Jungle Boogie: ಬರ್ತಿದೆ 'ಜಂಗಲ್ ಬೂಗಿ' ರಿಯಾಲಿಟಿ ಶೋ: ಭಾಗವಹಿಸಲು ಆಸಕ್ತಿ ಇದೆಯಾ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
Jungle Boogie: `ಜಂಗಲ್ ಬೂಗಿ' ಇದು ಹೊಸ ರಿಯಾಲಿಟಿ ಶೋ. ಟೈಟಲ್ ಹೇಳುವಂತೆ ಕಾಡಿನಲ್ಲಿ ನಡೆಯುವ ಶೋ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಮೂಡಿ ಬರಲಿದೆ. ಒಂದು ಟೀಂನಲ್ಲಿ 12 ಜನ ಭಾಗಿಯಾಗಲಿದ್ದು, ಇವರು ಕಾಡಿನಲ್ಲಿ 60 ದಿನ ಕಳೆಯಬೇಕು. ಈ ವಿಭಿನ್ನ ಬಗೆಯ ರಿಯಾಲಿಟಿ ಶೋ EIPK ಪ್ರೊಡಕ್ಷನ್ ಹೌಸ್ ನಡಿ ವಿನೋದ್ ಪಾರ್ಥ ಸಾರಥಿ ನಿರ್ಮಾಣ ಮಾಡುತ್ತಿದ್ದಾರೆ. ಯಶೋಧರ ವಿಕ್ರಮ್ ಈ ಶೋನ ಸಾರಥಿ ಅಂದರೆ ನಿರ್ದೇಶಕರು. ಪಾಲ್ಸ್ ನಾಗ ಹಾಗೂ ಸಂದೀಪ್ ತೀರ್ಥಹಳ್ಳಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಸಾಥ್ ಕೊಡುತ್ತಿದ್ದಾರೆ. ಆಡಿ ನಾಗಾರ್ಜುನ್ ಕ್ಯಾಮೆರಾ ಹಿಡಿಯಲಿದ್ದಾರೆ.
'ಜಂಗಲ್ ಬೂಗಿ' ರಿಯಾಲಿಟಿ ಶೋ -
`ಜಂಗಲ್ ಬೂಗಿ' (Jungle Boogie) ಇದು ಹೊಸ ರಿಯಾಲಿಟಿ ಶೋ. ಟೈಟಲ್ ಹೇಳುವಂತೆ ಕಾಡಿನಲ್ಲಿ ನಡೆಯುವ ಶೋ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಮೂಡಿ ಬರಲಿದೆ. ಒಂದು ಟೀಂನಲ್ಲಿ 12 ಜನ ಭಾಗಿಯಾಗಲಿದ್ದು, ಇವರು ಕಾಡಿನಲ್ಲಿ 60 ದಿನ ಕಳೆಯಬೇಕು. ಈ ವಿಭಿನ್ನ ಬಗೆಯ ರಿಯಾಲಿಟಿ ಶೋ EIPK ಪ್ರೊಡಕ್ಷನ್ ಹೌಸ್ (Production House) ನಡಿ ವಿನೋದ್ ಪಾರ್ಥ ಸಾರಥಿ ನಿರ್ಮಾಣ ಮಾಡುತ್ತಿದ್ದಾರೆ. ಯಶೋಧರ ವಿಕ್ರಮ್ (Yashodhara Vikram) ಈ ಶೋನ ಸಾರಥಿ ಅಂದರೆ ನಿರ್ದೇಶಕರು. ಪಾಲ್ಸ್ ನಾಗ ಹಾಗೂ ಸಂದೀಪ್ ತೀರ್ಥಹಳ್ಳಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಸಾಥ್ ಕೊಡುತ್ತಿದ್ದಾರೆ. ಆಡಿ ನಾಗಾರ್ಜುನ್ ಕ್ಯಾಮೆರಾ ಹಿಡಿಯಲಿದ್ದಾರೆ.
ಎಲ್ಲಿ ಯಾವಾಗ ಶೋ ಪ್ರಸಾರ?
ಜಂಗಲ್ ಬೂಗಿ ರಿಯಾಲಿಟಿ ಶೋನ್ನ zeeಕನ್ನಡ ಪ್ರಸಾರ ಮಾಡಲಿದೆ. ಇದೇ ತಿಂಗಳ 15ರಿಂದ ಆಡಿಷನ್ ಶುರುವಾಗಲಿದ್ದು, ಮೇ ಕೊನೆಯಲ್ಲಿ ಶೂಟಿಂಗ್ ಆರಂಭವಾಗಲಿದೆ. ಜೂನ್ 10 ರಿಂದ zeeನಲ್ಲಿ ಶೋ ಪ್ರಸಾರವಾಗಲಿದೆ.
ಇದನ್ನೂ ಓದಿ: Amruthadhaare Serial: ಇಂದು ಅಮೃತಧಾರೆ ಮಹಾಸಂಚಿಕೆ; ಜೋಡಿ ಜೀವಗಳ ರೊಮ್ಯಾಂಟಿಕ್ ಎಪಿಸೋಡ್
ಯಾರು ಭಾಗಿಯಾಗಬಹುದು?
ಜಂಗಲ್ ಬೂಗಿ ರಿಯಾಲಿಟಿ ಶೋನಲ್ಲಿ ಸಾಮಾನ್ಯರು ಭಾಗಿಯಾಗುವ ಅವಕಾಶವಿದೆ. ಆದರೆ ವಯಸ್ಸು 18 ರಿಂದ 28 ಮೀರಬಾರದು. ಜಂಗಲ್ ಬೂಗಿ ಶೋ ಗೆದ್ದವರಿಗೆ 80 ಲಕ್ಷ ಹಣ ಸಿಗಲಿದೆ.
ಮೆಂಟರ್ ಯಾರು ಯಾರು?
ಜಂಗಲ್ ಬೂಗಿಯ 5 ತಂಡಗಳಲ್ಲಿ ಕನ್ನಡ ಪ್ಯಾಂಥರ್ಸ್ ತಂಡಕ್ಕೆ ಕನ್ನಡದ ಖ್ಯಾತ ನಾಯಕ ರಮೇಶ್ ಅರವಿಂದ್ ರವರು ಮೆಂಟರ್ ಆಗಿರುತ್ತಾರೆ. ತೆಲುಗು ಲಯನ್ಸ್ ಗೆ ತೆಲುಗಿನ ಖ್ಯಾತ ನಾಯಕ ನಟರಾದಂಥ ಮೇಕಾ ಶ್ರೀಕಾಂತ್ ಅವರು ಮೆಂಟರ್ ಆಗಿರುತ್ತಾರೆ ತಮಿಳು ಟೈಗರ್ಸ್ ಗೆ ತಮಿಳಿನ ಖ್ಯಾತ ನಟ, ನಿರ್ಮಾಪಕ , ನಿರ್ದೇಶಕ ಅರ್ಜುನ್ ಸರ್ಜಾ ಅವರು ಮೆಂಟರ್ ಆಗಿರುತ್ತಾರೆ. ಹಿಂದಿ ಹಾಕ್ಸ್ ಗೆ ಹಿಂದಿಯಾ ಖ್ಯಾತ ನಟ , ನಿರ್ಮಾಪಕ, ಮಾಡೆಲ್ , ಹಾಗೂ ಸಮಾಜ ಸೇವಕರಾದ ಸೋನು ಸೂದ್ ಅವರು ಮೆಂಟರ್ ಆಗಿರುತ್ತಾರೆ ಮಳಯಾಳಂ ಮೇವರಿಕ್ಸ್ ಗೆ ಮಳಯಾಳಂನ ಖ್ಯಾತ ನಟ, ಗಾಯಕ , ನಿರ್ಮಾಪಕರಾಗಿರುವಾ ದುಲ್ಕರ್ ಸಲ್ಮಾನ್ ಅವರು ಮೆಂಟರ್ ಆಗಿರುತ್ತಾರೆ.

ಭಾಗವಹಿಸಲು ಆಸಕ್ತಿ ಇದ್ರೆ ಹೀಗೆ ಮಾಡಿ!
ಜಂಗಲ್ ಬೂಗಿ ರಿಯಾಲಿಟಿ ಶೋನಲ್ಲಿ ಭಾಗವಹಿಸಲು ಆಸಕ್ತಿ ಇದ್ರೆ ಈ ಕೆಳಕಂಡ Email ID ಹಾಗೂ Number ಗೆ ಸಂಪರ್ಕಿಸಬಹುದು.
9844500081
ಇದನ್ನೂ ಓದಿ: Lakshmi Nivasa Serial: ಚಿನ್ನು ಮರಿಯ ಹೊಸ ಹೆಜ್ಜೆ! ಸೈಕೋ ಜಯಂತ್‌ಗೆ ಇದೆ ಮಾರಿಹಬ್ಬ
ಕ್ಯಾಚ್ & ವಾಚ್ ಒಟಿಟಿ ಅನಾವರಣ
EIPK ಪ್ರೊಡಕ್ಷನ್ ಹೌಸ್ ನಡಿ VKZ ಎಂಟರ್ಟೈನ್ಮೆಂಟ್ ವತಿಯಿಂದ ವಿನೋದ್ ಪಾರ್ಥ ಸಾರಥಿ ಹೊಸ ರಿಯಾಲಿಟಿ ಶೋ ಶುರು ಮಾಡುವುದರ ಜೊತೆಗೆ ಹೊಸದೊಂದು ಒಟಿಟಿ ಫ್ಲಾಟ್ ಫಾರ್ಮ್ ಆರಂಭಿಸಿದ್ದಾರೆ. ಅದಕ್ಕೆ ಕ್ಯಾಚ್ ಅಂಡ್ ವಾಚ್ ಎಂದು ಹೆಸರಿಡಲಾಗಿದ್ದು, ಆಗಸ್ಟ್ ನಿಂದ ಪ್ರೇಕ್ಷಕರ ವೀಕ್ಷಣೆಗೆ ಲಭ್ಯವಾಗಲಿದೆ. ಕನ್ನಡ, ತೆಲುಗು, ತಮಿಳು , ಹಿಂದಿ ಹಾಗೂ ಮಲಯಾಳಂ ಭಾಷೆಯ ಸಿನಿಮಾಗಳು ಈ ಒಟಿಟಿಯಲ್ಲಿ ನೋಡಲು ಲಭ್ಯ ಇರಲಿವೆ.