BBK 12: ಅಶ್ವಿನಿ ಗೌಡ ಮುಖಕ್ಕೆ ಮಸಿ ಬಳಿದು ರಕ್ಷಿತಾ ಪರ ಮಾತನಾಡಿದ ಗಿಲ್ಲಿ- ಧನುಷ್!
ಕಳೆದ ವಾರ ಕಾವ್ಯ ಶೈವ ಹಾಗೂ ಅಶ್ವಿನಿ ಗೌಡ ಮಧ್ಯೆ ಏಕವಚನದಲ್ಲಿ ಜಗಳ ನಡೆಯಿತು. ಈ ಮಧ್ಯೆ ಕಾವ್ಯ ಶೈವ ಪರವಾಗಿ ರಕ್ಷಿತಾ ಶೆಟ್ಟಿ ಮಧ್ಯೆ ಬಂದರು. ಆದರೀಗ ಚಪ್ಪಲಿ ವಿಚಾರದ ಬಗ್ಗೆ ರಕ್ಷಿತಾ ಪರ ಬ್ಯಾಟ್ ಬೀಸಿದ್ದಾರೆ ಧನುಷ್ ಹಾಗೂ ಗಿಲ್ಲಿ. ರಕ್ಷಿತಾ ಅವರು ಕಾಲು ತೋರಿಸಿದ್ದು, ವೋಟ್ ನನಗೆ ಕೊಟ್ಟರೆ ಕಾಲಲ್ಲಿ ಹಾಕಿ ಅದನ್ನ ತುಳಿಯುತ್ತೀನಿ ಅಂತ. ಆದರೆ ಅಶ್ವಿನಿ ಅಂದಿದ್ದು ಕಲಾವಿದರಿಗೆ ಕಾಲು ತೋರಿಸಿದ್ರು ಅನ್ನೋ ಥರ ಹೇಳಿದ್ರು ಎಂದು ಗಿಲ್ಲಿ ಹೇಳಿದರು.
bigg boss kannada -
Yashaswi Devadiga
Nov 3, 2025 6:57 PM
ಕಳೆದ ವಾರ ಕಾವ್ಯ ಶೈವ ಹಾಗೂ ಅಶ್ವಿನಿ ಗೌಡ (Ashwini Gowda) ಮಧ್ಯೆ ಏಕವಚನದಲ್ಲಿ ಜಗಳ ನಡೆಯಿತು. ಈ ಮಧ್ಯೆ ಕಾವ್ಯ ಶೈವ ಪರವಾಗಿ ರಕ್ಷಿತಾ ಶೆಟ್ಟಿ ಮಧ್ಯೆ ಬಂದರು. ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಕಿಚ್ಚ ಸುದೀಪ್ (Sudeep) ಪಂಚಾಯತಿ ನಡೆಸುತ್ತಿದ್ದರು. ಈ ವೇಳೆ, ‘’ನನಗೂ ಇನ್ನೊಬ್ಬರಿಗೂ ಜಗಳ ಆಗುತ್ತಿರುತ್ತೆ. ಮಧ್ಯದಲ್ಲಿ ರಕ್ಷಿತಾ ಬರ್ತಾರೆ. ರಕ್ಷಿತಾ ಶೆಟ್ಟಿಯಿಂದ ಅಶ್ವಿನಿ ಗೌಡ ಅಂತ ಹೇಳ್ತಾರೆ. ಚಪ್ಪಲಿ ತೋರಿಸುತ್ತಾರೆ. ಕಲಾವಿದರು ನೀವು ಡ್ರಾಮಾ ಮಾಡೋರು, ನಾಟಕ ಮಾಡ್ತೀರಾ ಅಂತ ಹೇಳ್ತಾರೆ.
ರಕ್ಷಿತಾ ಪರ ಧನುಷ್!
ಆದರೀಗ ಚಪ್ಪಲಿ ವಿಚಾರದ ಬಗ್ಗೆ ರಕ್ಷಿತಾ ಪರ ಬ್ಯಾಟ್ ಬೀಸಿದ್ದಾರೆ ಧನುಷ್ ಹಾಗೂ ಗಿಲ್ಲಿ. ಧನುಷ್ ಈ ಬಗ್ಗೆ ಮಾತನಾಡಿ, ʻಅಶ್ವಿನಿ ಅವರು ಯಾರೋ ಇಬ್ಬರು ಜಗಳ ಮಾಡುತ್ತಿದ್ದರೆ, ಇವರು ಸುಮ್ಮನೆ ಅಲ್ಲಿ ಹೋಗ್ತಾರೆ ಅಂತ ನನಗೆ ಅನ್ನಿಸುತ್ತದೆ. ಯಾರಾದರೂ ಏನಾದರೂ ಹೇಳುವಾಗ, ಮಾತನಾಡುವಾಗ, ನೀವು ಹೇಳುವ ರೀತಿ ನನಗೆ ಅನ್ನಿಸಿರಲ್ಲ. ಹಾಗೇ ರಕ್ಷಿತಾ ವಿಚಾರಕ್ಕೆ ಬರೋದಾದರೆ, ನಿಮ್ಮ ವೋಟ್ ನನಗೆ ಕೊಟ್ಟರೆ ಕಾಲಲ್ಲಿ ಹಾಕಿ ಅದನ್ನ ತುಳಿಯುತ್ತೀನಿ ಅಂತ ರಕ್ಷಿತಾ ಹೇಳಿದ್ದು. ಇನ್ನು ರಕ್ಷಿತಾ ಹೇಳಿದ್ದು, ನೀವು ಸೀರಿಯಲ್‌ನಲ್ಲಿ ನಟನೆ ಮಾಡ್ತೀರಿ ಅಂತ ಗೊತ್ತು. ಇಲ್ಲಿ ಮಾಡಬೇಡಿ ಅಂತ ಅವಳು ಹೇಳಿದ್ದುʼ ಎಂದು ರಕ್ಷಿತಾ ಪರವಾಗಿ ಧನುಷ್ ಹೇಳಿದರು.
ಇನ್ನು ಗಿಲ್ಲಿ ಅವರು ಮಾತನಾಡಿ,ʻ ಅಶ್ವಿನಿ, ರಕ್ಷಿತಾ ಹಾಗೂ ಕಾವ್ಯ ಜಗಳ ಮಾಡುವಾಗ, ಜಗಳ ಆಗಿರೋ ವಿಚಾರ ಗೊತ್ತು. ಅವಳು ಯಾವ ಪರ್‌ಸ್ಪೆಕ್ಟಿವ್ ಅಲ್ಲಿ ಹೇಳಿದ್ದಳು ಅನ್ನೋದು ಗೊತ್ತು. ಆದರೆ ವೀಕೆಂಡ್‌ನಲ್ಲಿ ನೀವು ಅದನ್ನ ಯಾವ ರೀತಿ ಮ್ಯಾನುಪಲೇಟ್ ಮಾಡಿ ಹೇಳಿದ್ರಿ ಅನ್ನೋದು ಗೊತ್ತು. ಇನ್ನು ರಕ್ಷಿತಾ ಅವರು ಕಾಲು ತೋರಿಸಿದ್ದು, ವೋಟ್ ನನಗೆ ಕೊಟ್ಟರೆ ಕಾಲಲ್ಲಿ ಹಾಕಿ ಅದನ್ನ ತುಳಿಯುತ್ತೀನಿ ಅಂತ. ಆದರೆ ನೀವು ಅಂದಿದ್ದು ಕಲಾವಿದರಿಗೆ ಕಾಲು ತೋರಿಸಿದ್ರು ಅನ್ನೋ ಥರ ಹೇಳಿದ್ರಿʼ ಎಂದು ಮಸಿ ಬಳಿದು ಕಾರಣ ಕೊಟ್ಟರು.
ಇದನ್ನೂ ಓದಿ: BBK 12: ಮನೆ ನೆಮ್ಮದಿಯನ್ನ ಹಾಳು ಮಾಡಿದ್ರಾ ರಿಷಾ? ಮುಖಕ್ಕೆ ಮಸಿ ಬಳಿದು ಗಿಲ್ಲಿ ಹೇಳಿದ್ದೇನು?
ರಿಷಾ? ಮುಖಕ್ಕೆ ಮಸಿ ಬಳಿದು ಗಿಲ್ಲಿ ಹೇಳಿದ್ದೇನು?
ಅಭಿಷೇಕ್ ಅವರು ಮೊದಲಿಗೆ ಮನೆಯಲ್ಲಿ ನೆಮ್ಮದಿ ಹಾಳು ಆಗುತ್ತಿರೋದೇ ರಿಷಾ ಅವರಿಂದ ಎಂದಿದ್ದಾರೆ. ಇನ್ನು ಗಿಲ್ಲಿ ಕೂಡ ʻನನ್ನ ಮುಖವಾಡ ಕಳುಚುತ್ತಿಯೋ ಇಲ್ಲವೋ ಗೊತ್ತಿಲ್ಲ ಆದರೆ ನಿನ್ನ ಮುಖವಾಡ ಮಾತ್ರ ಈಗಾಗಲೇ ಕಳಚಿ ಸ್ವಿಮ್ಮಿಂಗ್ ಫೂಲ್ ಅಲ್ಲಿ ಕೊಚ್ಚಿಕೊಂಡುʼ ಹೋಗಿದೆ ಎಂದರು.
ಇನ್ನು ರಘು ಅವರು ಕೂಡ ರಿಷಾ ಬಗ್ಗೆ ಮಾತನಾಡಿ,ʻ ನಾನು ಮನೆಯಲ್ಲಿ ಹೇಗೇಗೋ ಇರ್ತಿನಿ. ಮೆಂಟಲ್ ಥರನೇ ಇರ್ತೀನಿ. ಮನೆಯಲ್ಲಿ ನಾನು ಇರೋ ಥರ ಇದ್ದರೆ ಯಾರೂ ನನ್ನ ಜೊತೆ ಇರಲ್ಲ. ನಾನು ಮನೆಯಲ್ಲಿ ಹೀಗೆ ಇದ್ದೆ, ಶರ್ಟ್ ಬಿಚ್ಚಿಕೊಂಡಿದ್ದೆ, ಪ್ಯಾಂಟ್ ಬಿಚ್ಚಿಕೊಂಡಿದ್ದೆ, ಅಂತ ಇದ್ದರೆ ಚಪ್ಪಲಿ ತೆಗೆದುಕೊಂಡು ಹೊಡೆದು ಆಚೆ ಕಳುಹಿಸ್ತಾರೆʼ ಅಂತ ಖಡಕ್ ಆಗೇ ಹೇಳಿದ್ದಾರೆ.
ಇನ್ನು ಈ ಕಾರಣಗಳನ್ನು ಕೊಟ್ಟು ರಿಷಾ ಅವರ ಮುಖಕ್ಕೆ ಮಸಿ ಬಳಿದಿದ್ದಾರೆ. ಅಷ್ಟೇ ಅಲ್ಲ ರಿಷಾ ಕೂಡ ನಾನು ಇರೋದೇ ಹೀಗೆ ಅಂತ ಮೊಂಡು ವಾದ ಕೂಡ ಮಾಡಿದ್ದಾರೆ.
ಇದನ್ನೂ ಓದಿ: Aishwarya Rangarajan: ವೈವಾಹಿಕ ಜೀವನಕ್ಕೆ ಕಾಲಿಟ್ಟ ಗಾಯಕಿ ಐಶ್ವರ್ಯ ರಂಗರಾಜನ್; ಫೋಟೋಸ್ ವೈರಲ್
ರಿಷಾ ಗೌಡ ಬಾತ್‌ರೂಂನಲ್ಲಿದ್ದಾಗ ಗಿಲ್ಲಿ ಬಕೆಟ್ ಕೇಳಿದ್ದಾರೆ. ಇದಕ್ಕೆ ರಿಷಾ ಪ್ರತಿಕ್ರಿಯೆ ನೀಡಲಿಲ್ಲ. ಆಗ ಗಿಲ್ಲಿ, ರಿಷಾ ಬಕೆಟ್ ಕೊಡೋದಿಲ್ಲ ಅಂತ ಹೇಳು, ನಾನು ಏನ್ ಮಾಡಬೇಕೋ ಮಾಡ್ತೀನಿ ಎಂದಿದ್ದಾರೆ. ಅಲ್ಲದೆ ರಿಷಾ ಗೌಡ ಬಟ್ಟೆಗಳನ್ನ ತಂದು ನೆಲದ ಮೇಲೆ ಇಟ್ಟಿದ್ದಾರೆ.
ಬಳಿಕ ಇಬ್ಬರ ನಡುವೆ ಜೋರು ಗಲಾಟೆ ನಡೆದಿದೆ. ಬಾತ್‌ರೂಂನಿಂದ ಹೊರಬಂದ ರಿಷಾ ತನ್ನ ಬಟ್ಟೆಗಳು ನೆಲದ ಮೇಲೆ ಇಟ್ಟಿರುವುದನ್ನ ನೋಡಿ ರೊಚ್ಚಿಗೆದ್ದಿದ್ದಾರೆ. ಕೋಪದಿಂದ ಗಿಲ್ಲಿ ಎಂದು ಜೋರಾಗಿ ಕಿರುಚಾಡಿದ್ದಾರೆ.