ʻಲೆಜೆಂಡರಿʼ ಮಣಿರತ್ನಂ ಜೊತೆ ಕೈಜೋಡಿಸಿದ ನಟ ವಿಜಯ್ ಸೇತುಪತಿ; ಈ ಚಿತ್ರಕ್ಕೆ ಸಾಯಿ ಪಲ್ಲವಿ ನಾಯಕಿ
ದಿಗ್ಗಜ ನಿರ್ದೇಶಕ ಮಣಿರತ್ನಂ ತಮ್ಮ ಮುಂದಿನ ಚಿತ್ರಕ್ಕೆ ವಿಜಯ್ ಸೇತುಪತಿ ಮತ್ತು ಸಾಯಿ ಪಲ್ಲವಿ ಅವರನ್ನು ನಾಯಕ-ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ. ಈ ಹಿಂದೆ 'ಚೆಕ್ಕ ಚಿವಂತ ವಾನಂ' ಚಿತ್ರದಲ್ಲಿ ವಿಜಯ್ ಜೊತೆ ಕೆಲಸ ಮಾಡಿದ್ದ ಮಣಿರತ್ನಂ, ಈಗ ಪೂರ್ಣ ಪ್ರಮಾಣದ ರೊಮ್ಯಾಂಟಿಕ್ ಡ್ರಾಮಾವನ್ನು ಸಿದ್ಧಪಡಿಸುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.
-
ಖ್ಯಾತ ನಿರ್ದೇಶಕ ಮಣಿರತ್ನಂ ಅವರು ತಮ್ಮ ಹೊಸ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. ಈ ಭಾರಿ ಅವರ ಸಿನಿಮಾಗೆ ನಾಯಕ- ನಾಯಕಿಯಾಗಿ ಆಯ್ಕೆಯಾಗಿರುವುದು ವಿಜಯ್ ಸೇತುಪತಿ ಮತ್ತು ಸಾಯಿ ಪಲ್ಲವಿ ಎಂಬುದು ವಿಶೇಷ. ಕೆಲ ವರ್ಷಗಳ ಹಿಂದೆ "ಒಂದು ದಿನ ನಿಮ್ಮೊಂದಿಗೆ ಕೆಲಸ ಮಾಡಲು ನನಗೆ ಅವಕಾಶ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಮಣಿರತ್ನಂ ಹೇಳಿದ್ದರು. ಅದೀಗ ನಿಜವಾಗಿದೆ.
ಈ ಸಿನಿಮಾವನ್ನು ಲೈಕಾ ಪ್ರೊಡಕ್ಷನ್ಸ್ ಮತ್ತು ಮಣಿರತ್ನಂ ಅವರ ಮದ್ರಾಸ್ ಟಾಕೀಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿವೆ. ಮೊದಲ ಬಾರಿಗೆ ವಿಜಯ ಸೇತುಪತಿ ಮತ್ತು ಸಾಯಿ ಪಲ್ಲವಿ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಚಿತ್ರದ ಹೆಚ್ಚಿನ ವಿವರಗಳನ್ನು ಸದ್ಯಕ್ಕೆ ಗೌಪ್ಯವಾಗಿ ಇಡಲಾಗಿದ್ದರೂ, ಮೂಲಗಳ ಪ್ರಕಾರ ಇದೊಂದು ರೊಮ್ಯಾಂಟಿಕ್ ಡ್ರಾಮಾ ಆಗಿರಲಿದೆ ಎಂದು ಹೇಳಲಾಗುತ್ತಿದೆ. ಚಿತ್ರದ ಶೀರ್ಷಿಕೆ, ಚಿತ್ರೀಕರಣದ ವೇಳಾಪಟ್ಟಿ ಮತ್ತು ಉಳಿದ ತಾರಾಗಣದ ಬಗ್ಗೆ ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಹೊರಬೀಳುವ ನಿರೀಕ್ಷೆ ಇದೆ.
AR Rahman: ವಿವಾದ ಹುಟ್ಟುಹಾಕಿದ್ದ ʻಧರ್ಮʼದ ಹೇಳಿಕೆ: ಟೀಕೆಯ ನಂತರ ಮೌನ ಮುರಿದ AR ರೆಹಮಾನ್!
ಒಂದಾದ ಎ ಆರ್ ರೆಹಮಾನ್ ಮತ್ತು ಮಣಿರತ್ನಂ
ಕಳೆದ ವರ್ಷ ಮಣಿರತ್ನಂ ಮತ್ತು ಎ. ಆರ್. ರೆಹಮಾನ್ ಜಂಟಿಯಾಗಿ 'ಥಗ್ ಲೈಫ್' ಸಿನಿಮಾ ಮಾಡಿದ್ದರು. ಆದರೆ ಆ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಇದೀಗ ಹೆಸರಿಡದ ಈ ಹೊಸ ಚಿತ್ರಕ್ಕೆ ಎ.ಆರ್. ರೆಹಮಾನ್ ಬದಲು ಯುವ ಪ್ರತಿಭೆ ಸಾಯಿ ಅಭ್ಯಂಕರ್ ಅವರಿಗೆ ಮಣಿರತ್ನಂ ಅವಕಾಶ ನೀಡಲಿದ್ದಾರೆ ಎಂಬ ಟಾಕ್ ಇತ್ತು. ಆದರೆ ಅದು ನಿಜವಾಗಿಲ್ಲ. ಈ ಸಲವೂ ಮಣಿರತ್ನಂ ಅವರು ಎ. ಆರ್. ರೆಹಮಾನ್ ಜೊತೆಗೆಯೇ ಕೆಲಸ ಮಾಡಲಿದ್ದಾರೆ. ಇನ್ನು, ವಿಜಯ ಸೇತುಪತಿ ಈ ಹಿಂದೆ 'ಚೆಕ್ಕ ಚಿವಂತ ವಾನಂ' ಚಿತ್ರಕ್ಕಾಗಿ ಮಣಿರತ್ನಂ ಒಟ್ಟಿಗೆ ಕೆಲಸ ಮಾಡಿದ್ದರು. ಇದೀಗ ಮತ್ತೊಮ್ಮೆ ಈ ಹೊಸ ಸಿನಿಮಾಕ್ಕಾಗಿ ಒಂದಾಗಿದ್ದಾರೆ.
ಮೊದಲ ಬಾರಿಗೆ ಬಣ್ಣ ಹಚ್ಚಿದ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್; ಯಾವ ಸಿನಿಮಾಕ್ಕಾಗಿ ಗೊತ್ತಾ?
ಸಖತ್ ಬ್ಯುಸಿ ಇರುವ ವಿಜಯ್ ಸೇತುಪತಿ
ನಟ ವಿಜಯ್ ಸೇತುಪತಿ ಅವರು ಸದ್ಯ 'ಜೈಲರ್ 2', 'ಟ್ರೈನ್', 'ಸ್ಲಮ್ ಡಾಗ್: 33 ಟೆಂಪಲ್ ರೋಡ್', 'ಅರಸನ್', ʻಪಾಟೆಕ್ ನಾವೆಲ್ʼ ಮುಂತಾದ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ಜೊತೆಗೆ ವೆಬ್ ಸರಣಿಗಳಲ್ಲೂ ಅವರು ನಟಿಸಲಿದ್ದಾರೆ. ಅತ್ತ ಸಾಯಿ ಪಲ್ಲವಿ ಅವರು ಕೂಡ 'ತಂಡೇಲ್' ಚಿತ್ರದ ನಂತರ 'ಏಕ್ ದಿನ್' ಚಿತ್ರದಲ್ಲಿ ನಟಿಸಿದ್ದಾರೆ. ಅದು ಮೇ 1ರಂದು ತೆರೆಕಾಣಲಿದೆ. ಈ ಸಿನಿಮಾದಲ್ಲಿ ಆಮಿರ್ ಖಾನ್ ಅವರ ಪುತ್ರ ಜುನೈದ್ ಖಾನ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಇದು ಸಾಯಿ ಪಲ್ಲವಿ ಅವರ ಮೊದಲ ಹಿಂದಿ ಸಿನಿಮಾ. ಅದರ ಜೊತೆಗೆ ರಣಬೀರ್ ಕಪೂರ್ ನಟನೆಯ 'ರಾಮಾಯಣ: ಭಾಗ 1 ಮತ್ತು 2ʼ ಸಿನಿಮಾ ಮತ್ತು ಧನುಷ್ ಜೊತೆಗಿನ ಹೆಸರಿಡದ ಚಿತ್ರದಲ್ಲೂ ಸಾಯಿ ಪಲ್ಲವಿ ಬ್ಯುಸಿಯಾಗಿದ್ದಾರೆ.