ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Actor Jaggesh: ಕೆಟ್ಟ ಕಮೆಂಟ್‌, ಟ್ರೋಲ್ ಮಾಡೋರಿಗೆ ಜಗ್ಗೇಶ್ ಮಾತಿನ ಪೆಟ್ಟು

Jaggesh actor: ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಬಗ್ಗೆ ವ್ಯಂಗ್ಯ ಮಾಡುವವರಿಗೆ ಜಗ್ಗೇಶ್ ಮಾತಿನ ಏಟು ಕೊಟ್ಟಿದ್ದಾರೆ. ಎರಡು ಫೋಟೊ ಹಂಚಿಕೊಂಡು ಸ್ಪಷ್ಟನೆ ಕೊಟ್ಟಿದ್ದಾರೆ. ಇತ್ತೀಚೆಗೆ ಮದುವೆ ಸಮಾರಂಭದಲ್ಲಿ ಜಗ್ಗೇಶ್ ಮಾತನಾಡುತ್ತಿದ್ದರು. ಅವರು ಊಟ ಮಾಡುವಾಗ ಅಲ್ಲಿಗೆ ನಟ ಶಿವರಾಜ್‌ಕುಮಾರ್ ಬಂದಿದ್ದರು. ಕೂಡಲೇ ಎದ್ದು ನೋಡಿ ಉಭಯ ಕುಶಲೋಪರಿ ಮಾತುಕತೆ ನಡೆಸಿದ್ದರು. ಶಿವಣ್ಣ ಬಂದಾಗ ಊಟ ಬಿಟ್ಟು ಎದ್ದು ನಿಂತ ಜಗ್ಗೇಶ್ ಎಂದು ಬರೆದು ಫೋಟೊವೊಂದು ವೈರಲ್ ಆಗ್ತಿದೆ. ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಈಗ ಅಶ್ಲೀಲ ಕಮೆಂಟ್ ಹಾಕುವ ವ್ಯಕ್ತಿಗಳಿಗೆ ಜಗ್ಗೇಶ್ ಕ್ಲಾಸ್ ( ತೆಗೆದುಕೊಂಡಿದ್ದಾರೆ.

ನಟ ಜಗ್ಗೇಶ್‌

ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಬಗ್ಗೆ ವ್ಯಂಗ್ಯ ಮಾಡುವವರಿಗೆ ಜಗ್ಗೇಶ್ (Jaggesh) ಮಾತಿನ ಏಟು ಕೊಟ್ಟಿದ್ದಾರೆ. ಎರಡು ಫೋಟೊ ಹಂಚಿಕೊಂಡು ಸ್ಪಷ್ಟನೆ ಕೊಟ್ಟಿದ್ದಾರೆ. ಇತ್ತೀಚೆಗೆ ಮದುವೆ ಸಮಾರಂಭದಲ್ಲಿ ಜಗ್ಗೇಶ್ ಮಾತನಾಡುತ್ತಿದ್ದರು. ಅವರು ಊಟ ಮಾಡುವಾಗ ಅಲ್ಲಿಗೆ ನಟ ಶಿವರಾಜ್‌ಕುಮಾರ್ (Shiva Rajkumar) ಬಂದಿದ್ದರು. ಕೂಡಲೇ ಎದ್ದು ನೋಡಿ ಉಭಯ ಕುಶಲೋಪರಿ ಮಾತುಕತೆ ನಡೆಸಿದ್ದರು. ಶಿವಣ್ಣ ಬಂದಾಗ ಊಟ ಬಿಟ್ಟು ಎದ್ದು ನಿಂತ ಜಗ್ಗೇಶ್ ಎಂದು ಬರೆದು ಫೋಟೊವೊಂದು ವೈರಲ್ ಆಗ್ತಿದೆ. ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಈಗ ಅಶ್ಲೀಲ ಕಮೆಂಟ್ ಹಾಕುವ ವ್ಯಕ್ತಿಗಳಿಗೆ ಜಗ್ಗೇಶ್ ಕ್ಲಾಸ್ (Jaggesh Class) ತೆಗೆದುಕೊಂಡಿದ್ದಾರೆ.

ಜೊತೆ ನಿಂತವರು ಜಯಮಾಲ

‘ನನ್ನ ಬದುಕಿನ ಕಷ್ಟ ಕಾಲದಲ್ಲಿ ನನ್ನ ಜೊತೆ ನಿಂತವರು ಜಯಮಾಲ. ಅದು 1994 (ಅಂದು ಹುಟ್ಟದ ಹಾಗು ಹುಟ್ಟಿದರು ಜಗ ಅರಿಯದ ಮಕ್ಕಳು ಇಂದು ನನ್ನ ಜೀವನ ಬಲ್ಲವರಂತೆ ಕಾಮೆಂಟ್ಸ್ ಹಾಕಿದ್ದಾರೆ). ಮಕ್ಕಳೆ ನಾನು ದೇಹ ಚನ್ನಾಗಿ ಇಟ್ಟು ತಲೆಗೆ ಡೈ ಹಾಕಿಕೊಂಡ ಮಾತ್ರಕ್ಕೆ ನಿಮ್ಮ ವಯಸ್ಸಿನವನು ಎಂಬಂತೆ ತಿಳಿಯದಿರಿ’ ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Ikkis OTT Release: ಧರ್ಮೇಂದ್ರ ಕೊನೆ ಸಿನಿಮಾ 'ಇಕ್ಕಿಸ್'​ ಒಟಿಟಿಗೆ ಎಂಟ್ರಿ!

‘ನನ್ನ ಮಾಹಿತಿ ಬೇಕಾದರೆ ನಿಮ್ಮ ಅಜ್ಜ, ಅಜ್ಜಿ, ತಂದೆ-ತಾಯಿ ಕೇಳಿ. ಒಬ್ಬ ಹಳ್ಳಿ ಹುಡುಗ ಹೇಗೆ ನವರಸನಾಯಕ ಆದ ಎಂದು ಕಥೆ ಹೇಳುತ್ತಾರೆ. ಸಂಸಾರ, ಮಕ್ಕಳು, ಜಗತ್ತು ಭಾರದ ನೇಗಿಲು ಮೈಮೇಲೆ ಬಿದ್ದಾಗ ನಿಮ್ಮ ಕಾಮೆಂಟ್ಸ್ ಹಾಕುವ ಕೈ ಸವೆದು, ಜೀವನ ನರಕವಾಗಿರುತ್ತದೆ. ಆಗ ಪಶ್ಚಾಪ ಕಾಡುತ್ತೆ ಸಮಯ ವ್ಯೆರ್ಥಕ್ಕೆ’ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.

‘ನಾನು ಮಾತಾಡಿದ್ದು ಜಯಮಾಲ ಅವರ ಜೊತೆ ಸಿನಿಮಗಾಗಿ ದುಡಿದ ಸಹಸ್ರಾರು ಕಾರ್ಮಿಕರು ಹಾಗು ಸಿನಿಮಗಾಗಿ ಜೀವನ ಸವೆಸಿದ ಜೀವಗಳ ಮುಂದೆ. ಜೊತೆಗೆ ನನ್ನ 45ವರ್ಷ ಚಿತ್ರರಂಗದಲ್ಲಿ ವೈಯಕ್ತಿಕವಾಗಿ ಕಂಡ ಮಹನೀಯರ ಮುಂದೆ ಹಾಗು ಹೆಮ್ಮೆಯಿಂದ ರಾಜಣ್ಣ ನನ್ನ ಜೊತೆ 17 ವರ್ಷ ಇದ್ದ ಕಥೆ. ಇಂದಿನ ಮಕ್ಕಳಿಗೆ ಏನು ಗೊತ್ತು? ಅಂದಿನ ಅದ್ಭುತ ಸಂಬಂಧಗಳ ಬಗ್ಗೆ.

ನಾನು ಎದ್ದು ನಿಂತು ಗೌರವ ನೀಡಿದೆ

‘ಯಾರು ಏನು ಅಂದರು ನನ್ನ ಸಾಧನೆ ನನ್ನ ಶ್ರಮ ನನ್ನದೆ ಅದನ್ನ ಮುಟ್ಟಲು ಬಿಡಿ, ನೋಡಲು ಆಗದು. ಎರಡನೆಯದು ಶಿವಣ್ಣ ಬಂದಾಗ ನನ್ನ ಊಟ ಮುಗಿದು ಕೈ ತೊಳೆದು ಅವರ ಕಂಡಾಗ ಅಣ್ಣನಂತೆ ಗೌರವಿಸುವ ನಾನು ಎದ್ದು ನಿಂತು ಗೌರವ ನೀಡಿದೆ. ಬದಲಾಗಿ ಊಟ ಬಿಟ್ಟು ನಿಲ್ಲಲಿಲ್ಲ! ಅವರು ನನ್ನ “ದೇವರ ಮಗ” ಜೊತೆಗೆ ನನ್ನ ಕಷ್ಟಕಾಲದಲ್ಲಿ ಅವರ ಜೊತೆ ನಟಿಸಲು ರಣರಂಗ ಚಿತ್ರದಲ್ಲಿ ಇನ್ನೊಬ್ಬ ನಟನ ಬದಲಿಗೆ ನಾನು ಬೇಕೆ ಬೇಕು ಎಂದು ಅವಕಾಶ ಕೊಡಿಸಿದ ಬಂಧು’ ಎಂದು ಶಿವಣ್ಣನ ಹೊಗಳಿದ್ದಾರೆ.



‘ನಮಗೆ ಆದವರನ್ನು ದೇವರಂತೆ ಕಾಣಬೇಕು ಎಂಬ ನೀತಿಪಾಠವನ್ನು ನಮ್ಮ ತಂದೆತಾಯಿ ಕಲಿಸಿದ್ದಾರೆ ವಿನಃ, ಕಂಡಕಂಡವರಿಗೆ ಮೊಬೈಲ್ ಹಿಡಿದು ಕೆಟ್ಟ ಕಾಮೆಂಟ್ಸ್ ಹಾಕಿ ವಿಕೃತ ಆನಂದ ಪಡಿ ಎಂದು ಹೇಳಿಕೊಟ್ಟಿಲ್ಲ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ? ನಾವು ಒಬ್ಬರ ಬಗ್ಗೆ ಮಾತಾಡ ಬೇಕಾದರೆ ಅವರು ತಿಳಿದವರೋ, ಹಿತರೋ,ಬಂಧುಗಳೋ ಆಗಿರಬೇಕು ಆಗ ನಿಮ್ಮ ಅಣಕದ ಮಾತಿಗೆ ಅರ್ಥವಿರುತ್ತದೆ’ ಎಂದಿದ್ದಾರೆ ಜಗ್ಗೇಶ್.

ಕೆಟ್ಟ ಮಾತು ಪ್ರಯೋಗ ಹಾಕೋದು ಯಾವ ಪುರುಷಾರ್ಥಕ್ಕೆ?

ನಾನು ಕಲಾವಿದ ನನ್ನ ಸಿನಿಮ ಜೀವನ ಬಿಟ್ಟರೆ ಇನ್ಯಾವ ವೈಯಕ್ತಿಕ ವಿಷಯ ಯಾರಿಗು ಗೊತ್ತಿಲ್ಲ. ನಾನು ಏಕಾಂಗಿ,ಕಾಯಕಪ್ರಿಯ, ದೇವರ ಕಾರ್ಯದಲ್ಲಿ ಮಗ್ನ, ಅನವಶ್ಯಕ ಯಾವ ವಿಷಯಕ್ಕೂ ಬರದವ ನನ್ನ ಗುಣದ ಬಗ್ಗೆ ನನ್ನ ಮನೆಯವರಿಗೆ ಸರಿಯಾದ ಅರಿವಿಲ್ಲ ಅಂತಹದರಲ್ಲಿ ಸಂಬಂಧ ಇಲ್ಲದವರು, ಬಾಳಿ ಬದುಕ ಬೇಕಾದವರು,ನನ್ನ ಮಕ್ಕಳಿಗಿಂತ ಕಿರಿಯರು ಜಾಲತಾಣದಲ್ಲಿ ಕೆಟ್ಟ ಮಾತು ಪ್ರಯೋಗ ಹಾಕೋದು ಯಾವ ಪುರುಷಾರ್ಥಕ್ಕೆ ಅರಿವಾಗಲಿಲ್ಲ’ ಎಂದು ಜಗ್ಗೇಶ್ ಬೇಸರ ಮಾಡಿಕೊಂಡಿದ್ದಾರೆ.

‘ಹಿರಿಯರ ಮಾತು ಸತ್ಯವಾಗುತ್ತೆ. ತನ್ನ ಕೇಡು ತನ್ನ ತಿಂದು ಅರಗು ಬಂಗಾರತಿನ್ನುತ್ತೆ. ಅರ್ಥಾತ್ ನೀವು ಇನ್ನೊಬರಿಗೆ ಅಣಕ ಕೇಡು ಕೆಟ್ಟ ಮಾತು ಬಳಸಿದರೆ ಬರೆದಿಟ್ಟುಕೊಳ್ಳಿ ನಿಮ್ಮ ಅದೃಷ್ಟ ಕರಗಿ ಕಷ್ಟದ ಸರಮಾಲೆ ಆವರಿಸಿ ನಿಮ್ಮ ಬೆಳವಣಿಗೆ ಸುಟ್ಟುಹಾಕುತ್ತೆ. ಯಾರನ್ನು ನೋಯಿಸದಿರಿ ಕಾಲಭೈರವ ನಿಮ್ಮ ಗಮನಿಸುತ್ತಿದ್ದಾನೆ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Sonu Nigam: ಹುಬ್ಬಳ್ಳಿಯ ಕಾರ್ಯಕ್ರಮ; ಪೋಷಕರಿಂದ ತಪ್ಪಿಸಿಕೊಂಡಿದ್ದ ಬಾಲಕನಿಗೆ ನೆರವಾದ ಸೋನು ನಿಗಮ್

‘ನಿಮ್ಮ ಕೆಟ್ಟತನ ನಿಮ್ಮ ಅವನತಿಗೆ ಕಾರಣ. ಬದಲಾಗಿ ಬಂಗಾರದಂತ ಗುಣ ನಡತೆ ಜೀವನ ಕಟ್ಟಿಕೊಳ್ಳಿ ಇಲ್ಲವಾದರೆ ನಿಮ್ಮವರೆ ನಿಮ್ಮನ್ನ ದೂರ ತಳ್ಳುತ್ತಾರೆ. ಒಬ್ಬ ಹಿರಿಯನಾಗಿ ಬಾಳುವವರಿಗೆ ಒಂದು ಸಂದೇಶ ಎಂದು ಭಾವಿಸಿ. ನನ್ನ ಚಿಂತೆ ಬಿಡಿ ಯಾರ ಸಹಾಯವಿಲ್ಲದೆ ನನ್ನ ಗುಣ ನಡತೆ ಕಂಡು ಚಿತ್ರರಂಗದಲ್ಲಿ ನನ್ನ 45ವರ್ಷ ಬೆಳಸಿದರು, ಹಾಗು ರಾಜಕೀಯದಲ್ಲೂ ಹಳ್ಳಿಯಿಂದ ದಿಲ್ಲಿವರೆಗೆ ಆಶೀರ್ವಾದ ಮಾಡಿದ್ದಾರೆ. ನಮ್ಮ ತಂದೆತಾಯಿ ವಂಶಕ್ಕೆ ಒಳ್ಳೆ ಮಗನಾಗಿ ಗಂಡನಾಗಿ ತಂದೆಯಾಗಿ ತಾತನಾಗಿ ಸಾರ್ಥಕ ಜೀವನ ಸವೆಸಿರುವೆ. ಈ ಆದರ್ಶ ಛಲ ಚಿಂತನೆ ನಿಮಗೂ ಫಲಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ’ ಎಂದಿದ್ದಾರೆ ಜಗ್ಗೇಶ್.

Yashaswi Devadiga

View all posts by this author