Just Married Movie: ಪ್ರೇಮಿಗಳ ದಿನದಂದು ಬಿಡುಗಡೆಯಾಗಲಿದೆ ʼಜಸ್ಟ್ ಮ್ಯಾರೀಡ್ʼ ಚಿತ್ರದ ಹೊಸ ಹಾಡು
ಈಗಾಗಲೇ ಗಮನ ಸೆಳೆದಿರುವ ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗೂ ಅಂಕಿತ ಅಮರ್ ನಾಯಕ-ನಾಯಕಿಯಾಗಿ ನಟಿಸಿರುವ ಬಹು ನಿರೀಕ್ಷಿತ ʼಜಸ್ಟ್ ಮ್ಯಾರೀಡ್ʼ ಚಿತ್ರದ ಮೂರನೇ ಹಾಡು ಫೆ. 14r ಪ್ರೇಮಿಗಳ ದಿನದಂದು ಬಿಡುಗಡೆಯಾಗಲಿದೆ.

ಶೈನ್ ಶೆಟ್ಟಿ ಹಾಗೂ ಅಂಕಿತಾ ಅಮರ್ ನಟನೆಯ ʼಜಸ್ಟ್ ಮ್ಯಾರೀಡ್ʼ ಚಿತ್ರದ ದೃಶ್ಯ.

ಬೆಂಗಳೂರು: abbs studios ಲಾಂಛನದಲ್ಲಿ ಅಜನೀಶ್ ಲೋಕನಾಥ್ ಹಾಗೂ ಸಿ.ಆರ್. ಬಾಬಿ ನಿರ್ಮಿಸುತ್ತಿರುವ, ಸಿ.ಆರ್. ಬಾಬಿ ಅವರ ನಿರ್ದೇಶನದಲ್ಲಿ ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ (Shine Shetty) ಹಾಗೂ ಅಂಕಿತ ಅಮರ್ (Ankita Amar) ನಾಯಕ-ನಾಯಕಿಯಾಗಿ ನಟಿಸಿರುವ ಬಹು ನಿರೀಕ್ಷಿತ ʼಜಸ್ಟ್ ಮ್ಯಾರೀಡ್ʼ ಚಿತ್ರ (Just Married Movie) ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಹಾಗೂ ಎರಡು ಹಾಡುಗಳ ಮೂಲಕ ʼಜಸ್ಟ್ ಮ್ಯಾರೀಡ್ʼ ಜನರ ಮನಸ್ಸಿಗೆ ಇನ್ನಷ್ಟು ಹತ್ತಿರವಾಗಿದೆ. ಫೆ. 14 ಪ್ರೇಮಿಗಳ ದಿನದಂದು ಈ ಚಿತ್ರದ ಮೂರನೇ ಹಾಡು ಬಿಡುಗಡೆಯಾಗಲಿದೆ.
ಪ್ರೇಮಕವಿ ಕೆ.ಕಲ್ಯಾಣ್ ಬರೆದು ʼಸರಿಗಮಪʼ ಖ್ಯಾತಿಯ ಜಸ್ಕರಣ್ ಸಿಂಗ್ ಹಾಡಿರುವ ಹಾಗೂ ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ʼಇದು ಮೊದಲ ಸ್ವಾಗತಾನಾʼ ಎಂಬ ಸುಮಧುರ ಪ್ರೇಮಗೀತೆಯನ್ನು ಪ್ರೇಮಿಗಳ ದಿನದಂದು ಬೆಳಗ್ಗೆ 10 ಗಂಟೆಗೆ ಅಶ್ವಿನಿ ಪುನೀತ್ ರಾಜಕುಮಾರ್ ಅನಾವರಣಗೊಳಿಸಲಿದ್ದಾರೆ. ಆನಂದ್ ಆಡಿಯೋ ಯುಟ್ಯೂಬ್ ಚಾನಲ್‌ನಲ್ಲಿ ಈ ಚಿತ್ರದ ಎಲ್ಲ ಹಾಡುಗಳು ಬಿಡುಗಡೆಯಾಗುತ್ತಿವೆ.
ʼಜಸ್ಟ್ ಮ್ಯಾರೀಡ್ʼ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ಕೆ.ಆರ್.ಜಿ. ಸ್ಟುಡಿಯೋಸ್ ಈ ಚಿತ್ರದ ವಿತರಣೆ ಹಕ್ಕನ್ನು ಪಡೆದುಕೊಂಡಿದೆ.
ಸೂಪರ್ ಹಿಟ್ ಚಿತ್ರಗಳಿಗೆ ಸಂಗೀತ ನೀಡಿ ಜನಮನಸೂರೆಗೊಂಡಿರುವ ಅಜನೀಶ್ ಲೋಕನಾಥ್ ಈ ಚಿತ್ರದ ಮೂಲಕ ನಿರ್ಮಾಪಕರಾಗಿದ್ದಾರೆ. ಇಷ್ಟು ದಿವಸ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಸಿ.ಆರ್. ಬಾಬಿ ಅವರು ಈ ಚಿತ್ರದ ಮೂಲಕ ನಿರ್ದೇಶಕಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ. ಬಾಬಿ ಅವರೇ ಕಥೆ ಬರೆದಿದ್ದಾರೆ. ಚಿತ್ರಕಥೆ ಸಿ.ಆರ್. ಬಾಬಿ ಹಾಗೂ ಧನಂಜಯ್ ರಂಜನ್ ಅವರದು. ರಘು ನಿಡುವಳ್ಳಿ ಈ ಚಿತ್ರದ ಸಂಭಾಷಣೆಕಾರರು.
ಪಿ.ಜಿ. ಛಾಯಾಗ್ರಹಣ, ಶ್ರೀಕಾಂತ್ ಮತ್ತು ಅಶಿಕ್ ಕುಸುಗೊಳ್ಳಿ (ಗಣೇಶ ಸಾಂಗ್) ಸಂಕಲನ, ಅಮರ್ ಕಲಾ ನಿರ್ದೇಶನ, ವಿಕ್ರಮ್ ಮೋರ್, ಸಾಹಸ ನಿರ್ದೇಶನ ಹಾಗೂ ಬಾಬಾ ಭಾಸ್ಕರ್, ಶಾಂತಿ ಅರವಿಂದ್ ಅವರ ನೃತ್ಯ ನಿರ್ದೇಶನವಿರುವ ʼಜಸ್ಟ್ ಮ್ಯಾರೀಡ್ʼ ಚಿತ್ರದ ಹಾಡುಗಳನ್ನು ಪ್ರಮೋದ್ ಮರವಂತೆ ಮತ್ತು ಧನಂಜಯ್ ಬರೆದಿದ್ದಾರೆ.
ಈ ಸುದ್ದಿಯನ್ನೂ ಓದಿ | Valentine’s Season Kurta Fashion 2025: ವ್ಯಾಲೆಂಟೈನ್ಸ್ ವೀಕ್ ಸೀಸನ್‌ನಲ್ಲಿ ಟ್ರೆಂಡಿಯಾದ ಕುರ್ತಾಗಳಿವು
ಶೈನ್ ಶೆಟ್ಟಿ, ಅಂಕಿತಾ ಅಮರ್, ದೇವರಾಜ್, ಅಚ್ಯುತಕುಮಾರ್, ಮಾಳವಿಕಾ ಅವಿನಾಶ್, ಅನೂಪ್ ಭಂಡಾರಿ, ಶ್ರುತಿ ಹರಿಹರನ್, ಶ್ರುತಿ ಕೃಷ್ಣ, ಸಾಕ್ಷಿ ಅಗರವಾಲ್, ಶ್ರೀಮಾನ್, ರವಿಶಂಕರ್ ಗೌಡ, ರವಿ ಭಟ್, ವಾಣಿ ಹರಿಕೃಷ್ಣ, ಸಂಗೀತ ಅನಿಲ್, ಕುಮುದಾ, ಜಯರಾಮ್, ವೇದಿಕಾ ಕಾರ್ಕಳ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.