ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

The Devil: ʻಡೆವಿಲ್' ಶೂಟಿಂಗ್ ವೇಳೆ ದರ್ಶನ್‌ ನೋವಿನಿಂದ ಒದ್ದಾಡಿದ್ದು ನಿಜವೇ? ಉತ್ತರಿಸಿದ ನಿರ್ದೇಶಕ

The Devil Press Meet: ದಿ ಡೆವಿಲ್‌ ಸಿನಿಮಾವನ್ನು ನಿರ್ದೇಶನ ಮಾಡುವುದರ ಜೊತೆಗೆ ಪ್ರಕಾಶ್ ಅವರು ಈ ಚಿತ್ರವನ್ನು ನಿರ್ಮಾಣ ಕೂಡ ಮಾಡಿದ್ದಾರೆ. ದರ್ಶನ್ ಅವರಿಗೆ ನಾಯಕಿಯಾಗಿ ರಚನಾ ರೈ ಅಭಿನಯಿಸಿದ್ದಾರೆ. ತುಳಸಿ,‌ ಅಚ್ಯುತ್ ಕುಮಾರ್, ಮಹೇಶ್ ಮಂಜ್ರೇಕರ್, ಶ್ರೀನಿವಾಸ ಪ್ರಭು, ಶೋಭ್ ರಾಜ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. 'ಡೆವಿಲ್' ಶೂಟಿಂಗ್ ವೇಳೆ ದರ್ಶನ್‌ ನೋವಿನಿಂದ ಒದ್ದಾಡಿದ್ದು ನಿಜವೇ ಎಂಬ ಪ್ರಶ್ನೆಗೆ ಪ್ರಕಾಶ್ ವೀರ್ ಉತ್ತರ ನೀಡಿದ್ದಾರೆ.

ʻಡೆವಿಲ್' ಶೂಟಿಂಗ್ ವೇಳೆ ದರ್ಶನ್‌ ನೋವಿನಿಂದ ಒದ್ದಾಡಿದ್ದು ನಿಜವೇ?

ದಿ ಡೆವಿಲ್‌ ಸಿನಿಮಾ ಪ್ರೆಸ್‌ಮೀಟ್‌ -

Yashaswi Devadiga
Yashaswi Devadiga Dec 2, 2025 9:05 PM

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ದಿ ಡೆವಿಲ್' (The Devil Movie) ದರ್ಶನ್ ಅವರ ಅನುಪಸ್ಥಿತಿಯಲ್ಲಿ ಚಿತ್ರತಂಡ ಮಾಧ್ಯಮದ ಮುಂದೆ ಇಂದು (ಡಿ.2) ಹಾಜರಾಗಿದೆ. ನಿರ್ಮಾಪಕ-ನಿರ್ದೇಶಕ ಪ್ರಕಾಶ್ ವೀರ್, ನಟಿ ರಚನಾ ರೈ, ನಟಿ ಶರ್ಮಿಳಾ ಮಂಡ್ರೆ, ಅಚ್ಯುತ್ ಕುಮಾರ್, ಪ್ರಕಾಶ್ ವೀರ್ (Prakash Veer) ಪತ್ನಿ ತಶ್ವಿನಿ ಸೇರಿದಂತೆ ಇಡೀ ಚಿತ್ರತಂಡ ಭಾಗಿಯಾಗಿತ್ತು . ಇದೇ ಡಿಸೆಂಬರ್ 5, ಶುಕ್ರವಾರದಂದು ಚಿತ್ರದ ಟ್ರೇಲರ್ (Trailer)​ ಅನಾವರಣಗೊಳ್ಳಲಿದೆ. 'ಡೆವಿಲ್' ಶೂಟಿಂಗ್ ವೇಳೆ ದರ್ಶನ್‌ ನೋವಿನಿಂದ ಒದ್ದಾಡಿದ್ದು ನಿಜವೇ ಎಂಬ ಪ್ರಶ್ನೆಗೆ ಪ್ರಕಾಶ್ ವೀರ್ ಉತ್ತರ ನೀಡಿದ್ದಾರೆ.

ಹೇಗಿರಲಿದೆ ಸಿನಿಮಾ?

ಪ್ರಕಾಶ್ ವೀರ್ ಮಾತನಾಡಿ, ʻ ಫ್ಯಾಮಿಲಿ ನೋಡುವಂತಹ ಸಿನಿಮಾ. ಎಲ್ಲರೂ ಹೇಳ್ತಾರೆ ಮಿಲನ ಸಿನಿಮಾ ಥರವೇ ಅಂತ. ಮಿಲನಾನೇ ನೋಡಿ ಬಿಡಿ ಅಂತಿನಿ. ಮಿಲನ ಥರ ಸಿನಿಮಾ ಮಾಡೋಕೆ ಆಗಲ್ಲ. ತಾರಕ್‌ ಮಾಡಬೇಕಾದರೆ, ಬೇರೆ ಏನೋ ಮಾಡಬೇಕು ಅಂತ ಮಾಡಿದ್ದು. ನಾನು ದರ್ಶನ್‌ ಹೇಗೆ ನೋಡಬೇಕು ಅಂದುಕೊಂಡಿದ್ದೇನೋ ಅದೇ ರೀತಿ ಡೆವಿಲ್‌ ಸಿನಿಮಾ ನಾನು ಮಾಡಿದ್ದೇನೆ. ಹಳೆಯ ಸಿನಿಮಾಗಳ ಜರ್ನಿಗೂ ಇದಕ್ಕೂ ಸಂಬಂಧವೇ ಇಲ್ಲʼ ಎಂದರು.

ಪರ್ಸನಲ್‌ ಲೈಫ್‌ನ್ನು ಸೆಟ್‌ಗೆ ತಂದೇ ಇಲ್ಲ

ʻದರ್ಶನ್‌ ಅವರು ಯಾವತ್ತೂ ಪರ್ಸನಲ್‌ ಲೈಫ್‌ನ್ನು ಸೆಟ್‌ಗೆ ತಂದೇ ಇಲ್ಲ. ಲೇಟ್‌ ಆಗಿದ್ದಕ್ಕೆ ಬೇಗ ರಿಲೀಸ್‌ ಮಾಡೋಣ ಅಂತಿದ್ದರು. ದರ್ಶನ್‌ ಅವರು ಬ್ಯಾಕ್‌ ಪೇನ್‌ ಆಗಲಿ, ಔಷಧಿಗಳನ್ನು ತೆಗೆದುಕೊಳ್ಳುವುದರ ಬಗ್ಗೆ ಆಗಲಿ ನಾನು ಜಾಸ್ತಿ ಚರ್ಚೆ ಮಾಡಲ್ಲ. ಪೇನ್‌ ಇತ್ತು. ಆದರ ಮಧ್ಯೆ ಅವರು ಕೆಲಸ ಮಾಡ್ತಿದ್ದರು ಅಂತ ಅಷ್ಟೇ ನಾನು ಹೇಳಬಹುದುʼ ಎಂದರು.

ಇದನ್ನೂ ಓದಿ: Actor Darshan: ದರ್ಶನ್‌ ‘ದಿ ಡೆವಿಲ್’ಸಿನಿಮಾಗೆ ಶುಭ ಹಾರೈಸಿದ ಸುಮಲತಾ ಅಂಬರೀಷ್

ʻಸಿನಿಮಾ ಸದ್ಯ ಮುಗಿಸಿದ್ದೇವೆ. ಸಿನಿಮಾ ರಿಲೀಸ್‌ ಮಾಡಬೇಕು ಅಂತ ನಿರ್ಧಾರ ಮಾಡಿದ್ದೇವೆ. ಕರ್ನಾಟಕದ ಎಲ್ಲ ಮೂಲೆಗಳಲ್ಲಿಯೂ ಸಿನಿಮಾ ರಿಲೀಸ್‌ ಆಗಲಿದೆ. ಒಂದಲ್ಲ ಒಂದಿನ ದರ್ಶನ್ ಅವರು ಹೊರಗೆ ಬರುತ್ತಾರೆ. ಪುನಃ ಸಿನಿಮಾ ಶುರು ಮಾಡುತ್ತೇವೆ. ಬಜೆಟ್​ನಲ್ಲಿ ಹೆಚ್ಚು ಕಡಿಮೆ ಆಗಿದೆ. ಅದನ್ನು ನಿಭಾಯಿಸಿಕೊಂಡು ನಾವು ಇಲ್ಲಿಯ ತನಕ ಬಂದಿದ್ದೇವೆ’ ಎಂದು ಪ್ರಕಾಶ್ ವೀರ್ ಅವರು ಹೇಳಿದ್ದಾರೆ.



'ಇದ್ರೇ ನೆಮ್ದಿಯಾಗ್​​ ಇರ್ಬೇಕ್​​​'​​, ಕಥೆಗೆ ಪೂರಕವಾಗಿ ಮಾಡಿರುವ ಹಾಡು. ನಿಜ ಹೇಳಬೇಕು ಎಂದರೆ ನಮಗೆ ದರ್ಶನ್ ವೈಯಕ್ತಿಕ ಜೀವನದ ಒಂದು ಘಟನೆಯ ಸಾಲು ಅನ್ನೋದು ಗೊತ್ತಿರಲಿಲ್ಲ‌. ನನಗೆ ಅನಿರುದ್ದ್ ಶಾಸ್ತ್ರೀ ಈ ಹಾಡನ್ನು ಬರೆದು ಕಳುಹಿಸಿದಾಗ ನಮ್ಮ ಕಥೆಗೆ ಸೂಟ್ ಆಗುತ್ತಿದೆ ಅನಿಸಿತು. ಇದರ ಜೊತೆಗೆ ಶಿವನ ಮೇಲೆ ಒಂದು ಹಾಡು ಕೂಡಾ ಬರೆದಿದ್ರು. ಆದರೆ ಅದು ಸೂಟ್ ಆಗಲಿಲ್ಲ ಎಂದು ಈ ವೇಳೆ ಹೇಳಿದರು.

ಇದನ್ನೂ ಓದಿ: The Devil Movie: `ಡೆವಿಲ್‌' ಸಿನಿಮಾದಲ್ಲಿ ಗಿಲ್ಲಿ ನಟನ ಪರ್ಫಾರ್ಮೆನ್ಸ್ ಹೇಗಿದೆ? ನಟ ಚಂದು ಗೌಡ ಮನದಾಳದ ಮಾತು!

ನಿರ್ದೇಶನ ಮಾಡುವುದರ ಜೊತೆಗೆ ಪ್ರಕಾಶ್ ಅವರು ಈ ಚಿತ್ರವನ್ನು ನಿರ್ಮಾಣ ಕೂಡ ಮಾಡಿದ್ದಾರೆ. ದರ್ಶನ್ ಅವರಿಗೆ ನಾಯಕಿಯಾಗಿ ರಚನಾ ರೈ ಅಭಿನಯಿಸಿದ್ದಾರೆ. ತುಳಸಿ,‌ ಅಚ್ಯುತ್ ಕುಮಾರ್, ಮಹೇಶ್ ಮಂಜ್ರೇಕರ್, ಶ್ರೀನಿವಾಸ ಪ್ರಭು, ಶೋಭ್ ರಾಜ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಡೆವಿಲ್ ಚಿತ್ರ ಡಿಸೆಂಬರ್ 11‌ರಂದು ಅದ್ಧೂರಿಯಾಗಿ ರಿಲೀಸ್‌ ಆಗುತ್ತಿದೆ.