾರ ಕಾಣುತ್ತಿದೆ. ನಿರ್ದೇಶಕ ಪ್ರಾಣೀಶ್ ವಿಜಯನ್ ಈ ಕಥೆಯನ್ನು ಅತ್ಯಂತ ಹಾಸ್ಯಮಯವಾಗಿ ಚಿತ್ರಿಸಿದ್ದಾರೆ.



ಇದರಲ್ಲಿರೋ ಸನ್ನಿವೇಶಗಳು ವರ್ಣರಂಜಿತ ಪಾತ್ರಗಳಿಂದ ತುಂಬಿದೆ ಎಂದು ನೋಡುಗರು ಸೋಷಿಯಲ್‌ ಮೀಡಿಯಾ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ.ಈ ಚಿತ್ರದಲ್ಲಿ ಶರಾಫುದ್ದೀನ್, ಅನುಪಮಾ ಪರಮೇಶ್ವರನ್, ವಿನಾಯಕನ್, ವಿನಯ್ ಫೋರ್ಟ್, ಶ್ಯಾಮ್ ಮೋಹನ್ ಮತ್ತು ಜೋಮನ್ ಜ್ಯೋತಿರ್ ನಟಿಸಿದ್ದಾರೆ.

ಇದನ್ನೂ ಓದಿ: Bigg Boss Kannada 12: ಗಿಲ್ಲಿ ಜೊತೆಗಿನ ಫ್ರೆಂಡ್‌ಶಿಪ್‌ಗೆ ಫುಲ್‌ಸ್ಟಾಪ್‌ ಇಡ್ತಾರಾ ಕಾವ್ಯ? ಪರ್ಫಾಮೆನ್ಸ್ ಮುಖ್ಯ ಅಂದಿದ್ದೇಕೆ ಕಾವು?

ಶರಾಫುದ್ದೀನ್ ಈ ಚಿತ್ರದ ಮೂಲಕ ನಿರ್ಮಾಪಕರಾಗಿಯೂ ಪದಾರ್ಪಣೆ ಮಾಡಿದ್ದಾರೆ. ಈ ಚಿತ್ರವು ಭಾರತದಲ್ಲಿ CBFC ಯಿಂದ U ಪ್ರಮಾಣಪತ್ರವನ್ನು ಮತ್ತು UK ಯಲ್ಲಿ BBFC ಯಿಂದ 12A ರೇಟಿಂಗ್ ಅನ್ನು ಪಡೆದುಕೊಂಡಿದೆ.

Yashaswi Devadiga

View all posts by this author