Kartik Aaryan: 18ರ ಹರೆಯದ ಯುವತಿ ಜೊತೆ ಕಾರ್ತಿಕ್ ಆರ್ಯನ್ ಡೇಟಿಂಗ್?
Karthik: ಕಳೆದ ಎರಡು ದಿನಗಳಿಂದ ಕಾರ್ತಿಕ್ ಆರ್ಯನ್ಸು ದ್ದಿಯೇ ಹೈಲೈಟ್ ಆಗಿದೆ. ಕಾರ್ತಿಕ್ ಆರ್ಯನ್ ಅಪ್ರಾಪ್ತೆ ಜೊತೆ ಡೇಟಿಂಗ್ ಮಾಡ್ತಾ ಇದ್ದಾರೆ ಎಂದು ವೈರಲ್ ಆಗ್ತಿದೆ. ಇನ್ನು ವೈರಲ್ ಹುಡುಗಿ ಕರೀನಾ ತಾವು ಕಾರ್ತಿಕ್ ಗೆಳತಿಯಲ್ಲ ಎಂದು ಸ್ಪಷ್ಟಪಡಿಸಿದ್ದರೂ, ಅಭಿಮಾನಿಗಳು ಇದನ್ನು ಒಪ್ಪಿಕೊಂಡಿಲ್ಲ. ಕರೀನಾ ಕುಬಿಲಿಯುಟ್ ಎಂಬಾಕೆ ಹದಿಹರೆಯದವಳಾಗಿದ್ದು, ಕಾರ್ತಿಕ್ ಆರ್ಯನ್ ತುಂಬಾ ಕಿರಿಯ ಮಹಿಳೆಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾನೆ ಎಂದು ಇಂಟರ್ನೆಟ್ ನಲ್ಲಿ ವರದಿಯಾಗಿತ್ತು.
ಕಾರ್ತಿಕ್ ಆರ್ಯನ್ -
ಕಳೆದ ಎರಡು ದಿನಗಳಿಂದ ಕಾರ್ತಿಕ್ ಆರ್ಯನ್ (Kartik Aaryan) ಸುದ್ದಿಯೇ ಹೈಲೈಟ್ ಆಗಿದೆ. ಕಾರ್ತಿಕ್ ಆರ್ಯನ್ ಅಪ್ರಾಪ್ತೆ ಜೊತೆ ಡೇಟಿಂಗ್ ಮಾಡ್ತಾ ಇದ್ದಾರೆ ಎಂದು ವೈರಲ್ ಆಗ್ತಿದೆ. ಇನ್ನು ವೈರಲ್ ಹುಡುಗಿ ಕರೀನಾ (Kareena) ತಾವು ಕಾರ್ತಿಕ್ ಗೆಳತಿಯಲ್ಲ ಎಂದು ಸ್ಪಷ್ಟಪಡಿಸಿದ್ದರೂ, ಅಭಿಮಾನಿಗಳು ಇದನ್ನು ಒಪ್ಪಿಕೊಂಡಿಲ್ಲ. ಕರೀನಾ ಕುಬಿಲಿಯುಟ್ ಎಂಬಾಕೆ ಹದಿಹರೆಯದವಳಾಗಿದ್ದು, ಕಾರ್ತಿಕ್ ಆರ್ಯನ್ ತುಂಬಾ ಕಿರಿಯ ಮಹಿಳೆಯೊಂದಿಗೆ ಡೇಟಿಂಗ್ (Dating) ಮಾಡುತ್ತಿದ್ದಾನೆ ಎಂದು ಇಂಟರ್ನೆಟ್ ನಲ್ಲಿ ವರದಿಯಾಗಿತ್ತು.
ಗೋವಾದಲ್ಲಿ ಕಂಡು ಬಂತಾ ಜೋಡಿ?
2026 ರ ಆರಂಭವು ಕಾರ್ತಿಕ್ ಆರ್ಯನ್ ಅವರಿಗೆ ಅಷ್ಟೇನೂ ಸಡಗರದ ಸಂಗತಿಯಾಗಿರಲಿಲ್ಲ. ಅವರ 'ತು ಮೇರಿ ಮೈ ತೇರಾ ಮೈ ತೇರಾ ತು ಮೇರಿ' ಚಿತ್ರ ಈಗಾಗಲೇ ಕಳಪೆ ಪ್ರತಿಕ್ರಿಯೆಯನ್ನು ಎದುರಿಸುತ್ತಿತ್ತು, ಆದರೆ ಅವರ ಡೇಟಿಂಗ್ ಜೀವನವು ಈಗ ನೆಗೆಟಿವ್ ಆಗಿ ಹೊರಹೊಮ್ಮಿದೆ.
ಇದನ್ನೂ ಓದಿ: Bigg Boss Kannada 12: ಗಿಲ್ಲಿಯನ್ನು ಕೊಚ್ಚೆ ಎಂದು ಕರೆದ ಅಶ್ವಿನಿ! ತಾರಕಕ್ಕೇರಿದ ಕಿತ್ತಾಟ
ಕಾರ್ತಿಕ್ ತನ್ನ ಹೊಸ ಗೆಳತಿ ಕರೀನಾ ಕುಬಿಲಿಯುಟ್ ಜೊತೆ ಗೋವಾದಲ್ಲಿ ವಕೇಶನ್ ಕಳೆಯುತ್ತಿದ್ದಾರೆ ಎಂಬುದಕ್ಕೆ ಕೆಲವು ಫೋಟೋಗಳು ವೈರಲ್ ಆಗಿತ್ತು. ಚಿತ್ರದಲ್ಲಿ, ಕರೀನಾ ಕಪ್ಪು ಬಿಕಿನಿಯಲ್ಲಿ ಲೌಂಜ್ ಕುರ್ಚಿಯ ಮೇಲೆ ಮಲಗಿರುವುದು ಕಂಡುಬರುತ್ತದೆ.
ಕಾರ್ತಿಕ್ ಪೋಸ್ಟ್ ಮಾಡಿದ ಜಾಗದಲ್ಲೇ ಕರೀನಾ ಕೂಡ ಫೋಟೋ ತೆಗೆದುಕೊಂಡು ಪೋಸ್ಟ್ ಮಾಡಿದ್ದರು. ಹೀಗಾಗಿ ಇಬ್ಬರ ಮಧ್ಯೆ ಲಿಂಕ್ ಮಾಡಲಾಗಿದೆ. ಈ ಮೊದಲು ಕರೀನಾ ಅವರು ಕಾರ್ತಿಕ್ನ ಇನ್ಸ್ಟಾಗ್ರಾಮ್ನಲ್ಲಿ ಫಾಲೋ ಮಾಡುತ್ತಿದ್ದರಂತೆ. ಫೋಟೋ ವೈರಲ್ ಆಗುತ್ತಿದ್ದಂತೆ ಅವರು ಅನ್ಫಾಲೋ ಮಾಡಿದ್ದಾರೆ ಎನ್ನಲಾಗಿದೆ.
ಬಾಲಿವುಡ್ ನಲ್ಲಿ ಸಿನಿಮಾಗಳು ಬಿಡುಗಡೆ ಆಗುವ ಮುನ್ನ ಇಂತಹ ಗಾಸಿಪ್ಗಳು ಹರಡುವುದು ಸಾಮಾನ್ಯ. ಕಾರ್ತಿಕ್ ಆರ್ಯನ್ ಸದ್ಯ ದೊಡ್ಡ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಹೀಗಿರುವಾಗ ಇಂತಹ ಸುದ್ದಿಗಳು ಅವರ ಸಿನಿಮಾಗೆ ಪಬ್ಲಿಸಿಟಿ ಬಳಸಲಾಗುತ್ತಿದೆಯೇ ಎಂಬ ಅನುಮಾನವೂ ಇದೆ ಎನ್ನಲಾಗುತ್ತಿದೆ.

ಕರೀನಾ ಸ್ಪಷ್ಟನೆ
ಎಲ್ಲಾ ಊಹಾಪೋಹಗಳ ನಡುವೆ ಈ ಬಗ್ಗೆ ಕರೀನಾ ಸ್ಪಷ್ಟನೆ ನೀಡಿದ್ದಾರೆ. ಇನ್ಸ್ಟಾದಲ್ಲಿ ಸ್ಟೇಟಸ್ ಹಾಕಿರೋ ಅವರು, ‘ನಾನು ಅವರ ಗರ್ಲ್ಫ್ರೆಂಡ್ ಅಲ್ಲ’ ಎಂದು ಹೇಳಿದ್ದಾರೆ. ಕರೀನಾ ಅವರು ಇಂಗ್ಲೆಂಡ್ನಲ್ಲಿ ಬೆಳೆದವರು. ಅವರು 2008ರ ಜೂನ್ 16ರಂದು ಜನಿಸಿದರು.
ಇದನ್ನೂ ಓದಿ: Bigg Boss Kannada 12: ಗಿಲ್ಲಿಯನ್ನ ಸೋಲಿಸಿದ ಧ್ರುವಂತ್! ʻಟಾಸ್ಕ್ ಆಡೋಕೆ ಬರಲ್ಲ' ಅಂತ ಹೀಯಾಳಿಸಿದ ರಾಶಿಕಾ
ಕಾರ್ತಿಕ್ ಕೊನೆಯ ಬಾರಿಗೆ ಅನನ್ಯಾ ಪಾಂಡೆ ಜೊತೆಗೆ 'ತು ಮೇರಿ ಮೈ ತೇರಾ ಮೈ ತೇರಾ ತು ಮೇರಿ' ಚಿತ್ರದಲ್ಲಿ ಕಾಣಿಸಿಕೊಂಡರು . 2025 ರ ಕ್ರಿಸ್‌ಮಸ್‌ನಲ್ಲಿ ಬಿಡುಗಡೆಯಾದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ನೀರಸ ಪ್ರತಿಕ್ರಿಯೆಯನ್ನು ಪಡೆಯಿತು. ಸಮೀರ್ ವಿದ್ವಾನ್ಸ್ ನಿರ್ದೇಶಿಸಿದ ಈ ಚಿತ್ರವನ್ನು ಕರಣ್ ಜೋಹರ್ ಮತ್ತು ಆದರ್ ಪೂನಾವಲ್ಲ ಅವರ ಧರ್ಮ ಪ್ರೊಡಕ್ಷನ್ಸ್ ಮತ್ತು ನಮಹ್ ಪಿಕ್ಚರ್ಸ್ ಜಂಟಿಯಾಗಿ ನಿರ್ಮಿಸಿವೆ.