Rashmika Mandanna: ರಶ್ಮಿಕಾ ಮಂದಣ್ಣ ಗೊತ್ತಿಲ್ಲದೇ ಹೇಳಿರಬೇಕು, ಕ್ಷಮಿಸಿಬಿಡೋಣ: ನಟಿ ಹರ್ಷಿಕಾ ಪೂಣಚ್ಚ
Harshika Poonacha: ನನಗೆ ಕನ್ನಡ ಬರಲ್ಲ, ನಾನು ಹೈದರಾಬಾದ್‌ನವಳು ಎಂಬ ಹೇಳಿಕೆಗಳ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ರಶ್ಮಿಕಾ ಮಂದಣ್ಣ ಇದೀಗ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ರಶ್ಮಿಕಾ ಹೇಳಿಕೆ ಬಗ್ಗೆ ನಟಿ ಹರ್ಷಿಕಾ ಪೂಣಚ್ಚ ಪ್ರತಿಕ್ರಿಯಿಸಿ, ಈ ಹೇಳಿಕೆಯನ್ನ ಕ್ಷಮಿಸಿಬಿಡೋಣ. ರಶ್ಮಿಕಾ ಮಂದಣ್ಣ ಬಗ್ಗೆ ನೆಗೆಟಿವ್ ಮಾತಾಡೋದು ಬೇಡ. ನಾನಂತೂ ರಶ್ಮಿಕಾ ಅವರ ಬಗ್ಗೆ ನೆಗೆಟಿವ್ ಮಾತನಾಡಲ್ಲ ಎಂದು ಹೇಳಿದ್ದಾರೆ.


ಬೆಂಗಳೂರು: ʻಕೊಡವ ಸಮುದಾಯದಿಂದ ಇಲ್ಲಿಯವರೆಗೆ ಯಾರೂ ಸಿನಿಮಾ ಇಂಡಸ್ಟ್ರಿಗೆ ಬಂದಿಲ್ಲ, ನಾನೇ ಫಸ್ಟ್ ಅನ್ನಿಸುತ್ತೆʼ ಎಂಬ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಹೇಳಿಕೆಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬಗ್ಗೆ ನಟಿ ಹರ್ಷಿಕಾ ಪೂಣಚ್ಚ (Harshika Poonacha) ಅವರು ಪ್ರತಿಕ್ರಿಯಿಸಿ, ರಶ್ಮಿಕಾ ಮಂದಣ್ಣ ಹೇಳಿಕೆ ವಿವಾದ ಎಂದು ಹೇಳಲ್ಲ. ಅವರು ಗೊತ್ತಿಲ್ಲದೇ ಬೈ ಮಿಸ್ ಆಗಿ ಹೇಳಿರಬೇಕು, ಕ್ಷಮಿಸಿಬಿಡೋಣ ಎಂದು ನಟಿ ಹೇಳಿದ್ದಾರೆ.
ರಶ್ಮಿಕಾ ಮಂದಣ್ಣ ಹೇಳಿಕೆಯನ್ನ ಕ್ಷಮಿಸಿಬಿಡೋಣ. ರಶ್ಮಿಕಾ ಮಂದಣ್ಣ ಬಗ್ಗೆ ನೆಗೆಟಿವ್ ಮಾತಾಡೋದು ಬೇಡ. ನಾನಂತೂ ರಶ್ಮಿಕಾ ಅವರ ಬಗ್ಗೆ ನೆಗೆಟಿವ್ ಮಾತಾಡಲ್ಲ ಎಂದು ತಿಳಿಸಿದ್ದಾರೆ.
ತೆಲುಗು, ತಮಿಳು, ಬಾಲಿವುಡ್‌ಅಲ್ಲಿ ಹೆಸರು ಮಾಡಿರುವ ಮೊದಲ ನಟಿ ಅಂತ ಹೇಳೋಕೆ ರಶ್ಮಿಕಾ ಹೊರಟಿರಬೇಕು. ರಶ್ಮಿಕಾ ಮಂದಣ್ಣ ಬಗ್ಗೆ ನನಗೆ ಗೌರವವಿದೆ. ಅವರು, ಒಳ್ಳೆ ಹೆಸರು ಮಾಡಿದ್ದಾರೆ. ಆದರೆ ಬಾಲಿವುಡ್‌ನಲ್ಲೂ ಅವರೇ ಮೊದಲಲ್ಲ ಎಂದು ಹೇಳಿದ್ದಾರೆ.
ನಮ್ಮ ಕೊಡವ ಸಮುದಾಯ ಸಣ್ಣ ಸಮುದಾಯ. ಆದರೆ ಎಲ್ಲಾ ರಂಗದಲ್ಲೂ ನಮ್ಮ ಸಮುದಾಯದವರಿದ್ದಾರೆ. ಸೈನ್ಯ, ಸಿನಿಮಾ, ರಾಜಕೀಯ ಎಲ್ಲಾ ರಂಗದಲ್ಲೂ ನಮ್ಮ ಸಮುದಾಯದವರಿದ್ದಾರೆ. ಕೊಡವರಲ್ಲಿ ಗಂಡು ಹೆಣ್ಣು ಎನ್ನುವ ಬೇಧವಿಲ್ಲ ಎಂದು ತಿಳಿಸಿದ್ದಾರೆ.
ರಶ್ಮಿಕಾ ಮಂದಣ್ಣ ಹೇಳಿದ್ದೇನು?
ಸಿನಿ ರಂಗಕ್ಕೆ ಕಾಲಿಟ್ಟಾಗಿನಿಂದಲೂ ಹಿಟ್ ಚಿತ್ರಗಳು ನೀಡುತ್ತಿರುವ ರಶ್ಮಿಕಾ ಮಂದಣ್ಣ (Rashmika Mandanna) ಸದಾ ಒಂದಲ್ಲಾ ಒಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಲೇ ಇದ್ದಾರೆ. ಇದೀಗ ನಟಿ ಮತ್ತೊಂದು ಕಾಂಟ್ರವರ್ಸಿ ಹುಟ್ಟು ಹಾಕಿದ್ದು, ಖಾಸಗಿ ಕಾರ್ಯಕ್ರಮದ ಸಂದರ್ಶನದ ವೇಳೆ ಕೊಡಗಿನ ನಟಿಯರಿಗೆ ಅವಮಾನವಾಗುವಂತೆ ಮಾತನಾಡಿದ್ದರು. ಕೂರ್ಗ್ ಕಮ್ಯುನಿಟಿಯಿಂದ ಯಾರೂ ಸಿನಿಮಾಕ್ಕೆ ಬಂದಿರಲಿಲ್ಲ. ನಾನೇ ಮೊದಲು ಎಂದು ನಟಿ ಹೇಳಿದ್ದರು. ಈ ಹೇಳಿಕೆ ಕನ್ನಡಿಗರನ್ನು ಕೆರಳಿಸಿದೆ.
ವಿ ದಿ ವುಮೆನ್ ಎಂಬ ಬರ್ಖಾ ದತ್ ನಡೆಸಿದ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ರಶ್ಮಿಕಾ ಮಂದಣ್ಣ, ಕೂರ್ಗ್ ಕಮ್ಯುನಿಟಿಯಿಂದ ಯಾರೂ ಸಿನಿಮಾಕ್ಕೆ ಬಂದಿರಲಿಲ್ಲ ಅನಿಸುತ್ತೆ, ನಾನೇ ಮೊದಲು ಅಂತ ಹೇಳಿಕೆ ನೀಡಿದ್ದರು. ಇದು ಕನ್ನಡಿಗರನ್ನು ಕೆರಳಿಸಿದೆ. ರಶ್ಮಿಕಾ ಮಂದಣ್ಣ ಸಿನಿಮಾಕ್ಕೆ ಎಂಟ್ರಿ ಆಗೋ ಮುನ್ನ ಕೂರ್ಗ್ ಕಮ್ಯುನಿಟಿಯ ಅನೇಕರು ಸಿನಿಮಾ ರಂಗದಲ್ಲಿ ಸಾಧನೆ ಮಾಡಿದ್ದಾರೆ. ನಟಿಯರಾದ ಪ್ರೇಮಾ, ಹರ್ಷಿಕಾ ಪೂಣಚ್ಚ, ನಿಧಿ ಸುಬ್ಬಯ್ಯ, ಡೈಸಿ ಬೋಪಣ್ಣ, ಗುಲ್ಶನ್ ದೇವಯ್ಯ ಸೇರಿದಂತೆ ಹಲವು ಕೊಡಗಿನ ಬೆಡಗಿಯರು ಸಿನಿ ರಂಗದಲ್ಲಿ ಮಿಂಚಿದ್ದಾರೆ.
ಕೊಡಗಿನಲ್ಲಿಯೇ ಹುಟ್ಟಿ ಬೆಳೆದಿದ್ದರೂ, ತನ್ನದೇ ಸಮುದಾಯದ ಕುರಿತು ನಟಿಗೆ ಜ್ಞಾನ ಇಲ್ಲ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಕೊಡವ ಸಮುದಾಯದಿಂದ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ ನಟಿ ತಾನು ಎಂದು ಹೇಳಿಕೊಳ್ಳಬಹುದಿತ್ತು. ಆದರೆ ಕೊಡವ ನಟಿಯರಿಗೆ ರಶ್ಮಿಕಾ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರೇಮಾ, ಹರ್ಷಿಕಾ ಪೂಣಚ್ಚ, ನಿಧಿ ಸುಬ್ಬಯ್ಯ ಹಾಗೂ ಹಲವು ನಟಿಯರು ಪರ ಭಾಷೆಯಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕೊಡವ ಸಮುದಾಯದ ಜನರಿಂದ ನನ್ನನ್ನು ಜಡ್ಜ್ ಮಾಡಲಾಗಿದೆ ಎಂದು ನಟಿ ಸಂದರ್ಶನದಲ್ಲಿ ಒತ್ತಿ ಹೇಳಿದ್ದು, ಅದೇ ಸಮುದಾಯದ ಜನರು ಇದೀಗ ನಟಿಯ ವಿರುದ್ಧ ತಿರುಗಿ ಬಿದ್ದಾರೆ.
ಈ ಸುದ್ದಿಯನ್ನೂ ಓದಿ: Rashmika-Vijay Deverakonda: ಮತ್ತೆ ರಶ್ಮಿಕಾ-ವಿಜಯ್ ದೇವರಕೊಂಡ ಭರ್ಜರಿ ವೆಕೇಶನ್? ವೈರಲ್ ಆಗಿರೋ ವಿಡಿಯೊದಲ್ಲೇನಿದೆ?
ಇನ್ನು ಸಂದರ್ಶದಲ್ಲಿ ಅನೇಕ ಖಾಸಗಿ ವಿಷಯಗಳನ್ನೂ ರಶ್ಮಿಕಾ ಹಂಚಿಕೊಂಡಿದ್ದಾರೆ. ಸ್ಮೋಕಿಂಗ್ ಬಗ್ಗೆಯೂ ಹೇಳಿದ್ದಾರೆ. ಸಿನಿಮಾವನ್ನು ಸಿನಿಮಾ ಆಗಿ ನೋಡ್ತೇನೆ. ನಾನು ಸ್ಮೋಕಿಂಗ್ ಇಷ್ಟಪಡೋದಿಲ್ಲ. ಸಿನಿಮಾದಲ್ಲಿ ಕೂಡ ಸ್ಮೋಕಿಂಗ್ ಮಾಡು ಅಂದ್ರೆ ನಾನೂ ಮಾಡೋದಿಲ್ಲ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ, ಮತ್ತೊಂದು ಚಿತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಕಾಕ್ಟೇಲ್ 2 ಅಗಸ್ಟ್‌ನಲ್ಲಿ ಸೆಟ್ಟೇರಲಿದೆ. ಈಗಾಗಲೇ ಇವರ ಸಿಕಂದರ್ ಚಿತ್ರ ತಕ್ಕ ಮಟ್ಟಿಗೆ ಯಶಸ್ಸನ್ನು ಕಂಡಿದೆ.