ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Year Ender 2025: ಈ ವರ್ಷ ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಸಿನಿಮಾಗಳು ಇವು; ʼಕಾಂತಾರʼ ಚಿತ್ರಕ್ಕೆ ಎಷ್ಟನೇ ಸ್ಥಾನ?

Google Search: ನಾವು ಅಧಿಕೃತವಾಗಿ 2025ರ ಕೊನೆಯ ತಿಂಗಳಿಗೆ ಕಾಲಿಟ್ಟಿದ್ದೇವೆ ಮತ್ತು ಗೂಗಲ್ ಇಂಡಿಯಾ ಈ ವರ್ಷದ ಅತಿ ಹೆಚ್ಚು ಹುಡುಕಿದ ಟಾಪ್ 10 ಭಾರತೀಯ ಸಿನಿಮಾಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆನ್‌ಲೈನ್ ಬಝ್‌ನಲ್ಲಿ ಪ್ರಾಬಲ್ಯ ಸಾಧಿಸಿದ ಮತ್ತು ವರ್ಷವಿಡೀ ಗೂಗಲ್‌ನ ಹುಡುಕಾಟ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಟಾಪ್ 10 ಭಾರತೀಯ ಚಲನಚಿತ್ರಗಳು ಇಲ್ಲಿವೆ.

ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಸಿನಿಮಾಗಳು

ನಾವು ಅಧಿಕೃತವಾಗಿ 2025ರ (Year Ender 2025) ಕೊನೆಯ ತಿಂಗಳಿಗೆ ಕಾಲಿಟ್ಟಿದ್ದೇವೆ ಮತ್ತು ಗೂಗಲ್ ಇಂಡಿಯಾ ಈ ವರ್ಷದ ಅತಿ ಹೆಚ್ಚು ಹುಡುಕಿದ ಟಾಪ್ 10 ಭಾರತೀಯ ಸಿನಿಮಾಗಳ (Indian Movie) ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ಯಾನ್-ಇಂಡಿಯಾ ಸಂಭಾಷಣೆಯಲ್ಲಿ ಪ್ರಾಬಲ್ಯ ಹೊಂದಿರುವ ಪ್ರಾದೇಶಿಕ ಸಿನಿಮಾದಿಂದ ಹಿಡಿದು ಬಾಕ್ಸ್ ಆಫೀಸ್‌ನಲ್ಲಿ ಶೇಕ್‌ ಮಾಡಿದ ಸಿನಿಮಾಗಳು ಇಲ್ಲಿವೆ. 2025 ನಿಜವಾಗಿಯೂ ಭಾರತೀಯ ಚಲನಚಿತ್ರೋದ್ಯಮಕ್ಕೆ ವಿಜಯಗಳ ವರ್ಷವಾಗಿದೆ. ಆನ್‌ಲೈನ್ ಬಝ್‌ನಲ್ಲಿ ಪ್ರಾಬಲ್ಯ ಸಾಧಿಸಿದ ಮತ್ತು ವರ್ಷವಿಡೀ ಗೂಗಲ್‌ನ (Google Search) ಹುಡುಕಾಟ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಟಾಪ್ 10 ಭಾರತೀಯ ಚಲನಚಿತ್ರಗಳು ಇಲ್ಲಿವೆ. ಗೂಗಲ್ ಇಂಡಿಯಾದ 2025 ರ ಅತಿ ಹೆಚ್ಚು ಹುಡುಕಿದ ಟಾಪ್ 10 ಭಾರತೀಯ ಚಲನಚಿತ್ರಗಳು ಇವು.

ಈ ಪಟ್ಟಿಯಲ್ಲಿ 2025 ರ ಕೆಲವು ದೊಡ್ಡ ಬಿಡುಗಡೆಗಳು ಸೇರಿವೆ - ರಿಷಬ್ ಶೆಟ್ಟಿ ಅವರ ಕಾಂತಾರ ಅಧ್ಯಾಯ 1 (ಕಾಂತಾರ 2) ನಿಂದ ರಜನಿಕಾಂತ್ ಅವರ ಕೂಲಿ ಮತ್ತು ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್‌ಟಿಆರ್ ನಟಿಸಿದ ಹೈ-ಆಕ್ಟೇನ್ ಆಕ್ಷನ್ ಚಿತ್ರ ವಾರ್ 2 ಇವೆ.

ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಕಾಂತಾರ’, ‘ಕೆಜಿಎಫ್’ಗಾಯಕಿ ಅನನ್ಯ ಭಟ್

ಆದರೆ ಅತಿ ದೊಡ್ಡ ಅಚ್ಚರಿಯೆಂದರೆ, ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ಅವರ ಸೈಯಾರಾ ಚಿತ್ರವು ನಂಬರ್ 1 ಸ್ಥಾನವನ್ನು ಪಡೆದುಕೊಂಡಿದ್ದು, ಬೃಹತ್ ಪ್ಯಾನ್-ಇಂಡಿಯಾ ಪ್ರದರ್ಶನಗಳನ್ನು ಹಿಂದಿಕ್ಕಿ ಮತ್ತು ಉದ್ಯಮದ ಕೆಲವು ದೊಡ್ಡ ಹೆಸರುಗಳನ್ನು ಹಿಂದಿಕ್ಕಿ ವರ್ಷದ ಅತಿ ಹೆಚ್ಚು ಹುಡುಕಲ್ಪಟ್ಟ ಭಾರತೀಯ ಚಿತ್ರವಾಗಿ ಹೊರಹೊಮ್ಮಿದೆ.

ʼಸೈಯಾರʼ

ಈ ವರ್ಷ ಹೊಸ ಪ್ರತಿಭೆಗಳು ಬಾಲಿವುಡ್‌ನ ಸೂಪರ್‌ಸ್ಟಾರ್‌ಗಳನ್ನೂ ಮೀರಿಸಿದ್ದಾರೆ. ಮೋಹಿತ್ ಸೂರಿ ನಿರ್ದೇಶಿಸಿದ 'ಸೈಯ್ಯಾರಾ' ಎಲ್ಲರ ಪ್ರಿಡಿಕ್ಷನ್‌ ಅನ್ನು ತಲೆ ಕೆಳಗೆ ಮಾಡಿತ್ತು. ಅಹಾನ್ ಪಾಂಡೆ ಹಾಗೂ ಅನೀತ್ ಪಡ್ಡ ಇಬ್ಬರ ನಟರು ಬಾಲಿವುಡ್‌ನಲ್ಲಿ ಹೊಸ ಪ್ರತಿಭೆಗಳಾಗಿ ಮಿಂಚಿದ್ದಾರೆ.

ʻಕಾಂತಾರ ಚಾಪ್ಟರ್‌ 1ʼ

ರಿಷಬ್‌ ಶೆಟ್ಟಿ ಅಭಿನಯದ ʻಕಾಂತಾರ ಚಾಪ್ಟರ್‌ 1ʼ ಸಿನಿಮಾವು ತೆರೆಕಂಡು ಬಾಕ್ಸ್‌ ಆಫೀಸ್‌ನಲ್ಲಿ ಎಂಥ ದಾಖಲೆ ಬರೆದಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಚಿತ್ರಕ್ಕಾಗಿ ರಿಷಬ್‌ ಶೆಟ್ಟಿ ಮತ್ತು ಅವರ ತಂಡ ಸುಮಾರು 3 ವರ್ಷಗಳ ಕಾಲ ಕಷ್ಟಪಟ್ಟಿದೆ. 2025ರಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾ ಎಂಬ ಖ್ಯಾತಿ ಕಾಂತಾರ: ಚಾಪ್ಟರ್‌ 1 ಸಿನಿಮಾಕ್ಕಿದೆ.

‘ಕೂಲಿ’

2025ರ ಸೂಪರ್ ಹಿಟ್ ಸಿನಿಮಾಗಳ ಸಾಲಿನಲ್ಲಿ ‘ಕೂಲಿ’ ಚಿತ್ರ ಕೂಡ ಇದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆದ ಈ ಸಿನಿಮಾಗೆ ಲೋಕೇಶ್ ಕನಗರಾಜ್ ಅವರು ನಿರ್ದೇಶನ ಮಾಡಿದ್ದಾರೆ. ಸೂಪರ್‌ ಸ್ಟಾರ್ ರಜನಿಕಾಂತ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಚಿತ್ರಮಂದಿರದಲ್ಲಿ ಈ ಸಿನಿಮಾ ಅಬ್ಬರಿಸಿತ್ತು. ಬಾಕ್ಸ್ ಆಫೀಸ್​​ನಲ್ಲಿ ಉತ್ತಮ ಕಮಾಯಿ ಮಾಡಿತು.

ʼವಾರ್‌ 2ʼ

ಜೂನಿಯರ್ ಎನ್​ಟಿಆರ್ ನಟಿಸಿದ ಮೊದಲ ಬಾಲಿವುಡ್ ಸಿನಿಮಾ ಎಂಬ ಕಾರಣಕ್ಕೆ ‘ವಾರ್ 2’ (War 2) ಬಗ್ಗೆ ಸಾಕಷ್ಟು ಹೈಪ್ ಸೃಷ್ಟಿ ಆಗಿತ್ತು. ಈ ಸಿನಿಮಾದಲ್ಲಿ ಅವರು ಹೃತಿಕ್ ರೋಷನ್ ಜೊತೆ ತೆರೆ ಹಂಚಿಕೊಂಡಿದ್ದರಿಂದ ನಿರೀಕ್ಷೆ ಡಬಲ್ ಆಗಿತ್ತು. 400 ಕೋಟಿ ರೂಪಾಯಿಗೂ ಹೆಚ್ಚು ಹಣ ಹೂಡಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಗೂಗಲ್‌ನಲ್ಲಿ ಅತೀ ಹುಡುಕಲ್ಪಟ್ಟ ಸಿನಿಮಾಗಳ ಪೈಕಿ 4ನೇ ಸ್ಥಾನದಲ್ಲಿದೆ.

ʼಸನಮ್ ತೇರಿ ಕಸಮ್ʼ

2016 ರಲ್ಲಿ ಬಿಡುಗಡೆಯಾದ ರೊಮ್ಯಾಂಟಿಕ್‌ ಸಿನಿಮಾ ʼಸನಮ್ ತೇರಿ ಕಸಮ್ʼ, ಫೆಬ್ರವರಿ 7ರಂದು ಮತ್ತೆ ದೊಡ್ಡ ಪರದೆಯ ಮೇಲೆ ಮರು-ಬಿಡುಗಡೆಯಾಗಿದೆ. 2016 ರಲ್ಲಿ ಈ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ಪ್ಲಾಪ್‌ ಆಗಿತ್ತು. ಆದರೆ ಈಗ ಮರುಬಿಡುಗಡೆಯಾದ ಭಾರೀ ಸದ್ದು ಮಾಡುತ್ತಿದೆ. ಇಷ್ಟೇ ಅಲ್ಲ, ಈ ಚಿತ್ರ ತನ್ನದೇ ಆದ ದಾಖಲೆಗಳನ್ನು ಮುರಿದಿದೆ.

ʼಮಾರ್ಕೊʼ

ಉಣ್ಣಿ ಮುಕುಂದನ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ಮಲಯಾಳಂ ಸಿನಿಮಾ 'ಮಾರ್ಕೋ' 6ನೇ ಸ್ಥಾನದಲ್ಲಿದೆ. ಕೇವಲ 25 ಕೋಟಿ ರುಪಾಯಿ ಬಜೆಟ್‌ನಲ್ಲಿ ನಿರ್ಮಾಣ ಆಗಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ವಿಶ್ವದಾದ್ಯಂತ 100 ಕೋಟಿ ರುಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು.

ʼಹೌಸ್‌ಫುಲ್ 5ʼ

ಅಕ್ಷಯ್ ಕುಮಾರ್, ಚುಂಕಿ ಪಾಂಡೇ, ಜಾನಿ ಲಿವರ್ ಅಂತ ಖ್ಯಾತ ನಟರು ಈ ಸಿನಿಮಾದಲ್ಲಿ ನಟಿಸಿದ್ದರು. ಆದರೆ, ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿತ್ತು.

ʼಗೇಮ್ ಚೇಂಜರ್ʼ

ನಟ ರಾಮ್ ಚರಣ್ ಮತ್ತು ತಮಿಳು ನಿರ್ದೇಶಕ ಶಂಕರ್ ಕಾಂಬಿನೇಷನ್‌ನಲ್ಲಿ ಸಿನಿಮಾವೊಂದು ಘೋಷಣೆಯಾದಾಗ ಅತೀ ಹೆಚ್ಚು ಸಂತಸಪಟ್ಟವರು ರಾಮ್ ಚರಣ್ ತಂದೆ, 'ಮೆಗಾ ಸ್ಟಾರ್' ಚಿರಂಜೀವಿ. ಯಾಕೆಂದರೆ, 90ರ ದಶಕದ ಪ್ರತಿಯೊಬ್ಬ ಹೀರೋಗೂ ಶಂಕರ್ ಜೊತೆ ಒಂದು ಸಿನಿಮಾ ಮಾಡಬೇಕು ಎಂಬ ಹಂಬಲ ಇತ್ತು.ಗೂಗಲ್‌ನಲ್ಲಿ ಅತೀ ಸರ್ಚ್ ಆದ ಸಿನಿಮಾಗಳಲ್ಲಿ ಸರ್ಪ್ರೈಸ್ ಎಂಟ್ರಿ ಅಂದರೆ, ಅದು ಶಂಕರ್ ನಿರ್ದೇಶಿಸಿದ ಸಿನಿಮಾ 'ಗೇಮ್ ಚೇಂಜರ್'. ರಾಮ್ ಚರಣ್ ಪ್ರಮುಖ ಪಾತ್ರದಲ್ಲಿ ನಟಿಸಿದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿತ್ತು.

ʼMrsʼ

ಈ ವರ್ಷ ಗೂಗಲ್‌ನಲ್ಲಿ ಅತೀ ಬಾರಿ ಹುಡುಕಲ್ಪಟ್ಟ ಸಿನಿಮಾಗಳಲ್ಲಿ 9ನೇ ಸ್ಥಾನದಲ್ಲಿ ಇರೋದು 'Mrs'. ಇದು 2021ರಲ್ಲಿ ತೆರೆಕಂಡಿದ್ದ 'ದಿ ಗ್ರೇಟ್ ಇಂಡಿಯನ್ ಕಿಚನ್' ಸಿನಿಮಾದ ಬಾಲಿವುಡ್ ರಿಮೇಕ್.

"ಪಾಕ್‌ ಜೊತೆ ಈಕೆಗೆ ನಂಟು ಸಿನಿಮಾದಿಂದ ಕಿತ್ತೊಗೆಯಿರಿ" ; ಪ್ರಭಾಸ್‌ ಹೊಸ ಸಿನಿಮಾ ನಾಯಕಿ ಮೇಲೆ ಏನಿದು ಆರೋಪ?

ʼಮಹಾವತಾರ್‌ ನರಸಿಂಹʼ

ಮಹಾವತಾರ್‌ ನರಸಿಂಹ ಈ ವರ್ಷ ಹೊಂಬಾಳೆ ಫಿಲ್ಮ್ಸ್ ಜಾಕ್‌ಪಾಟ್ ಅಂತಲೇ ಹೇಳಬೇಕು. ಈ ನಿರ್ಮಾಣ ಸಂಸ್ಥೆಯಲ್ಲಿ ನಿರ್ಮಿಸಲ್ಪಟ್ಟ ಎರಡು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿವೆ. ಅದರಲ್ಲೊಂದು ಆನಿಮೆಟೆಡ್ ಸಿನಿಮಾ 'ಮಹಾವೀರ್ ನರಸಿಂಹ'

Yashaswi Devadiga

View all posts by this author