Jockey 42 Movie: ʼಜಾಕಿ 42ʼ ಚಿತ್ರದ ಮೂಲಕ ಮತ್ತೆ ಒಂದಾದ ಗುರುತೇಜ್ ಶೆಟ್ಟಿ-ಕಿರಣ್ ರಾಜ್; ಟೈಟಲ್ ಪೋಸ್ಟರ್ ರಿಲೀಸ್
Jockey 42 Movie: ಗುರುತೇಜ್ ಶೆಟ್ಟಿ ನಿರ್ದೇಶನದ, ನಟ ಕಿರಣ್ ರಾಜ್ ಅಭಿನಯದ ʼಜಾಕಿ 42ʼ ಚಿತ್ರದ ಟೈಟಲ್ ಪೋಸ್ಟರ್ ಅನ್ನು ಚಿತ್ರ ತಂಡವು ಬಿಡುಗಡೆಗೊಳಿಸಿದೆ. ಮೇ 15ರಿಂದ ಈ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದೆ.

ʼಜಾಕಿ 42ʼ ಚಿತ್ರದ ಪೋಸ್ಟರ್.

ಬೆಂಗಳೂರು: ʼರಾನಿʼ ಚಿತ್ರದ ಮುಖಾಂತರ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ ನಿರ್ದೇಶಕ ಗುರುತೇಜ್ ಶೆಟ್ಟಿ ಹಾಗೂ ನಟ ಕಿರಣ್ ರಾಜ್ (Kiran Raj) ʼಜಾಕಿ 42ʼ ಚಿತ್ರದ (Jockey 42 Movie) ಮೂಲಕ ಮತ್ತೆ ಒಂದಾಗಿದ್ದಾರೆ. ʼರಾನಿʼಯಲ್ಲಿ ಲಾಂಗ್ ಹಿಡಿದು ಅಬ್ಬರಿಸಿದ ಕಿರಣ್ ರಾಜ್ ಈಗ ಕುದುರೆ ಏರಿ ʼಜಾಕಿʼಯಾಗಿದ್ದಾರೆ. ʼರಾನಿʼಯಲ್ಲಿ ಕೆಲಸ ಮಾಡಿದ ತಂತ್ರಜ್ಞರ ತಂಡ ಇಲ್ಲೂ ಕೆಲಸ ಮಾಡುತ್ತಿದೆ. ರಾಘವೇಂದ್ರ ಬಿ. ಕೋಲಾರ ಛಾಯಾಗ್ರಹಣ, ಸತೀಶ್ ಕಲಾ ನಿರ್ದೇಶನ ಹಾಗೂ ಉಮೇಶ ಆರ್.ಬಿ. ಸಂಕಲನ ಚಿತ್ರಕ್ಕಿದೆ. ʼಗೋಲ್ಡನ್ ಗೇಟ್ ಸ್ಟುಡಿಯೋಸ್ʼ ಬ್ಯಾನರ್‌ನಲ್ಲಿ ಭಾರತಿ ಸತ್ಯನಾರಾಯಣ ʼಜಾಕಿ 42ʼ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಇದೊಂದು ಕಮರ್ಷಿಯಲ್ ಚಿತ್ರವಾಗಿದ್ದು, ಹಾರ್ಸ್ ರೇಸ್ ಹಿನ್ನೆಲೆಯಲ್ಲಿ ಕಥೆ ಸಾಗಲಿದೆ. ಚಿತ್ರ ಕಥೆಯಲ್ಲಿ ಲವ್, ಫ್ಯಾಮಿಲಿ, ಸೆಂಟಿಮೆಂಟ್, ಹಾಸ್ಯ ಎಲ್ಲವೂ ಒಳಗೊಂಡಿದೆ ಎನ್ನುತ್ತಾರೆ ನಿರ್ದೇಶಕ ಗುರುತೇಜ್ ಶೆಟ್ಟಿ. ಮೇ 15ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.
ಈ ಸುದ್ದಿಯನ್ನೂ ಓದಿ | Wedding Fashion: ವೆಡ್ಡಿಂಗ್ ಬ್ರೈಡಲ್‌ವೇರ್ ಶಾಪಿಂಗ್ ಮಾಡುವವರಿಗೆ 5 ಸಿಂಪಲ್ ಐಡಿಯಾ
ಬೆಂಗಳೂರು, ಮೈಸೂರು ಹಾಗೂ ವಿದೇಶದಲ್ಲೂ ಚಿತ್ರೀಕರಣ ನೆಡೆಯಲಿದೆ. ಚಿತ್ರದ ಟೈಟಲ್ ಬಿಡುಗಡೆಗೊಳಿಸಿದ ಚಿತ್ರ ತಂಡವು ಟೈಟಲ್ ಪೋಸ್ಟರ್‌ನಲ್ಲಿ ಪ್ರೇಕ್ಷಕನ ಗಮನ ಸೆಳೆದಿದೆ. ಹಾರ್ಸ್ ರೇಸ್ ಹಿನ್ನೆಲೆಯಲ್ಲಿ ಪೋಸ್ಟರ್ ಇದ್ದು ಗಮನ ಸೆಳೆದಿದೆ. ಉಳಿದ ತಾರಾಗಣ ಹಾಗೂ ತಂತ್ರಜ್ಞರ ಮಾಹಿತಿ ಇನ್ನಷ್ಟೇ ಚಿತ್ರ ತಂಡದಿಂದ ಬರಬೇಕಿದೆ.