ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻಬಿಗ್‌ ಬಾಸ್‌ʼ ಗೆದ್ದ ಮೇಲೆ ಗಿಲ್ಲಿ ನಟನಿಗೆ ಸಿಕ್ಕಿತ್ತು ʻಕಾಟೇರʼ ಡೈರೆಕ್ಟರ್‌ ತರುಣ್‌ ಸುಧೀರ್‌ ಕಡೆಯಿಂದ ಅತ್ಯಮೂಲ್ಯ ಸಲಹೆ

ಗಿಲ್ಲಿ ನಟ ಅವರು ಬಿಗ್ ಬಾಸ್ ಕನ್ನಡ ಸೀಸನ್ 12ರ ಗೆಲುವಿನ ನಂತರ ಸಖತ್ ಬ್ಯುಸಿಯಾಗಿದ್ದಾರೆ. ನಿರ್ದೇಶಕ ತರುಣ್ ಸುಧೀರ್ ಅವರು ಗಿಲ್ಲಿ ನಟನಿಗೆ ಅಮೂಲ್ಯ ಸಲಹೆಗಳನ್ನು ನೀಡಿದ್ದು, ನಟನೆಗಿಂತ ಹೆಚ್ಚಾಗಿ ಬರವಣಿಗೆ ಮತ್ತು ನಿರ್ದೇಶನದತ್ತ ಗಮನ ಹರಿಸಲು ಸೂಚಿಸಿದ್ದಾರೆ. ಬಿಗ್ ಬಾಸ್ ಯಶಸ್ಸಿನ ನಂತರ ಉಂಟಾಗುತ್ತಿರುವ ಒತ್ತಡವನ್ನು ಸಂಭ್ರಮದ ಭಾಗವಾಗಿ ಸ್ವೀಕರಿಸುವಂತೆ ಗಿಲ್ಲಿಗೆ ತರುಣ್ ಕಿವಿಮಾತು ಹೇಳಿದ್ದಾರೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ಫಿನಾಲೆ ಮುಗಿದು ಆಗಲೇ ಒಂದು ತಿಂಗಳಾಗಿದೆ. ಆದರೂ ವಿನ್ನರ್‌ ಗಿಲ್ಲಿ ನಟ ಅವರ ಹವಾ ಕಮ್ಮಿ ಆಗಿಲ್ಲ. ಈಗಲೂ ಅವರು ಎಲ್ಲೇ ಹೋದರೂ ಜನ ಮುಗಿಬಿದ್ದು ಸೇರುತ್ತಿದ್ದಾರೆ. ಗಿಲ್ಲಿ ನಟನ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬೀಳುತ್ತಿದ್ದಾರೆ. ಅಂದಹಾಗೆ, ಬಿಗ್‌ ಬಾಸ್‌ ಮನೆಯಿಂದ ಹೊರಬಂದ ಆರಂಭದ ದಿನಗಳಲ್ಲಿ ʻಕಾಟೇರʼ ಡೈರೆಕ್ಟರ್‌ ತರುಣ್‌ ಸುಧೀರ್‌ ಅವರು ಗಿಲ್ಲಿ ನಟ ಅವರಿಗೆ ಒಂದಷ್ಟು ಸಲಹೆ ಸೂಚನೆಗಳನ್ನು ನೀಡಿದ್ದರಂತೆ.

ಮಾಹಿತಿ ಹಂಚಿಕೊಂಡ ತರುಣ್‌ ಸುಧೀರ್‌

ವಿಶ್ವವಾಣಿ ಯೂಟ್ಯೂಬ್ ಜೊತೆ ಮಾಹಿತಿ ಹಂಚಿಕೊಂಡಿರುವ ತರುಣ್‌ ಸುಧೀರ್‌, "ಗಿಲ್ಲಿ ನಟ ನನಗೆ ಬಿಗ್‌ ಬಾಸ್‌ಗೆ ಹೋಗೋದಕ್ಕೂ ಮುನ್ನವೇ ಭೇಟಿ ಮಾಡಿದ್ದರು. ಆಗಲೇ ನನಗೆ, ಯಾವುದಾದರೂ ಸಿನಿಮಾ ಇದ್ದರೆ ಹೇಳಿ ಅಂದಿದ್ದ. ಗಿಲ್ಲಿ ನಟ ಯೂಟ್ಯೂಬ್‌ ವಿಡಿಯೋಗಳನ್ನು ಮಾಡುವಾಗಿನಂದಲೂ ನನಗೆ ಇಷ್ಟ. ಗಿಲ್ಲಿ ನಟನೆಗಿಂತ ಮೊದಲು ನಿರ್ದೇಶನದ ವಿಭಾಗದಲ್ಲಿದ್ದ. ತಾನು ಒಬ್ಬ ನಿರ್ದೇಶಕ ಆಗಬೇಕು ಎಂದುಕೊಂಡವನು. ಅದೇ ನನಗೆ ಅವರ ಮೇಲೆ ವಿಶೇಷ ಪ್ರೀತಿ ಹುಟ್ಟಲು ಕಾರಣ" ಎಂದು ಹೇಳಿದ್ದಾರೆ.

Gilli Nata: ದರ್ಶನ್ ಭೇಟಿ ಆಗ್ತಾರಾ ಗಿಲ್ಲಿ ? ಕೊನೆಗೂ ಕ್ಲಾರಿಟಿ ಕೊಟ್ಟ ನಟ

"ನಾನು ಆಗಲೇ ಅವನಿಗೆ ಹೇಳಿದ್ದೆ, ನಟನೆ ಒಂದು ಕಡೆ ಇರಲಿ, ಬರವಣಿಗೆ ಮೇಲೆ ಪೋಕಸ್‌ ಮಾಡು ಎಂದಿದ್ದೆ. ನಮ್ಮಲ್ಲಿ ಡೈರೆಕ್ಟರ್ಸ್‌ ಕಮ್ಮಿ ಇದ್ದಾರೆ. ಅದರ ಕಡೆಗೆ ಗಮನ ಕೊಡು ಎಂದಿದ್ದೆ. ʻಆಯ್ತು ಅಣ್ಣ.. ನಾನು ಮಾಡುವೆʼ ಎಂದು ಗಿಲ್ಲಿ ಹೇಳಿದ್ದ. ಆ ಬಗ್ಗೆ ನಮ್ಮ ಆಫೀಸನಲ್ಲಿಯೇ ಮಾತನಾಡಿದ್ದೆವು" ಎಂದು ತರುಣ್‌ ಸುಧೀರ್‌ ಹೇಳಿದ್ದಾರೆ.

Gilli Nata: ದುಡ್ಡು ಇರೋರನ್ನ ಮಾತ್ರ ಗಿಲ್ಲಿ ಮೀಟ್‌ ಆಗ್ತಾರೆ; ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ ಗಂಭೀರ ಆರೋಪ

ಬಿಗ್‌ ಬಾಸ್‌ನಿಂದ ಬಂದಮೇಲೆ ಭೇಟಿ

"ಬಿಗ್‌ ಬಾಸ್‌ನಿಂದ ಹೊರಬಂದಮೇಲೆ ಸಾಯಿ ಗೋಲ್ಡ್‌ ಪ್ಯಾಲೇಸ್‌ ಇವೆಂಟ್‌ನಲ್ಲಿ ಗಿಲ್ಲಿ ನನಗೆ ಸಿಕ್ಕಿದ್ದ. ಆಗಲೂ ಕೂಡ, ʻಅಣ್ಣ, ಏನಾದರು ಇದ್ರೆ ಹೇಳಣ್ಣ. ಸ್ಟ್ರೆಸ್ ಆಗುತ್ತಿದೆ. ನಿದ್ದೆ ಆಗ್ತಿಲ್ಲ, ಎಲ್ಲಿಗೆ ಹೋಗ್ತಿದ್ದೀನಿ, ಎಲ್ಲಿಂದ ಬರ್ತಿದಿನಿ ಒಂದೂ ಗೊತ್ತಾಗ್ತಿಲ್ಲʼ ಅಂತ ಹೇಳಿದ್ದ. ನಾನು ಆಗ ಅವನಿಗೆ, ʻಇದೊಂದು ಎರಡ್ಮೂರು ತಿಂಗಳು ನಿನ್ನ ಸೆಲೆಬ್ರೇಷನ್‌ ಇದೆ. ಅದನ್ನು ಎಂಜಾಯ್‌ ಮಾಡು. ಮನೆಯಲ್ಲಿ ಸುಮ್ಮನೆ ಕೂರುವುದಕ್ಕಿಂತ ಈ ಸ್ಟ್ರೆಸ್‌ ತುಂಬಾ ಒಳ್ಳೆಯದು. ಇವೆಲ್ಲಾ ಆಗುತ್ತದೆ. ಈ ರೀತಿ ಪ್ರೀತಿ ಸಿಗೋದು ತುಂಬಾ ಕಡಿಮೆ ಜನಕ್ಕೆ. ಅದನ್ನು ಎಂಜಾಯ್‌ ಮಾಡು ಎಂದಿದ್ದೆ" ಅಂತ ತರುಣ್‌ ಹೇಳಿದ್ದಾರೆ.

"ಈ ಸಂಭ್ರಮ ಎಲ್ಲಾ ಮುಗಿದಮೇಲೆ ಒಂದು ಬ್ರೇಕ್‌ ತಗೋ. ಆಗ ನೀನು, ನಿರ್ದೇಶನ ಮಾಡಬೇಕಾ, ನಟನೆ ಮಾಡಬೇಕಾ ಎಂಬ ಬಗ್ಗೆ ಯೋಚನೆ ಮಾಡು. ಸ್ನೇಹಿತರ ಜೊತೆಗೆ ಡಿಸ್ಕಸ್‌ ಮಾಡು, ಆನಂತರ ಮುಂದಿನ ಹೆಜ್ಜೆ ಇಡು. ನಾನು ಮಾಡುವ ಸ್ಕ್ರಿಪ್‌ನಲ್ಲಿ ಅವನಿಗೆ ಹೊಂದುವಂತಹ ಪಾತ್ರವಿದ್ದರೆ, ನಾನೇ ಕರೆದು ಅವಕಾಶ ನೀಡುತ್ತೇನೆ" ಎಂದು ತರುಣ್ ಸುಧೀರ್‌ ಹೇಳಿದ್ದಾರೆ.