ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Ashwini Gowda: ಗಿಲ್ಲಿ ನಿಜವಾದ ಬಡವನಾ? ಬಡವನ ಥರ ಗೆಟಪ್‌ ಹಾಕ್ಕೊಂಡು ಬದುಕೋದು ಬೇರೆ! ಅಶ್ವಿನಿ ಗೌಡ

Gilli Nata: ಬಿಗ್‌ ಬಾಸ್‌ ಸೀಸನ್‌ 12ರ ವಿನ್ನರ್‌ ಗಿಲ್ಲಿ ನಟ ಆದ್ರೆ, ರಕ್ಷಿತಾ ಶೆಟ್ಟಿ ರನ್ನರ್‌ ಅಪ್‌ ಆದರು. ಗಿಲ್ಲಿ ನಟನ ಹವಾ ಜೋರಾಗಿದೆ. ಮಂಡ್ಯ, ಮದ್ದೂರು , ಮಳವಳ್ಳಿಗೆ ಭೇಟಿ ನೀಡಿದ್ದಾರೆ. ಗಿಲ್ಲಿ ನಟ ಹೋದಲ್ಲೆಲ್ಲ ಜನಜಾತ್ರೆ ಸೇರುತ್ತಿದೆ. ಇದರ ಬೆನ್ನಲ್ಲೇ ಅಶ್ವಿನಿ ಗೌಡ ಕೂಡ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಮಾಧ್ಯಮವೊಂದಕ್ಕೆ ನಿಜವಾದ ಬಡವ ಬೇರೆ, ಬಡವನ ರೀತಿ ಗೆಟಪ್‌ ಹಾಕ್ಕೊಂಡು ಬದುಕೋದು ಬೇರೆ ಎಂದು ಬಿಗ್‌ ಬಾಸ್ 2ನೇ ರನ್ನರ್‌ ಅಪ್‌‌ ಅಶ್ವಿನಿ ಗೌಡ ಟಾಂಗ್‌ ಕೊಟ್ಟಿದ್ದಾರೆ.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ ಸೀಸನ್‌ 12ರ ವಿನ್ನರ್‌ (Bigg Boss Kannada 12) ಗಿಲ್ಲಿ ನಟ (Gilli Nata) ಆದ್ರೆ, ರಕ್ಷಿತಾ ಶೆಟ್ಟಿ ರನ್ನರ್‌ ಅಪ್‌ ಆದರು. ಗಿಲ್ಲಿ ನಟನ ಹವಾ ಜೋರಾಗಿದೆ. ಮಂಡ್ಯ, ಮದ್ದೂರು (Maddur), ಮಳವಳ್ಳಿಗೆ ಭೇಟಿ ನೀಡಿದ್ದಾರೆ. ಗಿಲ್ಲಿ ನಟ ಹೋದಲ್ಲೆಲ್ಲ ಜನಜಾತ್ರೆ ಸೇರುತ್ತಿದೆ. ಇದರ ಬೆನ್ನಲ್ಲೇ ಅಶ್ವಿನಿ ಗೌಡ ಕೂಡ ಸಂದರ್ಶನಗಳನ್ನು (Interview) ನೀಡುತ್ತಿದ್ದಾರೆ. ಮಾಧ್ಯಮವೊಂದಕ್ಕೆ ನಿಜವಾದ ಬಡವ ಬೇರೆ, ಬಡವನ ರೀತಿ ಗೆಟಪ್‌ ಹಾಕ್ಕೊಂಡು ಬದುಕೋದು ಬೇರೆ ಎಂದು ಬಿಗ್‌ ಬಾಸ್ 2ನೇ ರನ್ನರ್‌ ಅಪ್‌‌ ಅಶ್ವಿನಿ ಗೌಡ (Ashwini Gowda) ಟಾಂಗ್‌ ಕೊಟ್ಟಿದ್ದಾರೆ.

ಗಿಲ್ಲಿ ನಿಜವಾದ ಬಡವನಾ?

ಮಾಧ್ಯಮವೊಂದಕ್ಕೆ ಅಶ್ವಿನಿ ಹೇಳಿಕೆ ನೀಡಿದ್ದು ಹೀಗೆ, ಬಡವರ ಮಕ್ಕಳು ಬೆಳೆಯಬೇಕು ಅನ್ನೋದು ನಮ್ಮ ಡಾಲಿ ಧನಂಜಯ್‌ ಅವರ ಡೈಲಾಗ್‌. ಗಿಲ್ಲಿ ನಿಜವಾದ ಬಡವನಾ? ಅದು ಬಹಳ ಮುಖ್ಯ ಆಗುತ್ತೆ. ನಿಜವಾದ ಬಡವ ಬೇರೆ, ಬಡವನ ಥರ ಗೆಟಪ್‌ ಹಾಕ್ಕೊಂಡು ಬದುಕೋದು ಬೇರೆ. ಬಹುಶಃ ಅವರ ಆಟ ಎಲ್ಲರಿಗೂ ಇಷ್ಟ ಆಗಿದೆ ಅಂತ ಹೇಳೋಕೆ ನಾನು ಇಷ್ಟ ಪಡ್ತೀನಿ.

ಇದನ್ನೂ ಓದಿ: Bigg Boss Kannada 12: ಕಾವ್ಯ ಜೊತೆ ಮದುವೆ ಆಗ್ತಾರಾ ಗಿಲ್ಲಿ? ಮಾತಿನ ಮಲ್ಲನ ಉತ್ತರ ಇದು!

ಗಿಲ್ಲಿ ಗೆದ್ದಿದ್ದಾರೆ. ಅವರ ವ್ಯಕ್ತಿತ್ವ ಮತ್ತು ಆಟದ ವಿಚಾರದಲ್ಲಿ ಖಂಡಿತ ನನಗೆ ಹೆಮ್ಮೆಯಿದೆ. ಯಾಕಂದ್ರೆ ಅವರೂ ನನ್ನ ಜೊತೆ ಪ್ರಯಾಣ ಮಾಡಿದ ಪ್ರತಿಸ್ಪರ್ಧಿ ಎಂದರು.

ಅತ್ತೆ ಮಗಳು ಅಂತ ಕರೆದಿದ್ದಾರೆ

ಯುದ್ಧ ಮಾಡಬೇಕಾದ್ರೆ ಕತ್ತಿಯನ್ನು ಕೈಯಲ್ಲಿ ಹಿಡಿದುಕೊಂಡಿರ್ತೀವಿ. ಬಿಗ್‌ ಬಾಸ್‌ ಮುಗಿದ ಮೇಲೆ ಕತ್ತಿಯನ್ನು ಕೆಳಗಡೆ ಇಡ್ತೀವಿ. ಮತ್ತೆ ಅದನ್ನು ಕೈಗೆ ಎತ್ತಿಕೊಳ್ಳಲು ನನಗೆ ಇಷ್ಟ ಇಲ್ಲ. ಹಾಗಾಗಿ, ಗಿಲ್ಲಿ ಗೆದ್ದಿದ್ದಾರೆ. ಒಳ್ಳೆದಾಗ್ಲಿ. ನನ್ನನ್ನು ಅತ್ತೆ ಮಗಳು ಅಂತ ಕರೆದಿದ್ದಾರೆ. ನಾನು ಅವರನ್ನ ಮಾವನ ಮಗ ಅಂತ ಕರೆದಿದ್ದೀನಿ. ಖಂಡಿತ ಒಳ್ಳೆದಾಗಬೇಕು ಎಂದಿದ್ದಾರೆ.



ನನ್ನ ವ್ಯಕ್ತಿತ್ವ ಬಿಟ್ಟುಕೊಡದೇ ಬಂದೆ

ಗಿಲ್ಲಿ ನಟ ಏನು ಮಾಡಬೇಕೋ ಅದನ್ನು ಮಾಡಿದ್ದಾರೆ. ಫೇಕ್ ಅಥವಾ ರಿಯಲ್ ಆಗಿದ್ರೂ ಜನರು ಅದನ್ನು ಮೆಚ್ಚಿದ್ದಾರೆ. ನನ್ನ ವ್ಯಕ್ತಿತ್ವ ಬಿಟ್ಟುಕೊಡದೇ ನಾನು ಇಲ್ಲಿಯ ತನಕ ಬಂದು ನಿಂತಿದ್ದೇನೆ’ ಎಂದಿದ್ದಾರೆ ಅಶ್ವಿನಿ ಗೌಡ.ಪ್ರತಿ ಸಂದರ್ಭದಲ್ಲೂ ನನಗೆ ಗಿಲ್ಲಿ ಅವರನ್ನು ಅರ್ಥ ಮಾಡಿಕೊಳ್ಳಲು ಕಷ್ಟ ಆಗುತ್ತಿತ್ತು. ನನ್ನನ್ನೇ ಯಾಕೆ ಟಾರ್ಗೆಟ್ ಮಾಡುತ್ತಾರೆ ಅನಿಸುತ್ತಿತ್ತು. ಅವರು ಮೊದಲೇ ಬಿಗ್ ಬಾಸ್ ನೋಡಿಕೊಂಡು ಬಂದಿದ್ದರು ಎಂದಿದ್ದಾರೆ.

ಇದನ್ನೂ ಓದಿ: Bigg Boss Kannada 12: ನಿಮ್ಮನ್ನು ಕಳಿಸಿಯೇ ನಾನು ಹೊರಕ್ಕೆ ಹೋಗೋದು! ಅಶ್ವಿನಿ ವಿರುದ್ಧದ ಚಾಲೆಂಜ್​​ನಲ್ಲಿ ರಕ್ಷಿತಾಗೆ ಗೆಲುವು

ಬಿಗ್ ಬಾಸ್ ಮನೆಯಲ್ಲಿ ಇದ್ದವರು ತುಂಬಾ ಜನ ಬೆಳಗ್ಗೆ ಎದ್ದು ಮೇಕಪ್ ಹಾಕಿಕೊಂಡು ಅರಮನೆ ತುಂಬಾ ಓಡಾಡುತ್ತಿದ್ದರು. ಆದರೆ ನಾನು ನೈಜವಾಗಿದ್ದೆ. ಒಳ್ಳೆಯದು ಮಾಡಿದ್ದೇನೋ, ಕೆಟ್ಟದ್ದು ಮಾಡಿದ್ದೇನೋ ಗೊತ್ತಿಲ್ಲ. ಅಶ್ವಿನಿ ಆಗಿ ಜೀವಿಸಿದ್ದೇನೆ’ ಎಂದು ಅಶ್ವಿನಿ ಗೌಡ ಹೇಳಿದ್ದಾರೆ.

Yashaswi Devadiga

View all posts by this author