ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ananya Bhat: ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಕಾಂತಾರ’, ‘ಕೆಜಿಎಫ್’ಗಾಯಕಿ ಅನನ್ಯ ಭಟ್

ಅನನ್ಯ ಭಟ್ (Ananya Bhat) ಕನ್ನಡದ ಜೊತೆಗೆ ತಮಿಳು, ತೆಲುಗು ಚಿತ್ರರಂಗದಲ್ಲೂ ಗಾಯನದ ಮೂಲಕ ಗುರುತಿಸಿಕೊಂಡವರು. ಟಗರು ಸಿನಿಮಾದ ‘ಮೆ ಮೆಂಟಲ್ ಹೋಜಾವಾ’, ಪುಷ್ಪಾ ಸಿನಿಮಾದ ‘ಸಾಮಿ ಸಾಮಿ’ (Saami Saami) ಹಾಡು ಕೂಡ ಅನನ್ಯ ಹಾಡಿದ್ದರು. ಸರಳವಾಗಿ ಈ ಜೋಡಿ ತಮ್ಮ ಆಪ್ತರ ಸಮ್ಮುಖದಲ್ಲಷ್ಟೇ ಮದುವೆಯಾಗಿದೆ. ಕನ್ನಡ ಸೇರಿದಂತೆ (Kannada Songs) ಬಹುಭಾಷೆಯಲ್ಲಿ ಗಾಯಕಿಯಾಗಿ ಗುರುತಿಸಿಕೊಂಡಿರುವ ಅನನ್ಯ ಅವರಿಗೆ ರಂಗಭೂಮಿ ಹಿನ್ನಲೆ ಕೂಡ ಇದೆ.

ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಕಾಂತಾರ’, ‘ಕೆಜಿಎಫ್’ಗಾಯಕಿ ಅನನ್ಯ ಭಟ್

-

Yashaswi Devadiga
Yashaswi Devadiga Nov 10, 2025 7:43 PM

ʻಸೋಜುಗಾದ ಸೂಜಿ ಮಲ್ಲಿಗೆʼ (Sojugada Sooji Mallige) ಹಾಡಿನಿಂದ ಜನಪ್ರಿಯರಾದ ಅನನ್ಯ ಭಟ್‌ (Ananya Bhat Marriage) ಹಸೆಮಣೆ ಏರಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಮ್ಯೂಜಿಷಿಯನ್ ಮತ್ತು ಡ್ರಮ್ಮರ್ ಮಂಜು (Manju) ಅವರೊಂದಿಗೆ ತಿರುಪತಿಯಲ್ಲಿ ಸಪ್ತಪದಿ ತುಳಿದಿದ್ದಾರೆ. ಇದೀಗ ಗಾಯಕಿಯ ಫ್ಯಾನ್ಸ್‌ ಸೋಷಿಯಲ್‌ (Social Media) ಮೀಡಿಯಾ ಮೂಲಕ ವಿಶಸ್‌ ತಿಳಿಸುತ್ತಿದ್ದಾರೆ.

ಅನನ್ಯ ಭಟ್ ಕನ್ನಡದ ಜೊತೆಗೆ ತಮಿಳು, ತೆಲುಗು ಚಿತ್ರರಂಗದಲ್ಲೂ ಗಾಯನದ ಮೂಲಕ ಗುರುತಿಸಿಕೊಂಡವರು. ಕಂಚಿನ ಕಂಠ ಎಂದೇ ಅವರಿಗೆ ಫ್ಯಾನ್ಸ್‌ ಬಿರುದು ನೀಡಿದ್ದರು. ತಿರುಪತಿಯಲ್ಲಿ ನವೆಂಬರ್ 9ರಂದು ಸರಳವಾದ ವಿವಾಹ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಫೋಟೋಗಳು ವೈರಲ್‌ ಆಗುತ್ತಿವೆ.

ಇದನ್ನೂ ಓದಿ: Bigg Boss Kannada 12: ನಿಮ್ಮ ಜೊತೆ ಮಾತಾಡೋಕೆ ಹೆಣ್ಮಕ್ಕಳಿಗೆ ಇಷ್ಟ ಇಲ್ಲ! ಧ್ರುವಂತ್‌ಗೆ ಚಳಿ ಬಿಡಿಸಿದ್ರು ರಾಶಿಕಾ, ಕಾವ್ಯ

ಪ್ರೇಮ ವಿವಾಹ?

ಈ ಜೋಡಿ ಹಲವಾರು ಬಾರಿ ಒಟ್ಟಿಗೆ ಕಾಣಿಸಿಕೊಂಡಿತ್ತು. ಹೀಗಾಗಿ ನೆಟ್ಟಿಗರು ಪ್ರೇಮ ವಿವಾಹ ಎನ್ನುತ್ತಿದ್ದಾರೆ. ಸರಳವಾಗಿ ಈ ಜೋಡಿ ತಮ್ಮ ಆಪ್ತರ ಸಮ್ಮುಖದಲ್ಲಷ್ಟೇ ಮದುವೆಯಾಗಿದೆ. ಕನ್ನಡ ಸೇರಿದಂತೆ ಬಹುಭಾಷೆಯಲ್ಲಿ ಗಾಯಕಿಯಾಗಿ ಗುರುತಿಸಿಕೊಂಡಿರುವ, ರಂಗಭೂಮಿ ಹಿನ್ನಲೆಯಿರುವ ಅನನ್ಯಾ ಭಟ್, ಮೊದಲ ಬಾರಿ ಮಹಿಳಾ ಪ್ರಧಾನ ಕಥೆ ಇರುವ ಸಿನಿಮಾದಲ್ಲಿ ಮುಖ್ಯ ಪಾತ್ರವನ್ನು ನಿಭಾಯಿಸಿದ್ದರು.

ಈ ಮೊದಲು ಅನನ್ಯಾ 'ಊರ್ವಿ' ಮತ್ತು 'ಭೂತಕಾಲ' ಎಂಬ ಚಿತ್ರಗಳಲ್ಲಿ ನಟಿಸಿದ್ದರು.ಕೆಜಿಎಫ್, ಕಾಂತಾರ ಸಿನಿಮಾದ ಹಾಡುಗಳಿಗೆ ಧ್ವನಿಯಾಗಿದ್ದರು.

ಯಾವೆಲ್ಲ ಹಾಡುಗಳಿಗೆ ದನಿ?

ಟಗರು ಸಿನಿಮಾದ ‘ಮೆ ಮೆಂಟಲ್ ಹೋಜಾವಾ’, ಪುಷ್ಪಾ ಸಿನಿಮಾದ ‘ಸಾಮಿ ಸಾಮಿ’ ಹಾಡು ಕೂಡ ಅನನ್ಯ ಹಾಡಿದ್ದರು.

ಇದನ್ನೂ ಓದಿ: Bigg Boss Kannada 12: ರಕ್ಷಿತಾ ಮಾತಿನ ಸ್ಟೈಲ್​ನಲ್ಲೇ ಅಣುಕಿಸಿ ವಿಷಕಾರಿದ ಧ್ರುವಂತ್‌! ಗಿಲ್ಲಿ ಬಗ್ಗೆ ಹೇಳಿದ್ದೇನು?

ಕೆಜಿಎಫ್ 1 ಮ್ತೂ 2ರ ಗರ್ಭದಿ, ರಾಜು ಅನಂತಸ್ವಾಮಿ ಗರಡಿಯಲ್ಲಿ ಪಳಗಿದ ಅನನ್ಯ ಭಟ್, ಎ.ಪಿ.ಜೆ.ಅಬ್ದುಲ್ ಕಲಾಂ ಪಕ್ಕದಲ್ಲಿ ನಿಂತು ಹಾಡಿದ ಅನುಭವವನ್ನೂ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು. ಧೀರ ಧೀರ, ಕೋಟಿ ಕನಸುಗಳ, ಮೆಹಬೂಬ ಹಾಡು ಹಾಡಿದ್ದರು. ಗಾಯನದ ಜೊತೆಗೆ ಅನನ್ಯ ಭಟ್ ಫ್ಯಾಶನ್ ಡಿಸೈನರ್ ಹಾಗೂ ಆಯುರ್ವೇದಿಕ್ ಡಾಕ್ಟರ್ ಕೂಡ ಹೌದು ಎನ್ನಲಾಗಿದೆ.