ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಹಿಂದಿ ʻಬಿಗ್‌ ಬಾಸ್‌ʼ ಖ್ಯಾತಿಯ ನಟಿ ಕೃತಿ ವರ್ಮಾ; ʻಕರಿಕಾಡʼ ಸಿನಿಮಾದಲ್ಲಿ ರತುನಿಯಾಗಿ ಮಿಂಚಿದ ಬಾಲಿವುಡ್‌ ಬ್ಯೂಟಿ

Bollywood Actress Kriti Verma: ನಟಿ ಕೃತಿ ವರ್ಮಾ ಸ್ಯಾಂಡಲ್‌ವುಡ್‌ಗೆ ಅದ್ದೂರಿಯಾಗಿ ಕಾಲಿಟ್ಟಿದ್ದಾರೆ. ಗಿಲ್ಲಿ ವೆಂಕಟೇಶ್ ನಿರ್ದೇಶನದ 'ಕರಿಕಾಡ' ಚಿತ್ರದ 'ರತುನಿ ರತುನಿ' ಎಂಬ ಹಾಡಿನಲ್ಲಿ ಅವರು ಸಖತ್ ಸ್ಟೆಪ್ ಹಾಕಿದ್ದಾರೆ. ಕಾಡ ನಟರಾಜ್ ನಾಯಕನಾಗಿರುವ ಈ ಚಿತ್ರಕ್ಕೆ ಅವರ ಪತ್ನಿ ದೀಪ್ತಿ ದಾಮೋದರ್ ಬಂಡವಾಳ ಹೂಡಿರುವುದು ವಿಶೇಷ.

'ಕರಿಕಾಡ'ದಲ್ಲಿ ಹಿಂದಿ 'ಬಿಗ್ ಬಾಸ್' ಬ್ಯೂಟಿ ಕೃತಿ ವರ್ಮಾ ಮಸ್ತ್ ಡ್ಯಾನ್ಸ್!

-

Avinash GR
Avinash GR Jan 11, 2026 5:11 PM

ಟೈಟಲ್‌ನಿಂದಲೇ ಗಮನ ಸೆಳೆಯುತ್ತಿರುವ ಸಿನಿಮಾ 'ಕರಿಕಾಡ' ವಿಭಿನ್ನವಾದ ಕಥಾಹಂದರ ಹಾಗೂ ಮ್ಯೂಸಿಕಲ್ ಜರ್ನಿಯ ಜೊತೆಗೆ ಅಡ್ವೆಂಚರಸ್ ಎಲಿಮೆಂಟ್ಸ್ ಇಟ್ಟುಕೊಂಡು ಮಾಡಿರುವ ಸಿನಿಮಾ ಇದಾಗಿದ್ದು, ಈಗಾಗಲೇ ರಿಲೀಸ್‌ ಆಗಿರುವ ಟೈಟಲ್ ಟೀಸರ್ ಸದ್ದು ಮಾಡಿತ್ತು. ಇದೀಗ ʻರತುನಿ ರತುನಿʼ ಎಂಬ ಹಾಡನ್ನು ಚಿತ್ರತಂಡ ರಿಲೀಸ್‌ ಮಾಡಿದೆ.

ಈ ಸಿನಿಮಾದಲ್ಲಿ ಕಾಡ ನಟರಾಜ್ ನಾಯಕ ನಟರಾಗಿ ಕಾಣಿಸಿಕೊಂಡಿದ್ದು, ಇವರೊಂದಿಗೆ ಪ್ರಮುಖ ಪಾತ್ರದಲ್ಲಿ ಬಲ ರಾಜವಾಡಿ, ಯಶ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಕರಿಕಾಡ ಸಿನಿಮಾವನ್ನು ಗಿಲ್ಲಿ ವೆಂಕಟೇಶ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಹೀರೋ ಕಾಡ ನಟರಾಜ ಅವರೇ ಸಿನಿಮಾಗೆ ಕಥೆ ಬರೆದಿದ್ದಾರೆ. ಅತೀಶಯ್ ಜೈನ್ ಹಾಗೂ ಶಶಾಂಕ್ ಶೇಷಾಗಿರಿ ಹಾಡುಗಳಿಗೆ ಸಂಗೀತ ನೀಡಿದ್ದು, ಜೀವನ್ ಗೌಡ ಅವರ ಛಾಯಾಗ್ರಹಣ ಮತ್ತು ದೀಪಕ್ ಸಿ ಎಸ್ ಅವರ ಸಂಕಲನ ಈ ಸಿನಿಮಾಕ್ಕಿದೆ. ಈಚೆಗೆ ರಿಲೀಸ್‌ ಆಗಿರುವ ರತುನಿ ರತುನಿ ಹಾಡಿನಲ್ಲಿ ಹೆಜ್ಜೆ ಹಾಕಿರೋದು ಬಾಲಿವುಡ್ ಮಾದಕ ಬೆಡಗಿ ಕೃತಿ ವರ್ಮಾ

Karikaada Movie: ಐಟಿ ಜಗತ್ತಿನಿಂದ ಕನ್ನಡ ಚಿತ್ರರಂಗಕ್ಕೆ ಕಾಡ ನಟರಾಜ್‌- ಕನ್ನಡಿಗರ ಮನಗೆಲ್ಲಲು ಸಜ್ಜಾಗಿದೆ ‘ಕರಿಕಾಡ’ ಸಿನಿಮಾ

ಸ್ಯಾಂಡಲ್‌ವುಡ್‌ಗೆ ಬಂದ ಬಿಗ್‌ ಬಾಸ್‌ ಬೆಡಗಿ

ಕೃತಿ ವರ್ಮಾ ಅವರು ಹಿಂದಿ ಬಿಗ್‌ ಬಾಸ್‌ನ ಮಾಜಿ ಸ್ಪರ್ಧಿ ಎಂಬುದು ವಿಶೇಷ. "ನಾನು ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದೇನೆ. ನನಗೆ ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದ. ನನ್ನ ಸಿನಿಮಾ ನಿಮಗೆ ಇಷ್ಟವಾಗಲಿದೆ ಎಂಬ ನಿರೀಕ್ಷೆ ಇದೆ. ಇದೊಂದು ನನಗೆ ಲವ್ಲಿ ಅನುಭವ. ನಿಮ್ಮೆಲ್ಲರ ಆಶೀರ್ವಾದ ನನಗೆ ಇರಲಿ. ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಕನ್ನಡ ಸಿನಿಮಾ ಮಾಡುತ್ತೇನೆ" ಎನ್ನುತ್ತಾರೆ ಕೃತಿ ವರ್ಮಾ.

ಕರಿಕಾಡ ಚಿತ್ರದ ಸಾಂಗ್‌ ರಿಲೀಸ್



"ಸಿನಿಮಾ ರಿಲೀಸ್ ಆಗೋಕೆ ರೆಡಿಯಾಗಿದೆ. ಎಲ್ಲರ ಆಶೀರ್ವಾದ ಇರಬೇಕು. ತುಂಬಾ ಇಷ್ಟಪಟ್ಟು ಕಷ್ಟಪಟ್ಟು ಮಾಡಿದ್ದೇವೆ. ಹಾಡುಗಳಿಗೆ ಒಳ್ಳೆಯ ರೆಸ್ಪಾನ್ಸ್ ಬಂದಿದೆ. ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಆಡಿಯನ್ಸ್ ಎಂಜಾಯ್ ಮಾಡುತ್ತಾರೆ ಎಂಬ ನಂಬಿಕೆ ಇದೆ. ಚಿತ್ರದಲ್ಲಿರುವ ಹಾಡುಗಳನ್ನು ಬೇರೆ ಭಾಷೆಯ ದೊಡ್ಡ ಗಾಯಕರು ಹಾಡಿದ್ದಾರೆ. ವಿ. ನಾಗೇಂದ್ರ ಪ್ರಸಾದ್ ಅವರು ಸಾಹಿತ್ಯ ಬರೆದಿದ್ದಾರೆ" ಎಂದು ಚಿತ್ರತಂಡ ಹೇಳಿದೆ.

ತುಳು ಚಿತ್ರರಂಗದ ಚೆಲುವೆ ನಿರೀಕ್ಷಾ ಶೆಟ್ಟಿ ನಾಯಕಿಯಾಗಿದ್ದಾರೆ. ಉಳಿದಂತೆ ಈ ಸಿನಿಮಾದಲ್ಲಿ ಮಂಜು ಸ್ವಾಮಿ, ಗೋವಿಂದ ಗೌಡ , ದಿವಾಕರ್, ಕಾಮಿಡಿ ಕಿಲಾಡಿ ಸೂರ್ಯ, ರಾಕೇಶ್ ಪೂಜಾರಿ, ವಿಜಯ್ ಚಂಡೂರು, ಚಂದ್ರಪ್ರಭ, ಕರಿಸುಬ್ಬು, ಗಿರಿ, ಮಾಸ್ಟರ್ ಆರ್ಯನ್, ಬಾಲನಟಿ ರಿದ್ಧಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಇನ್ನು ಈ ಸಿನಿಮಾವನ್ನು ರಿದ್ಧಿ ಎಂಟರ್ಟೈನ್ಮೆಂಟ್ಸ್ ಬ್ಯಾನರ್‌ನಲ್ಲಿ ಕಾಡ ನಟರಾಜ್ ಅವರ ಪತ್ನಿ ದೀಪ್ತಿ ದಾಮೋದರ್ ನಿರ್ಮಾಣ ಮಾಡಿದ್ದಾರೆ. ಪತಿಯ ಕನಸಿನ ಈ ಸಿನಿಮಾ ಮೂಲಕ ಈಡೇರಿಸಿದ್ದಾರೆ. ಇನ್ನು ಇವರ ಕನಸಿಗೆ ಸ್ನೇಹಿತ ರವಿಕುಮಾರ್ ಎಸ್.ಆರ್ ಸಹ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ.