ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gilli Nata: ದುಡ್ಡು ಇರೋರನ್ನ ಮಾತ್ರ ಗಿಲ್ಲಿ ಮೀಟ್‌ ಆಗ್ತಾರೆ; ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ ಗಂಭೀರ ಆರೋಪ

Gilli Nata Fan: ಬಿಗ್ ಬಾಸ್ 12 ಟ್ರೋಫಿ ಗೆದ್ದ ಕ್ಷಣದಿಂದಲೇ ಗಿಲ್ಲಿ ನಟನ ಕ್ರೇಜ್ ಹೆಚ್ಚಾಗಿದೆ. ಸಿನಿಮಾತಾರೆಯರು, ರಾಜಕಾರಣಿಗಳು, ವಿವಿಧ ರಿಯಾಲಿಟಿ ಶೋಗಳು, ಸಮಾರಂಭಗಳು, ಕಾರ್ಯಕ್ರಮಗಳಿಗೆ ಗಿಲ್ಲಿ ನಟ ಅತಿಥಿಯಾಗಿದ್ದಾರೆ. ಗಿಲ್ಲಿ ಸದ್ಯ ಕೈಗೆ ಸಿಗೋದು ಕಷ್ಟವೇ ಆಗಿದೆ. ಆದರೀಗ ಗಿಲ್ಲಿಗೆ ಅಭಿಮಾನವೇ ಸಮಸ್ಯೆಯಾಗಿರುವಂತಿದೆ. ಗಿಲ್ಲಿ ಫೋಟೋ ಹಚ್ಚೆ ಹಾಕಿಸಿಕೊಂಡ ಅಭಿಮಾನಿ ಗಿಲ್ಲಿ ಅಭಿಮಾನಿಗಳನ್ನು ಗೌರವಿಸುವುದಿಲ್ಲ ಎಂದು ಹಲವು ಮಾಧ್ಯಮಗಳಲ್ಲಿ ಹೇಳಿಕೆ ನೀಡಿ ಆರೋಪಿಸಿದ್ದಾರೆ.

ಟ್ಯಾಟೂ ಹಾಕಿಸಿಕೊಂಡ ಫ್ಯಾನ್​ ಗಿಲ್ಲಿ ಬಗ್ಗೆ ಗಂಭೀರ ಆರೋಪವಿದು!

ಗಿಲ್ಲಿ ನಟ -

Yashaswi Devadiga
Yashaswi Devadiga Feb 2, 2026 8:28 AM

ಬಿಗ್ ಬಾಸ್ 12 (Bigg Boss Kannada 12) ಟ್ರೋಫಿ ಗೆದ್ದ ಕ್ಷಣದಿಂದಲೇ ಗಿಲ್ಲಿ ನಟನ (Gilli Nata) ಕ್ರೇಜ್ ಹೆಚ್ಚಾಗಿದೆ. ಸಿನಿಮಾತಾರೆಯರು, ರಾಜಕಾರಣಿಗಳು, ವಿವಿಧ ರಿಯಾಲಿಟಿ ಶೋಗಳು, ಸಮಾರಂಭಗಳು, ಕಾರ್ಯಕ್ರಮಗಳಿಗೆ ಗಿಲ್ಲಿ ನಟ ಅತಿಥಿಯಾಗಿದ್ದಾರೆ. ಗಿಲ್ಲಿ ಸದ್ಯ ಕೈಗೆ ಸಿಗೋದು ಕಷ್ಟವೇ ಆಗಿದೆ. ಆದರೀಗ ಗಿಲ್ಲಿಗೆ ಅಭಿಮಾನವೇ ಸಮಸ್ಯೆಯಾಗಿರುವಂತಿದೆ. ಗಿಲ್ಲಿ ಫೋಟೋ ಹಚ್ಚೆ ಹಾಕಿಸಿಕೊಂಡ ಅಭಿಮಾನಿ ಗಿಲ್ಲಿ ಅಭಿಮಾನಿಗಳನ್ನು (Gilli Fans) ಗೌರವಿಸುವುದಿಲ್ಲ ಎಂದು ಹಲವು ಮಾಧ್ಯಮಗಳಲ್ಲಿ ಹೇಳಿಕೆ ನೀಡಿ ಆರೋಪಿಸಿದ್ದಾರೆ.

ಗಿಲ್ಲಿ ನಟನ ಮೇಲೆ ಗಂಭೀರ ಆರೋಪ

ಬಿಗ್ ಬಾಸ್ ಕನ್ನಡ ಸೀಸನ್ 12’ರ ವಿನ್ನರ್ ಗಿಲ್ಲಿ ನಟ ಸದ್ಯ ಬ್ಯುಸಿ ಆಗಿದ್ದಾರೆ. ಈ ಬಗ್ಗೆ ಸ್ವತಃ ಅವರ ತಾಯಿ, ನಮ್ಮ ಕೈಗೆ ಸಿಗುತ್ತಿಲ್ಲ, ಮತ್ತೆ ಖಂಡಿತ ಸಿಗ್ತಾನೆ. ಕ್ಷಮಿಸಿ ಅಂತ ಹೇಳಿಕೊಂಡಿದ್ದರು. ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿ ಇದ್ದಾಗ, ಒಬ್ಬ ಅಭಿಮಾನಿ ಕೈಗೆ ಟ್ಯಾಟೂ ಕೂಡ ಹಾಕಿಸಿಕೊಂಡಿದ್ದರು. ಆದರೀಗ ಅದೇ ಅಭಿಮಾನಿ, ಗಿಲ್ಲಿ ನಟನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಇದು ಚರ್ಚೆಗೆ ಕಾರಣ ಆಗಿದೆ. ಹಲವು ಮಾಧ್ಯಮಗಳಿಗೆ ಅವರು ಸಂದರ್ಶನ ನೀಡುತ್ತಿದ್ದು, ಗರಂ ಆಗಿಯೇ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಇದನ್ನೂ ಓದಿ: Ram Charan: ಮಗಳೊಂದಿಗೆ ಆಸ್ಪತ್ರೆಗೆ ಹೋಗಲು ಹರಸಾಹಸ ಪಟ್ಟ ರಾಮ್‌ ಚರಣ್‌; ವಿಡಿಯೋ ಕಂಡು ನೆಟ್ಟಿಗರು ಛೀಮಾರಿ

ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ

ಬಿಗ್ ಬಾಸ್ ವೇಳೆ ಗಿಲ್ಲಿ ನಟ ತಮ್ಮ ಅಭಿಮಾನಿಗಳಲ್ಲಿ ಒಬ್ಬರು ತಮ್ಮ ಫೋಟೋವನ್ನೇ ಟ್ಯಾಟೂ ಹಾಕಿಸಿಕೊಂಡಿದ್ದಾರೆ ಎನ್ನುವ ವಿಚಾರ ಕೇಳಿ ತುಂಬಾ ಖುಷಿಪಟ್ಟಿದ್ದರು. ಹಾಗೆಯೇ ತಾವು ಮನೆಯಿಂದ ಹೊರಬಂದ ಕೂಡಲೇ ಆ ಅಭಿಮಾನಿಯನ್ನು ಭೇಟಿಯಾಗಿ ಧನ್ಯವಾದ ಹೇಳುತ್ತೇನೆ ಎಂದು ಮಾತು ನೀಡಿದ್ದರು ಆದರೆ ಇಷ್ಟೊಂದು ದಿನವಾದರೂ ಅವರು ಭೇಟಿ ಮಾಡಿಲ್ಲ. ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ ಎಂದು ಅಭಿಮಾನಿ ಮಾಧ್ಯಮಗಳಿಗೆ ನೋವು ಹಂಚಿಕೊಂಡಿದ್ದಾರೆ.

ವೈರಲ್‌ ವಿಡಿಯೋ

ದುಡ್ಡಿರೋ ವ್ಯಕ್ತಿಯನ್ನು ಮಾತ್ರ ಭೇಟಿ ಮಾಡುತ್ತಿದ್ದಾರೆ

ಗಿಲ್ಲಿ ಭೇಟಿ ಮಾಡ್ತೀನಿ ಎಂದು ಹೇಳಿ ಭೇಟಿ ಮಾಡ್ತಿಲ್ಲ. ಇವರಿಗೋಸ್ಕರ ದೇವಸ್ಥಾನಕ್ಕೆ ಹೋಗಿ ಪ್ರಸಾದ ತೆಗೆದುಕೊಂಡು ಬಂದೆವು. ಅವರ ಅಣ್ಣನಿಗೆ ಕರೆ ಮಾಡಿ, ಗಿಲ್ಲಿಗೆ ಪ್ರಸಾದ ಕೊಡಬೇಕಿತ್ತು ಎಂದು ಹೇಳಿದೆ. ಆದರೆ, ಭೇಟಿಗೆ ಅವಕಾಶ ಸಿಗಲಿಲ್ಲ. ಗಿಲ್ಲಿ ದುಡ್ಡಿರೋ ವ್ಯಕ್ತಿಯನ್ನು ಮಾತ್ರ ಭೇಟಿ ಮಾಡುತ್ತಿದ್ದಾರೆ ಎಂದು ಆ ವ್ಯಕ್ತಿ ಆರೋಪಿಸಿದ್ದಾರೆ.

ಇದನ್ನೂ ಓದಿ: CCL 2026 Final: ಸೆಲೆಬ್ರಿಟಿ ಕ್ರಿಕೆಟ್ ಲೀಗ್; ಚಾಂಪಿಯನ್ ಆದ ಕರ್ನಾಟಕ ಬುಲ್ಡೋಜರ್ಸ್

50 ಕೋಟಿ ವೋಟ್‌ಗೆ ಅಭಿಮಾನಿಗಳು ಬೇಕಾಯ್ತು. ಆದರೆ, ಅಭಿಮಾನಿಗಳನ್ನ ಮೀಟ್‌ ಮಾಡೋಕೆ ಮಾತ್ರ ಆಗಲ್ವಾ ನಿಮಗೆ?” ಎಂದು ಸಂದರ್ಶನವೊಂದರಲ್ಲಿ ಟ್ಯಾಟೂ ಅಭಿಮಾನಿ ಹೇಳಿಕೊಂಡಿದ್ದಾರೆ. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ, ಈ ಅಭಿಮಾನಿ ಮೇಲೆ ನೆಟ್ಟಿಗರು ಗರಂ ಆಗಿದ್ದಾರೆ. “ಟ್ಯಾಟೂ ಹಾಕಿಸಿಕೊಳ್ಳಿ ಅಂತ ಗಿಲ್ಲಿ ಹೇಳಿದ್ನಾ? ಅಂತ ಕಮೆಂಟ್‌ ಮಾಡಿದ್ದಾರೆ.