Toxic: ರಾಯನ ಮುಂದೆ ಅಬ್ಬರಿಸಿದ ಆ ಹಾಲಿವುಡ್ ವಿಲನ್ ಯಾರು ಗೊತ್ತಾ? ಯಶ್‌ಗೆ ಥ್ಯಾಂಕ್ಸ್ ಹೇಳಿದ್ದೇಕೆ ಈ ನಟ?
Toxic Movie: ಯಶ್ ನಟನೆಯ 'ಟಾಕ್ಸಿಕ್' ಟೀಸರ್‌ನಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿರುವ ಹಾಲಿವುಡ್ ನಟ ಕೈಲ್ ಪಾಲ್ (Kyle Paul) ಈಗ ಸಿನಿಪ್ರಿಯರ ಗಮನ ಸೆಳೆದಿದ್ದಾರೆ. ಚಿತ್ರದಲ್ಲಿ ಪ್ರಭಾವಿ ವಿಲನ್ ಪಾತ್ರ ನಿರ್ವಹಿಸಿರುವ ಇವರು, ತಮಗೆ ಈ ಅವಕಾಶ ನೀಡಿದ ಯಶ್ ಮತ್ತು ನಿರ್ದೇಶಕಿ ಗೀತು ಮೋಹನ್‌ದಾಸ್ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಧನ್ಯವಾದ ತಿಳಿಸಿದ್ದಾರೆ.
-
ಯಶ್ ಅವರ ಟಾಕ್ಸಿಕ್ ಸಿನಿಮಾದ ಟೀಸರ್ ರಿಲೀಸ್ ಆಗಿ, ಈಗಾಗಲೇ ಭಾರಿ ಸದ್ದು ಮಾಡುತ್ತಿದೆ. ಯಶ್ ಅವರ ರಾಯ ಪಾತ್ರ ಇಂಟ್ರೋಡಕ್ಷನ್‌ಗೆಂದೇ ಮಾಡಿದ್ದ ಟೀಸರ್ ಇದ್ದಾಗಿದ್ದರೂ, ಇದರಲ್ಲಿ ಮತ್ತೊಂದಿಷ್ಟು ಪಾತ್ರಗಳು ಹೈಲೈಟ್ ಆಗಿವೆ. ಯಶ್ ಜೊತೆಗೆ ಕಾರಿನಲ್ಲಿ ರೊಮ್ಯಾನ್ಸ್ ಮಾಡಿದ ನಟಿ ಯಾರು ಎಂಬ ಚರ್ಚೆ ಜೋರಾದ ಬೆನ್ನಲ್ಲೇ ಆ ನಟಿ ಹೆಸರು ಬೀಟ್ರಿಜ್ ಟೌಫೆನ್‌ಬಾಚ್ ಎಂಬುದು ಗೊತ್ತಾಯಿತು. ಇದೀಗ ಆ ಟೀಸರ್‌ನ ಮತ್ತೊಂದು ಪಾತ್ರ ಬಹಳ ಸದ್ದು ಮಾಡ್ತಿದೆ. ಅವರೇ ಕೈಲ್ ಪಾಲ್!
ಹಾಲಿವುಡ್ ನಟ ಕೈಲ್ ಪಾಲ್!
ಹೌದು, ಟಾಕ್ಸಿಕ್ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿರುವ ಕೈಲ್ ಪಾಲ್, ಆ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ. 'ಟಾಕ್ಸಿಕ್' ಸಿನಿಮಾದ ಟೀಸರ್‌ನಲ್ಲಿ ಕೈಲ್ ಪಾಲ್ ಅವರ ಸ್ಟೈಲಿಶ್ ಲುಕ್ ಗಮನ ಸೆಳೆದಿದೆ. ಇವರು ಈ ಚಿತ್ರದಲ್ಲಿ ಲಂಡನ್ ಮೂಲದ ಭೂಗತ ಲೋಕದ ಅಥವಾ ಪ್ರಭಾವಿ ವ್ಯಕ್ತಿಯ ಪಾತ್ರವನ್ನು ನಿರ್ವಹಿಸುತ್ತಿರಬಹುದು ಎಂದು ಊಹಿಸಲಾಗಿದೆ. ಈ ಸಿನಿಮಾದಲ್ಲಿ ನಟಿಸಿದ್ದರ ಬಗ್ಗೆ ಖುಷಿ ಹಂಚಿಕೊಂಡಿರುವ ಕೈಲ್ ಪಾಲ್ ಅವರು, ಈ ಅವಕಾಶ ನೀಡಿದ್ದಕ್ಕೆ ಯಶ್ ಅವರಿಗೆ ಥ್ಯಾಂಕ್ಸ್ ಹೇಳಿದ್ದಾರೆ.
Rukmini Vasanth: ಸರಳ ಸುಂದರಿ ರುಕ್ಮಿಣಿ ವಸಂತ್ ಈಗ ʻಮೆಲ್ಲಿಸಾʼ; ಟಾಕ್ಸಿಕ್‌ನಲ್ಲಿ ಖಡಕ್ ಲುಕ್!
"ಭಾರತವು ನನ್ನನ್ನು ಯಾವುದೇ ಹಿಂಜರಿಕೆಯಿಲ್ಲದೆ ಸ್ವಾಗತಿಸಿದೆ ಮತ್ತು ನಾನು ಪ್ರೀತಿಸುವ ಕೆಲಸವನ್ನು ಮಾಡುವಾಗ ನನಗೆ ಒಂದು ಮನೆಯಂತಹ ಅನುಭವ ನೀಡಿದೆ ಎಂಬುದು ನನಗೆ ಹೆಮ್ಮೆಯ ವಿಷಯ! ಇದು ನನ್ನ 'ವಿಲನ್' ಲುಕ್. ಗೀತು ಮೋಹನ್‌ದಾಸ್ ಮತ್ತು ಯಶ್.. ನನಗಂತೂ ಇದಕ್ಕಿಂತ ಉತ್ತಮವಾದ ತಂಡ ಸಿಗಲು ಸಾಧ್ಯವಿರಲಿಲ್ಲ. ಧನ್ಯವಾದಗಳು.." ಎಂದು ಕೈಲ್ ಪಾಲ್ ಅವರು ಹೇಳಿದ್ದಾರೆ.
Toxic: 'ಟಾಕ್ಸಿಕ್' ಸಿನಿಮಾ ನಾಯಕಿಯ ಫಸ್ಟ್ ಲುಕ್ ರಿಲೀಸ್; Nadia ಪಾತ್ರದಲ್ಲಿ ಮಿಂಚಿದ ಕಿಯಾರಾ ಅಡ್ವಾಣಿ
ನಿರ್ದೇಶಕಿ ಗೀತು ಮೋಹನ್ ದಾಸ್ ಅವರು 'ಟಾಕ್ಸಿಕ್' ಚಿತ್ರವನ್ನು ಜಾಗತಿಕ ಮಟ್ಟದಲ್ಲಿ ಮಾಡುತ್ತಿರುವುದರಿಂದ, ಕೈಲ್ ಪಾಲ್ ಅವರಂತಹ ವಿದೇಶಿ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಚಿತ್ರದಲ್ಲಿ ಕೈಲ್ ಪಾಲ್ ಅವರೊಂದಿಗೆ ಮತ್ತೊಬ್ಬ ವಿದೇಶಿ ನಟಿ ನಟಾಲಿಯಾ ಬರ್ನ್ ಕೂಡ ಅಭಿನಯಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಯಾರೆಲ್ಲಾ ಕಾಣಿಸಿಕೊಳ್ಳಬಹುದು ಎಂಬ ಕುತೂಹಲ ಸಿನಿಪ್ರಿಯರಲ್ಲಿದೆ.
ಕೈಲ್ ಪಾಲ್ ಹಂಚಿಕೊಂಡಿರುವ ಪೋಸ್ಟ್
ಸದ್ಯ ಟಾಕ್ಸಿಕ್ ಟೀಸರ್ ದೊಡ್ಡ ಸಂಚಲನ ಉಂಟು ಮಾಡಿದ್ದು, ಈಗಾಗಲೇ ಸುಮಾರು 250+ ಮಿಲಿಯನ್ ಡಿಜಿಟಲ್ ವೀವ್ಸ್ ಪಡೆದುಕೊಂಡಿದೆ. ಮಾರ್ಚ್ 19ರಂದು ವಿಶ್ವಾದ್ಯಂತ ಈ ಸಿನಿಮಾವು ತೆರೆಗೆ ಬರಲಿದೆ.