ಹೆಚ್ಚಿನ ಚಲನಚಿತ್ರಗಳು (Movies) ಅಥವಾ ವೆಬ್ ಸರಣಿಗಳು OTT ಪ್ಲಾಟ್‌ಫಾರ್ಮ್‌ಗಳಲ್ಲಿ (OTT Platform) ಬಿಡುಗಡೆಯಾಗುತ್ತವೆ. ಪ್ರೇಕ್ಷಕರಿಗೆ ಮನೆಯಲ್ಲಿ ಮನರಂಜನೆಯನ್ನು ಒದಗಿಸುತ್ತವೆ. ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ ಮತ್ತು ಡಿಸ್ನಿ+ ಹಾಟ್‌ಸ್ಟಾರ್‌ನಂತಹ (Disney Hotstar) ಪ್ಲಾಟ್‌ಫಾರ್ಮ್‌ಗಳಲ್ಲಿ ಚಲನಚಿತ್ರಗಳಿಗಾಗಿ ಕಾಯುವುದು ಚಿತ್ರಮಂದಿರಗಳಲ್ಲಿ ಅವುಗಳಿಗಾಗಿ ಕಾಯುವಷ್ಟೇ ರೋಮಾಂಚನಕಾರಿಯಾಗಿದೆ. ಇದೀಗ ಈ ಒಂದು ಸೌತ್ ಸಿನಿಮಾ (South Cinema) ಒಟಿಟಿ ಪ್ಲ್ಯಾಟ್‌ಫಾರ್ಮನಲ್ಲಿ ಸಖತ್ ಟ್ರೆಂಡಿಂಗ್ ಇದೆ.
ಇತ್ತೀಚೆಗೆ, OTT ನಲ್ಲಿ ಬಿಡುಗಡೆಯಾದ ಒಂದು ಚಿತ್ರವು ಗಮನ ಸೆಳೆದಿದ್ದು, ಟಾಪ್ ಟ್ರೆಂಡಿಂಗ್ ಪಟ್ಟಿಯನ್ನು ತಲುಪಿದೆ. ತಮಿಳು ನಟ ಧನುಷ್ ನಿರ್ದೇಶನ ಮಾಡಿರುವ ನಾಲ್ಕನೇ ಸಿನಿಮಾ 'ಇಡ್ಲಿ ಕಡೈ. ಆ ಚಿತ್ರ 'ಇಡ್ಲಿ ಕಡೈ'. ಈ ಚಿತ್ರದಲ್ಲಿ ಧನುಷ್, ನಿತ್ಯಾ ಮೆನನ್ ಮತ್ತು ಶಾಲಿನಿ ಪಾಂಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: BBK 12: ಮನೆ ನೆಮ್ಮದಿಯನ್ನ ಹಾಳು ಮಾಡಿದ್ರಾ ರಿಷಾ? ಮುಖಕ್ಕೆ ಮಸಿ ಬಳಿದು ಗಿಲ್ಲಿ ಹೇಳಿದ್ದೇನು?
ನಂಬರ್ ಒನ್‌ನಲ್ಲಿ ಟ್ರೆಂಡಿಂಗ್
ದಕ್ಷಿಣ ಭಾರತದ ಸೂಪರ್‌ಸ್ಟಾರ್ ಧನುಷ್ ಅವರ ಹೊಸ ಚಿತ್ರ 'ಇಡ್ಲಿ ಕಡೈ' ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಪ್ರಾರಂಭಿಸಿದ್ದು, ಬಿಡುಗಡೆಯಾದಾಗಿನಿಂದ ಪ್ರೇಕ್ಷಕರಲ್ಲಿ ಚರ್ಚೆಯ ವಿಷಯವಾಗಿದೆ. ತಮಿಳಿನಲ್ಲಿ ತಯಾರಾದ ಈ ಚಿತ್ರವು ಹಿಂದಿಯಲ್ಲಿ ಡಬ್ ಮಾಡಲಾದ ಆವೃತ್ತಿಯನ್ನು ಸಹ ಬಿಡುಗಡೆ ಮಾಡಿದೆ, ಇದು ಉತ್ತರ ಭಾರತದ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.
ಧನುಷ್ ಅಭಿನಯದ 'ಇಡ್ಲಿ ಕಡಾಯಿ' ಚಿತ್ರವು ಅಕ್ಟೋಬರ್ 1 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಧನುಷ್ ಈ ಚಿತ್ರವನ್ನು ಆಕಾಶ್ ಭಾಸ್ಕರನ್ ಮತ್ತು ಡಾನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಧನುಷ್ ಗೆ ಜೋಡಿಯಾಗಿ ನಿತ್ಯಾ ಮೆನನ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಸ್ವತಃ ಧನುಷ್ ನಿರ್ದೇಶಿಸಿದ್ದಾರೆ.
ಯಾವ ಒಟಿಟಿಯಲ್ಲಿ ಸ್ಟ್ರೀಮಿಂಗ್?
ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ₹50.33 ಕೋಟಿ ನಿವ್ವಳ ಸಂಗ್ರಹ ಮತ್ತು ವಿಶ್ವಾದ್ಯಂತ ₹71.68 ಕೋಟಿ ಒಟ್ಟು ಸಂಗ್ರಹವನ್ನು ದಾಖಲಿಸಿದೆ ಎಂಬುದು ಗಮನಿಸಬೇಕಾದ ಸಂಗತಿ. ಅಕ್ಟೋಬರ್ 1ರಂದು ತೆರೆಕಂಡಿದ್ದ 'ಇಡ್ಲಿ ಕಡೈ' ಸಿನಿಮಾವು ಅಕ್ಟೋಬರ್ 29ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರ ಆರಂಭಿಸಿದೆ.
ಟ್ರೈಲರ್ ಹೇಗಿದೆ?
ಇಡ್ಲಿ ಕಡೈ ಸಿನಿಮಾದ ಟ್ರೈಲರ್ ನಲ್ಲಿ ನಾಯಕನ ತಂದೆಯು ಇಡ್ಲಿ ಅಂಗಡಿ ನಡೆಸುತ್ತಿದ್ದು ತಂದೆಯನ್ನು ನೋಡುತ್ತಾ ಬೆಳೆದ ಮುರುಗನ್ ಮುಂದೆ ದೊಡ್ಡ ಫುಡ್ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿ ಉನ್ನತ ಸ್ಥಾನಕ್ಕೇರುತ್ತಾನೆ. ಹಾಗಿದ್ದರೂ ಹುಟ್ಟೂರಿನ ಇಡ್ಲಿ ಅಂಗಡಿ ಅವನಿಗೆ ನೆನಪಾ ಗುತ್ತಿರುತ್ತದೆ.
ತನ್ನ ಹುಟ್ಟೂರಿನಲ್ಲಿ ಮುಚ್ಚಿದ ಇಡ್ಲಿ ಅಂಗಡಿಯನ್ನು ಮತ್ತೆ ಪುನಃ ತೆರೆಯುತ್ತಾನೆ ಹಾಗಾದರೆ ಇದೆಲ್ಲ ಅವನು ಯಾಕಾಗಿ ಮಾಡುತ್ತಿರಬಹುದು ಎಂಬ ಕುತೂಹಲ ಪ್ರೇಕ್ಷಕನಲ್ಲಿ ಉಂಟು ಮಾಡುವಂತಿದ್ದು ಈ ಟ್ರೇಲರ್ ಸಿದ್ಧಗೊಂಡಿದೆ. ಅದ್ಧೂರಿ ಕಾರ್ಯಕ್ರಮದ ಮೂಲಕ ಟ್ರೆಲರ್ ರಿಲೀಸ್ ಮಾಡಲಾಗಿದ್ದು ಅನೇಕ ನಟರು, ಸಿನಿಮಾ ಕಲಾವಿದರು ಇದನ್ನು ಮೆಚ್ಚಿ ಕೊಂಡಿದ್ದಾರೆ.
ನಟ ರಿಷಬ್ ಶೆಟ್ಟಿ ಮೆಚ್ಚುಗೆ
ನಟ ರಿಷಬ್ ಶೆಟ್ಟಿ ಕೂಡ ಇಡ್ಲಿ ಕಡೈ ಚಿತ್ರದ ಟ್ರೈಲರ್ ಲಿಂಕ್ ಶೇರ್ ಮಾಡಿ ತಂಡಕ್ಕೆ ಶುಭ ಕೋರಿದ್ದಾರೆ. ಇಡ್ಲಿ ಕಡೈ ಸಿನಿಮಾ ತಂಡಕ್ಕೆ ಶುಭವಾಗಲಿ... ಜೀವನದ ಅತ್ಯಂತ ಸುಂದರ ನೆನಪುಗಳನ್ನು ಮರುಕಳಿಸುವಂತಹ ಈ ಕಥೆ ಪ್ರೇಕ್ಷಕರ ಮನ ಗೆಲ್ಲಲಿ ಎಂದು ನಟ ರಿಷಭ್ ಶೆಟ್ಟಿ ಅವರು ಶುಭಕೋರಿದ್ದರು.
ಇದನ್ನೂ ಓದಿ: BBK 12: ಅಶ್ವಿನಿ ಗೌಡ ಮುಖಕ್ಕೆ ಮಸಿ ಬಳಿದು ರಕ್ಷಿತಾ ಪರ ಮಾತನಾಡಿದ ಗಿಲ್ಲಿ- ಧನುಷ್!
ಅದರ ಜೊತೆಗೆ ಬೆಸ್ಟ್ ವಿಶಸ್ ಟು ಎಂದು ನಿತ್ಯ ಮೆನನ್ ಹಾಗೂ ನಟ ಧನುಷ್ ಅವರನ್ನು ಕೂಡ ಟ್ಯಾಗ್ ಮಾಡಿ ಪೋಸ್ಟ್ ಹಂಚಿಕೊಂಡಿದ್ದರು. ಸಮುದ್ರ ಖನಿ, ಸತ್ಯರಾಜ್, ಶಾಲಿನಿ ಪಾಂಡೆ , ಪಾರ್ಥಿಬನ್ ಸೇರಿದಂತೆ ಬೇರೆ ಇತರ ಕಲಾವಿದರು ಸಹ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಜಿ. ವಿ ಪ್ರಕಾಶ್ ಕುಮಾರ್ ಸಂಗೀತ ಚಿತ್ರಕ್ಕಿರುವುದು ಮತ್ತೊಂದು ಪ್ಲಸ್ ಪಾಂಯ್ಟ್ ಆಗಿದೆ.