‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada 12) ಟ್ರೋಫಿ ಹಿಡಿದುಕೊಂಡು ಗಿಲ್ಲಿ ನಟ ಅವರು ಮಳವಳ್ಳಿಗೆ ಬಂದಿದ್ದಾರೆ. ಅವರನ್ನು ನೋಡಲು ಮಳವಳ್ಳಿ (Malavalli) ಜನರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಪೊಲೀಸರ ಬಿಗಿ ಭದ್ರತೆಯಲ್ಲಿ ಗಿಲ್ಲಿಯ ಮೆರವಣಿಗೆ ಸಾಗಿದೆ. ಗಿಲ್ಲಿ ಅವರನ್ನು ಹತ್ತಿರದಿಂದ ನೋಡಿ ಮಾತನಾಡಿಸಬೇಕು ಎಂಬುದು ಅಭಿಮಾನಿಗಳ ಆಸೆ. ಗಿಲ್ಲಿ (Gilli Nata) ಜೊತೆ ಫೋಟೋ ತೆಗೆದುಕೊಳ್ಳುವ ಉತ್ಸಾಹದಲ್ಲಿ ಜನರು ಮುಗಿಬಿದ್ದಿದ್ದಾರೆ. ಇದೀಗ ಅಮೆರಿಕಾ (America) ದೇಶದ ನ್ಯೂಯಾರ್ಕ್ ರಾಜಧಾನಿ ಅಲ್ಪನಿಯಲ್ಲಿ ಕನ್ನಡಿಗರ ಬಿಗ್ ಬಾಸ್ ಸೀಸನ್ 12 ನ್ನು ದಾಖಲೆ ಓಟುಗಳಿಂದ ಗೆದ್ದ ಹಳ್ಳಿ ಹುಡುಗ ಗಿಲ್ಲಿಯ ವಿಜಯೋತ್ಸವವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಸಖತ್ ವೈರಲ್ ಆಗ್ತಿದೆ ಫೋಟೋ.
ಗಿಲ್ಲಿ ಕ್ರೇಜ್
"ಸಕಲಕಲಾವಲ್ಲಭ ಹಳ್ಳಿ ಹುಡುಗ ಗಿಲ್ಲಿಗೆ ಭಾರತದಲ್ಲಿ ಮಾತ್ರವಲ್ಲ ಅಮೆರಿಕಾದಲ್ಲಿಯೂ ಸಹ ಬಹಳಷ್ಟು ಅಭಿಮಾನಿಗಳ ವರ್ಗವಿದೆ, ಫ್ಯಾನ್ ಬೇಸ್ ಇದೆ. ಬಿಗ್ ಬಾಸ್ ಸೀಸನ್ ಕ್ರೇಜು ಅಮೆರಿಕಾದಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ತುಂಬಾ ಜಾಸ್ತಿ ಇತ್ತು. ಇದಕ್ಕೆ ಮುಖ್ಯ ಕಾರಣ ಗಿಲ್ಲಿ.
ಇಷ್ಟು ವರ್ಷ ಬಿಗ್ ಬಾಸ್ ನಿಂದ ಸ್ಪರ್ದಾಳುಗಳು ಫೇಮಸ್ ಆಗುತ್ತಿದ್ದರೆ ಈ ವರ್ಷ ಅದು ಉಲ್ಟಾ ಆಗಿದೆ. ಗಿಲ್ಲಿಯಿಂದಾಗಿ ಅಮೆರಿಕಾದಲ್ಲಿ ಬಿಗ್ ಬಾಸ್ ತುಂಬಾ ಜನಪ್ರಿಯವಾಗಿದೆ" ಎಂದು ಕನ್ನಡಿಗರ ಮುಖಂಡ ಬೆಂಕಿ ಬಸಣ್ಣ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮನು, "ನಮ್ಮ ಚಿಕ್ಕ ಮಕ್ಕಳಾದ ದಿಯಾ ಮತ್ತು ವಿಹಾನ್ ರಿಗೆ ಗಿಲ್ಲಿ ಕಂಡರೆ ಬಹಳ ಇಷ್ಟ. ಅವನ ಡೈಲಾಗ್ ಗಳನ್ನು ಹೇಳುತ್ತಾರೆ. ಅವನ ಡಾನ್ಸ್ ಗಳನ್ನು ಮಾಡುತ್ತಾರೆ" ಎಂದು ಸಂತೋಷದಿಂದ ಹೇಳಿದರು.

ಅಭಿಷೇಕ್ ಅವರು ಮಾತನಾಡಿ, "ಎರಡನೇ ಸ್ಥಾನವನ್ನು ಮುಗ್ಧ ಮನಸ್ಸಿನ, ಒಳ್ಳೆ ಹೃದಯದ, ಸಾಮಾನ್ಯ ಕುಟುಂಬದ ಹುಡುಗಿ ರಕ್ಷಿತಾ ಗೆದ್ದದ್ದು ತುಂಬಾ ಖುಷಿಯಾಗಿದೆ. ಗಿಲ್ಲಿ ಮತ್ತು ರಕ್ಷಿತಾ ಇಬ್ಬರೂ ಹಳ್ಳಿ ಮೂಲದಿಂದ ಬಂದು ತಮ್ಮ ಸ್ವಪ್ರತಿಭೆಯಿಂದ ಇಷ್ಟು ದೊಡ್ಡ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇದಕ್ಕೆ ನಮ್ಮ ಕನ್ನಡ ಜನತೆಯ ಬೆಂಬಲವೇ ಕಾರಣ" ಎಂದು ಹೇಳಿದರು.
ಆಲ್ಬನಿ ಕನ್ನಡ ಸಂಘದಲ್ಲಿ ಇಂದು ಕರಿಯೋಕೆ ನೈಟ್ ಆಯೋಜಿಸಿ ಎಲ್ಲಾ ಸದಸ್ಯರು ಹಾಡಿ ಕುಣಿದು ಕುಪ್ಪಳಿಸಿ ಆನಂದ ಪಟ್ಟರು. ಜೊತೆಗೆ ಪಾಟ್ ಲಕ್ ಮೃಷ್ಟಾನ್ನ ಭೋಜನವನ್ನು ಆಯೋಜಿಸಲಾಗಿತ್ತು.