'ಹಾರ್ದಿಕ್ ಪಾಂಡ್ಯರನ್ನು ನಂಬಿರಿ'; ಭಾರತ ತಂಡಕ್ಕೆ ಕುಂಬ್ಳೆ ಸಲಹೆ
T20 World Cup: ಭಾರತ ತಂಡವು ಫೆಬ್ರವರಿ 26 ರಂದು ಚೆನ್ನೈನಲ್ಲಿ ನಡೆಯಲಿರುವ ತನ್ನ ಮುಂದಿನ ಸೂಪರ್ 8 ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು ಎದುರಿಸಲಿದೆ. ಅಂತಿಮ ಪಂದ್ಯದಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್ ತಂಡದ ಸವಾಲು ಎದುರಿಸಲಿದೆ.
anil kumble -
ಬೆಂಗಳೂರು, ಫೆ.25: 2026ರ ಟಿ20 ವಿಶ್ವಕಪ್(T20 World Cup)ನಲ್ಲಿ ಭಾರತ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರೆ ಏನಾಗುತ್ತದೆ? ಎಂಬ ಪ್ರಶ್ನೆಗೆ ದಿಗ್ಗಜ ಅನಿಲ್ ಕುಂಬ್ಳೆ(Anil Kumble) ಉತ್ತರಿಸಿದ್ದು, ಅಂತಹ ಸನ್ನಿವೇಶದಲ್ಲಿ ಭಾರತ ಹಾರ್ದಿಕ್ ಪಾಂಡ್ಯ(Hardik Pandya) ಅವರನ್ನು ಕ್ರಮಾಂಕದಲ್ಲಿ ಬಡ್ತಿ ನೀಡಬೇಕಾಗಿದೆ ಎಂದು ಹೇಳಿದ್ದಾರೆ. ಪಂದ್ಯಾವಳಿಯ ಸಮಯದಲ್ಲಿ ಭಾರತ ತಂಡವು ಬ್ಯಾಟಿಂಗ್‌ನಲ್ಲಿ ಸ್ಥಿರತೆಗಾಗಿ ಹೆಣಗಾಡುತ್ತಿದೆ, ಮೊದಲ ಐದು ಪಂದ್ಯಗಳ ಇನ್ನಿಂಗ್ಸ್‌ನಲ್ಲಿ ಕುಸಿತ ಕಂಡಿದೆ.
ಸ್ಟಾರ್‌ಸ್ಪೋರ್ಟ್ಸ್ ಸಂದರ್ಶನದಲ್ಲಿ ಮಾತನಾಡಿದ ಕುಂಬ್ಳೆ, ಭಾರತವು ತಾತ್ಕಾಲಿಕ ಆಯ್ಕೆಗೆ ಹೋಗುವ ಬದಲು ಹಾರ್ದಿಕ್ ಅವರನ್ನು ನಂಬುವ ಸಮಯ ಬಂದಿದೆ. ಒತ್ತಡವನ್ನು ಎದುರಿಸುವ ಮತ್ತು ಭಾರತವನ್ನು ಗೆಲುವಿನ ಸ್ಥಾನಕ್ಕೆ ಕೊಂಡೊಯ್ಯುವ ಕೌಶಲ್ಯ ಪಾಂಡ್ಯಗೆ ಇದೆ ಎಂದು ಭಾರತದ ಮಾಜಿ ಕೋಚ್ ಕುಂಬ್ಳೆ ಹೇಳಿದರು.
"ದೇವರೇ, ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಹೇಗೆ ಆಟ ಆರಂಭಿಸಿತೋ ಅದೇ ಸ್ಥಿತಿಗೆ ಭಾರತ ಬಂದರೆ, ಒತ್ತಡವನ್ನು ನಿವಾರಿಸಲು ಬೇರೆ ಯಾರಾದರೂ ಪರ್ಯಾಯವಾಗಿ ಆಡುವ ಬದಲು ಹಾರ್ದಿಕ್ ಪಾಂಡ್ಯ ಆ ಹಂತದಲ್ಲಿ ಆಡುವುದನ್ನು ನಾನು ನೋಡಲು ಬಯಸುತ್ತೇನೆ" ಎಂದರು.
"ಹಾರ್ದಿಕ್ ಪಾಂಡ್ಯ ಆ ಒತ್ತಡವನ್ನು ನಿರ್ವಹಿಸುವ ಮತ್ತು ಪಂದ್ಯವನ್ನು ಗೆಲುವಿನ ಸ್ಥಾನಕ್ಕೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದ್ದಾರೆ. ಆದ್ದರಿಂದ ಜಿಂಬಾಬ್ವೆ ಅಥವಾ ವೆಸ್ಟ್ ಇಂಡೀಸ್ ವಿರುದ್ಧ ಭಾರತವು ಆ ರೀತಿಯ ಪರಿಸ್ಥಿತಿಗೆ ಸಿಲುಕಿದರೆ ಭಾರತವು ಪರಿಗಣಿಸಬೇಕಾದ ಕೆಲವು ಅಂಶಗಳು ಇವು ಎಂದು ನಾನು ಭಾವಿಸುತ್ತೇನೆ" ಎಂದು ಕುಂಬ್ಳೆ ಹೇಳಿದರು.
'ಇಲಿಗಳಂತೆ ಮಾಯವಾಗಿ'; ಪಾಕ್ ಮಾಧ್ಯಮವನ್ನು ಟ್ರೋಲ್ ಮಾಡಿದ ಇರ್ಫಾನ್ ಪಠಾಣ್
ಭಾರತ ಪರ ಹಾರ್ದಿಕ್, 4 ಮತ್ತು 5ನೇ ಕ್ರಮಾಂಕದಲ್ಲಿ ಅದ್ಭುತ ದಾಖಲೆಯನ್ನು ಹೊಂದಿರುವುದರಿಂದ ಕುಂಬ್ಳೆ ಈ ಸಲಹೆ ನೀಡಿದ್ದಾರೆ. ಪಾಂಡ್ಯ ಆರು ಪಂದ್ಯಗಳಲ್ಲಿ 131 ರನ್ ಗಳಿಸಿದ್ದಾರೆ ಮತ್ತು 43.66 ಸರಾಸರಿ ಮತ್ತು 238.18 ಸ್ಟ್ರೈಕ್ ರೇಟ್ ಹೊಂದಿದ್ದಾರೆ. 5ನೇ ಸ್ಥಾನದಲ್ಲಿ ಪಾಂಡ್ಯ 30 ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ಮತ್ತು 154.47 ಸ್ಟ್ರೈಕ್-ರೇಟ್‌ನಲ್ಲಿ 1208 ರನ್‌ಗಳನ್ನು ಗಳಿಸಿದ್ದಾರೆ.
ಭಾರತ ಇನ್ನೂ ಟೂರ್ನಿಯಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ತೋರಿಸಿಲ್ಲ ಎಂದು ಕುಂಬ್ಳೆ ಹೇಳಿದರು. "ಭಾರತ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಖಂಡಿತವಾಗಿಯೂ ಉತ್ತಮವಾಗಿ ಆಡಬೇಕಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಈ ಟೂರ್ನಿಯಾದ್ಯಂತ ತಂಡ ಇಲ್ಲಿಯವರೆಗೆ ಹಾಗೆ ಮಾಡಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 20 ರನ್‌ಗೆ 3 ವಿಕೆಟ್ ಕಿತ್ತರೂ ಆ ಬಳಿ ನೀರಸ ಪ್ರದರ್ಶನ ತೋರಿದ್ದು ತಂಡದ ಸೋಲಿಗೆ ಪ್ರಮುಖ ಕಾರಣ" ಎಂದು ಕುಂಬ್ಳೆ ಹೇಳಿದರು.
ಭಾರತ ತಂಡವು ಫೆಬ್ರವರಿ 26 ರಂದು ಚೆನ್ನೈನಲ್ಲಿ ನಡೆಯಲಿರುವ ತನ್ನ ಮುಂದಿನ ಸೂಪರ್ 8 ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು ಎದುರಿಸಲಿದೆ. ಅಂತಿಮ ಪಂದ್ಯದಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್ ತಂಡದ ಸವಾಲು ಎದುರಿಸಲಿದೆ.