ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Yash: ‌ʻಧುರಂಧರ್‌ 2ʼ ಅಬ್ಬರದ ನಡುವೆಯೂ ಅಗ್ರಸ್ಥಾನದಲ್ಲಿ ಸ್ಥಿರವಾಗಿ ನಿಂತ ʻಟಾಕ್ಸಿಕ್‌ʼ; ರಾಯನ ನೋಡಲು ಕಾಯ್ತಿದೆ ಇಂಡಿಯಾ!

Yash's Toxic Movie: ಭಾರತೀಯ ಚಿತ್ರರಂಗದ ಮೋಸ್ಟ್ ಆಂಟಿಸಿಪೇಟೆಡ್ ಸಿನಿಮಾ ಎಂಬ ಹೆಗ್ಗಳಿಕೆಗೆ ಟಾಕ್ಸಿಕ್ ಪಾತ್ರವಾಗಿದೆ. ಐಎಂಡಿಬಿ (IMDb) ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಶೇ.28.6 ರಷ್ಟು ಮತಗಳನ್ನು ಪಡೆಯುವ ಮೂಲಕ 'ಟಾಕ್ಸಿಕ್' ಅಗ್ರಸ್ಥಾನದಲ್ಲಿದೆ. ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು, ಮಾರ್ಚ್ 19 ರಂದು ಈ ಎರಡೂ ಸಿಇಮಾಗಳು ಒಟ್ಟಿಗೆ ತೆರೆಗೆ ಬರಲಿವೆ.

'ಕೆಜಿಎಫ್' ಸರಣಿಯ ಮೂಲಕ ಇಡೀ ವಿಶ್ವವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ `ರಾಕಿಂಗ್ ಸ್ಟಾರ್' ಯಶ್, ಈಗ ಮತ್ತೊಮ್ಮೆ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದಾರೆ. ಕೆಜಿಎಫ್ 2 ನಂತರ ಯಶ್ ಯಾವ ಸಿನಿಮಾ ಮಾಡಲಿದ್ದಾರೆ ಎಂಬ ಕುತೂಹಲಕ್ಕೆ 'ಟಾಕ್ಸಿಕ್' (Toxic) ಮೂಲಕ ಉತ್ತರ ಸಿಕ್ಕಿದ್ದು, ಈಗ ಈ ಚಿತ್ರ ಹೊಸ ದಾಖಲೆ ಬರೆದಿದೆ.

ನಂಬರ್‌ 1 ಸ್ಥಾನದಲ್ಲಿದೆ ಟಾಕ್ಸಿಕ್‌

ಜನಪ್ರಿಯ ವೆಬ್‌ಸೈಟ್ ಐಎಂಡಿಬಿ (IMDb) ಬಿಡುಗಡೆ ಮಾಡಿರುವ 'ಮೋಸ್ಟ್ ಆಂಟಿಸಿಪೇಟೆಡ್' (Most Anticipated) ಸಿನಿಮಾ ಮತ್ತು ಶೋಗಳ ಪಟ್ಟಿಯಲ್ಲಿ 'ಟಾಕ್ಸಿಕ್' ಅಗ್ರಸ್ಥಾನದಲ್ಲಿದೆ. ಬರೋಬ್ಬರಿ 28.6% ಮತಗಳನ್ನು ಪಡೆಯುವ ಮೂಲಕ ಇದು ಭಾರತದ ನಂಬರ್ 1 ನಿರೀಕ್ಷಿತ ಚಿತ್ರವಾಗಿ ಹೊರಹೊಮ್ಮಿದೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರ ಇದೇ ಮಾರ್ಚ್ 19 ರಂದು ವಿಶ್ವಾದ್ಯಂತ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಈಗಾಗಲೇ ಚಿತ್ರತಂಡ ನಾಯಕಿಯರ ಪಾತ್ರ ಮತ್ತು ಫಸ್ಟ್ ಲುಕ್‌ಗಳನ್ನು ಬಿಡುಗಡೆ ಮಾಡಿದ್ದು, ಯಶ್ ಅವರ ಪಾತ್ರ ಪರಿಚಯವನ್ನೂ ಮಾಡಿಕೊಟ್ಟಿದೆ. ಈ ಅಪ್‌ಡೇಟ್‌ಗಳು ಪ್ರೇಕ್ಷಕರ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿವೆ.

Toxic: ರಾಯನ ಮುಂದೆ ಅಬ್ಬರಿಸಿದ ಆ ಹಾಲಿವುಡ್‌ ವಿಲನ್‌ ಯಾರು ಗೊತ್ತಾ? ಯಶ್‌ಗೆ ಥ್ಯಾಂಕ್ಸ್‌ ಹೇಳಿದ್ದೇಕೆ ಈ ನಟ?

ಧುರಂಧರ್‌ 2 ಅಬ್ಬರದ ನಡುವೆಯೂ ಟಾಕ್ಸಿಕ್‌ ಹವಾ

ರಣವೀರ್‌ ಸಿಂಗ್‌ ನಟನೆಯ ʻಧುರಂಧರ್‌ʼ ಸಿನಿಮಾವು ಬಾಕ್ಸ್‌ ಆಫೀಸ್‌ ಭರ್ಜರಿ ಕಮಾಯಿ ಮಾಡಿದ್ದು, ಅದರ ಪಾರ್ಟ್‌ 2 ಮಾರ್ಚ್‌ 19ರಂದೇ ತೆರೆಗೆ ಬರಲಿದೆ. ಹಾಗಾಗಿ, ಬಾಕ್ಸ್‌ ಆಫೀಸ್‌ನಲ್ಲಿ ಈ ಎರಡೂ ಸಿನಿಮಾಗಳ ಮಧ್ಯೆ ವಾರ್‌ ನಡೆಯಲಿದೆ ಎಂಬ ಲೆಕ್ಕಾಚಾರದ ಮಾತುಗಳು ಕೇಳಿಬಂದಿವೆ. ಆದರೆ ಐಎಂಡಿಬಿ ಪ್ರಕಾರ, ಭಾರತೀಯ ಮೊದಲ ಆಯ್ಕೆ ಯಶ್‌ ಅವರ ಟಾಕ್ಸಿಕ್‌ ಆಗಿದೆ. ಧುರಂಧರ್‌ 2 ಚಿತ್ರಕ್ಕೆ 3ನೇ ಸ್ಥಾನ ಸಿಕ್ಕಿದೆ. ಶೇ.28.6% ಮತಗಳು ಟಾಕ್ಸಿಕ್‌ ಸಿನಿಮಾಗೆ ಸಿಕ್ಕರೆ, ಧುರಂಧರ್‌ 2 ಸಿನಿಮಾಗೆ ಶೇ.19ರಷ್ಟು ಮತಗಳು ಸಿಕ್ಕಿವೆ.

Toxic Teaser:‌ ಯಶ್ ಜೊತೆ ಕಾರಿನಲ್ಲಿದ್ದ ಆ ಸುಂದರಿ 'ನಟಾಲಿಯಾ' ಅಲ್ಲ! 'ಟಾಕ್ಸಿಕ್' ಮಿಸ್ಟರಿ ಹುಡುಗಿ ಬಗ್ಗೆ ಬಿಗ್ ಟ್ವಿಸ್ಟ್ ಕೊಟ್ಟ ಡೈರೆಕ್ಟರ್!‌

ಬಹುನಿರೀಕ್ಷಿತ ಟಾಪ್‌ 10 ಸಿನಿಮಾಗಳು ಯಾವುವು?

  1. ಟಾಕ್ಸಿಕ್ (Toxic) - 28.6%
  2. 20 ರೋಮಿಯೋ (20 Romeo) - 24.1%
  3. ಧುರಂಧರ್ 2 (Dhurandhar 2) - 19%
  4. ದ ಪ್ಯಾರಡೈಸ್ (The Paradise) - 7%
  5. ವಿತ್ ಲವ್ (With Love) - 4.3%
  6. ಪೆದ್ದಿ (Peddi) - 3.8%
  7. ವಧ್ 2 (Vadh 2) - 3.7%
  8. ಭಾಬಿಜಿ ಘರ್ ಪರ್ ಹೈ: ಫನ್ ಆನ್ ದ ರನ್ (Bhabiji Ghar Par Hain Fun on the Run) - 3.6%
  9. ತೂ ಯಾ ಮೈ (Tu Yaa Main) - 3.5%
  10. ಅನೋಮಿ (Anomie) - 2.5%