ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hania Aamir: ಪಾಕ್‌ ನಟಿಯರಿಗೆ ಶಾಕ್‌; ಹಾನಿಯಾ ಅಮೀರ್‌, ಮಹಿರಾ ಖಾನ್ ಸೇರಿ ಹಲವರ ಇನ್ಸ್ಟಾಗ್ರಾಮ್ ಅಕೌಂಟ್‌ ಬ್ಯಾನ್‌!

ಭಾರತ 16 ಪಾಕಿಸ್ತಾನಿ ಯೂಟ್ಯೂಬ್‌ಗಳನ್ನು ನಿಷೇಧಿಸಿತ್ತು. ಇದೀಗ ಪಾಕ್‌ ನಟಿಯರಾದ ಮಹಿರಾ ಖಾನ್, ಹನಿಯಾ ಆಮಿರ್ ಮತ್ತು ಅಲಿ ಜಾಫರ್ ಸೇರಿದಂತೆ ಜನಪ್ರಿಯ ಪಾಕಿಸ್ತಾನಿ ಕಲಾವಿದರ ಇನ್‌ಸ್ಟಾಗ್ರಾಮ್ ಖಾತೆಗಳನ್ನು ಬುಧವಾರ ಸಂಜೆ ಭಾರತದಲ್ಲಿ ನಿರ್ಬಂಧಿಸಲಾಗಿದೆ. ಪಾಕಿಸ್ತಾನದ ಕೆಲ ಸುದ್ದಿ ವಾಹಿನಿಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ.

ಹಾನಿಯಾ ಅಮೀರ್‌, ಮಹಿರಾ ಖಾನ್ ಸೇರಿ ಹಲವರ ಇನ್ಸ್ಟಾ ಅಕೌಂಟ್‌ ಬ್ಯಾನ್‌

Profile Vishakha Bhat May 1, 2025 9:28 AM

ನವದೆಹಲಿ: ಏ. 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಬಳಿಕ ಭಾರತ ಪಾಕಿಸ್ತಾನದ ಮೇಲೆ ಸಾಕಷ್ಟು ರಾಜತಾಂತ್ರಿಕ ನಡೆಯನ್ನು ಕೈಗೊಂಡಿದೆ. ಭಾರತ 16 ಪಾಕಿಸ್ತಾನಿ ಯೂಟ್ಯೂಬ್‌ಗಳನ್ನು ನಿಷೇಧಿಸಿತ್ತು. ಇದೀಗ ಪಾಕ್‌ ನಟಿಯರಾದ ಮಹಿರಾ ಖಾನ್, ಹನಿಯಾ ಆಮಿರ್ (Hania Amir) ಮತ್ತು ಅಲಿ ಜಾಫರ್ ಸೇರಿದಂತೆ ಜನಪ್ರಿಯ ಪಾಕಿಸ್ತಾನಿ ಕಲಾವಿದರ ಇನ್‌ಸ್ಟಾಗ್ರಾಮ್ ಖಾತೆಗಳನ್ನು ಬುಧವಾರ ಸಂಜೆ ಭಾರತದಲ್ಲಿ ನಿರ್ಬಂಧಿಸಲಾಗಿದೆ. ಪಾಕಿಸ್ತಾನದ ಕೆಲ ಸುದ್ದಿ ವಾಹಿನಿಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಪಹ್ಗಲಾಮ್‌ನಲ್ಲಿ ನಡೆದಿರುವ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ಸಾಕ್ಷಿ ಸಮೇತ ವಿಶ್ವಸಂಸ್ಥೆ ಎದುರು ಭಾರತ ವರದಿಯನ್ನು ಸಲ್ಲಿಸಿದೆ.

ಪ್ರಚೋದನಕಾರಿ ಮತ್ತು ಕೋಮು ಸೂಕ್ಷ್ಮ ವಿಷಯವನ್ನು ಹರಡಿದ್ದಕ್ಕಾಗಿ ಸರ್ಕಾರವು 16 ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್‌ಗಳನ್ನು ನಿಷೇಧಿಸಿದ ಬೆನ್ನಲ್ಲೇ, ನಟರ ಖಾತೆಗಳನ್ನು ನಿರ್ಬಂಧಿಸುವ ಕ್ರಮ ಕೈಗೊಳ್ಳಲಾಗಿದೆ. ಪಾಕಿಸ್ತಾನಿ ಡ್ರಾಮಾಗಳಾದ "ಮೇರೆ ಹಮ್ಸಫರ್" ಮತ್ತು "ಕಭಿ ಮೇ ಕಭಿ ತುಮ್" ಗಳಿಂದ ಭಾರತೀಯ ಅಭಿಮಾನಿಗಳಲ್ಲಿ ಜನಪ್ರಿಯರಾಗಿರುವ ನಟಿ ಹಾನಿಯಾ ಅಮಿರ್‌ ಪಹಲ್ಗಾಮ್ ದಾಳಿಯ ಬಗ್ಗೆ ಪ್ರತಿಕ್ರಿಯಿಸಿ, ಇಂತಹ ಘಟನೆಗಳು ಎಲ್ಲಿ ನಡೆದರೂ ಅದು ದುರಂತವೇ ಎಂದು ಹೇಳಿದ್ದರು. ದಿಲ್ಜಿತ್‌ ದೋಸಾಂಜಾ ಅವರ ಮುಂದಿನ ಹಾಡಿನಲ್ಲಿ ಹಾನಿಯಾ ಕಾಣಿಸಿಕೊಳ್ಳುವವರಿದ್ದರು. ಆದರೆ ದಾಳಿ ಬಳಿಕ ಅವರನ್ನು ಕೈ ಬಿಡಲಾಗಿದೆ ಎಂದು ತಿಳಿದು ಬಂದಿದೆ.

ಮತ್ತೊಬ್ಬ ಪಾಕಿಸ್ತಾನಿ ಜನಪ್ರಿಯ ನಟಿ ಮಹಿರಾ ಖಾನ್ ಶಾರುಕ್‌ ಖಾನ್‌ ಅವರ ಜೊತೆ ಬಣ್ಣ ಹಚ್ಚಿದ್ದರು. ಓ ಝಾಲಿಮಾ ಹಾಡಿನಲ್ಲಿ ಮಹಿರಾ ಭಾರತೀಯ ಮನ ಗೆದ್ದಿದ್ದರು. ಇದೀಗ ಅವರ ಇನಸ್ಟಾಗ್ರಾಂ ಖಾತೆ ಕೂಡ ಭಾರತದಲ್ಲಿ ಬ್ಯಾನ್‌ ಆಗಿದೆ. ಆದಾಗ್ಯೂ, ಫವಾದ್ ಖಾನ್ , ಮೌರಾ ಹೊಕೇನ್ ಮತ್ತು ಗಾಯಕ ಅತಿಫ್ ಅಸ್ಲಾಮ್‌ರಂತಹ ತಾರೆಯರ ಪ್ರೊಫೈಲ್‌ಗಳು ಭಾರತೀಯ ಬಳಕೆದಾರರಿಗೆ ಕಾಣಿಸುತ್ತಿದೆ.

ಈ ಸುದ್ದಿಯನ್ನೂ ಓದಿ: Narendra Modi: ಪ್ರಧಾನಿ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ; ಪಾಕಿಸ್ತಾನದ ವಿರುದ್ಧ ಇನ್ನಷ್ಟು ಕಠಿಣ ಕ್ರಮ

ಭಾರತದಲ್ಲಿ ಪಾಕಿಸ್ತಾನಿ ಸೆಲೆಬ್ರಿಟಿಗಳ ಇನ್‌ಸ್ಟಾಗ್ರಾಮ್ ಖಾತೆಗಳ ಮೇಲೆ ಆಯ್ದ ನಿರ್ಬಂಧ ಹೇರಿರುವುದು ಕುತೂಹಲವನ್ನು ಹುಟ್ಟುಹಾಕಿದೆ. ಕೆಲವು ಪ್ರೊಫೈಲ್‌ಗಳನ್ನು ಹೇಗೆ ಮತ್ತು ಏಕೆ ಗುರಿಯಾಗಿಸಲಾಗಿದೆ ಮತ್ತು ಇತರವುಗಳನ್ನು ಇನ್ನೂ ಪ್ರವೇಶಿಸಬಹುದಾಗಿದೆ ಎಂದು ಹಲವರು ಆಶ್ಚರ್ಯ ಪಡುತ್ತಿದ್ದಾರೆ. ಎರಡು ದಿನಗಳ ಹಿಂದೆ ಭಾರತ ಸರ್ಕಾರವು ಡಾನ್ ನ್ಯೂಸ್, ಸಮಾ ಟಿವಿ, ಎಆರ್‌ವೈ ನ್ಯೂಸ್ ಮತ್ತು ಜಿಯೋ ನ್ಯೂಸ್‌ನಂತಹ ಪ್ರಮುಖ ಮಾಧ್ಯಮಗಳು ಸೇರಿದಂತೆ 16 ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್‌ಗಳನ್ನು ನಿಷೇಧಿಸಿದ ನಂತರ ಇದು ಬಂದಿದೆ.