ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Harshika Poonacha: 2ನೇ ಮಗುವಿನ ಆಗಮನ ಬಗ್ಗೆ ಸಿಹಿಸುದ್ದಿ ಕೊಟ್ರು ಹರ್ಷಿಕಾ ಪೂಣಚ್ಚ ದಂಪತಿ

Harshika Poonacha: ಸ್ಯಾಂಡಲ್​ವುಡ್ ಸ್ಟಾರ್​ ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣ ಸಖತ್​ ಖುಷಿಯಲ್ಲಿದ್ದಾರೆ. ಇದೀಗ ಈ ದಂಪತಿ ಜೀವನದಲ್ಲಿ ಎರಡನೇ ಮಗುವಿನ ಆಗಮನವಾಗುತ್ತಿದೆ. ಪ್ಯಾರಿಸ್‌ನಲ್ಲಿ ಕುಟುಂಬದೊಂದಿಗೆ ನಟಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಮತ್ತು ಚಿತ್ರೋದ್ಯಮದ ಸಹೋದ್ಯೋಗಿಗಳು ದಂಪತಿಗೆ ಪ್ರೀತಿ ಮತ್ತು ಅಭಿನಂದನೆಗಳನ್ನು ಸುರಿಸುತ್ತಿದ್ದಾರೆ.

ಹರ್ಷಿಕಾ ಪೂಣಚ್ಚ ದಂಪತಿ

ಸ್ಯಾಂಡಲ್​ವುಡ್ (Sandalwood)​ ಸ್ಟಾರ್​ ನಟಿ ಹರ್ಷಿಕಾ ಪೂಣಚ್ಚ (Harshika Poonacha) ಹಾಗೂ ನಟ ಭುವನ್ ಪೊನ್ನಣ್ಣ (bhuvan ponnanna) ಸಖತ್​ ಖುಷಿಯಲ್ಲಿದ್ದಾರೆ. ಇದೀಗ ಈ ದಂಪತಿ ಜೀವನದಲ್ಲಿ ಎರಡನೇ ಮಗುವಿನ ಆಗಮನವಾಗುತ್ತಿದೆ. ಪ್ಯಾರಿಸ್‌ನಲ್ಲಿ ಕುಟುಂಬದೊಂದಿಗೆ ನಟಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಮತ್ತು ಚಿತ್ರೋದ್ಯಮದ ಸಹೋದ್ಯೋಗಿಗಳು ದಂಪತಿಗೆ ಪ್ರೀತಿ ಮತ್ತು ಅಭಿನಂದನೆಗಳನ್ನು (wishes) ಸುರಿಸುತ್ತಿದ್ದಾರೆ.

ಭುವನ್ ಪೊನ್ನಣ್ಣ ಪೊಸ್ಟ್‌

ಹರ್ಷಿಕಾ ಪೂಣಚ್ಚ ಎರಡನೇ ಬಾರಿ ತಾಯಿ ಆಗುತ್ತಿದ್ದಾರೆ. ಈ ಬಗ್ಗೆ ಭುವನ್ ಪೊನ್ನಣ್ಣ ಪೊಸ್ಟ್‌ ಹಂಚಿಕೊಂಡಿದ್ದು ಹೀಗೆ, ಇದೊಂದು ಸರ್‌ಪ್ರೈಸ್‌ ಮುಂದುವರಿದ ಭಾಗ ಅಧಿಕೃತವಾಗಿ ನಿರ್ಮಾಣ ಹಂತದಲ್ಲಿದೆ.

ಇದನ್ನೂ ಓದಿ: Ramayana Teaser: ಅಮೆರಿಕದಲ್ಲಿ 'ರಾಮಾಯಣ' ಚಿತ್ರದ ಟೀಸರ್ ಪ್ರದರ್ಶನ; ಯಶ್ ಅನುಪಸ್ಥಿತಿಯಲ್ಲಿ ತಂಡ ಹೇಳಿದ್ದೇನು?

ಈ ಸೆಪ್ಟೆಂಬರ್‌ನಲ್ಲಿ ನಮ್ಮ ತಾರಾಗಣಕ್ಕೆ ಹೊಸ ಪುಟ್ಟ ತಾರೆ ಸೇರುತ್ತಾರೆ. ಈ ಸಿಹಿ ಸುದ್ದಿಯನ್ನು ಘೋಷಿಸಲು ನಾವು ತುಂಬಾ ಸಂತಸಗೊಂಡಿದ್ದೇವೆ. ಧನ್ಯವಾದಗಳು! ಎಂದು ಬರೆದುಕೊಂಡಿದ್ದಾರೆ.

ಇದೀಗ ನಟಿಯ ಕುಟುಂಬ ವಿದೇಶದಲ್ಲಿ ನಿಂತು ಈ ಸಿಹಿ ಸುದ್ದಿ ಹೇಳಿಕೊಂಡಿದೆ. ಸ್ಯಾಂಡಲ್​ವುಡ್​ ಸ್ಟಾರ್​ ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಚೊಚ್ಚಲ ಮಗುವಿಗೆ ಮುದ್ದಾದ ಹೆಸರನ್ನು ಇಟ್ಟಿದ್ದರು ಮುದ್ದಾದ ಮಗಳ ಜೊತೆ 2 ದೇಶ ಸುತ್ತಿ ಖುಷಿ ಪಟ್ಟಿದ್ದರು. ವಿಯೆಟ್ನಾಂ, ಶ್ರೀಲಂಕಾ, ಥೈಲ್ಯಾಂಡ್ ದೇಶಗಳಲ್ಲಿ ಈ ಪುಟಾಣಿ ಜೊತೆ ಭರ್ಜರಿ ಮಜಾ ಮಾಡಿದ್ದರು. ಇದರ ಬೆನ್ನಲ್ಲೇ ಮತ್ತೊಂದು ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.



2023, ಆಗಸ್ಟ್ 24ರಂದು ನಟ ಭುವನ್ ಪೊನ್ನಣ್ಣ ಜೊತೆ ಹರ್ಷಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹರ್ಷಿಕಾ‌ ಮತ್ತು ಭುವನ್ ಪೊನ್ನಣ್ಣ ಅನೇಕ ವರ್ಷಗಳ ಸ್ನೇಹಿತರು.

ಇದನ್ನೂ ಓದಿ: Ramayana Teaser: ಅಮೆರಿಕದಲ್ಲಿ 'ರಾಮಾಯಣ' ಚಿತ್ರದ ಟೀಸರ್ ಪ್ರದರ್ಶನ; ಯಶ್ ಅನುಪಸ್ಥಿತಿಯಲ್ಲಿ ತಂಡ ಹೇಳಿದ್ದೇನು?

ಈ ಸ್ನೇಹ ಪ್ರೀತಿಗೆ ತಿರುಗಿ ಕಳೆದ ವರ್ಷ ಹಸೆಮಣೆ ಏರಿದರು. ವಿರಾಜಪೇಟೆಯ ಅಮ್ಮತ್ತಿಯಲ್ಲಿ ಹರ್ಷಿಕಾ ಮತ್ತು ಭುವನ್ ಕೊಡವ ಶೈಲಿಯಲ್ಲಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇಬ್ಬರ ಮದುವೆಗೆ ಸ್ಯಾಂಡಲ್​ನ ಅನೇಕ ಗಣ್ಯರು ಕೂಡ ಸಾಕ್ಷಿಯಾಗಿದ್ರು.

Yashaswi Devadiga

View all posts by this author