ಸದಾ ನಂಬರ್ ಒನ್ ಸ್ಥಾನದಲ್ಲಿ ಆರ್ಭಟಿಸುತ್ತಿದ್ದ ಕರ್ಣ ಈ ಬಾರಿ ಕುಸಿದಿದ್ದಾನೆ. ಕರ್ಣ ಶುರುವಾದಾಗಿನಿಂದ (Karna Serial) ಟಾಪ್ ಸ್ಥಾನವನ್ನೇ ಕಾಯ್ದುಕೊಂಡಿತ್ತು. ಇದೀಗ ಈ ಧಾರಾವಾಹಿ (Serial) ಎರಡನೇ ಸ್ಥಾನಕ್ಕೆ ಕುಸಿದಿದೆ.
ಕನ್ನಡ ಕಿರುತೆರೆಯಲ್ಲಿ ಸೀರಿಯಲ್ಗಳ (Kannada Serial) ಲೆಕ್ಕಾಚಾರ ವಾರದಿಂದ ವಾರಕ್ಕೆ ಬದಲಾಗುತ್ತ ಇರುತ್ತದೆ. ಪ್ರತಿವಾರ ನಿರ್ದೇಶಕರು ಜನರನ್ನು ಸೆಳೆಯಲು ಒಂದಲ್ಲ ಒಂದು ಟ್ವಿಸ್ಟ್ ಕೊಡುತ್ತಾ ಇರುತ್ತಾರೆ. ಆದರೀಗ ವೀಕ್ಷಕರು ಊಹಿಸಿರೋ ಧಾರಾವಾಹಿ ನಂಬರ್ 1 ಟಿಆರ್‌ಪಿಯಲ್ಲಿದೆ.
ಅಣ್ಣಯ್ಯ ನಂಬರ್ 1
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಅಣ್ಣಯ್ಯ’ ಧಾರಾವಾಹಿ ಅರ್ಬನ್ + ರೂರಲ್ - 9.9 ಟಿವಿಆರ್ ದಾಖಲಿಸಿದೆ. ‘ಕರ್ಣ’ ಧಾರಾವಾಹಿಯ ಮಹಾಸಂಚಿಕೆಗೆ ಅರ್ಬನ್ + ರೂರಲ್ - 10.5 ಟಿವಿಆರ್, ಅರ್ಬನ್ - 9.0 ಟಿವಿಆರ್ ಸಿಕ್ಕಿದೆ.
ಅಮೃತಧಾರೆಗೆ ಮೂರನೇ ಸ್ಥಾನ, ಲಕ್ಷ್ಮೀ ನಿವಾಸ ನಾಲ್ಕನೆ ಸ್ಥಾನದಲ್ಲಿದೆ. ಬಳಿಕ ಪುಟ್ಟಕ್ಕನ ಮಕ್ಕಳು , ನಾ ನಿನ್ನ ಬಿಡಲಾರೆ , ಶ್ರೀ ರಾಘವೇಂದ್ರ ಮಹಾತ್ಮೆ, ಬ್ರಹ್ಮಗಂಟು ,ಶ್ರಾವಣಿ ಸುಬ್ರಹ್ಮಣ್ಯ - 4.4 ಇದೆ. ಇತ್ತೀಚೆಗೆ ಆರಂಭವಾದ ಕಾಮಿಡಿ ಕಿಲಾಡಿಗಳು ಅರ್ಬನ್ - 3.2 ಟಿವಿಆರ್ ಲಭಿಸಿದೆ.
ಇದನ್ನೂ ಓದಿ: Bigg Boss Kannada 12: ಗಿಲ್ಲಿ ಮೇಲೆ ಸಿಡಿದೆದ್ದು ಕೂಗಾಡಿದ ಧ್ರುವಂತ್! ಸಾಥ್ ಕೊಟ್ಟ ಅಶ್ವಿನಿ ಗೌಡ
ಅಮೃತಧಾರೆ ಧಾರಾವಾಹಿಗೆ ಮೆಚ್ಚುಗೆ
ಕಳೆದ ಮೂರು ವಾರಗಳಿಂದ ಧೂಳೆಬ್ಬಿಸುತ್ತಿರುವ ಅಮೃತಧಾರೆ ಧಾರಾವಾಹಿ ಟಿಆರ್ಪಿ ರಾಕೆಟ್ನಂತೆ ಮೇಲೇರಿದೆ. ಕಳೆದ ಕೆಲವು ವಾರಗಳಿಂದ ಭರ್ಜರಿ ಟ್ವಿಸ್ಟ್-ಟರ್ನ್ ಮೂಲಕ ಹಾಗೂ ತಂದೆ-ಮಗನ ಮುದ್ದಾಗ ಎಪಿಸೋಡ್ ಮೂಲಕ ಸಾಗುತ್ತಿರುವ ಝೀ ಕನ್ನಡದ ಅಮೃತಧಾರೆ ಧಾರಾವಾಹಿಯ ಟಿಆರ್ಪಿಯಲ್ಲಿ ದೊಡ್ಡ ಬದಲಾವಣೆ ಆಗಿದೆ.
ಕಳೆದ ಕೆಲವು ವಾರಗಳಿಂದ ಅಣ್ಣಯ್ಯ ಧಾರಾವಾಹಿಯಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇದು ಧಾರಾವಾಹಿ ಟಿಆರ್ಪಿ ಹೆಚ್ಚಲು ಕಾರಣ ಆಗಿದೆ. ಅಣ್ಣಯ್ಯ ಧಾರಾವಾಹಿ ಸಖತ್ ಇಂಟ್ರೆಸ್ಟಿಂಗ್ ಆಗಿ ಮೂಡಿ ಬರುತ್ತಿದೆ.
ಒಂದು ಕಡೆ ತನ್ನ ಗಂಡನನ್ನು ಪ್ರೀತಿಯ ಬಲೆಯಲ್ಲಿ ಬೀಸಿದ ಪಿಂಕಿಗೆ ರಶ್ಮಿ ಪೊರಕೆ ಏಟು ಕೊಟ್ಟರೆ, ಇನ್ನೊಂದು ಕಡೆ ರಾಣಿ ಮತ್ತು ಮನುವನ್ನು ಬೆಂಕಿಯಿಂದ ಕಾಪಾಡಿದ ಪಾರು, ಈಗ ರೌಡಿಗಳನ್ನೇ ಬೆಸ್ತು ಬೀಳಿಸಿದ್ದಾರೆ. ಕಥೆಯ ವಿಚಾರಕ್ಕೆ ಬರೋದಾದರೆ ಮನು ಮತ್ತು ರಾಣಿಯನ್ನು ಕೊಂಡು ಇಡೀ ಮಾಸ್ತಿಕೊಪ್ಪಲಿನ ಆಸ್ತಿಯನ್ನು ತಮ್ಮ ವಶಕ್ಕೆ ಪಡೆದುಕೊಳ್ಳಲು ಪ್ಲ್ಯಾನ್ ಮಾಡಿದ್ದ ರೌಡಿಗಳಿಗೆ, ಆ ಪೇಪರ್ ಮೇಲಿರೋದು ರಾಣಿಯ ಅಸಲಿ ಸಹಿ ಅಲ್ವೇ ಅಲ್ಲ ಅನ್ನೋದು ಗೊತ್ತಾದ ಮೇಲೆ ಸಿಟ್ಟು ನೆತ್ತಿಗೇರಿಗೆ.
ಇದನ್ನೂ ಓದಿ: Ekka OTT: ದೊಡ್ಮನೆ ಅಭಿಮಾನಿಗಳಿಗೆ ಮನರಂಜನೆ ಫಿಕ್ಸ್; OTTಗೆ ಎಂಟ್ರಿ ಕೊಡ್ತಿದೆ ʻಎಕ್ಕʼ ಸಿನಿಮಾ, ಸ್ಟ್ರೀಮಿಂಗ್ ಎಲ್ಲಿ?
ಈ ಧಾರಾವಾಹಿ ಮುಂದಿನ ವಾರ ಡಬಲ್ ಡಿಜಿಟ್ ಟಿಆರ್ಪಿ ಪಡೆದರು ಅಚ್ಚರಿ ಏನಿಲ್ಲ. ಇತ್ತ ಕಲರ್ಸ್ ಕನ್ನಡದ ವಿಚಾರಕ್ಕೆ ಬಂದರೆ, ನಂದಗೋಕುಲ ಮೊದಲ ಸ್ಥಾನ, ಮುದ್ದು ಸೊಸೆ , ಭಾರ್ಗವಿ ಎಲ್‌ಎಲ್‌ಬಿ , ಪ್ರೇಮಕಾವ್ಯ ಆ ನಂತರದಲ್ಲಿ ಭಾಗ್ಯಲಕ್ಷ್ಮೀ ಇದೆ.