ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Election Result 2026

ಪಶ್ಚಿಮ ಬಂಗಾಳ ಮರು ಮತದಾನ: ಫಾಲ್ಟಾದಲ್ಲಿ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದ ಬಿಜೆಪಿ ಅಭ್ಯರ್ಥಿ

ಮರು ಮತದಾನ: ಬಂಗಾಳದ ಫಾಲ್ಟಾದಲ್ಲಿ ಬಿಜೆಪಿ ಜಯಭೇರಿ

ಪಶ್ಚಿಮ ಬಂಗಾಳದ ಫಾಲ್ಟಾ ವಿಧಾನ ಸಭಾ ಕ್ಷೇತ್ರಕ್ಕೆ ಮರು ಚುನಾವಣೆ ನಡೆದಿದ್ದು, ಇದರಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖ್ಳಿಸಿದೆ. ಬಿಜೆಪಿ ಅಭ್ಯರ್ಥಿ ದೇಬಾಂಗ್ಶು ಪಾಂಡಾ ಅವರು 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸಿಪಿಐ(ಎಂ)ನ ಸಂಭು ನಾಥ್ ಕುರ್ಮಿ ​​ಮತ್ತು ಕಾಂಗ್ರೆಸ್ ಅಭ್ಯರ್ಥಿ ಅಬ್ದುರ್ ರಝಾಕ್ ಮೊಲ್ಲಾ ವಿರುದ್ಧ ಗೆಲುವು ದಾಖಲಿಸಿದರು.

Sanjay Gubbi Column: ಚಿರತೆಯ ಅಪರೂಪದ ಬೇಟೆ

Sanjay Gubbi Column: ಚಿರತೆಯ ಅಪರೂಪದ ಬೇಟೆ

ತುಮಕೂರು ಜಿಲ್ಲೆಯ ದೇವರಾಯನದುರ್ಗದಲ್ಲಿ ನಾನು ವನ್ಯಜೀವಿಗಳ ಹಲವಾರು ವಿಚಾರ ಗಳನ್ನು ಕಲಿತದ್ದು, ಈ ನಂಟಷ್ಟೇ ಅಲ್ಲದೇ ನಮ್ಮ ಅಧ್ಯಯನಕ್ಕೂ ಅದು ಸೂಕ್ತ ಪ್ರದೇಶವಾದು ದರಿಂದ ಅಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದೇವೆ. ದೇವರಾಯನದುರ್ಗದ ಕಾಯ್ದಿಟ್ಟ ಅರಣ್ಯ 41.8 ಚದರ ಕಿಲೋಮೀಟರ್ ವಿಸ್ತೀರ್ಣದ ಕಾಡು. 2023ರಲ್ಲಿ ಮೂರನೇ ಬಾರಿ ಇಲ್ಲಿ ಕ್ಯಾಮರಾ ಟ್ರ್ಯಾಪ್ ಇದನ್ನು 1906ರಲ್ಲೇ ಮೈಸೂರು ಸಂಸ್ಥಾನ, ರಕ್ಷಿತಾರಣ್ಯ ವಾಗಿ ಘೋಷಣೆ ಮಾಡಿತ್ತು

West Bengal Blection 2026: ʼಜಿರಳೆ ಮೀಸೆ ತಂತ್ರಗಾರಿಕೆʼ ಬಳಸದೆ ಬಿಜೆಪಿ ಗೆದ್ದಿದ್ದು ಬಂಗಾಳದಲ್ಲಿ ಮಾತ್ರ!

ʼಜಿರಳೆ ಮೀಸೆ ತಂತ್ರಗಾರಿಕೆʼ ಬಳಸದೆ BJP ಗೆದ್ದಿದ್ದು ಬಂಗಾಳದಲ್ಲಿ ಮಾತ್ರ!

BJP's election strategy: ಬಂಗಾಳದಲ್ಲಿ ನಿರಂತರ 34 ವರ್ಷ ಅಧಿಕಾರದಲ್ಲಿದ್ದ ಕಮ್ಯುನಿಸ್ಟ್‌ ಪಕ್ಷ ಮತ್ತು ಅದಕ್ಕೂ ಮೊದಲು 30 ವರ್ಷ ಆಡಳಿತ ನಡೆಸಿದ್ದ ಕಾಂಗ್ರೆಸ್‌ ಪಕ್ಷಗಳನ್ನೂ ಬದಿಗೆ ಸರಿಸಿ ಬಿಜೆಪಿ ರನ್ನರ್‌ ಅಪ್‌ ಆಗಿದ್ದು, ಈಗ ಚಾಂಪಿಯನ್‌ ಆಗಿದ್ದು ಸ್ವಂತ ಬಲದಿಂದ. 42 ಲೋಕಸಭೆ ಕ್ಷೇತ್ರಗಳನ್ನು ಹೊಂದಿರುವ ಪಶ್ಚಿಮ ಬಂಗಾಳದ ವಿಜಯ 2029ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹು ದೊಡ್ಡ ಕೊಡುಗೆ ನೀಡಲಿದೆ. ಇದಕ್ಕಿಂತ ಮೊದಲು ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ, ಗುಜರಾತ್‌, ಉತ್ತರಾಖಂಡ್, ಪಂಜಾಬ್, ಗೋವಾ, ಹಿಮಾಚಲ ಪ್ರದೇಶ ಮತ್ತು ಮಣಿಪುರ ವಿಧಾನಸಭೆ ಚುನಾವಣೆಗೂ ಶಕ್ತಿ ತುಂಬಲಿದೆ.

ಕೇರಳ ಮುಖ್ಯಮಂತ್ರಿ ಹುದ್ದೆಗಾಗಿ ಕಾಂಗ್ರೆಸ್ ಬಣಗಳ ನಡುವೆ ಮುಗಿಯದ ಜಗಳ; ಹೈಕಮಾಂಡ್ ನಿರ್ಧಾರ ಏನು?

ಮುಂದುವರಿದ ಪೋಸ್ಟರ್ ಜಗಳ: ಕೇರಳ ಮುಖ್ಯಮಂತ್ರಿ ಯಾರಾಗ್ತಾರೆ?

ವಿಧಾನ ಸಭಾ ಚುನಾವಣೆ ಫಲಿತಾಂಶ ಹೊರಬಿದ್ದು ವಾರ ಕಳೆದರೂ ಕೂಡ ಕೇರಳ ಮುಖ್ಯಮಂತ್ರಿ ಯಾರು ಎನ್ನುವ ಗೊಂದಲ ಇನ್ನೂ ಬಗೆ ಹರಿದಿಲ್ಲ. ಕಾಂಗ್ರೆಸ್ ಬಣಗಳ ನಡುವೆ ಪೋಸ್ಟರ್ ಜಗಳ ಮುಂದುವರಿದಿದ್ದು, ಮುಖ್ಯಮಂತ್ರಿ ಹುದ್ದೆಗೆ ಸಮರ್ಥ ವ್ಯಕ್ತಿಯನ್ನು ಆಯ್ಕೆ ಮಾಡಲು ಇನ್ನೂ ಸಾಧ್ಯವಾಗಲಿಲ್ಲ. ಪಕ್ಷದ ಹೈಕಮಾಂಡ್ ಕೂಡ ಈ ನಿಟ್ಟಿನಲ್ಲಿ ಯಾವುದೇ ಘೋಷಣೆಯನ್ನು ಮಾಡಿಲ್ಲ.

ತಮಿಳುನಾಡಿನ ನೂತನ ಸಿಎಂ ವಿಜಯ್‌ಗೆ  ಅಭಿನಂದನೆ ಸಲ್ಲಿಸಿದ ಪ್ರತಿಪಕ್ಷದ ನಾಯಕ ಉದಯನಿಧಿ ಸ್ಟಾಲಿನ್

ನಟ ವಿಜಯ್‌ಗೆ ಅಭಿನಂದನೆ ಸಲ್ಲಿಸಿದ ಉದಯನಿಧಿ ಸ್ಟಾಲಿನ್

ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ಸಿ. ಜೋಸೆಫ್ ವಿಜಯ್ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ್ದು, ಅವರಿಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಬರೆದಿರುವ ಅವರು ನಮ್ಮ ಪಕ್ಷವು ರಾಜ್ಯ ವಿಧಾನಸಭೆಯಲ್ಲಿ ವಿರೋಧ ಪಕ್ಷವಾಗಿ ಮುಂದೆ ನಿಂತು ಜನರ ಧ್ವನಿಯನ್ನು ಎತ್ತುತ್ತದೆ ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಆಡಳಿತ ಅಂತ್ಯವಾದ ಖುಷಿ; 15 ವರ್ಷಗಳ ಬಳಿಕ ಕ್ಷೌರ ಮಾಡಿಸಿಕೊಂಡ ಬಿಜೆಪಿ ಕಾರ್ಯಕರ್ತ

ಬರೋಬ್ಬರಿ 15 ವರ್ಷಗಳ ಬಳಿಕ ಕ್ಷೌರ ಮಾಡಿಸಿಕೊಂಡ ಬಿಜೆಪಿ ಕಾರ್ಯಕರ್ತ

West Bengal Assembly Election Results: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರಕ್ಕೆ ಕುಸಿದು ಬಿದ್ದಿದ್ದು, ಬಿಜೆಪಿ ಕಾರ್ಯಕರ್ತರೊಬ್ಬರು ತಮ್ಮ ವಿಶಿಷ್ಟ ಶಪಥ ತೀರಿಸಿಕೊಂಡಿದ್ದಾರೆ. 15 ವರ್ಷಗಳ ಬಳಿಕ ಕ್ಷೌರ ಮಾಡಿಸಿಕೊಂಡು ಗಮನ ಸೆಳೆದಿದ್ದಾರೆ.

ಕೊನೆಗೂ ರಚನೆಯಾಯ್ತು ಜನನಾಯಕ ವಿಜಯ್‌ ಸರ್ಕಾರ; ತಮಿಳುನಾಡಿನಲ್ಲಿ ರಾಜಕೀಯ ಪ್ರಹಸನ ಹೇಗಿತ್ತು? ಇದುವರೆಗೆ ಏನೆಲ್ಲ ಬೆಳವಣಿಗೆ ನಡೆದವು?

ಸಿಎಂ ವಿಜಯ್‌ ನಾಳೆಯೇ ಪ್ರಮಾಣ ವಚನ; ಮ್ಯಾಜಿಕ್‌ ನಂಬರ್‌ ತಲುಪಿದ್ದು ಹೇಗೆ?

Tamil Nadu Government Formation: ಯಾವುದೇ ಥ್ರಿಲ್ಲರ್‌ ಸಿನಿಮಾಕ್ಕೆ ಕಡಿಮೆ ಇಲ್ಲದಂತೆ ಕ್ಷಣಕ್ಕೊಂದು ತಿರುವು ನೀಡುತ್ತಿದ್ದ ತಮಿಳುನಾಡಿನ ರಾಜಕೀಯದ ನಾಟಕೀಯ ಬೆಳವನಿಗೆಗೆ ಇದೀಗ ತಾರ್ಕಿಕ ಅಂತ್ಯ ಸಿಕ್ಕಿದೆ. ದಳಪತಿ ವಿಜಯ್‌ ಬಹುಮತ ಸಾಬೀತುಪಡಿಸಿದ್ದು, ಭಾನುವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ತಮಿಳುನಾಡಿನಲ್ಲಿ 5 ದಿನಗಳ ಹೈಡ್ರಾಮ ಅಂತ್ಯ; ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ‍ ರಚನೆಗೆ ಹಕ್ಕು ಮಂಡಿಸಿದ ವಿಜಯ್‌

ತಮಿಳುನಾಡಿನಲ್ಲಿ ಅಸ್ತಿತ್ವಕ್ಕೆ ಬಂತು ಟಿವಿಕೆ ಸರ್ಕಾರ

Tamil Nadu Government Formation: ಟಿವಿಕೆ ಸ್ಥಾಪನೆಯಾಗಿ ಎರಡೇ ವರ್ಷಕ್ಕೆ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದಿದೆ. 107 ಸ್ಥಾನಗಳನ್ನು ಪಡೆದ ವಿಜಯ್‌ ಅವರ ಟಿವಿಕೆ ಪಕ್ಷಕ್ಕೆ ಕಾಂಗ್ರೆಸ್‌, ಮುಸ್ಲಿಂ ಲೀಗ್‌, ಎಡಪಕ್ಷಗಳು ಮತ್ತು ವಿಸಿಕೆ ಬೆಂಬಲ ನೀಡುವುದರೊಂದಿಗೆ ವಿಜಯ್‌ ಬಹುಮತ ಸಾಬೀತು ಪಡಿಸಿದ್ದಾರೆ. ಜತೆಗೆ ರಾಜ್ಯಪಾಲ ರಾಜೇಂದ್ರ ಅರ್ಲೇಕರ್‌ ಅವರನ್ನು ಭೇಟಿಯಾಗಿ ಸರ್ಕಾರ ರಚಿಸುವ ಹಕ್ಕು ಮಂಡಿಸಿದ್ದಾರೆ.

ಕೊನೆಗೂ ವಿಜಯ್‌ ಸಿಎಂ ಆಗುವ ಹಾದಿ ಸುಗಮ; ಬೆಂಬಲ ಘೋಷಿಸಿದ ವಿಸಿಕೆ: 118 ಮ್ಯಾಜಿಕ್‌ ನಂಬರ್‌ ತಲುಪಿದ ಟಿವಿಕೆ

ಕೊನೆಗೂ ವಿಜಯ್‌ಗೆ ಬೆಂಬಲ ಘೋಷಿಸಿದ ವಿಸಿಕೆ

Tamil Nadu Government Formation: ಕೆಲವು ದಿನಗಳಿಂದ ತಮಿಳುನಾಡಿನಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮ ಕೊನೆಗೊಳ್ಳುವ ಹಂತಕ್ಕೆ ತಲುಪಿದೆ. ವಿಸಿಕೆ ಪಕ್ಷದ ಇಬ್ಬರು ಶಾಸಕರು ವಿಜಯ್‌ಗೆ ಬೇಷರತ್‌ ಬೆಂಬಲ ಸೂಚಿಸುವ ಮೂಲಕ ಮೊದಲ ಬಾರಿಗೆ ಟಿವಿಕೆ ಸರ್ಕಾರ ಅಧಿಕಾರಕ್ಕೆ ಬರಲಿದೆ.

ತಮಿಳುನಾಡು ರಾಜಕೀಯದಲ್ಲಿ ಹೊಸ ಟ್ವಿಸ್ಟ್: ಎಐಎಡಿಎಂಕೆ-ಡಿಎಂಕೆ ಮೈತ್ರಿ ಮೂಲಕ ಸಿಎಂ ಪಟ್ಟ ಏರ್ತಾರ ವಿಸಿಕೆ ಮುಖ್ಯಸ್ಥ?

ಕೇವಲ 2 ಶಾಸಕರಿರುವ ತಿರುಮಾವಳವನ್ ಸಿಎಂ ಆಗ್ತಾರಾ?

ತಮಿಳುನಾಡಿನ ಅತಂತ್ರ ಚುನಾವಣಾ ಫಲಿತಾಂಶದ ಬಳಿಕ ಸರ್ಕಾರ ರಚನೆ ಕಸರತ್ತು ಹೊಸ ತಿರುವು ಪಡೆದುಕೊಂಡಿದೆ. ಬಹುಮತಕ್ಕೆ ಕೇವಲ ಎರಡು ಶಾಸಕರ ಕೊರತೆಯಲ್ಲಿರುವ ವಿಜಯ್ ನೇತೃತ್ವದ ಟಿವಿಕೆಗೆ ವಿಸಿಕೆ ಬೆಂಬಲ ನಿರ್ಣಾಯಕವಾಗಿದೆ. ಇದೇ ವೇಳೆ ಡಿಎಂಕೆ ಮತ್ತು ಎಐಎಡಿಎಂಕೆ ಸೇರಿ ತಿರುಮಾವಳವನ್ ಅವರನ್ನು ಮುಖ್ಯಮಂತ್ರಿ ಮಾಡುವ ಚರ್ಚೆಗಳು ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿವೆ.

ಸರ್ಕಾರ ರಚಿಸಲು ವಿಜಯ್‌ಗೆ ಸಿಕ್ತು ರಾಜ್ಯಪಾಲರ ಗ್ರೀನ್‌ ಸಿಗ್ನಲ್‌; ಮುಖ್ಯಮಂತ್ರಿಯಾಗಿ ನಾಳೆಯೇ ಪ್ರಮಾಣ ವಚನ

ಮುಖ್ಯಮಂತ್ರಿಯಾಗಿ ವಿಜಯ್‌ ನಾಳೆಯೇ ಪ್ರಮಾಣ ವಚನ

Vijay: ಸಾಕಷ್ಟು ನಾಟಕೀಯ ಬೆಳವಣಿಗೆ, ಬಿಡುವಿಲ್ಲದ ರಾಜಕೀಯ ಚಟುವಟಿಕೆಗಳ ಬಳಿಕ ತಮಿಳುನಾಡಿನಲ್ಲಿ ದಳಪತಿ ವಿಜಯ್‌ ಸರ್ಕಾರ ರಚಿಸಲು ಸಜ್ಜಾಗಿದ್ದಾರೆ. ವಿಜಯ್‌ಗೆ 121 ಶಾಸಕರು ಬೆಂಬಲ ಸೂಚಿಸಿದ್ದು, ಶನಿವಾರ ಬೆಳಗ್ಗೆ 11 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ನಂದಿಗ್ರಾಮದಿಂದ ನಬನ್ನದವರೆಗೆ: ಸುವೇಂದು ಅಧಿಕಾರಿ ಬಂಗಾಳದ ನೂತನ ಮುಖ್ಯಮಂತ್ರಿಯಾಗಲು ಕಾರಣವಾದ ಪ್ರಮುಖ ಹಂತಗಳು

ಸುವೇಂದು ಅಧಿಕಾರಿಯ ರಾಜಕೀಯ ಪಯಣ ಹೇಗಿತ್ತು?

ನಂದಿಗ್ರಾಮ ಚಳುವಳಿಯಿಂದ ಆರಂಭವಾದ ಸುವೇಂದು ಅಧಿಕಾರಿ ಅವರ ರಾಜಕೀಯ ಪಯಣ, ಟಿಎಂಸಿಯಿಂದ ಬಿಜೆಪಿಗೆ ಸೇರ್ಪಡೆ, ಮಮತಾ ಬ್ಯಾನರ್ಜಿ ವಿರುದ್ಧದ ಐತಿಹಾಸಿಕ ಗೆಲುವು ಮತ್ತು 2026ರ ಭರ್ಜರಿ ಚುನಾವಣಾ ವಿಜಯದ ಮೂಲಕ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಪದವಿವರೆಗೆ ತಲುಪಿದೆ.

West Bengal CM: ಅಮಿತ್‌ ಶಾ ಆಯ್ಕೆಯ ನಾಯಕ ಸುವೇಂದು ಅಧಿಕಾರಿ

ಅಮಿತ್‌ ಶಾ ಆಯ್ಕೆಯ ನಾಯಕ ಸುವೇಂದು ಅಧಿಕಾರಿ

Suvendu Adhikari: ಪಶ್ಚಿಮ ಬಂಗಾಳದಲ್ಲಿ ಸ್ಥಿರ ಮತ್ತು ದಕ್ಷ ಆಡಳಿತ ನೀಡುವ, ಬಾಂಗ್ಲಾದೇಶದ ಅಕ್ರಮ ನುಸುಳುಕೋರರನ್ನು ನಿಗ್ರಹಿಸುವ ಮೂಲಕ ದೇಶದ ಆಂತರಿಕ ಭದ್ರತೆಗೆ ಪುಷ್ಟಿ ನೀಡಬೇಕಾದ ಮಹತ್ವದ ಜವಾಬ್ದಾರಿಯು ಸುವೇಂದು ಅಧಿಕಾರಿ ಅವರ ಮೇಲಿದೆ. ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಿಂಸಾಚಾರಗಳನ್ನು ತಹಬದಿಗೆ ತರಬೇಕಾದ, ಕಾನೂನು ಸುವ್ಯವಸ್ಥೆ ಕಾಪಾಡುವ, ಮತ್ತು ಆರ್ಥಿಕ ಅಭಿವೃದ್ಧಿ, ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಆಶ್ವಾಸನೆಗಳನ್ನು ಜಾರಿಗೊಳಿಸುವ ಹೊಣೆಗಾರಿಕೆ ಅವರ ಮೇಲಿದೆ.

ಇನ್ನೂ ಬಗೆ ಹರಿಯದ ಕೇರಳಂ ಸಿಎಂ ಆಯ್ಕೆ ಕಗ್ಗಂಟು: ಕಾಂಗ್ರೆಸ್‌ ಮನೆಯೊಂದು ಮೂರು ಭಾಗವಾಗುತ್ತ?

ಕೇರಳಂ ಕಾಂಗ್ರೆಸ್‌ನಲ್ಲಿ ಮುಂದುವರಿದ ನಾಯಕತ್ವ ಗೊಂದಲ

ಕೇರಳಂ ವಿಧಾನಸಭಾ ಚುನಾವಣೆಯಲ್ಲಿ 102 ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ಸಾಧಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಸರ್ಕಾರ ರಚನೆಗೆ ಸಜ್ಜಾಗಿದೆ. ಆದರೆ ಮುಖ್ಯಮಂತ್ರಿ ಅಭ್ಯರ್ಥಿಯ ಆಯ್ಕೆ ಇನ್ನೂ ಅಂತಿಮವಾಗದೇ ರಾಜಕೀಯ ಕುತೂಹಲ ಹೆಚ್ಚಿಸಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಯಾವುದೇ ಒಮ್ಮತದ ನಿರ್ಧಾರ ಕೈಗೊಳ್ಳಲಾಗದ ಹಿನ್ನೆಲೆ, ಸಿಎಂ ಆಯ್ಕೆ ಹೊಣೆಯನ್ನು ಎಐಸಿಸಿ ಹೈಕಮಾಂಡ್‌ಗೆ ವಹಿಸಲಾಗಿದೆ. ವಿ.ಡಿ. ಸತೀಶನ್, ರಮೇಶ್ ಚೆನ್ನಿತ್ತಲ ಮತ್ತು ಕೆ.ಸಿ. ವೇಣುಗೋಪಾಲ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಮೈತ್ರಿ ಪಕ್ಷ ಮುಸ್ಲಿಂ ಲೀಗ್‌ ಸತೀಶನ್ ಅವರಿಗೆ ಬೆಂಬಲ ಸೂಚಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಕೇರಳಂ ಮುಖ್ಯಮಂತ್ರಿ ಪಟ್ಟ ಯಾರಿಗೆ? ರೇಸ್‌ನಲ್ಲಿ ಕೆ.ಸಿ. ವೇಣುಗೋಪಾಲ್, ಸತೀಶನ್‌; ಮುಂದಿನ ವಾರ ಪ್ರಮಾಣ ವಚನ?

ಕೇರಳಂ ಮುಖ್ಯಮಂತ್ರಿ ಪಟ್ಟ ಯಾರಿಗೆ?

ಕೇರಳಂನ ಮುಂದಿನ ಮುಖ್ಯಮಂತ್ರಿ ಹುದ್ದೆಗೆ ರೇಸ್‌ನಲ್ಲಿ ಕಾಂಗ್ರೆಸ್‌ ಹಿರಿಯ ನಾಯಕ ಕೆ.ಸಿ. ವೇಣುಗೋಪಾಲ್ ಮುಂಚೂಣಿಯಲ್ಲಿದ್ದಾರೆ ಎನ್ನಲಾಗಿದೆ. ವೀಕ್ಷಕರಾದ ಅಜಯ್ ಮಾಕೆನ್ ಮತ್ತು ಮುಕುಲ್ ವಾಸ್ನಿಕ್ ತಮ್ಮ ವರದಿಯನ್ನು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಲ್ಲಿಸಿದ ನಂತರ ಈ ವಿಚಾರ ತಿಳಿದುಬಂದಿದೆ.

“ವಿಜಯ್ ಜತೆ ಸೇರಿಕೊಂಡಿರುವುದು ಅನೈತಿಕತೆ”: ಟಿವಿಕೆ ಜತೆಗಿನ ಮೈತ್ರಿ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ವಾಗ್ದಾಳಿ

ಟಿವಿಕೆ ಜತೆಗಿನ ಮೈತ್ರಿ ಬಗ್ಗೆ ಮಣಿಶಂಕರ್ ಅಯ್ಯರ್ ವಾಗ್ದಾಳಿ

TVK-Congress alliance: ನಾವು ಸಂಪೂರ್ಣವಾಗಿ ಅತಂತ್ರ ಸ್ಥಿತಿಯಲ್ಲಿದ್ದೇವೆ. ನಾವು ವಿಜಯ್ ಅವರೊಂದಿಗೆ ಕೈಜೋಡಿಸುವ ಮೂಲಕ ಕೇವಲ ಅನೈತಿಕತೆಯನ್ನಷ್ಟೇ ಮಾಡಿಲ್ಲ, ಬದಲಾಗಿ ಅವರಿಗೆ ಬಹುಮತ ಸಿಗುವಂತೆ ನೋಡಿಕೊಳ್ಳದ ರಾಜಕೀಯ ಮೂರ್ಖತನವನ್ನೂ ಮಾಡಿದ್ದೇವೆ. ಹಾಗಾಗಿ, ಈಗ ಅಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿದೆ ಎಂದು ಕಾಂಗ್ರೆಸ್‌ ನಾಯಕ ಮಣಿಶಂಕರ್ ಅಯ್ಯರ್ ಟೀಕಿಸಿದ್ದಾರೆ.

ವಿಜಯ್‌ಗಾಗಿ ‘ಕೈ’ ಕೊಟ್ಟ ಪಕ್ಷದ ವಿರುದ್ಧ ಅಸಮಾಧಾನ; ಲೋಕಸಭೆಯಲ್ಲಿ ಕಾಂಗ್ರೆಸ್ ಜತೆ ಕುಳಿತುಕೊಳ್ಳುವುದಿಲ್ಲ ಎಂದ ಡಿಎಂಕೆ

ಲೋಕಸಭೆಯಲ್ಲಿ ಕಾಂಗ್ರೆಸ್ ಜತೆ ಕುಳಿತುಕೊಳ್ಳುವುದಿಲ್ಲ ಎಂದ ಡಿಎಂಕೆ

DMK vs Congress: ಕಾಂಗ್ರೆಸ್ ಜತೆಗಿನ ಡಿಎಂಕೆ ಮೈತ್ರಿಯನ್ನು ಅಧಿಕೃತವಾಗಿ ಕೊನೆಗೊಳಿಸುತ್ತ ಡಿಎಂಕೆಯ ಕನಿಮೋಳಿ ಲೋಕಸಭಾ ಸ್ಪೀಕರ್‌ಗೆ ಬರೆದಿರುವ ಪತ್ರ ಗಮನ ಸೆಳೆದಿದೆ. ಪಕ್ಷದ ಸದಸ್ಯರು ತಮ್ಮ ಹಿಂದಿನ ಮಿತ್ರ ಪಕ್ಷ ಕಾಂಗ್ರೆಸ್‌ ಪಕ್ಕದಲ್ಲಿ ಕುಳಿತುಕೊಳ್ಳಲು ಬಯಸುವುದಿಲ್ಲ, ಆಸನ ವ್ಯವಸ್ಥೆ ಬದಲಾಯಿಸಿಬೇಕೆಂದು ಮನವಿ ಮಾಡಿದ್ದಾರೆ.

ಮಮತಾ ಬ್ಯಾನರ್ಜಿ ಉತ್ತರಾಧಿಕಾರಿಯಾಗಿ ಮುಖ್ಯಮಂತ್ರಿ ಹುದ್ದೆಗೆ ಸುವೇಂದು ಅಧಿಕಾರಿ ಆಯ್ಕೆ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹುದ್ದೆಗೆ ಸುವೇಂದು ಅಧಿಕಾರಿ ಆಯ್ಕೆ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸ್ಥಾನಕ್ಕೆ ಸುವೇಂದು ಅಧಿಕಾರಿಯವರನ್ನು ಆಯ್ಕೆ ಮಾಡಲಾಗಿದೆ. ಇವರೊಂದಿಗೆ ಇಬ್ಬರು ಉಪಮುಖ್ಯಮಂತ್ರಿಗಳ ಆಯ್ಕೆ ಮಾಡಲಾಗುತ್ತದೆ ಎನ್ನಲಾಗುತ್ತಿದ್ದರೂ ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಯಾವುದೇ ಘೋಷಣೆಯನ್ನು ಮಾಡಲಿಲ್ಲ. ಶಾಸಕಾಂಗ ಪಕ್ಷದ ಸಭೆಯಲ್ಲಿ ಶುಕ್ರವಾರ ಅಧಿಕಾರಿ ಅವರ ಹೆಸರನ್ನು ಅಂತಿಮಗೊಳಿಸಲಾಯಿತು.

ಬಂಗಾಳದ ಹೌರಾದಲ್ಲಿ ಚುನಾವಣೋತ್ತರ ಹಿಂಸಾಚಾರ: ಟಿಎಂಸಿಯಿಂದ ಬಾಂಬ್ ದಾಳಿ

ಪಶ್ಚಿಮ ಬಂಗಾಳದಲ್ಲಿ ಭುಗಿಲೆದ್ದ ಚುನಾವಣೋತ್ತರ ಹಿಂಸಾಚಾರ

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಫಲಿತಾಂಶದ ಬಳಿಕ ಹಿಂಸಾಚಾರ ತೀವ್ರಗೊಂಡಿದೆ. ಹೌರಾದ ಶಿಬ್‌ಪುರ ಪ್ರದೇಶದಲ್ಲಿ ಬಾಂಬ್ ದಾಳಿ, ಲೂಟಿ ಮತ್ತು ಧಾರ್ಮಿಕ ಘೋಷಣೆಗಳ ವಿಡಿಯೊ ವೈರಲ್ ಆಗಿದೆ. ಈ ದಾಳಿಯ ಹಿಂದೆ ಟಿಎಂಸಿ ಕಾರ್ಯಕರ್ತರ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದ್ದು, ಇಬ್ಬರು ಕಾರ್ಯಕರ್ತರು ಗಾಯಗೊಂಡಿದ್ದಾರೆ. ಘಟನೆಯ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿದರೆ, ರಾಜ್ಯದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ಟಿಎಂಸಿ ಭದ್ರ ಕೋಟೆಯಲ್ಲೇ ಮಮತಾ ಬ್ಯಾನರ್ಜಿ ಮಣಿಸಿದ ಬಿಜೆಪಿಯ ಸುವೇಂದು ಅಧಿಕಾರಿ ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿ

ಸುವೇಂದು ಅಧಿಕಾರಿ ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿ

Suvendu Adhikari: ಸತತ 15 ವರ್ಷಗಳ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಆಡಳಿತಕ್ಕೆ ಬ್ರೇಕ್‌ ಹಾಕಿ ಇದೇ ಮೊದಲ ಬಾರಿ ಪಶ್ಚಿಮ ಬಂಗಾಳದಲಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಟಿಎಂಸಿಯ ಭದ್ರಕೋಟೆ ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿದ ಸುವೇಂದು ಅಧಿಕಾರಿಗೆ ಇದೀಗ ಬಿಜೆಪಿ ಮುಖ್ಯಮಂತ್ರಿ ಪಟ್ಟ ನೀಡಿದೆ.

ಕೊನೆಗೂ ತಮಿಳುನಾಡಿನಲ್ಲಿ ಅಸ್ತಿತ್ವಕ್ಕೆ ಬರಲಿದೆ ಟಿವಿಕೆ ಸರ್ಕಾರ; ವಿಜಯ್‌ಗೆ ಕಾಂಗ್ರೆಸ್‌ ಜತೆಗೆ ಎಡಪಕ್ಷ, ವಿಸಿಕೆ ಬೆಂಬಲ

ವಿಜಯ್‌ಗೆ ಕಾಂಗ್ರೆಸ್‌ ಜತೆಗೆ ಎಡಪಕ್ಷ, ವಿಸಿಕೆ ಬೆಂಬಲ

TVK: ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಟಿವಿಕೆಗೆ ಅಗತ್ಯವಾದ ಮ್ಯಾಜಿಕ್‌ ನಂಬರ್‌ 118 ಲಭಿಸಿದ್ದು, ವಿಜಯ್‌ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾದಂತಾಗಿದೆ. ಕಾಂಗ್ರೆಸ್‌ ಬೆನ್ನಲ್ಲೇ ಎಡಪಕ್ಷಗಳು ಮತ್ತು ವಿಸಿಕೆ ಶಾಸಕರು ಟಿವಿಕೆಗೆ ಬೆಂಬಲ ಸೂಚಿಸಿದ್ದು, ಸದ್ಯದಲ್ಲೇ ವಿಜಯ್‌ ಸರ್ಕಾರ ರಚನೆಯ ಹಕ್ಕು ಮಂಡಿಸಲಿದ್ದಾರೆ.

ಸುವೇಂದು ಅಧಿಕಾರಿ ಆಪ್ತರ ನಿಗೂಢ ಸಾವುಗಳ ಸರಣಿ: ಹಳೆಯ ಘಟನೆಗಳ ಮೆಲುಕು

ಸುವೇಂದು ಅಧಿಕಾರಿ ಆಪ್ತರ ಸರಣಿ ಸಾವುಗಳು ಮತ್ತೆ ಸುದ್ದಿಯಲ್ಲಿ

ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಹತ್ಯೆಯಾದ ಬಳಿಕ, ಕಳೆದ ಕೆಲವು ವರ್ಷಗಳಲ್ಲಿ ಅವರ ಸುತ್ತಮುತ್ತ ನಡೆದ ನಿಗೂಢ ಸಾವುಗಳು ಮತ್ತೆ ಚರ್ಚೆಗೆ ಬಂದಿವೆ. 2013ರಲ್ಲಿ ಪ್ರದೀಪ್ ಝಾ, 2018ರಲ್ಲಿ ಅಂಗರಕ್ಷಕ ಶುಭಬ್ರತ ಚಕ್ರವರ್ತಿ ಮತ್ತು ಇದೀಗ 2026ರಲ್ಲಿ ಚಂದ್ರನಾಥ್ ರಥ್ ಸಾವಿನ ಘಟನೆಗಳು ರಾಜಕೀಯ ವಲಯದಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿವೆ. ಚುನಾವಣೋತ್ತರ ಹಿಂಸಾಚಾರದ ನಡುವೆ ಈ ಘಟನೆ ಬಂಗಾಳ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ರಾಜೀನಾಮೆಗೆ ನಿರಾಕರಿಸಿದ ಮಮತಾ ಬ್ಯಾನರ್ಜಿಗೆ ರಾಜ್ಯಪಾಲರಿಂದ ಚೆಕ್‌ಮೆಟ್‌; ಪಶ್ಚಿಮ ಬಂಗಾಳದ ವಿಧಾನಸಭೆ ವಿಸರ್ಜನೆ

ಪಶ್ಚಿಮ ಬಂಗಾಳ ವಿಧಾನಸಭೆ ವಿಸರ್ಜಿಸಿದ ರಾಜ್ಯಪಾಲ ಆರ್‌.ಎನ್‌. ರವಿ

Mamata Banerjee: ಸೋತರೂ ರಾಜೀನಾಮೆ ನೀಡಲ್ಲ ಎಂದು ಹೈಡ್ರಾಮ ನಡೆಸುತ್ತಿದ್ದ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಆಘಾತ ಎದುರಾಗಿದೆ. ರಾಜ್ಯಪಾಲ ಆರ್‌.ಎನ್‌. ರವಿ ಪಶ್ಚಿಮ ಬಂಗಾಳ ವಿಧಾನಸಭೆಯನ್ನು ವಿಸರ್ಜಿಸಿ ಆದೇಶ ಹೊರಡಿಸಿದ್ದಾರೆ. ಆ ಮೂಲಕ ಟಿಎಂಸಿಯ 15 ವರ್ಷಗಳ ಆಡಳಿತ ಅಧಿಕೃತವಾಗಿ ಅಂತ್ಯಗೊಂಡಿದೆ.

ಸುವೇಂದು ಅಧಿಕಾರಿ ಆಪ್ತ ಚಂದ್ರನಾಥ ರಥ್‌ ಹತ್ಯೆಗೆ ಮುನ್ನ ಆಗಿದ್ದೇನು? ಕಾರ್‌ ಚೇಸ್‌ ಮಾಡಿದ ಬೈಕ್‌ ಸಿಸಿ ಕ್ಯಾಮರಾದಲ್ಲಿ ಸೆರೆ

ಚಂದ್ರನಾಥ ರಥ್‌ ಹತ್ಯೆಗೆ ಮುನ್ನ ಆಗಿದ್ದೇನು? ವಿಡಿಯೊ ವೈರಲ್‌

Chandranath Rath: ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ ರಥ್‌ ಅವರ ಹತ್ಯೆ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ರಥ್‌ ಅವರ ಕಾರನ್ನು ಇಬ್ಬರು ಬೈಕ್‌ನಲ್ಲಿ ಹಿಂಬಾಲಿಸುತ್ತಿರುವ ಸಿಸಿಟಿವಿ ದೃಶ್ಯ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

Loading...