Ikkis OTT Release: ಧರ್ಮೇಂದ್ರ ಕೊನೆ ಸಿನಿಮಾ 'ಇಕ್ಕಿಸ್' ಒಟಿಟಿಗೆ ಎಂಟ್ರಿ!
Agastya Nanda: ಇತ್ತೀಚೆಗೆ ನಿಧನರಾದ ಹಿರಿಯ ನಟ ಧರ್ಮೇಂದ್ರ ಪ್ರಮುಖ ಪಾತ್ರದಲ್ಲಿರುವ ಕೊನೆ ಸಿನಿಮಾ, ಹಿರಿಯ ತಾರಾ ದಂಪತಿ ಅಮಿತಾಭ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಅವರ ಚೊಚ್ಚಲ ಚಿತ್ರ 'ಇಕ್ಕಿಸ್' ಹೊಸ ವರ್ಷದಂದು ಅದ್ಧೂರಿಯಾಗಿ ತೆರೆ ಕಂಡಿತ್ತು. ಚಲನಚಿತ್ರ ನಿರ್ಮಾಪಕ ಶ್ರೀರಾಮ್ ರಾಘವನ್ ನಿರ್ದೇಶಿಸಿದ ಈ ಚಿತ್ರವು ದೇಶದ ಅತ್ಯುನ್ನತ ಮಿಲಿಟರಿ ಗೌರವವಾದ ಪರಮ ವೀರ ಚಕ್ರವನ್ನು ಪಡೆದ ಭಾರತದ ಅತ್ಯಂತ ಕಿರಿಯ ವಯಸ್ಸಿನ ಎರಡನೇ ಲೆಫ್ಟಿನೆಂಟ್ ಅರುಣ್ ಖೇತರ್ಪಾಲ್ ಅವರ ಸ್ಪೂರ್ತಿದಾಯಕ ಕಥೆಯನ್ನು ಒಳಗೊಂಡಿದೆ.
ಇಕ್ಕೀಸ್ ಸಿನಿಮಾ -
ಇತ್ತೀಚೆಗೆ ನಿಧನರಾದ ಹಿರಿಯ ನಟ ಧರ್ಮೇಂದ್ರ (Dharmendra) ಪ್ರಮುಖ ಪಾತ್ರದಲ್ಲಿರುವ ಕೊನೆ ಸಿನಿಮಾ, ಹಿರಿಯ ತಾರಾ ದಂಪತಿ ಅಮಿತಾಭ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಅವರ ಚೊಚ್ಚಲ ಚಿತ್ರ 'ಇಕ್ಕಿಸ್' (Ikkis OTT Release) ಹೊಸ ವರ್ಷದಂದು ಅದ್ಧೂರಿಯಾಗಿ ತೆರೆ ಕಂಡಿತ್ತು. ಚಲನಚಿತ್ರ ನಿರ್ಮಾಪಕ ಶ್ರೀರಾಮ್ ರಾಘವನ್ (Sriram Raghavan) ನಿರ್ದೇಶಿಸಿದ ಈ ಚಿತ್ರವು ದೇಶದ ಅತ್ಯುನ್ನತ ಮಿಲಿಟರಿ ಗೌರವವಾದ ಪರಮ ವೀರ ಚಕ್ರವನ್ನು ಪಡೆದ ಭಾರತದ ಅತ್ಯಂತ ಕಿರಿಯ ವಯಸ್ಸಿನ ಎರಡನೇ ಲೆಫ್ಟಿನೆಂಟ್ ಅರುಣ್ ಖೇತರ್ಪಾಲ್ ಅವರ ಸ್ಪೂರ್ತಿದಾಯಕ ಕಥೆಯನ್ನು ಒಳಗೊಂಡಿದೆ. ಇಕ್ಕಿಸ್ ಒಟಿಟಿ (OTT Release) ರಿಲೀಸ್ ಬಗ್ಗೆ ಬಿಗ್ ಅಪ್‌ಡೇಟ್ ಬಂದಿದೆ.
ಕಥೆ ಏನು?
ಹುತಾತ್ಮ ಲೆಫ್ಟಿನೆಂಟ್ ''ಅರುಣ್ ಖೇತ್ರಪಾಲ್'' ಅವರ ಜೀವನಾಧಾರಿತ ಚಿತ್ರ ''ಇಕ್ಕಿಸ್''.1971ರ ಇಂಡೋ-ಪಾಕ್ ಯುದ್ಧದ ''ಬಸಂತರ್'' ಕದನದಲ್ಲಿ 21ನೇ ವಯಸ್ಸಿನಲ್ಲಿ ಹುತಾತ್ಮರಾದ ಅರುಣ್ ಅತ್ಯುನ್ನತ ಗೌರವವಾದ ಪರಮ ವೀರ ಚಕ್ರ ಪಡೆದ ಅತ್ಯಂತ ಕಿರಿಯ ಅಧಿಕಾರಿ. ಇವರ ರಕ್ತದಲ್ಲಿಯೇ ದೇಶ ಸೇವೆ ಇತ್ತು. ಇವರ ಅಜ್ಜ ಮತ್ತು ಮುತ್ತಜ್ಜರೂ ಕೂಡ ಸೈನಿಕರಾಗಿದ್ದರು. ನಿವೃತ್ತ ಬ್ರಿಗೇಡಿಯರ್ ಎಂ.ಎಲ್.ಖೇತ್ರಪಾಲ್ ಅವರ ಮಗ ಆಗಿದ್ದರು ಅರುಣ್ ಖೇತ್ರಪಾಲ್. ಇಂಥಾ ಅರುಣ್ ಖೇತ್ರಪಾಲ್ ಅವರ ದೇಶ ಭಕ್ತಿಯ ಸುತ್ತ ಈ ಚಿತ್ರದ ಕಥೆ ಹೆಣೆಯಲಾಗಿದೆ.
ಇಕ್ಕಿಸ್ ಫೆಬ್ರವರಿ 12, 2026 ರಿಂದ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗಲು ಸಿದ್ಧವಾಗಿದೆ. ಆದರೆ, ಈ ಚಿತ್ರವು ಪ್ರಸ್ತುತ ಬಾಡಿಗೆಗೆ ಲಭ್ಯವಿರುತ್ತದೆ.
ಇದನ್ನೂ ಓದಿ: Mayuri Kyatari: ಡಿವೋರ್ಸ್ ಬಗ್ಗೆ ಕೊನೆಗೂ ಕ್ಲಾರಿಟಿ ಕೊಟ್ಟ ನಟಿ ಮಯೂರಿ ಕ್ಯಾತರಿ!
ಇಕ್ಕಿಸ್ ಪಾತ್ರವರ್ಗ
ಅಗಸ್ತ್ಯ ನಂದಾ 2ನೇ ಲೆಫ್ಟಿನೆಂಟ್ ಅರುಣ್ ಖೇತರ್ಪಾಲ್, PVC ಆಗಿ
ಅರುಣ್ ಅವರ ತಂದೆ ಬ್ರಿಗೇಡಿಯರ್ ಮದನ್ ಲಾಲ್ ಖೇತರ್ಪಾಲ್ (ನಿವೃತ್ತ) ಆಗಿ ಧರ್ಮೇಂದ್ರ
ಜೈದೀಪ್ ಅಹ್ಲಾವತ್ ಬ್ರಿಗೇಡಿಯರ್ ಜಾನ್ ಮೊಹಮ್ಮದ್ ನಿಸಾರ್ ಆಗಿ, ಪಾಕಿಸ್ತಾನದ ಸೇನಾ ಅಧಿಕಾರಿ (ಬ್ರಿಗೇಡಿಯರ್ ಖ್ವಾಜಾ ಮೊಹಮ್ಮದ್ ನಸೀರ್ ಆಧಾರಿತ)
ಜಿತೇಂದರ್ ಸಿಂಗ್ ಸೋವರ್ ನಂದ್ ಸಿಂಗ್ ಆಗಿ
ರಾಹುಲ್ ದೇವ್ ಲೆಫ್ಟಿನೆಂಟ್ ಕರ್ನಲ್ ಹನುತ್ ಸಿಂಗ್, MVC, 2ನೇ ಲೆಫ್ಟಿನೆಂಟ್ ಅರುಣ್ ಖೇತರ್ಪಾಲ್ ಅವರ ಕಮಾಂಡಿಂಗ್ ಆಫೀಸರ್
ಅರುಣ್ ಅವರ 'ಫಮಗುಸ್ತಾ' ಟ್ಯಾಂಕ್‌ನ ಚಾಲಕ ಸೋವರ್ ಪರಾಗ್ ಸಿಂಗ್, MD ಆಗಿ ಶ್ರೀ ಬಿಷ್ಣೋಯ್
ALD ನಾಥು ಸಿಂಗ್, MD ಆಗಿ ವಿಜೇಂದರ್ ಸಿಂಗ್
ಮಧುಸೂದನ್ ಬಿಷ್ಣೋಯ್ ಸೋವರ್ ಬಿಶ್ವನಾಥ್ ಸಿಂಗ್, MD
ಅರುಣ್ ಖೇತರ್ಪಾಲ್ ಅವರ ತಾಯಿ ಮಹೇಶ್ವರಿ ಖೇತರ್ಪಾಲ್ ಆಗಿ ಸುಹಾಸಿನಿ ಮುಲೆ
ರಿಸಲ್ದಾರ್ ಸಗತ್ ಸಿಂಗ್ ಪಾತ್ರದಲ್ಲಿ ಸಿಕಂದರ್ ಖೇರ್
ವಿವಾನ್ ಷಾ ಕ್ಯಾಪ್ಟನ್ ವಿಜೇಂದ್ರ ಮಲ್ಹೋತ್ರಾ 'ಮಲ್ಲು' ಆಗಿ
ಜಹಾಂಗೀರ್ ಪಾತ್ರದಲ್ಲಿ ದೀಪಕ್ ದೋಬ್ರಿಯಾಲ್, ಮದನ್ ಲಾಲ್ ಖೇತರ್ಪಾಲ್ ಅವರ ಸ್ನೇಹಿತ 2ನೇ ಲೆಫ್ಟಿನೆಂಟ್ ಬ್ರಿಜೇಂದ್ರ ಸಿಂಗ್ 'ಬ್ರಿಜ್' ಆಗಿ ಕೈಲಾಶ್ ಗೌತಮನ್ ನಟಿಸಿದ್ದಾರೆ.
ಇದನ್ನೂ ಓದಿ: Amruthadhaare Serial : ಭೂಮಿ ಕೈಗೆ ಸಿಕ್ಕಿಬೀಳ್ತಾರಾ ಮಲ್ಲಿ-ಸುನಿ?
ಇಕ್ಕಿಸ್ ಕೇವಲ ಒಂದು ವಾರ್ ಡ್ರಾಮಾ ಅಲ್ಲ, ಎಮೋಷನ್ಸ್, ಕೌಟುಂಬಿಕ ಬಾಂಧವ್ಯ ಮತ್ತು ಪರಂಪರೆಯಿಂದ ಕೂಡಿದ ಚಿತ್ರ.