Kannada Movie: ಎಸ್ ಕೆ ಸುನೀಲ್ ಕುಮಾರ್ ನಿರ್ದೇಶನದ `ಮಕ್ಕಳ ಸೈನ್ಯೆ' ತೆರೆಗೆ ಯಾವಾಗ?
Kannada Movie: ಸಂಕಲನಕಾರರಾಗಿ ಕಾರ್ಯ ನಿರ್ವಹಿಸಿರುವ ಎಸ್ ಕೆ ಸುನೀಲ್ ಕುಮಾರ್ ಚೊಚ್ಚಲ ನಿರ್ದೇಶನದ " "ಮಕ್ಕಳ ಸೈನ್ಯೆ" ತೆರೆಗೆ ಬರುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು. ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯ ಅಕ್ಕಿ ಹೆಬ್ಬಾಳಿನಲ್ಲಿ ಚಿತ್ರೀಕರಣ ನಡೆದಿದೆ. ಹಿರಿಯ ಸಾಹಿತಿ ದೊಡ್ಡರಂಗೇ ಗೌಡ ಅವರು ಗೀತರಚನೆ ಮಾಡಿದ್ದಾರೆ.
ಮಕ್ಕಳ ಸೈನ್ಯೆ ಸಿನಿಮಾ -
ಆಗ ಒಂದು ಕಾಲ ಇತ್ತು. ಮಕ್ಕಳಿಗಾಗಿಯೇ ಕೆಲವು ಸಿನಿಮಾಗಳನ್ನು (Cinema) ಮಾಡಲಾಗುತ್ತಿತ್ತು. ಸಿಂಹದ ಮರಿ ಸೈನ್ಯ, ಪುಟಾಣಿ ಏಜೆಂಟ್ 123, ಬೇಬಿ ಶಾಮಲಿ ಅವರ ಸಿನಿಮಾಗಳು ಹೀಗೆ ಮಕ್ಕಳನ್ನೇ ಕೇಂದ್ರ ಬಿಂದುವಾಗಿಸಿಕೊಂಡು ತೆರೆ ಕಂಡ ಅದೆಷ್ಟೋ ಸಿನಿಮಾಗಳು ಸಖತ್ ಹಿಟ್ ಆಗಿದ್ದವು. ಇನ್ನು ಅಂದಿಗೆ ಬಾಲ ನಟ-ನಟಿಯರಾಗಿ ನಟಿಸುತ್ತಿದ್ದವರು ಇಂದಿಗೂ ಸಿನಿ ಪ್ರಿಯರಿಗೆ ಫೇವರೇಟ್. ಸಂಕಲನಕಾರರಾಗಿ ಕಾರ್ಯ ನಿರ್ವಹಿಸಿರುವ ಎಸ್ ಕೆ ಸುನೀಲ್ ಕುಮಾರ್ (S K Sunil Kumar) ಚೊಚ್ಚಲ ನಿರ್ದೇಶನದ " "ಮಕ್ಕಳ ಸೈನ್ಯೆ" ತೆರೆಗೆ ಬರುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.
"ಮಕ್ಕಳ ಸೈನ್ಯೆ" ಚಿತ್ರ ಮೇ 22 ರಂದು ತೆರೆಗೆ ಬರುತ್ತಿದೆ. ಎಪ್ಪತ್ತರ ದಶಕದಲ್ಲಿ ಬಂದಿದ್ದ "ಸಿಂಹದ ಮರಿ ಸೈನ್ಯ" ಚಿತ್ರದ ನಂತರ ಆ ರೀತಿಯ ಮಕ್ಕಳ ಚಿತ್ರ ಬಂದಿರಲಿಲ್ಲ. ಅದೇ ರೀತಿಯ ಕಥೆ ಈ ಚಿತ್ರದಲ್ಲಿರುತ್ತದೆ. ಚಿತ್ರದಲ್ಲಿ ಸ್ನೇಹ, ಸಾಹಸ, ತಂದೆ - ಮಗಳ ಬಾಂಧವ್ಯ ಹಾಗೂ ಸನಾತನ ಎಂಬ ನಾಲ್ಕು ಭಾಗಗಳಿರುತ್ತದೆ. ಮಕ್ಕಳು ಮೊದಲ ಬಾರಿಗೆ ನಟಿಸಿದ್ದಾರೆ ಅಂತ ಹೇಳುವ ಹಾಗಿಲ್ಲ. ಅಷ್ಟು ಅದ್ಭುತವಾಗಿ ನಟಿಸಿದ್ದಾರೆ.
ಇದನ್ನೂ ಓದಿ: Hari Paraak Column: ಟಾಕ್ಸಿಕ್, ಧುರಂದರ್-2 ಮಧ್ಯೆ ಯುದ್ದ ನಿಲ್ಸಿದ್ದು ನಾನೇ: ಟ್ರಂಪ್
ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯ ಅಕ್ಕಿ ಹೆಬ್ಬಾಳಿನಲ್ಲಿ ಚಿತ್ರೀಕರಣ ನಡೆದಿದೆ. ಹಿರಿಯ ಸಾಹಿತಿ ದೊಡ್ಡರಂಗೇ ಗೌಡ ಅವರು ಗೀತರಚನೆ ಮಾಡಿದ್ದಾರೆ. ಸನ್ನಿರಾಜ್ ಸಂಗೀತ ನೀಡಿದ್ದಾರೆ. ಮಕ್ಕಳ ಚಿತ್ರವಾದರೂ ಯಾವುದೇ ಕಮರ್ಷಿಯಲ್ ಚಿತ್ರಗಳಿಗೂ ಕಡಿಮೆ ಇಲ್ಲದ ರೀತಿಯಲ್ಲೇ ಚಿತ್ರ ಮೂಡಿ ಬಂದಿದೆ. ಚಿತ್ರ ಮೇ 22ರಂದು ಬಿಡುಗಡೆಯಾಗುತ್ತಿದೆ.

ಚಿತ್ರಕ್ಕೆ ನಾನೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದೇನೆ. ಮುನಿಸ್ವಾಮಿ ಅವರು ನಿರ್ಮಾಣ ಮಾಡಿದ್ದಾರೆ. ಸಂಗೀತ ಅವರು ಸಹ ನಿರ್ದೇಶನ ಮಾಡಿದ್ದಾರೆ. "ಮಕ್ಕಳ ಸೈನ್ಯೆ"ಗೆ ಸವಾಲಿಗೆ ಸವಾಲ್ ಎಂಬ ಅಡಿಬರಹವಿದೆ ಎಂದು ನಿರ್ದೇಶಕ ಸುನೀಲ್ ಕುಮಾರ್ ತಿಳಿಸಿದರು.
ಇದನ್ನೂ ಓದಿ: Naagin 7: ಇದೊಂದು ಕಾರಣಕ್ಕೆ ಸಖತ್ ಟ್ರೋಲ್ ಆಯ್ತು ನಾಗಿನ್ ಸೀರಿಯಲ್!
ನಿರ್ಮಾಪಕ ಮುನಿಸ್ವಾಮಿ ಹಾಗೂ ಚಿತ್ರದಲ್ಲಿ ನಟಿಸಿರುವ ಮಹಾಲಕ್ಷ್ಮಿ, ಗಗನ, ಸೋನಾಕ್ಷಿ, ಶಶಾಂಕ್, ರಾಬರ್ಟ್, ರುದ್ರಪ್ಪ ಮುಂತಾದವರು "ಮಕ್ಕಳ ಸೈನ್ಯೆ" ಚಿತ್ರದ ಕುರಿತು ಮಾತನಾಡಿದರು