ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರಜನಿಕಾಂತ್‌ - ಕಮಲ್‌ ಹಾಸನ್‌ ಮಲ್ಟಿಸ್ಟಾರರ್ ಚಿತ್ರಕ್ಕೆ ಕೊನೆಗೂ ಸಿಕ್ಕಿದ್ರು ಡೈರೆಕ್ಟರ್;‌ ಶೂಟಿಂಗ್ ಯಾವಾಗ? ಇಲ್ಲಿದೆ ಡೀಟೇಲ್ಸ್!

Rajinikanth Kamal Haasan Movie: ರಜನಿಕಾಂತ್‌ ಮತ್ತು ಕಮಲ್‌ ಹಾಸನ್‌ ಕಾಂಬಿನೇಷನ್‌ನ ಹೊಸ ಸಿನಿಮಾವು ಕಾಲಿವುಡ್‌ನಲ್ಲಿ ಸಂಚಲನ ಮೂಡಿಸಿದೆ. ಕಮಲ್ ಹಾಸನ್ ನಿರ್ಮಾಣದ ಈ ಚಿತ್ರಕ್ಕೆ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶಕರಾಗಿ ಆಯ್ಕೆಯಾಗಿದ್ದು, ಲೋಕೇಶ್ ಕನಕರಾಜ್ ಬದಲಿಗೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ. 'ಜೈಲರ್ 2' ನಂತರ ನೆಲ್ಸನ್ ಈ ಬಿಗ್ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಿದ್ದಾರೆ ಎನ್ನಲಾಗಿದೆ.

ʻಸೂಪರ್‌ ಸ್ಟಾರ್‌ʼ ರಜನಿಕಾಂತ್‌ ಅವರ 173ನೇ ಸಿನಿಮಾವನ್ನು ಸಿಬಿ ಚಕ್ರವರ್ತಿ ನಿರ್ದೇಶಿಸುತ್ತಿದ್ದು, ಕಮಲ್‌ ಹಾಸನ್‌ ಅವರು ನಿರ್ಮಾಣ ಮಾಡುತ್ತಿರುವುದು ಗೊತ್ತೇ ಇದೆ. ಇದೀಗ ರಜನಿಕಾಂತ್‌ ಸಿನಿಮಾದ ಕುರಿತ ಹೊಸ ಅಪ್ಡೇಟ್‌ವೊಂದು ಹೊರಬಿದ್ದಿದೆ. ಇದು ರಜನಿಕಾಂತ್‌ ಮತ್ತು ಕಮಲ್‌ ಹಾಸನ್‌ ಅವರು ಒಟ್ಟಿಗೆ ನಟಿಸುತ್ತಿರುವ ಸಿನಿಮಾದ ಕುರಿತ ಮಾಹಿತಿ!

ನೆಲ್ಸನ್‌ಗೆ ಚಾನ್ಸ್‌ ಕೊಟ್ಟ ರಜನಿಕಾಂತ್‌ - ಕಮಲ್‌

ಹೌದು, ಕಮಲ್‌ ಹಾಸನ್‌ ಬ್ಯಾನರ್‌ನಲ್ಲಿ ನಟಿಸಲು ರಜನಿಕಾಂತ್‌ ಅವರು ಎರಡು ಕಾಲ್‌ ಶೀಟ್‌ ನೀಡಿದ್ದಾರೆ. ಒಂದರಲ್ಲಿ ರಜನಿಕಾಂತ್‌ ಹೀರೋ ಆಗಿದ್ದರೆ, ಮತ್ತೊಂದರಲ್ಲಿ ರಜನಿ ಮತ್ತು ಕಮಲ್‌ ಇಬ್ಬರು ಒಟ್ಟಿಗೆ ನಟಿಸಲಿದ್ದಾರೆ. ಈ ಮೊದಲು ರಜನಿ ಮತ್ತು ಕಮಲ್‌ ಕಾಂಬಿನೇಷನ್‌ ಸಿನಿಮಾಕ್ಕೆ ಲೋಕೇಶ್ ಕನಕರಾಜ್ ಅವರು ನಿರ್ದೇಶನ ಮಾಡಲು ಒಪ್ಪಿಕೊಂಡಿದ್ದರು ಮತ್ತು ಚಿತ್ರಕಥೆಯ ಮೇಲೂ ಕೆಲಸ ಮಾಡಿದ್ದರು ಮಾಹಿತಿ ಇತ್ತು. ಆದರೆ ಕೆಲವು ತಿಂಗಳ ನಂತರ ಅದು ಬದಲಾಯಿತು. ಸದ್ಯ ಲೋಕೇಶ್ ಈ ಪ್ರಾಜೆಕ್ಟ್‌ನಲ್ಲಿ ಇಲ್ಲ. ಇದೀಗ ಆ ಜಾಗಕ್ಕೆ ನೆಲ್ಸನ್ ದಿಲೀಪ್‌ಕುಮಾರ್ ಅಂತಿಮಗೊಳಿಸಲಾಗಿದೆಯಂತೆ!

Coolie-War 2 First Reactions: ಬಾಕ್ಸ್‌ ಆಫೀಸ್‌ನಲ್ಲಿ ರಜನಿಕಾಂತ್‌-ಹೃತಿಕ್‌, ಜೂ. ಎನ್‌ಟಿಆರ್‌ ಬಿಗ್‌ ಫೈಟ್‌; ಪ್ರೇಕ್ಷಕರ ಒಲವು ಯಾರ ಕಡೆಗೆ?

ಜೈಲರ್‌ 2ರಲ್ಲಿ ಬ್ಯುಸಿ ಇರುವ ನೆಲ್ಸನ್

ಪ್ರಸ್ತುತ ರಜನಿಕಾಂತ್ ಅಭಿನಯದ 'ಜೈಲರ್ 2' ಚಿತ್ರವನ್ನು ನೆಲ್ಸನ್ ನಿರ್ದೇಶಿಸುತ್ತಿದ್ದಾರೆ. ಇದರ ನಂತರ ಅವರು ರಜನಿಕಾಂತ್ ಮತ್ತು ಕಮಲ್ ಹಾಸನ್ ಅಭಿನಯದ ಈ ಬಹುತಾರಾಗಣದ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಚಿತ್ರದ ಕಥೆ ಈಗಾಗಲೇ ಅಂತಿಮಗೊಂಡಿದ್ದು‌, 'ಜೈಲರ್ 2' ಚಿತ್ರದ ತಮ್ಮ ಕೆಲಸಗಳನ್ನು ಪೂರೈಸಿದ ಬಳಿಕ ನೆಲ್ಸನ್ ಇದರ ಪ್ರಿ-ಪ್ರೊಡಕ್ಷನ್ ಕೆಲಸಗಳನ್ನು ಆರಂಭಿಸಲಿದ್ದಾರೆ.

Rajinikanth: ಬರೋಬ್ಬರಿ 34 ವರ್ಷಗಳ ಬಳಿಕ ಒಂದಾಗಲಿದ್ದಾರೆ ರಜನಿಕಾಂತ್‌-ಮಣಿರತ್ನಂ

ಆದರೆ, ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರ ಪ್ರಸ್ತುತ ಕಮಿಟ್‌ಮೆಂಟ್‌ಗಳಿಂದಾಗಿ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗುವುದಿಲ್ಲ. ಇದಲ್ಲದೆ, ನೆಲ್ಸನ್ ಕೂಡ ಅತ್ತ ತೆಲುಗಿನ ಜೂನಿಯರ್ ಎನ್‌ಟಿಆರ್ (NTR) ಜೊತೆ ತೆಲುಗು ಚಿತ್ರವೊಂದನ್ನು ಮಾಡಲಿದ್ದಾರೆ. ಎನ್‌ಟಿಆರ್ ಅವರ ಸಿನಿಮಾ ಪೂರ್ಣಗೊಂಡ ನಂತರವಷ್ಟೇ ರಜನಿ-ಕಮಲ್ ಅವರ ಮಲ್ಟಿ-ಸ್ಟಾರರ್ ಚಿತ್ರದ ಶೂಟಿಂಗ್ ಆರಂಭವಾಗಲಿದೆ. ಈ ಕ್ರೇಜಿ ಪ್ರಾಜೆಕ್ಟ್‌ಗೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಲಿದ್ದಾರೆ ಎನ್ನಲಾಗಿದೆ. ಸದ್ಯದ ಮಾಹಿತಿ ಪ್ರಕಾರ, ಫೆಬ್ರವರಿಯಲ್ಲಿ ಈ ಸಿನಿಮಾ ಘೋಷಣೆಯಾದರೂ, ಅದರ ಶೂಟಿಂಗ್‌ ಆರಂಭವಾಗುವುದು ತುಂಬಾ ತಡವಾಗಲಿದೆಯಂತೆ.

ಸದ್ಯ ರಜನಿಕಾಂತ್‌ ಅವರ ಜೈಲರ್‌ 2 ಸಿನಿಮಾದ ಶೂಟಿಂಗ್‌ ಮುಗಿಸಿ, ಸಿಬಿ ಚಕ್ರವರ್ತಿ ಚಿತ್ರದಲ್ಲಿ ಬ್ಯುಸಿ ಆಗಲಿದ್ದಾರೆ. ಆ ಸಿನಿಮಾವು 2027ರ ಪೊಂಗಲ್‌ಗೆ ರಿಲೀಸ್‌ ಆಗಲಿದೆ.