Karna Serial: ಅರ್ಜುನ ಎದುರು ನಿಧಿ; ಕರ್ಣನ ಮನದಲ್ಲಿ ಎನೋ ತಳಮಳ!
Karna Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಕರ್ಣ ಧಾರಾವಾಹಿಯಲ್ಲಿ (Karna Serial Kannada) ನಿಧಿಯನ್ನು ಮದುವೆಯಾಗಲು ಬಂದಿದ್ದಾನೆ ಅರ್ಜುನ್. ಹುಡುಗ ಬಂದಾಗ ಆತನನ್ನು ಹೇಗಾದರೂ ಓಡಿಸಬಹುದು ಎಂದು ಕರ್ಣ ಮತ್ತು ನಿಧಿ ಪ್ಲ್ಯಾನ್ ಮಾಡಿ ಇದಕ್ಕೆ ಒಪ್ಪಿದ್ದರು. ಆದರೆ ಈಗ ಆಗಿದ್ದೇ ಬೇರೆ.
ಕರ್ಣ ಧಾರಾವಾಹಿ -
ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಕರ್ಣ ಧಾರಾವಾಹಿಯಲ್ಲಿ (Karna Serial Kannada) ನಿಧಿಯನ್ನು ಮದುವೆಯಾಗಲು ಬಂದಿದ್ದಾನೆ ಅರ್ಜುನ್. ಹುಡುಗ ಬಂದಾಗ ಆತನನ್ನು ಹೇಗಾದರೂ ಓಡಿಸಬಹುದು ಎಂದು ಕರ್ಣ ಮತ್ತು ನಿಧಿ (Karna and Nidhi) ಪ್ಲ್ಯಾನ್ ಮಾಡಿ ಇದಕ್ಕೆ ಒಪ್ಪಿದ್ದರು. ಆದರೆ ಈಗ ಆಗಿದ್ದೇ ಬೇರೆ.
ನಿಧಿ ಸೊಟ್ಟ ಮೂತಿ
ಅರ್ಜುನ ಒಬ್ಬ ಡಾಕ್ಟರ್, ಹಾರ್ಟ್ ಸರ್ಜನ್. ಅರ್ಜುನ್ ಎಲ್ಲರಿಗೂ ಇಷ್ಟ ಆಗಿಬಿಟ್ಟಿದ್ದಾನೆ. ಅವನು ತನ್ನನ್ನು ಒಪ್ಪಿಕೊಳ್ಳಬಾರದು ಎಂದು ನಿಧಿ ಸೊಟ್ಟ ಮೂತಿ ಮಾಡಿ ಬಂದಿದ್ದಾಳೆ. ಆದರೂ ಅರ್ಜುನ್ ನಿಧಿಯನ್ನು ಒಪ್ಪಿಕೊಂಡು ಬಿಟ್ಟಿದ್ದಾನೆ.
ಇದನ್ನೂ ಓದಿ: Alia Bhatt: ನಾಲ್ಕನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಆಲಿಯಾ-ರಣಬೀರ್; ಕ್ಯೂಟ್ ಫೋಟೋಸ್ ವೈರಲ್
ನಿಧಿ ಮತ್ತು ಕರ್ಣ ಮಾತ್ರ ಈಗ ಶಾಕ್ ಆಗಿದ್ದಾರೆ. ತನ್ನ ಪ್ಲ್ಯಾನ್ ಸಕ್ಸಸ್ ಆಗಿರೋ ಖುಷಿಯಲ್ಲಿ ಇದ್ದಾನೆ ರಮೇಶ್. ಈಗೇನಿದ್ದರೂ ನಿಧಿ ಮತ್ತು ಕರ್ಣ ತಮ್ಮ ಲವ್ಸ್ಟೋರಿಯನ್ನು ಎಲ್ಲರ ಎದುರು ಹೇಳಲೇಬೇಕಿದೆ. ಮುಂದೆ ಏನಾಗಲಿದೆ ಅನ್ನೋದೇ ವೀಕ್ಷಕರಲ್ಲಿ ಇರೋ ಕುತೂಹಲ.
ಈಗೇನಿದ್ದರೂ ನಿಧಿ ಮತ್ತು ಕರ್ಣ ತಮ್ಮ ಲವ್ಸ್ಟೋರಿಯನ್ನು ಎಲ್ಲರ ಎದುರು ಹೇಳಲೇಬೇಕಿದೆ. ಅದಕ್ಕೆ ಅವಕಾಶ ಸಿಗುತ್ತಾ ಎನ್ನುವುದು ಮುಂದಿರುವ ಪ್ರಶ್ನೆ. ಇದಾಗಲೇ ಕರ್ಣ ರಮೇಶನ ಸ್ವಂತ ಮಗ ಎನ್ನುವುದು ನಯನತಾರಾ ಹೇಳಿದ್ದಾಳೆ.
ಆದರೆ ಅವರಿಬ್ಬರಿಗೂ ಇದು ಗೊತ್ತಿಲ್ಲ. ಇದೇ ಕಾರಣಕ್ಕೆ, ರಮೇಶ್ ಮಗನ ಜೀವನ ಹಾಳು ಮಾಡಲು ಮುಂದಾಗಿದ್ದರೆ, ಅಪ್ಪನ ಕುತಂತ್ರಕ್ಕೆ ತಕ್ಕ ಶಾಸ್ತಿ ಮಾಡುವುದಾಗಿ ಕರ್ಣ ಹೇಳುತ್ತಿದ್ದಾನೆ. ಕರ್ಣ ತನ್ನ ತಂದೆ ರಮೇಶ್ ಮಾಡಿದ ಕುತಂತ್ರಕ್ಕೆ ಬಲಿಯಾಗಿದ್ದಾನೆ.
ಇದನ್ನೂ ಓದಿ: Peddi Postponed: ‘ಪೆದ್ದಿ’ ಸಿನಿಮಾ ರಿಲೀಸ್ ಮುಂದೂಡಿಕೆ: ಮತ್ತೆ ʻಟಾಕ್ಸಿಕ್ʼ ಜೊತೆ ಕ್ಲ್ಯಾಶ್?
ಕರ್ಣ ತನಗೆ ಇಷ್ಟ ಇಲ್ಲದಿದ್ದರೂ ನಿತ್ಯಾಳ ಮದುವೆ ಆಗುವ ಪರಿಸ್ಥಿತಿ ಬಂತು. ನಂತರ ಆತ ಮದುವೆ ಆದ ಕೂಡ. ಆ ಬಳಿಕವೂ ರಮೇಶ್ ತೊಂದರೆ ಕೊಡೋದನ್ನು ಮುಂದುವರಿಸಿದ್ದಾರೆ. ನಿಧಿ ಕೂಡ ರಮೇಶ್ ಕೆಟ್ಟ ಬುದ್ದಿಯನ್ನು ಅರಿತುಕೊಂಡಿದ್ದಾಳೆ. ಆಕೆ ಕೂಡ ಅವನ ವಿರುದ್ಧ ತಿರುಗಿ ಬೀಳುವ ಕೆಲಸವನ್ನು ಮಾಡಿದ್ದಾಳೆ.